ಮೂರ್ತಿಗಳಿಗೆ ಉಚ್ಚೆ ಉಯ್ಯಬೇಡಿ
ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ
ವಿಚಾರವಾದಿಗಳೆ!
ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ
ಹಸಿದ, ಬಾಯಾರಿದ ಕೋಟಿ ಜನರ
ಕಂಬನಿಯನ್ನೂ ಒರೆಸದ ಶುಷ್ಕ ಕೈಗಳಿಂದ
ಮಾಡಿಸಿದ ಹಾಲು, ತುಪ್ಪ, ಎಳನೀರಿನ
ಅಭಿಶೇಕವೇ ಸಾಕವುಗಳಿಗೆ!
ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ!!
*
ಮೂರ್ತಿಗಳಿಗೆ ನೀವು ಬಯ್ಯಬೇಡಿ
ವಿಚಾರವಾದಿಗಳೆ!
ಮೂರ್ತಿಗಳಿಗೆ ನೀವು ಬಯ್ಯಬೇಡಿ
ಕಂದಪದ್ಯದಲ್ಲೂ ಹೊಳೆದ ಹೊಸ ವಿಚಾರವನ್ನು
ಓದಿ ಅರ್ಥೈಸಲಾಗದ ಮಂತ್ರ ಪಂಡಿತರ
ಬಾಯ್ಗಳಿಂದ ಹೊರಟ ಒಣ ಪಠಣಗಳ
ಕಿರಿಕಿರಿಯೇ ಸಾಕವುಗಳಿಗೆ!
ಮೂರ್ತಿಗಳಿಗೆ ನೀವು ಬಯ್ಯಬೇಡಿ!!
*
ಸಾಧ್ಯವಾದರೆ ನಾವೆಲ್ಲಾ ಸೇರಿ
ಅಮೂರ್ತತೆಗೆ ಜೀವ ಭರಿಸೋಣ
ಫಲವಾಗಿ
ಮೂರ್ತಿಗಳೇ ಮುಂದಾಗಿ
ಗೊಡ್ಡು ಸಂಪ್ರದಾಯಗಳ ವಿರುದ್ಧ
ಸಿಡಿದೇಳುವಂತಾಗಲಿ!
***
-ವಿಲ್ಸನ್, ಕಟೀಲ್
ಸರ್ಕಾರಿ ಮತ್ತು ಕಾನ್ವೆಂಟ್ ವಿದ್ಯಾರ್ಥಿ
ಸುಖಿಗಳಾರು ಈರ್ವರಲಿ
ಬೆನ್ನಿಗೆ ಬ್ಯಾಗು ಮುರಿವಂತೆ ಡುಬ್ಬ
ಕೈಯಲಿ ನೀರು ಊಟದ ಡಬ್ಬ
ಸೊಂಟಕೆ ಬೆಲ್ಟು , ಕಂಠಕೆ ಟೈ
ಕಾಲಿಗೆ ಬೂಟು , ಮೈಗೆ ಸೂಟು
ಹೋಂವರ್ಕ್ ಶಿಸ್ತು ಭಯದಲಿ ಸುಸ್ತು
ಮಮ್ಮಿ ಡ್ಯಾಡಿಗಳ ಪ್ರಿಸ್ಟೇಜ್ ಕಂದ
ಡೊನೇಷನ್ ಕಟ್ಟಿ ಕಾನ್ವೆಂಟ್‍ಗೆ ಬಂದ
ಕಲಿಕಾವೇಗ ಮೊಲದ ಓಟ
ಒಪ್ಪಿಸುವ ಚಂದದಿ ಗಿಳಿಯ ಪಾಠ
ಸಿಗಬಹುದು ಇವರಿಗೆ ದೊಡ್ಡ ಹುದ್ದೆ
ವೃದ್ದ ತಂದೆ-ತಾಯಿಗೆ ಇಲ್ಲ ಮುದ್ದೆ
ಚಿತ್ರ – ಆನಂದ ಕಡ್ಲಿ
ಬಗಲಲಿ ಬ್ಯಾಗು ಮುದುಡಿದ ಶ್ಲಾಗು
ಸೂಟು ಬೂಟುಗಳು ಕಡ್ಡಾಯವಲ್ಲ
ಬೆಲ್ಟು ಟೈಗಳು ಇಲ್ಲವೇ ಇಲ್ಲ
ಹೋಂವರ್ಕ್ ಕಾಟ ಮೊದಲೇ ಇಲ್ಲ.
ಭಯವಿಲ್ಲದಲೇ ನಲಿ-ಕಲಿ ಪಾಠ
ಮಧ್ಯಾಹ್ನ ಮಾಡು ಬಿಸಿ ಬಿಸಿ ಊಟ
ಆರೋಗ್ಯಕ್ಕಾಗಿ ಕ್ಷೀರಭಾಗ್ಯ
ಉಚಿತ ಶಿಕ್ಷಣ ಎಂತಹ ಭಾಗ್ಯ
ಸ್ವಚ್ಛÀಂದ ಹಕ್ಕಿ ಸ್ವಾತಂತ್ರ್ಯ ಸಿಕ್ಕಿ
ಲೋಕದಶಿಕ್ಷಣ ಕಲಿವರು ಹೆಕ್ಕಿ
ಆಮೆ ವೇಗದಿ ಕಲಿಯುತಲಿದ್ದರು
ಅಂತಿಮ ಜಯ ಒಲಿಯುವುದಿವಗೇ
ಸರ್ಕಾರಿ ಶಾಲೆಯಲಿ ಓದುವ ಕಂದ
ಮುಖದಲ್ಲಿ ನೋಡು ಎಂತಹ ಆನಂದ
-ಸಿ.ಮ.ಗುರುಬಸವರಾಜ್ ಇಟ್ಟಿಗಿ
ಗುರು …. ಪಂಜು ಬಳಗಕ್ಕೆ ಸ್ವಾಗತ…..ಚೆನ್ನಾಗಿದೆ ಕವಿತೆ
ಗೆಳೆಯ ವಿಲ್ಸನ್ ಕಟೀಲ್, ಸಾಲುಗಳು ಅದ್ಬುತ, ಅರ್ಥಪೂರ್ಣ ….!!
nice guru go ahead. i would like to see more again and again