ಈ ಕ್ಷಣದಿಂದಲೇ ನೆಪಗಳಿಗೆಲ್ಲ ಗುಡ್ ಬೈ. . . . : ಆಶಾ ಹೆಗಡೆ

ಇನ್ನೂ ನೆನಪಿದೆ ನನ್ನ ಬಗ್ಗೆ ಗೆಳೆಯ ಗೆಳತಿಯರು ಆಡುತ್ತಿದ್ದ ಮಾತುಗಳು. . . ”ಹೇ, ಎಷ್ಟು ಚೆನ್ನಾಗಿ ಕತೆ, ಕವನ ಬರೀತಿಯಾ” “ಓ drawing ಕೂಡ ಮಾಡ್ತಿಯಾ?” “ಅರೆ ಎಷ್ಟು ಚೆನ್ನಾಗಿ ಹಾಡು ಹೇಳತೀಯಾ”, ”ಇವತ್ತಿನ speech ಎಷ್ಟು ಚೆನ್ನಾಗಿತ್ತು”, ”ನೀನ್ ಬಿಡು all rounder “,,,

ಇವತ್ತಿಗೆ ಈ ಹೊಗಳಿಕೆ ಬರೀ ಹಿತವಾಗಿ ನೋಯಿಸುವ ನೆನಪುಗಳು ಮಾತ್ರ. ಹವ್ಯಾಸಕ್ಕೆ ಒರೆ ಹಚ್ಚಿ, ಅದ ಪ್ರತಿಭೆಯಾಗಿ ಪರಿವರ್ತಿಸಿ ಎಡಬಿಡದೆ ಅದೇ ದಾರಿಯಲಿ ಮುನ್ನಡೆದು ಏನಾದರೊಂದು ಸಾದಿಸಿದ್ದು ಮಾತ್ರ ಶೂನ್ಯ. ಬದುಕಿನ ಪುಟಗಳನ್ನೊಮ್ಮೆ ತಿರುಗಿಸಿ ನಾನು ಯಾರು? ಎಂದು ಪ್ರಶಿ್ನಸಿಕೊಂಡರೆ ಉತ್ತರವೇ ಗೊತ್ತಿಲ್ಲದ ಪ್ರಶ್ನೆಯಾಗಿ ಉಳಿದು ಬಿಟ್ಟಿರುವೆ.

ಉಳಿದೆಲ್ಲ ಕಷ್ಟ-ನಷ್ಟ, ಸುಮ್ಮನೇ ಕಳೆದ ಸಮಯ, ವ್ಯಥೆಗಳನ್ನೆಲ್ಲ ಬದಿಗಿಟ್ಟು ಯೋಚಿಸಿ ನೋಡಿದರೆ, ಸಮಯವೇ ಸಿಕ್ಕಿಲ್ಲ ಎಂದದ್ದು, ಯಾರಿಂದೋ ನನ್ನ ಬದುಕಲಿ ಆದ ಪ್ರಮಾದ, ಸಹಾಯಕ್ಕಾಗದ ಜನ, ಮುಗಿಯದ ಮನೆಯ ಕೆಲಸಗಳ ಕನವರಿಕೆ, ನನಗಾ್ಯರ ಬೆಂಬಲವೇ ಇಲ್ಲವೆಂದು ಮರುಗಿದ್ದು, ಎಲ್ಲಾ ವಿಧಿಲಿಖಿತ ಎಂದುಕೊಂಡ ಕ್ಷಣ, ”ನಿನಗಾ್ಯಕೆ ಅವೆಲ್ಲ” ಎಂದ ಯಾರದೋ ಮಾತು, ಇವೆಲ್ಲ ಮುಗಿದಾಗ  “ ಅಯ್ಯೋ ವಯಸ್ಸಾಗುತ್ತಿದೆಯಲ್ಲಾ, ಇನಾ್ಯಕೆ ಎಲ್ಲ”, ಎಂದುಕೊಂಡಿದ್ದು ನಿಜವಾದ ಕಾರಣಗಳೇ?? ನನ್ನ ಸಾಧನೆಯ ಹಾದಿಯ ಅಡೆ-ತಡೆಯ ಆ ಒಂದು ಕ್ಷಣಕ್ಕೆ ಏನೇ ಕಾರಣಗಳನ್ನು ಕಂಡುಕೊಳ್ಳುತ್ತಾ ಹೋಗಿದ್ದರೂ, ನನ್ನ ಬಗ್ಗೆಯೇ ನಾನೇ ಸೂಕಾ್ಷ್ಮವಲೋಕನ ಮಾಡಿಕೊಂಡರೆ, ಕೊನೆಗೆ ಸಿಕ್ಕ ಸತ್ಯ ಒಂದೇ,,, ಎಲ್ಲದಕ್ಕೂ ಕಾರಣ ನಾನೇ, ನನ್ನ ದುರ್ಬಲ ಮನಸ್ಸೆ,, ಉಳಿದವೆಲ್ಲ ಬರೀ ನೆಪಗಳು ಮಾತ್ರ.

