ಲೇಖನ

ಇವು ನಮ್ಮ ಕನ್ನಡ ಸಿನೆಮಾಗಳ ಹೆಸರುಗಳು!: ಸೂರಿ ಹಾರ್ದಳ್ಳಿ


ತಮ್ಮದು ಕನ್ನಡ ಸಿನೆಮಾ ಎಂದು ತಾವೇ ಕರೆದುಕೊಳ್ಳುವ ಸಿನೆಮಾಗಳಲ್ಲಿ ಭಾಷೆ ಹೇಗಿದೆಯೋ ಗೊತ್ತಿಲ್ಲವಾದರೂ ಅವು ಹೊಂದಿರುವ ಹೆಸರುಗಳು ಹೇಗಿರುತ್ತವೆ ಗೊತ್ತಾ? ಈ ಕೆಳಗಿನವನ್ನು ಓದಿ.

1.    ಪೂರ್ತಿ ಬೇರೆ ಭಾಷೆಯ ಹೆಸರುಗಳು
ದುನಿಯಾ, ಲಾಕಪ್ ಡೆತ್, ಮಾಸ್ಟರ್ ಮೈಂಡ್, ರೈನ್ ಕೋಟ್, ಕೇರ್ ಆಫ್ ಫುಟ್‍ಪಾತ್, ಐ ಆ್ಯಮ್ ಇನ್ ಲವ್, ಲವ್ ಯು ಆಲಿಯಾ, ಲವ್ ಬ್ಯಾಂಡ್, ಫೇರ್ ಅಂಡ್ ಲವ್ಲಿ, ಲವ್ ಈಸ್ ಪಾಯ್ಸನ್, ಲವ್ ಇನ್ ಮಂಡ್ಯ, ಡಾರ್ಲಿಂಗ್, ಕ್ರೇಜಿ ಸ್ಟಾರ್, ಲಿಟಲ್ ಮಾಸ್ಟರ್, ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್, 24 ಕ್ಯಾರೆಟ್, ಬುಲ್ ಬುಲ್, ಪಾರು ವೈಫ್ ಆಫ್ ದೇವದಾಸ್, ಗೂಗ್ಲಿ, ವಿಕ್ಟರಿ, ಅಂದರ್ ಬಾಹರ್, ಡೈರೆಕ್ಟರ್ಸ್ ಸ್ಪೆಷಲ್, ಸೈಕಲ್, ವಿಸಲ್, ಟೀನೇಜ್, ಕೇಸ್ ನಂ. 18/9, ಬರ್ಫಿ, ದಿಲ್ ವಾಲಾ, ಸ್ಲಮ್, ಖತರ್‍ನಾಕ್, ಸೈಲೆನ್ಸ್, ದೇವ್ ಸನ್ ಆಫ್ ಮುದ್ದೇಗೌಡ, ಪೊಲೀಸ್ ಸ್ಟೋರಿ, ಫ್ಲಾಪ್, ಬುಲ್ ಬುಲ್, ಮೆಲೊಡಿ, ಇಲೆಕ್ಷನ್, ರೆಬೆಲ್, ದಿಲ್ ರಂಗೀಲಾ, ಸೆಂಟ್ರಲ್ ಜೈಲ್, ಲೇಡಿ ಬಾಸ್, ಅಣ್ಣಾ ಬಾಂಡ್, ಬ್ರೇಕಿಂಗ್ ನ್ಯೂಸ್, ಗಾಂಧಿ ಸ್ಮೈಲ್ಸ್, ವಿಲನ್, ಗಾಡ್ ಫಾದರ್, ಎಯ್ಟೀನ್ತ್ ಕ್ರಾಸ್, ಚಾಲೆಂಜ್, ರಾಂಬೋ, ಬಾಲ್‍ಪೆನ್, ಡಕೋಟಾ ಎಕ್ಸ್‍ಪ್ರೆಸ್, ಕಿಲ್ಲಿಂಗ್ ವೀರಪ್ಪನ್, ಜಾಲಿ ಡೇಸ್, ಆಟೊ, ಮಚ್ಚ, ನಂದ ಲವ್ಸ್ ನಂದಿತ, ಸತ್ಯ ಇನ್ ಲವ್, ಆ್ಯಕ್ಸಿಡೆಂಟ್, ಸಿಟಿಜನ್, ಜಿಂದಗಿ, ಸಿಕ್ಸರ್, ದುಷ್ಮನ್, ರೋಡ್ ರೋಮಿಯೋ, ಸೆವೆನ್ ಒ’ ಕ್ಲಾಕ್, ಮೈ ಆಟೊಗ್ರಾಫ್, ಸೈನೈಡ್, ಜಾಕ್‍ಪಾಟ್, ಬಾಯ್‍ಫ್ರೆಂಡ್, ಸಪ್ನೋಂಕಿ ರಾಣಿ, ಕ್ರೇಜಿ ಸ್ಟಾರ್, ಇತ್ಯಾದಿ.

