ತ್ರಿವರ್ಣ ಗಣಪ
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ನಂತರ ಸಾಲುಸಾಲು ಹಬ್ಬಗಳು ಆರಂಭವಾಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬವೂ ಬರಲಿದೆ. ಸ್ವಾತಂತ್ರ್ಯವೆನ್ನುವುದು ನಮ್ಮ ಸುತ್ತಲಿನ ಪರಿಸರ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುತ್ತಾರೆ ಕಲಾವಿದ ಹುಸೇನಿ. ‘ಮುಂಬರಲಿರುವ ಗೌರಿ – ಗಣೇಶ ಹಬ್ಬದಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳಿಂದ ಮುಕ್ತವಾದ ಗಣೇಶ ನಮ್ಮ ಮನೆಗಳನ್ನು ಪ್ರವೇಶಿಸಲಿ’ ಎನ್ನುವ ಸಂದೇಶದೊಂದಿಗೆ ಅವರು ಸಾಂಝಿ ಗಣೇಶ ಕಲಾ ಪ್ರದರ್ಶನವನ್ನು ಆಯೋಜಿಸಿದ್ದಾರೆ.
ಚೆನ್ನಾಗಿವೆ. ಶುಭವಾಗಲಿ
ತ್ರಿವರ್ಣ ಗಣಪ ಬಹಳ ಮುದ್ದು ಮುದ್ದಾಗಿದೆ.ವರ್ಣಮಯ, ಪರಿಸರ ಸ್ನೇಹಿ,ಸ್ವಾತಂತ್ರ್ಯೋತ್ಸವ ಹಾಗು ಗಣೇಶೋತ್ಸವ ಜೋಡಿ ಹಬ್ಬಗಳಿಗೆ ಹುಸ್ಸೇನಿಯವರ ಅದ್ಭುತ ಕಲಾ ಕೊಡುಗೆ. ಅವರ ಕಲೆಗೊಂದು ಅಭಿನಂದನಾ ಪೂರ್ವಕ ಸಲಾಂ.ಜೈ ಗಣೇಶ, ಜೈ ಹಿಂದ್.