ಉಯ್ಯಾಲೆ:ವಾಸುಕಿ ರಾಘವನ್ ಅಂಕಣ


ತುಂಬಾ ದಿನಗಳಿಂದ ಈ ಚಿತ್ರ ನೋಡಬೇಕು ಅನ್ಕೊಂಡಿದ್ದೆ. ಆದರೆ ಅದಕ್ಕೆ ಸಮಯ ಸಿಕ್ಕಿದ್ದು ಹೋದ ವಾರ. ಸಿನಿಮಾದ ಹೆಸರು “ಉಯ್ಯಾಲೆ”. 1964ರಲ್ಲಿ ಬಿಡುಗಡೆಯಾದ ರಾಜಕುಮಾರ್, ಕಲ್ಪನಾ, ಅಶ್ವಥ್ ಅಭಿನಯದ ಈ ಚಿತ್ರದ ನಿರ್ದೇಶಕರು ಎನ್.ಲಕ್ಷ್ಮೀನಾರಾಯಣ. ಆಗಿನ ಕಾಲಕ್ಕಂತೂ ಬಹಳ ವಿಭಿನ್ನವಾದ, ಬೋಲ್ಡ್ ಆದ ಕಥೆಯನ್ನು ಹೊಂದಿದ್ದರಿಂದ ಇದು ಕುತೂಹಲ ಹೆಚ್ಚಿಸಿತ್ತು.  

ಅಶ್ವಥ್, ಕಲ್ಪನಾ ತಮ್ಮ ಮುದ್ದು ಮಗಳಿನೊಂದಿಗೆ ವಾಸಿಸುತ್ತಿರುವ ದಂಪತಿಗಳು. ಅಶ್ವಥ್ ಕಾಲೇಜ್ ಪ್ರೊಫೆಸರ್, ಸದಾ ಓದುವುದರಲ್ಲೇ ಮುಳುಗಿಹೋಗಿರುವ ಪುಸ್ತಕದ ಹುಳು. ಅವನಿಗೆ ಬೇರೆ ಇನ್ಯಾವ ವಿಷಯಗಳಲ್ಲೂ ಆಸಕ್ತಿ ಇಲ್ಲ. ಪಕ್ಕಾ ಆಬ್ಸೆಂಟ್ ಮೈಂಡೆಡ್ ಪ್ರೊಫೆಸರ್! ಇದೊಂದು ತಕರಾರು ಬಿಟ್ಟರೆ ಅದು ಸುಖೀ ಕುಟುಂಬ. ಹೊಸದಾಗಿ ಊರಿಗೆ ಬರುವ ಅಶ್ವಥ್ ಗೆಳೆಯ ರಾಜಕುಮಾರ್ ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಾನೆ. ಮಗುವನ್ನು ಅತಿಯಾಗಿ ಹಚ್ಚಿಕೊಳ್ಳುವ ಇವನು, ಆ ಮನೆಯವರಲ್ಲಿ ಒಬ್ಬನಾಗುತ್ತಾನೆ. ಹೀಗಿರುವಾಗ ಒಂದು ದಿನ ನೀರಿನಲ್ಲಿ ಚನ್ನಾಗಿ ನೆನೆದು ಆ ಮಗುವಿಗೆ ತುಂಬಾ ಜ್ವರ ಬಂದುಬಿಡುತ್ತದೆ. ಡಾಕ್ಟರನ್ನು ಕರೆದುಕೊಂಡು ಬನ್ನಿ ಅಂತ ಎಷ್ಟು ಪರಿಪರಿಯಾಗಿ ಕೇಳಿಕೊಂಡರೂ, ಅಶ್ವಥ್ ಏನೂ ಬೇಕಿಲ್ಲ ಹಂಗೇ ಹುಶಾರಾಗುತ್ತಾಳೆ ಸುಮ್ಮನಿರು ಅಂತ ಅವಳ ಬಾಯಿ ಮುಚ್ಚಿಸಿಬಿಡುತ್ತಾನೆ. ಮಾರನೆಯ ದಿನ ರಾಜಕುಮಾರ್ ಡಾಕ್ಟರನ್ನು ಕರೆಕೊಂಡು ಬರುವುದರೊಳಗೆ ಮಗು ಸತ್ತುಹೋಗುತ್ತದೆ.