2.    ಕಲಬೆರಕೆ ಮತ್ತು ನಾನ್‍ಸೆನ್ಸ್ ಹೆಸರಿನವು
ಮೆಂಟ್ಲು, ಬುಲೆಟ್ ಬಸ್ಯಾ, ನನ್ ಲೈಫ್ ಅಲ್ಲಿ, ಟೋಪಿವಾಲಾ, ಸಿಂಪಲ್ ಆಗಿ ಒಂದು ಲವ್ ಸ್ಟೋರಿ, ನಮ್ ದುನಿಯಾ ನಮ್ ಸ್ಟೈಲ್, ಪ್ಯಾರೇ ಆಗ್ಬುಟ್ಯೈತೆ, ಜಂಗಲ್ ಜಾಕಿ, ಕೃಷ್ಣ’ನ್ (ಕನ್ನಡದಲ್ಲಿ ‘ ಬಳಕೆ ಇಲ್ಲ) ಲವ್ ಸ್ಟೋರಿ, ಕೋಟಿಗೊಂದ್ ಲವ್ ಸ್ಟೋರಿ, ಬೆಂಕಿಪಟ್ಣ (ಪೊಟ್ಟಣವೇ, ಪಟ್ಟಣವೇ?), ಒಂದು ರೋಮಾಂಟಿಕ್ ಕ್ರೈಮ್ ಕತೆ, ಜಸ್ಟ್ ಮಾತ್ ಮಾತಲ್ಲಿ, ಜಸ್ಟ್ ಮದುವೇಲಿ, ಹುಚ್ಚುಡುಗ್ರು (ಹುಡುಗರೋ, ಉಡುಗರೋ?), ಕ್ರೇಜಿ ಲೋಕ, ಪ್ರೇಂ ಅಡ್ಡ, ಬಾವ ಬಾಮೈದ (ಭಾವ, ಭಾವ ಮೈದುನ) ರೂಷಗಾರ (ರೋಷಗಾರ), ವೆಂಕಟ ಇನ್ ಸಂಕಟ, ಲವ್ ಗುರು, ಮಸ್ತ್ ಮಜಾ ಮಾಡಿ, ಹೃದಯ ಐ ಮಿಸ್ ಯು, ಒರಟ ಐ ಲವ್ ಯು, ಚಮಕಾಯ್ಸಿ ಚಿಂದಿ ಉಡಾಯ್ಸಿ, ಕಾಶಿ ಫ್ರಮ್ ವಿಲೇಜ್, ನನ್ (ಬಹುಶಃ ಇದು ‘ನನ್ನ’ ಎಂಬುದರ ಕಿರು ರೂಪ. ಟಿuಟಿ, ಟಿoಟಿe ಅಲ್ಲ), ಲವ್ ಮಾಡ್ತೀಯಾ, ಇತ್ಯಾದಿ

