ಹಿಂದಿನ ಕಾಲದಲ್ಲಿ ಸಂಬಂಧಗಳು, ಆತ್ಮೀಯರ ಸ್ನೇಹಪರ ಬಾಂದವ್ಯಗಳು ಗಟ್ಟಿಯಾಗಿರುತ್ತಿದ್ದವು. ಇಂದಿನ ಆಧುನಿಕ ದಿನಮಾನಗಳಲ್ಲಿ ಆರೋಗ್ಯಕರ, ಪ್ರೀತಿಯ ಸಂಬಂಧಗಳು ನಶಿಸುತ್ತ ಅನಾರೋಗ್ಯಕರ ಚಿಂತನೆಗಳತ್ತ ಸಾಗುತ್ತಿರುವುದು ವಿಷಾಧನೀಯ,
ದೇಶಸುತ್ತು – ಕೋಶಓದು ಎಂಬ ವಾಣಿಯೂ ಪೂರ್ವಿಕರು ಹೇಳಿದವಾಣಿ ನೂರಕ್ಕೆ-ನೂರು ಸತ್ಯ ಹಿಂದಿನ ಕಾಲದಲ್ಲಿ ಪ್ರೇಕ್ಷಣೀಯ ಸ್ಥಳಗಳ ಚಿತ್ರಣವನ್ನು ಕೆಲವರು ಬಲ್ಲವರಿದ ತಿಳಿದು ಇನ್ನು ಕೆಲವರು ಸ್ವತಃ ಅಲ್ಲಿಗೆ ಭೇಟಿನೀಡಿ ಅಲ್ಲಿಯ ಶಿಲ್ಪಕಲೆಗಳ ಸೌಂದರ್ಯದ ಸೊಬಗನ್ನು ಸವಿಯುವ ದಿನಗಳಿದ್ದವು. ಆಧುನಿಕತೆ, ತಂತ್ರಜ್ಞಾನ ಬೆಳೆಯುತ್ತ ಸಾಗಿದಂತೆ ಅಂಗೈಯಲ್ಲೇ ಆಗಸ ವೆಂಬಂತೆ ಮೋಬೈಲ್‍ನಲ್ಲಿಯೇ ಸ್ಥಳಗಳ ಚಿತ್ರಣದ ಸೊಬಗನ್ನು ಸವಿಯುತ್ತ ಬ್ಯೂಸಿ ಶೇಡ್ಯುಲ್‍ನಲ್ಲಿ ದೇಶ ಸುತ್ತುವುದಕ್ಕಿಂತ ಹೆಚ್ಚು ಕೋಶವನ್ನು ಓದುತ್ತ ಮೋಬೈಲ್ ದಾಸರಾಗಿದ್ದೇವೆ.
ಒಂದೆರಡು ದಶಕಗಳ ಹಿಂದೆ ಮೆಲುಕು ಹಾಕುತ್ತ ನಡೆದಾಗ ಪರಿಚಿತರು, ಆತ್ಮೀಯರು, ಸಂಬಂಧಿಗಳು, ದೂರದ ಊರುಗಳಲ್ಲಿದ್ದರೆ ಪತ್ರಗಳ ಮೂಲಕ ಸಂದೇಶಗಳನ್ನು ರವಾನಿಸುತ್ತ, ಸಂತೋಷದ ದಿನಗಳನ್ನ ಖುಷಿ-ಖುಷಿಯಿಂದ ಹಂಚಿಕೊಳ್ಳುವ ಕಾಲ ಒಂದಿತ್ತು. ಈಗಿನ ಮೋಬೈಲ್ ಕಾಲದಲ್ಲಿ ಬದಲಾವಣೆಗೊಂಡು ಆಧುನಿಕ ತಂತ್ರಾಶಗಳಾದ ವಾಟ್ಸಪ್, ಟ್ವಿಟರ್, ಇನ್ಟಾಗ್ರಾಮ್, ಫೇಸ್ಬುಕ್, ಗಳಂತಹ ಸಾಮಾಜಿಕ ಜಾಲತಾಣಗಳ ಸಹಾಯದಿಂದ ಸಂದೇಶಗಳನ್ನು ಕ್ಷಣಮಾತ್ರದಲ್ಲಿ ರವಾನಿಸಬಹುದಾದರೂ ಅಂದಿನ ಪತ್ರಕ್ಕಾಗಿ ಕಾಯುವ ದಿನಗಳು ಮರೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ಪತ್ರಗಳ ಮೂಲಕ ನಡೆಸುತ್ತಿದ್ದ ಉಭಯ ಕುಶಲೋಪರಿ, ಆತ್ಮೀಯ ನುಡಿಗಳು, ಓದಿದ ತಕ್ಷಣ ಮನಸ್ಸನ್ನು ಒಂದು ಕ್ಷಣ ಕನಸಿನ ಲೋಕದೆಡೆಗೆ ಕೊಂಡೊಯ್ಯುತ್ತಿದ್ದವು.