ಸಮಯ ಸಿಕ್ಕಿಲ್ಲದಿದ್ದರೆ ಸ್ವಲ್ಪ ನಿದ್ರೆ ಬಿಡಬಹುದಿತ್ತು, ಯಾರಿಂದಲೋ ಆದ ಪ್ರಮಾದವ ಮರೆತು ಬಿಡಬಹುದಿತ್ತು, ಒಬ್ಬರ ಸಹಾಯ ಸಿಗದಿದ್ದರೆ ಇನ್ನೊಬ್ಬರ ಸಹಾಯ ಕೇಳಬಹುದಿತ್ತು, ಒಬ್ಬಿಬ್ಬರ ಅಸಹಕಾರಕ್ಕೆ ಇಡೀ ಜಗತ್ತೇ ಇಷ್ಟು ಎಂದೇಕೆಣಿಸಬೇಕಿತ್ತು, ? ಸೋತಾಗ ವಿಧಿ-ಲಿಖಿತ ಎಂದ ಕ್ಷಣದಿಂದ ನಿಂತಲ್ಲೇ ನಿಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಮತ್ತೆ- ಮತ್ತೆ ಪ್ರಯತ್ನದ ಹಾದಿಯಲಿ ಸಾಗಬಹುದಿತ್ತು. ”ನಿನಗ್ಯಾಕೆ ಇವೆಲ್ಲ
‘ಎಂದು ಪ್ರಶ್ನಿಸಿದವರಿಗೆ “ನನಗ್ಯಾಕೆ ಬೇಡ” ?ಎಂದು ಮರು ಪ್ರಶ್ನೆ ಹಾಕಬಹುದಿತ್ತು.

“ಅಯ್ಯೋ ವಯಸ್ಸಾಗುತ್ತಿದೆಯಲ್ಲಾ” ಎಂಬ ಯೋಚನೆ ಬಂದಾಗೆಲ್ಲ ಸಾಧನೆಗೆ ವಯಸ್ಸಿನ ಮಿತಿ ಇಲ್ಲದೇ ಸಾಧಿಸಿದವರ ಜೀವನ ಚರಿತ್ರೆ ಓದಿ ಸ್ಪೂರ್ತಿ ಪಡೆದು ಕೊಳ್ಳಬಹುದಿತ್ತು. ಒಂದು ಸಾಧನೆಗೆ ನಮ್ಮೊಳಗಿರುವ ಪ್ರತಿಭೆ, ಒಂದಿಷ್ಟು ಪೂರ್ವ ಸಿದ್ದತೆ, ಆ ಪ್ರತಿಭೆಯ ಬೆಳವಣಿಗೆಗೆ ದಾರಿ, ಸೋತರೆ. . ಆ ಸೋಲ ಸೋಲಿಸಿ ಗೆಲುವು ಸಾಧಿಸುವ ಮರು ಪ್ರಯತ್ನ. . . . ಇಷ್ಟು ಸಾಕು. . !. . ಉಳಿದವೆಲ್ಲ ನೆಪಗಳಷ್ಟೆ. ಪ್ರತಿಭೆಗಳಲ್ಲಿ ಬೇಕಾದಷ್ಟು ವಿಧ’ಬರವಣಿಗೆ, ಕಲೆ, ಸಂಗೀತ, ವಿದ್ಯಾಭ್ಯಾಸಕ್ಕನುಗುಣವಾದ ಕೆಲಸ, ಆ ಕೆಲಸದಲ್ಲಿನ ಉನ್ನತಿ, ಸ್ವಂತ ಉದ್ಯೋಗ, ಕೃಷಿಯಲ್ಲಿನ ಸಾಧನೆ, ಕೈಗಾರಿಕೆ, ಹೀಗೆ ಹತ್ತು ಹಲವು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುವುದು.