ಈ ದುರ್ಘಟನೆಯಿಂದ ಕಲ್ಪನಾ ಖಿನ್ನತೆಗೊಳಗಾಗಿ ಎಲ್ಲಾ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾಳೆ. ಅಶ್ವಥ್ ತನ್ನ ಕಾಲೇಜ್ ಕೆಲಸಗಳಲ್ಲಿ ಮುಳುಗಿಹೋಗುತ್ತಾನೆ, ಅವನಿಗೆ ತನ್ನ ಹೆಂಡತಿಯನ್ನು ಸಮಾಧಾನ ಮಾಡುವ ಬಗೆಯೂ ತಿಳಿಯದು. ಆ ಸಮಯದಲ್ಲಿ ಸೂಕ್ಷ್ಮ ಮನಸ್ಸಿನ ರಾಜಕುಮಾರ್ ಅವಳಿಗೆ ಆಸರೆಯಾಗುತ್ತಾನೆ, ಅವಳ ದುಃಖ ದೂರಮಾಡಲು ಪ್ರಯತ್ನಿಸುತ್ತಾನೆ. ಅದೇ ವೇಳೆಯಲ್ಲಿ ಪದ್ಯ, ಹಾಡು ಇವುಗಳೆಲ್ಲೆಲ್ಲಾ ಅಭಿರುಚಿ ಹೊಂದಿರುವ ರಾಜಕುಮಾರ್ ಕಡೆಗೆ ಕಲ್ಪನಾ ಆಕರ್ಷಿತಳಾಗುತ್ತಾಳೆ. ಅವನಿಗೂ ಅವಳಲ್ಲಿ ಸಣ್ಣಗೆ ಒಲವು ಮೂಡುತ್ತದೆ. ಆದರೆ ಇದು ತಪ್ಪು, ಅಂತ ಬಹು ಬೇಗ ಎಚ್ಚೆತ್ತುಕೊಳ್ಳುವ ರಾಜಕುಮಾರ್ ತಾನು ಹೇಗಾದರೂ ಕಲ್ಪನಾ ಇಂದ ದೂರವಾಗಬೇಕು ಅಂತ ನಿರ್ಧರಿಸುತ್ತಾನೆ. ಆದರೆ ತನ್ನದೇ ಭಾವತೀವ್ರತೆಯಲ್ಲಿರುವ ಕಲ್ಪನಾಗೆ ಲೋಕದ ಪರಿವೆಯೂ ಇಲ್ಲದೆ ಇವನೆಡೆಗೆ ಸೆಳೆಯಲ್ಪಡುತ್ತಾಳೆ.

ರಾಜಕುಮಾರ್ ಪಾತ್ರವನ್ನು ಸೃಷ್ಟಿಸಿರುವ ರೀತಿ ಬಹುಪಾಲು ಚನ್ನಾಗಿದೆ. ತನ್ನ ಗೆಳೆಯನ ಕುಟುಂಬದ ಸುಖವನ್ನು ಬಯಸುವ, ತನ್ನ ಗೆಳೆಯನ ಹೆಂಡತಿಯೆಡೆಗೆ ಆಕರ್ಷಿತನಾಗುವ, ಮುಂದೆ ಈ ಸಂಬಂಧವನ್ನು ಬೆಳೆಯಲು ಬಿಡಬಾರದು ಅನ್ನುವ ನೈತಿಕತೆಯುಳ್ಳ ಸಂಕೀರ್ಣ ಪಾತ್ರವನ್ನ ರಾಜಕುಮಾರ್ ಅಷ್ಟೇ ಸಮರ್ಥವಾಗಿ ಅಭಿನಯಿಸಿದ್ದಾರೆ. ತನ್ನ ಮಗುವನ್ನು ಕಳೆದುಕೊಂಡು ಪರಿತಪಿಸುತ್ತಿರುವ ಕಲ್ಪನಾ ನೋವಿನ ಜೊತೆಗೇ ಕಿಸಾಗೌತಮಿಯ ನಾಟಕದ ನಿರೂಪಣೆ ಚನ್ನಾಗಿ ಮೂಡಿಬಂದಿದೆ. ಹಾಗೆಯೇ ಮಾನಸಿಕ ತುಮುಲಗಳನ್ನು ತೋರಿಸಲು ಬಳಸಿರುವ ಉಯ್ಯಾಲೆಯ ತೂಗುವಿಕೆ, ತಮ್ಮ ತಮ್ಮ ಕೋಣೆಗಳಲ್ಲಿ ಅತ್ತಿಂದಿತ್ತ ತಿರುಗುವ ಅವರ ಚಡಪಡಿಕೆಯನ್ನು ನೆರಳಿನ ಮೂಲಕ ತೋರಿಸಿರುವುದು ಚನ್ನಾಗಿದೆ!

ಆದರೆ ಅದ್ಭುತವಾಗಬಹುದಾಗಿದ್ದ ರಾಜಕುಮಾರ್ ಪಾತ್ರ ಬಾಲಿಶ ಅನಿಸುವ ಮಟ್ಟಕ್ಕೆ ಬರುವ ಒಂದು ಸೀಕ್ವೆನ್ಸ್ ಚಿತ್ರದಲ್ಲಿದೆ. ಕಲ್ಪನಾಗೆ ತನ್ನ ಮೇಲಿರುವ ಭಾವನೆ ಬದಲಾಗುವಂತೆ ಮಾಡಲು ರಾಜಕುಮಾರ್ ಇನ್ನೊಬಳು ಹುಡುಗಿಯ (ಪ್ರತಿ ವಾಕ್ಯಕ್ಕೂ ತನ್ನ ಕತ್ತನ್ನು ಕಮ್ಮಿ ಅಂದರೂ ಐದಾರು ಸಲ ಕುಣಿಸುವ) ಜೊತೆ ಸಲುಗೆಯಿಂದಿರಲು ಶುರುಮಾಡುತ್ತಾನೆ. ತನ್ನ ಗೆಳೆಯನ ಹೆಂಡತಿಯ ನೋವಿಗೆ ಸ್ಪಂದಿಸುವ ಹೃದಯವಂತಿಕೆ ಇರುವ ವ್ಯಕ್ತಿ ಅವಳನ್ನು ದೂರಮಾಡುವ ಸಲುವಾಗಿ ಇನ್ನೊಂದು ಹೆಣ್ಣಿನ ಜೊತೆ ಪ್ರೇಮಿಸುವ ನಾಟಕವಾಡುವ ನಿರ್ಧಾರಕ್ಕೆ ಬರುವುದು ಅತಾರ್ಕಿಕ ಅನಿಸುತ್ತದೆ. ಮುಖ್ಯ ಪಾತ್ರಧಾರಿಣಿಯ ಬಗೆಗೆ ಮಾತ್ರ ಮಾನವೀಯತೆ, ಪೋಷಕಪಾತ್ರದೆಡೆಗೆ ಸಂಪೂರ್ಣ ಹೃದಯಹೀನತೆ ಅನ್ನುವ ನಿಲುವೇ  ಹಾಸ್ಯಾಸ್ಪದ ಎನಿಸಿಕೊಳ್ಳುತ್ತದೆ.

ಚಿತ್ರದ ಮೈನಸ್ ಪಾಯಿಂಟ್ ಅಂದರೆ ಕಲ್ಪನಾ ಪಾತ್ರ ಮತ್ತು ಅವರ ನಟನೆ. ಅವಳು ರಾಜಕುಮಾರ್ ಇಂದ ಬಯಸಿದ್ದು ಒಲವಿನ ಸಾಂಗತ್ಯವನ್ನೋ, ಅಥವಾ ಅದು ದೈಹಿಕ ಆಕರ್ಷಣೆಯೋ ಅನ್ನುವುದು ಮಸುಕುಮಸುಕಾಗಿದೆ. ಹಾಗೆಯೇ ಅವಳಲ್ಲಾಗುವ ಪರಿವರ್ತನೆಗೆ ಮಗುವಿನ ಮರಣ ಕಾರಣವಾ, ಅಥವಾ ಅವಳ ಗಂಡನ ನಿರ್ಲಕ್ಷ್ಯವೋ ಗೊತ್ತಾಗಲ್ಲ. ಸಮಾಜಕ್ಕೆ ಗೊತ್ತಾಗಿಬಿಟ್ಟರೆ ಅನ್ನುವ ಭಯವಾಗಲೀ, ಜನರಿಗೆ ತಿಳಿಯದಂತೆ ಈ ಸಂಬಂಧವನ್ನು ಹೇಗೆ ಮುಂದುವರಿಸುವುದು ಅನ್ನೋ ಯೋಚನೆಯ ಆಯಾಮವಾಗಲೀ ಆ ಪಾತ್ರಕ್ಕೆ ಬರೋದೆ ಇಲ್ಲ. ಕಲ್ಪನಾ ನಟನೆ ನನಗೆ ಅಷ್ಟಾಗಿ ಹಿಡಿಸಲ್ಲ. ಕಳೆದುಕೊಳ್ಳುವಿಕೆಯ ಯಾತನೆ, ಒಬ್ಬಂಟಿತನದ ನೋವು, ಅಸಮ್ಮತ ಪ್ರೀತಿಯ ದ್ವಂದ್ವ – ಎಲ್ಲದಕ್ಕೂ ಒಂದೇ ಅಭಿನಯ – ಕತ್ತನ್ನು ಒಂದೆಡೆಗೆ ತಿರುಗಿಸಿ, ಗರಬಡಿದಂತಹ ನಿಲುವಿನ, ಏಕತಾನತೆಯಿಂದ ಕೂಡಿದ ನಾಟಕೀಯ ಸಂಭಾಷಣೆ ಹೇಳುವ ವಿಧಾನ! ಅಶ್ವಥ್ ಅವರ ಪಾತ್ರವೂ ಅಷ್ಟೇ, ಮಗುವನ್ನು ಕಳೆದುಕೊಂಡಿರುವ ಬೇಸರವೇ ಇಲ್ಲವೇನೋ ಆ ಪಾತ್ರಕ್ಕೆ ಅನಿಸಿಬಿಡುತ್ತದೆ. “ನಾನು ಕಾಲೇಜಿಗೆ ಹೋಗ್ಬೇಕಪ್ಪ, ಲೇಟ್ ಆಗ್ತಿದೆ” ಅಂತ ಪದೇಪದೇ ಹೇಳೋದು ಸಿಲ್ಲಿ ಅನ್ಸುತ್ತೆ.

ಆಗಿನ ಕಾಲಕ್ಕೆ ಜನ ಸುಲಭವಾಗಿ ಒಪ್ಪಿಕೊಳ್ಳದಿರಬಹುದಾದ ಕಥೆಯನ್ನು ಹೇಳುವ ಧೈರ್ಯ ಮಾಡಿದ್ದಕ್ಕೆ ನನ್ನ ಮೆಚ್ಚುಗೆ ಇದೆ. ಆದರೆ ಅದನ್ನು ನಿರೂಪಿಸಿರುವ ರೀತಿಯಲ್ಲಿ ಸೋತಿರುವುದರ ಬಗ್ಗೆ ಬೇಸರ ಇದೆ. ಹೀಗಾಗಿ ಇದೇ ವಿಷಯದ ಮೇಲಿರುವ “ಎಡಕಲ್ಲು ಗುಡ್ಡದ ಮೇಲೆ” ಮತ್ತು “ಆಕ್ಸಿಡೆಂಟ್” ಚಿತ್ರಗಳ ಮುಂದೆ ಇದು ಪೇಲವ ಅನಿಸಿಕೊಳ್ಳುತ್ತದೆ!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಕಥೆಯ ನಿರೂಪಣೆಯ ಕುರಿತು ನೀವು ಹೇಳಿರುವುದ ನಿಜ….
ಲೇಖನ ಚೆನ್ನಾಗಿದೆ…

Utham Danihalli
10 years ago

Estavaythu pathragalla bagge mathu nirupanneya bagge heliruva reethi

sharada.m
sharada.m
10 years ago

ಒಳ್ಳೆಯ ವಿಮರ್ಶೆ …ಇಷ್ಟವಾಯಿತು..

Veena Shivanna
Veena Shivanna
10 years ago

Dear Vasuki,
Got to read this article today, a long pending one.
Good review and I am surprised that I have missed watching this movie for some reason, I have spent time watching couple of old movies though.
The storyline reminds me the movie Astitva(Sachin Khedekar, Tabu and one more) which has the same Career oritneted husband, wife(house wife) and a music teacher. The husband is always on tour and the wife is alone who meets this music teacher. After few years, suddenly that person(named Malar) writes a WILL which has a huge amount and then the husband realises the whole trivia.
More or less this movie is based on the story line but the women here or the man in question(Dr Raj role) is not in similar lines as he rejects the relationship(naithikateya hesaralli). Since its 1964 and also a kannada movie, probably directly would have considered the environment and tried to give a message to the audience. However I do agree about the way the women's char is represented, either she should have depicted to be a strong women or normal .. not a confused women.
There was one more movie made AASTHA, enacted by Rekha, Ompuri and it brings in the strong women and men character. Probably that drives home a lot of message.
You write a good review but one thing, movies which are made for that period/ERA has a different relevance and may not hold good for this era. Just a point of view.
Regards,
Veena

Vasuki
10 years ago
Reply to  Veena Shivanna

The movie Uyyaale is way different than Astitva or Aastha, though they are all about the same topic…Uyyaale has the story of a married woman getting attracted to the husband's friend, and the dilemma is the main theme here (here husband is not aware of this, and the friend is in dilemma!) Astitva is more about a woman who has devoted all her life to her husband, who does not "accept" her based on that one incident, which makes her question her "identity", its more about the discovery of an identity (the conflict could have happened for any reason other than the extra marital affair also!) Aastha is more about the man-woman relationship and the boredom that creeps into an otherwise healthy marriage. Thanks for mentioning all these movies, as it made me think how they all differ from each other!

5
0
Would love your thoughts, please comment.x
()
x