ಭಾವನೆಗಳನ್ನೊಳಗೊಂಡ ಮಾತುಗಳು ನೇರನೇರವಾಗಿ ಮಾತನಾಡಿದಂತಿದ್ದವು. ಈಗ ಆಧುನಿಕತೆ ಹೆಚ್ಚಾದಂತೆ ಮನುಷ್ಯ-ಮನುಷ್ಯರ ನಡುವೆ ವ್ಯಕ್ತವಾಗುವ ಭಾವನೆಗಳು ಕೇವಲ ವಾಟ್ಸಪ್ ಪೇಸಬುಕ್ ಸ್ಟೇಟಸ್‍ಗಳ ಸಂದೇಶವಾಗಿ ಉಳಿದುಬಿಟ್ಟಿವೆ. ಅಂತರ್ಜಾಲ ಸಾಮಾಜಿಕ ಜಾಲತಾಣಗಳ ಪ್ರಭಾವ ಜಗತ್ತು ಅಂಗೈಯಲ್ಲಿಯೇ ಇದೆಯಾದರೂ ಚಿಕ್ಕಪ್ಪ,-ಚಿಕ್ಕಮ್ಮ. ದೊಡ್ಡಪ್ಪ-ದೊಡ್ಡಮ್ಮ, ಅಣ್ಣ-ತಂಗಿ ಅನ್ನುವ ಸಂಬಂಧಗಳು ಸಹ ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿವೆ. ಇಂದಿನ ಯುವ ಜನಾಂಗ ಸಂಬಂಧಗಳಿಂದ ದೂರಸರಿಯುತ್ತ ಮೋಬೈಲ್ ದಾಸರಾಗುತ್ತಿದ್ದೇವೆ. ಹಿಂದಿನ ಕಾಲದ ಚಕ್ಕಡಿ, ಕುದುರೆ ಗಾಡಿಯ ಜಾಗದಲ್ಲಿ ಇಂದೂ ಕಾರ್, ಬಸ್, ರೈಲು, ಪ್ಲೇನಗಳು ಬಂದಿರಬಹುದು. ಆಗ ಬಳಸುತ್ತಿದ್ದ ಪಾಠಿ ಪೆನ್ಸಿಲ್, ಪುಸ್ತಕ-ಪೆನ್ನುಗಳ ಜಾಗದಲ್ಲಿ ಇಂದೂ ಮೂಬೈಲ್ ಲ್ಯಾಪಟಾಪ್ ಟ್ಯಾಬ್ ನಂತಹ ಆಧುನಿಕ ಉಪಕರಣಗಳು ಬದಿಂರಬಹುದು. ಆಗೀನ ಕಾಲದಲ್ಲಿ ಹತ್ತಾರು ದಿನಗಳ ನಂತರ ಅಂಚೆ ಮೂಲಕ ತಲುಪುತ್ತಿರುವ ಸಂದೇಶಗಳೂ ಈಗ ಕ್ಷಣ ಮಾತ್ರದಲ್ಲಿ ವಾಟ್ಸಪ್ ಮೆಸೆಂಜರ್ ಇಮೇಲ್ ಮೂಲಕ ತಲುಪಬಹುದು. ಆದರೆ ಆಗೀನ ಕಾಲದಲ್ಲಿದ್ದ ಪ್ರೀತಿಪರ ಭಾವನೆಗಳು ಪ್ರತ್ಯುತರಗಳು ಕಡಿಮೆ ಆಗುತ್ತ ಸಾಗುತ್ತಿವೆ.