ಕೆಲವರಲ್ಲಿ ವಿವಿಧ ರಂಗದ ಪ್ರತಿಭೆ. ಆ ಪ್ರತಿಭೆಯ ಮೂಲಕ ಸಾಧನೆಗೆ ಕನ್ನಡಿ ಹಿಡಿದು, ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಸ್ವಃತಃ ಅವರವರದೇ ಜವಾಬ್ದಾರಿ. ನಾವು ಕಟ್ಟಿಕೊಂಡ ನಮ್ಮ ಪ್ರೀತಿಯ ಮನೆಯಲ್ಲಿ ದೀಪ ಹಚ್ಚುವುದು ನಮ್ಮದೇ ಕೆಲಸ. ಪರರಿಗಾಗಿ ಕಾಯುತ್ತಾ ಕೂತು ಕತ್ತಲೆಯೆಂದು ದೂರುತಿರುವುದು ಕೇವಲ ನೆಪ ಮಾತ್ರ. ಜೀವನದ ಪ್ರತಿ ಕ್ಷಣವೂ ನಿರ್ಧಾರ ತೆಗೆದುಕೊಳ್ಳುವ ಸಮಯವೇ. ಕೆಲವರು ತಮ್ಮ ಹೃದಯದ ಮಾತು ಕೇಳಿ ನಿರ್ಧಾರ ತೆಗೆದುಕೊಂಡರೆ, ಇನ್ನೂ ಕೆಲವರು ಕೆಲವೊಂದು ಒತ್ತಡಗಳಿಗೆ ಮಣಿದು ನಿರ್ಧಾರ ತೆಗೆದು ಕೊಳ್ಳುವರು. ಮುಚ್ಚಿದ ದಾರಿಯ ಮುಂದೆ ಕೈ ಕಟ್ಟಿ ಕುಳಿತುಬಿಡುವರು.

ಬೇರೆ ದಾರಿಯ ಹುಡುಕುತಾ ಮುನ್ನಡೆಯುವ ಗೋಜಿಗೆ ಹೋಗಲಾರರು. ಪರರ ಮಾತಿಗೆ ಕಿವಿಗೊಡುವ ನಾವು, ನಮ್ಮ ಹೃದಯದ ಮಾತಿಗೆ ನೆಪವೆಂಬ ಬಣ್ಣ ಹಚ್ಚಿ ಕಿವುಡರಾಗುವುದೇಕೆ??? ಈ ಸಾಧನೆ ಎನ್ನುವುದು ಅದೃಷ್ಟದ ಆಟ ಖಂಡಿತ ಅಲ್ಲ. ಯಾರಾದರೂ ಯಾವುದಾದರೂ ರಂಗದಲ್ಲಿ ಸಾಧಿಸಿದ್ದು ನೋಡಿದಾಗ, ಅವರ ಸಂಭ್ರಮ, ಖುಷಿ, ಉತ್ಸಾಹ ಮಾತ್ರ ಕಾಣುವುದು. ಆದರೆ ಪ್ರತಿ ಕ್ಷಣ ಎದುರಾಗುವ ನೆಪಗಳ ಮೀರಿ ನಿಂತು, ಮಾಡಿದ ಹೋರಾಟ ಯಾರಿಗೂ ಕಾಣುವುದೇ ಇಲ್ಲ. ಅನುಕೂಲಕರ ಸ್ಥಿತಿಯಲ್ಲಿ ಗೆಲವು ದೊರೆಯಲಾರದು. ಈ ಗೆಲುವು ಅಸಾಧ್ಯವಾದುದನ್ನೂ, ಸಾಧಿಸಿ ತೋರಿಸುವ ಛಲಗಾರನ ಸಂಗಾತಿ.

