ಸಾಹಿತ್ಯ ಸಮಾಜದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿಯಾಗಿದೆ. ನಿತ್ಯ ಪರಿವರ್ತನಾ ಶೀಲವಾದ ಸಮಾಜವು ವ್ಯಕ್ತಿಗಳ ಪರಸ್ಪರ ಸಂಬಂಧಗಳ ಕೊಂಡಿಯಾಗಿದೆ. ವ್ಯಕ್ತಿಗಳ ಸಂಬಂಧಗಳು ವಿವಿಧ ರೀತಿಯಲ್ಲಿ ಬದಲಾವಣೆಗಳನ್ನು ಹೊಂದುತ್ತವೆ. ಸಾಮಾಜಿಕ ಬದಲಾವಣೆ ಎಂದರೆ ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆ ಎಂಬುದಾಗಿದೆ. ಈ ಬದಲಾವಣೆಗಳು ಸರ್ವವ್ಯಾಪಕವಾದುದರಿಂದ ನಾವು ಸಮಾಜವನ್ನು ನಿತ್ಯ ಪರಿವರ್ತನಾಶೀಲವೆಂದು ಕರೆಯುತ್ತೇವೆ. ಸಾಹಿತ್ಯ ಒಂದರ್ಥದಲ್ಲಿ ಜನಜೀವನದ ಪ್ರತಿಬಿಂಬ ಎಂಬ ಮಾತಿದೆ. ಒಬ್ಬ ಅಥವಾ ಹಲವರ ಸೃಜನಶೀಲವಾದ ಮನಸ್ಸಿನ ಅಭಿವ್ಯಕ್ತಿ ಸಾಹಿತ್ಯವಾಗಿ ಅದು ಸಹೃದಯದಲ್ಲಿ ವ್ಯಾಪಕವಾಗುತ್ತದೆ. ಸಾಹಿತ್ಯದ […]
ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ರಚಿಸಿದ ‘ಏಕಲವ್ಯ’ ನಾಟಕವನ್ನು ಉತ್ತರ ಕರ್ನಾಟಕದ ಜನಪದರ ದೊಡ್ಡಾಟ ಶೈಲಿಗೆ ಅಳವಡಿಸಿ ದಶಕಗಳಷ್ಟು ಹಿಂದೆಯೇ ಮೆಚ್ಚುಗೆ ಪಡೆದ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾರ್ಗದರ್ಶನದಲ್ಲಿ ಹರಪನಹಳ್ಳಿಯ ‘ಸಮಸ್ತರು’ ತಂಡದ ಮಹಿಳಾ ಕಲಾವಿದರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ (ಕವಿವ) ಸಂಘದಲ್ಲಿ ಇತ್ತೀಚೆಗೆ (ಜ.17) ಬಿ.ಪರಶುರಾಮ ನಿರ್ದೇಶನದಲ್ಲಿ ಅಭಿನಯಿಸಿದರು. ಕವಿವ ಸಂಘದ ಕಲಾಮಂಟಪದ ಆಶ್ರಯದಲ್ಲಿ ಜರುಗಿದ ಈ ಪ್ರದರ್ಶನದಲ್ಲಿ ಒಂದೆರಡು ಪ್ರಮುಖ ಪಾತ್ರಗಳನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳಾ ಕಲಾವಿದರು ದೊಡ್ಡಾಟದ ತಾಳಕ್ಕೆ ಹೆಜ್ಜೆಹಾಕಿದ್ದು ಇತ್ತೀಚಿನ ದಿನಗಳಲ್ಲಿ ಹೊಸಪ್ರಯೋಗವೆನಿಸಿ, […]
ತುಂಬಾ ಚೆನ್ನಾಗಿದೆ
ಧನ್ಯವಾದಗಳು
What an art… its super… like it