ದಿನಕ್ಕೊಂದು ಹೊತ್ತು ಊಟವಿಲ್ಲದಿದ್ದರೂ ನಡೆಯುವ ನಮಗೆ ಇಂಟರನೆಟ್ ಇಲ್ಲದೇ ಹತ್ತು ನಿಮಿಷವೂ ಕಾಲ ಕಳೆಯಲೂ ಆಗುತ್ತಿಲ್ಲ. ಆಫಲೈನ್ ಇರುವುದಕ್ಕಿಂತ ಹೆಚ್ಚು ನಾವೂ ಆನಲೈನ್ ಜೀವನದ ದಾಸರಾಗಿ ಬಿಟ್ಟಿದ್ದೇವೆ. ಮನೆಯಲ್ಲಿ ಕುಳಿತಾಗ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ಸಂದೇಶಗಳಿಗೆ ಕಮೆಂಟ್ ಲೈಕ್, ಲವ್‍ಸಿಂಬಾಲ್, ಕೊಡಲೂ ಸಮಯವಿರುವ ನಮಗೆ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿಯರ ಜೊತೆಗೆ ಮಾತನಾಡಲೂ ಅಲ್ಪ ಸಮಯವೂ ಸೀಗದಂತಾಗಿದೆ. ಸಂಜೆಯಾದರೆ ಸಾಕು ಮೊದಲೆಲ್ಲ ಅಜ್ಜ-ಅಜ್ಜಿ ಜೊತೆಗೆ ಮನೆಯ ಮುಂದಿನ ಜಗಲಿಯ ಮೇಲೆ ಮೊಮ್ಮಕ್ಕಳು, ಮಕ್ಕಳು ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು. ಇಂದಿನ ದಿನಮಾನಗಳಲ್ಲಿ ಟಿವಿಯನ್ನೇ ನೋಡಲೂ ಸಮಯವಿಲ್ಲದಂತಾಗಿ ಬಾಂಧವ್ಯದ ಮಾತುಗಳು, ಹಿರಿಯರ ಹಿತನುಡಿಗಳು ಇಲ್ಲದಂತಾಗಿವೆ.
ತಿಳಿಯ ಹೊರಟಿದೆ ಬಂದು-ಬಳಗ,ಆತ್ಮೀಯರು ಭಾವನೆಗಳೊಂದಿಗಿನ ಭಾಂದವ್ಯಗಳು ನಶಿಸಿ ಹೊರಟಿವೆ. ಹಿರಿಯರಾದವರೂ ಮಕ್ಕಳ ರಜೆಯ ದಿನಗಳಲ್ಲಿ ನೆರೆಹೊರೆಯವರು, ಸಂಬಂಧಿಕರ ಹಿರಿಯರು-ಕಿರಿಯರು ಹಳ್ಳಿಯ ಜೀವನದ ಕುರಿತಾಗಿ ಪರಿಚಯ ಮಾಡುತ್ತ ಮರೆಯಾಗುತ್ತಿರುವ ಇತಿಹಾಸದ ದಿನಗಳನ್ನ ಮತ್ತೆ ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯ ವಾಗಬೇಕಿದೆ…….
-ಅಕ್ಷಯಕುಮಾರ ಜೋಶಿ