ಇದೇ ಆ ಕ್ಷಣ, ಆ ಎಲ್ಲಾ ನೆಪಗಳಿಂದ ಹೊರಬಂದುಬಿಡುವ ಕ್ಷಣ. ಒಂದು ರಿಸ್ಕ ತೆಗೆದುಕೊಂಡು ನೋಡೇಬಿಡುವ ಕ್ಷಣ. ನನಗೆ ಇಷ್ಟೆಲ್ಲಾ ಸತ್ಯಗಳು ತೋಚಿ ತಡವಾಗಿ ಜ್ಞಾನೋದಯವಾದರೂ ಅಯ್ಯೋ ವಯಸ್ಸಾಯಿತಲ್ಲ, ಇನ್ಯಾಕೆ ಇವೆಲ್ಲ ಅನ್ನೋ ನೆಪ, ಇನ್ನು ನೆನಪಷ್ಟೇ. . . ಜೀವನದ ಸಂಘರ್ಷದ ನಡುವೆ, ನೆಪಗಳಿಗೆಲ್ಲಾ ತೆರೆ ಎಳೆದ ಸಾಕ್ಷಿಯಾಗಿ ಈ ಒಂದು ಲೇಖನ. . . ಇದು ಅಂತ್ಯವಲ್ಲ, ಆರಂಭ. ಈ ಕ್ಷ್ಷಣದಿಂದಲೇ ನೆಪಗಳಿಗೆಲ್ಲಾ ಗುಡ್ ಬೈ. . . . . . ಇನ್ನೇನಿದ್ದರೂ ಅವಕಾಶಕ್ಕಾಗಿ ಕಾಯದೇ, ಅವಕಾಶವ ಸೃಷ್ಟಿಸಿಕೊಳ್ಳುತ ಮುನ್ನಡೆಯುತಲಿರುವುದಷ್ಟೆ.
( ಇದು ನನಗೆ ಮಾತ್ರ ಸೀಮಿತವಲ್ಲ. ನೆಪಗಳ ಬಲೆ ಹೆಣೆದು, ಆ ಬಲೆಯೊಳಗೆ ಪ್ರತಿಭೆಗಳ ಬಲಿಕೊಡುತ್ತಿರುವ ಪ್ರತಿ ಮನಸುಗಳಿಗೆ)
ಆಶಾ ಹೆಗಡೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಸತೀಶ ಜಾಧವ
ಸತೀಶ ಜಾಧವ
4 years ago

ಎಲ್ಲರ ಒಳ ಮನಸ್ಸಿನ ಭಾವನೆ ಹಾಗೆ ಬಿಚ್ಚಿ ಇಟ್ಟಂತಿದೆ ನಿಮ್ಮ ಅಂಕಣ, Open heart ಇದ್ದವರು ಮಾತ್ರ ಈ ತರಹ ಸ್ಪೂರ್ತಿ ದಾಯಕ ಲೇಖನ ಬರೆಯಲು ಸಾಧ್ಯ,
👏👏 ಪ್ರಯಾಣ ಮುಂದುವರೆಯಲಿ, 💐💐

ಸತೀಶ ಜಾಧವ
ಸತೀಶ ಜಾಧವ
4 years ago

ಎಲ್ಲರ ಒಳ ಮನಸ್ಸಿನ ಭಾವನೆ ಹಾಗೆ ಬಿಚ್ಚಿ ಇಟ್ಟಂತಿದೆ ನಿಮ್ಮ ಅಂಕಣ, Open heart ಇದ್ದವರು ಮಾತ್ರ ಈ ತರಹ ಸ್ಪೂರ್ತಿ ದಾಯಕ ಲೇಖನ ಬರೆಯಲು ಸಾಧ್ಯ,
👏👏 ಪ್ರಯಾಣ ಮುಂದುವರೆಯಲಿ, 💐💐

2
0
Would love your thoughts, please comment.x
()
x