3.    ಅರ್ಧರ್ಧ ಹೆಸರಿನವು
ಸೇವಂತಿ ಸೇವಂತಿ (ಸೇವಂತಿಗೆ), ಬಾಮೈದ (ಭಾವಮೈದುನ), ಸರ್ದಾರ್ (ಸರದಾರ), ನಮ್ (ನಮ್ಮ) ಯಜಮಾನ್ರು, ರಾಜ್ (ರಾಜ)ಕುಮಾರಿ, ಕಲಾಕಾರ್ (ಕಲಾಕಾರ), ಪ್ರೀತ್ಸೆ ಪ್ರೀತ್ಸೆ (ಪ್ರೀತಿಸೇ), ಯಜಮಾನ್ರು (ಯಜಮಾನರು), ಇತ್ಯಾದಿ

ಟೆಲಿವಿಷನ್ ಕಾರ್ಯಕ್ರಮಗಳ ಶೀರ್ಷಿಕೆಗಳೇನೂ ಸಹ್ಯವಾಗಿಲ್ಲ. ಒಂದು ಶೀರ್ಷಿಕೆಯನ್ನೇ ಕನ್ನಡದಲ್ಲಿ ಸರಿಯಾಗಿ ಬರೆಯಲು ಬಾರದ ಇಂತಹ ಸಿನೆಮಾಗಳನ್ನು ನೋಡಬೇಕೇಕೆ? ಸಂಭಾಷಣೆಗಳಂತೂ ಬರೀ ‘ಅಪಸವ್ಯ’ವೇ. ಅಲ್ಪ ಪ್ರಾಣ, ಮಹಾ ಪ್ರಾಣ, ಸ, ಶ, ಷಗಳ ವ್ಯತ್ಯಾಸ, ಅ-ಹಗಳ ವ್ಯತ್ಯಾಸ, ಇಲ್ಲವೇ ಇಲ್ಲ, ಬೇಕಾಗಿಲ್ಲ. ಮಾತಿನ ನಡುವೆ ಯಾವ ಪದಗಳ ನಡುವೆ ಬಿಡುವು (ಪಾಸ್) ಕೊಡಬೇಕು, ಎಲ್ಲಿ ಒತ್ತಿ ಹೇಳಬೇಕು, ಯಾವ ಪದವು ಇನ್ನೊಂದಕ್ಕೆ ಹೊಂದಿದೆ ಎಂಬುದನ್ನೂ ನಮ್ ‘ಖಲಾವಿಧ’ರು ನೋಡುವುದಿಲ್ಲ, ಜನರೂ ತಪ್ಪನ್ನೇ ಸರಿ ಎಂದು ಭಾವಿಸುತ್ತಾರೆ. ರಾಜಕುಮಾರ್, ಅಶ್ವತ್ಧ್, ವಿಷ್ಣುವರ್ಧನ, ರಮೇಶ್, ಅನಂತನಾಗ್, ಇಂತಹ ಕೆಲವೇ ಜನರ ಹೆಸರನ್ನು ಒಳ್ಳೆಯ ಕಲಾವಿದರೂ, ನಟರೂ, ಸಂಭಾಷಣೆಗಾರರೂ ಆಗಿ ಸದಾ ನೆನಪಿನಲ್ಲಿಟ್ಟುಕೊಳ್ಳಬಹದು. ಆದರೆ ಯಾರಿಗೆ ಬೇಕಾಗಿದೆ ಭಾಷಾ ಸ್ಪಷ್ಟತೆ? 

-ಜೈ ಕರ್ನಾಟಕ ಮಾತೆ!


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಇವು ನಮ್ಮ ಕನ್ನಡ ಸಿನೆಮಾಗಳ ಹೆಸರುಗಳು!: ಸೂರಿ ಹಾರ್ದಳ್ಳಿ

  1. ಮಾನ್ಯರೇ ತಮ್ಮ ