ನಿಮ್ಮ ಪತ್ರಿಕೆ ಪಂಜು ಎರಡೂ ಸಂಚಿಕೆಗಳನ್ನು ಓದಿದೆ. ಇಷ್ಟವಾಯಿತು. ತಾವು ಓದಿದ ಕಾದಂಬರಿಗಳ ಬಗ್ಗೆ ಮತ್ತು ನೋಡಿದ ಸಿನಿಮಾಗಳ ಬಗ್ಗೆ ಬರೆಯುವುದು, ತಮ್ಮ ಅನುಭವಗಳನ್ನು ದಾಖಲಿಸುವುದು ಮತ್ತು ಒಳನೋಟಗಳನ್ನು ಹಂಟಿಕೊಳ್ಳುವುದು ಪತ್ರಿಕೆಯನ್ನು ಚೆಂದಾಗಿ ಮಾಡಿದೆ. ಇದಕ್ಕಿಂತ ಹೆಚ್ಚಾಗಿ ಬರೆಯುತ್ತಿರುವ ಬಹಳಷ್ಟು ಮಂದಿ ಹೊಸಬರಾಗಿರುವುದರಿಂದ ಪತ್ರಿಕೆಗೊಂದು ಹೊಸ ನೋಟವೂ ಸಿಕ್ಕಿದೆ. ಅನುಭವಿ ಲೇಖಕರು ಬರೆಯತೊಡಗಿದೊಡನೆ, ನಮಗೆ ಅವರ ನಿಲುವು, ದೃಷ್ಟಿಕೋನ, ಸಿದ್ಧಾಂತದ ಬಗ್ಗೆ ಪೂರ್ವಗ್ರಹ ಕೂಡ ಇರುವುದರಿಂದ ನಮ್ಮ ಓದನ್ನು ಅದು ಪ್ರಭಾವಿಸುತ್ತದೆ. ಇಲ್ಲಿ ಹಾಗಾಗುವುದಿಲ್ಲ. ಹೊಸ ತರುಣ ತರುಣಿಯರ ನಿಸ್ಪೃಹ ನೋಟವೇ ಇದರ ತಾಜಾತನಕ್ಕೆ ಕಾರಣ. ಒಂದೇ ಒಂದು ಸಲಹೆಯೆಂದರೆ ವ್ಯಂಗ್ಯ ಮತ್ತು ಕುಹಕಗಳಿಂದ ದೂರವಿರುವಂತೆ ನೋಡಿಕೊಳ್ಳಿ. ಈಗ ಬೇಕಿರುವುದು ಶುದ್ಧವಾದ ಓದು, ಪ್ರೀತಿಸಬಲ್ಲಂಥ ಬರಹವೇ ಹೊರತು ನೋಯಿಸುವ ಚುಚ್ಚುವ ಬರಹ ಅಲ್ಲ ಎಂದು ನನ್ನ ನಂಬಿಕೆ.
-ಜೋಗಿ |
ಹೌದು ಈಗ ಬೇಕಿರುವುದು ಶುದ್ದವಾದ ಓದು! ಅದು ನಮಗೆ ಸಿಗುವುದು ಕಷ್ಟವೆ ಆಗುತ್ತಿದೆ ಅನ್ನುವುದು ಸತ್ಯ !
ನಮ್ಮೆಲ್ಲರ ಹೆಮ್ಮೆಯ ಪಂಜುವಿಗೆ ಚೆಂದದ ಆಶಯದೊಂದಿಗೆ ಬರೆದ ನಿಮ್ಮ ಓಲೆಗೆ ಸ್ವಾಗತ ಸರ್. ನಿಮ್ಮ ಅಭಿಪ್ರಾಯವೂ ದಿಟ ಸರ್..!
ಹೌದು , ನಾವು ಕನ್ನಡಿಗರಾಗಿ ಹುಟ್ಟಿ , ಕನ್ನಡವನ್ನು ಉಳಿಸಲೇಬೇಕಾದ ಅನಿವಾರ್ಯತೆ ,ಮತ್ತು ಹೆಚ್ಚಾಗಿ ನಮ್ಮ ಕರ್ತವ್ಯವಾಗಿದೆ.ಅಷ್ಟಾದರೂ ಮಾಡಿ ನಮ್ಮ ಋಣ ತೀರಿಸುವ ಜವಾಬ್ದಾರಿ ಇದೆ .ಈಗಿನವರಲ್ಲಿ ಕನ್ನಡ ಮಾತನಾಡುವುದೆಂದರೆ ಮರ್ಯಾದೆ ಪ್ರಶ್ನೆ .ಕನ್ನಡ ಮಾತನಾಡುವವರು ಅವಿದ್ಯಾವಂತರೆಂದೆ ಭಾವನೆ ,ಹೀಗಿರುವಾಗ ಕನ್ನಡದ ಪುಸ್ತಕಗಳನ್ನು ಓದಿಸುವ ಆಶಕ್ತಿ ಮೂಡಿಸಬೇಕಾಗಿದೆ.ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಪ್ರಶಂಸಾರ್ಹವಾಗಿದೆ.
ಧನ್ಯವಾದಗಳು
ರವಿಶಂಕರ್.