"ನಮ್ಮ ಅಪ್ಪ ನಮಗೆ ಹೀರೋ! ಅವನ ಹಾಗೆ ಮತ್ತೊಬ್ಬನಿಲ್ಲ!" ಅಂತ ನಿಮಗನ್ನಿಸಿದೆಯೇ? ಹಾಗಿದ್ದರೆ ಅದನ್ನು ವ್ಯಕ್ತಪಡಿಸುವ ಅವಕಾಶ ಇಲ್ಲಿದೆ….
ಅಪ್ಪಂದಿರ ಬಗ್ಗೆ ಪುಸ್ತಕ ಮಾಡುವ ಪ್ರಯತ್ನ ನಡೆದಿದೆ. ವಿಶ್ವದ ಎಲ್ಲ ಅಪ್ಪಂದಿರಿಗೆ ನಮ್ಮ ಪ್ರೀತಿಯ ಕೊಡುಗೆ ಇದು.
ಅವರು ನಿಮಗೆ ಹೇಗೆ ಸ್ಪೂರ್ತಿ ಆದರು, ಅವರ ಬಗ್ಗೆ ನಿಮಗೇನಿಷ್ಟ, ಅವರ ಜೊತೆ ಕಳೆದ ಭಾವನಾತ್ಮಕ ಕ್ಷಣಗಳು, ಯಾವುದೋ ಒಂದು ಸಣ್ಣ ಜಗಳ, ಕಾಡುತ್ತಿರುವ ಪಾಪ ಪ್ರಜ್ಞೆ, ನಿಮ್ಮ ಕಣ್ಣಲ್ಲಿ ನೀರು ಹರಿಸಿದ ಅವರು ಪಟ್ಟ ಕಷ್ಟಗಳು… ಹೀಗೆ ಅಪ್ಪನ ಬಗ್ಗೆ ಇನ್ನೂ ಏನೇ ನೆನಪುಗಳ ಹಂಚಿಕೊಳ್ಳಬಹುದು..
ಅದು ಲೇಖನ, ಕವಿತೆ, ಚುಟುಕು, ರೇಖಾಚಿತ್ರ/ವರ್ಣ ಚಿತ್ರ/ಛಾಯಾ ಚಿತ್ರ ಹೀಗೆ ಯಾವುದೇ ರೂಪದಲ್ಲಿ ಇರಬಹುದು. ಬರಹಗಳು ೧೦೦೦ ಶಬ್ದಗಳ ಮಿತಿಯಲ್ಲಿರಲಿ.
ಇಮೇಲ್ ನಲ್ಲಿ ನಿಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖೆಯನ್ನು ನಮೂದಿಸಲು ಮರೆಯದಿರಿ.
ಸಂಪಾದಕರ ತೀರ್ಮಾನವೇ ಅಂತಿಮ. ಆಯ್ಕೆಯಾದವರ ಹೆಸರುಗಳನ್ನು ನಮ್ಮ ಬ್ಲಾಗ್ ((http://appapustaka.blogspot.com) ನಲ್ಲಿ ಪ್ರಕಟಿಸಲಾಗುವುದು.
ಕೊನೆಯ ದಿನಾಂಕ: ಮಾರ್ಚ್ ೨೪, ೨೦೧೭
ಬರಹವನ್ನು ಈ emಚಿiಟ ವಿಳಾಸಕ್ಕೆ ಕಳಿಸಿ: Appapustaka@gmail.com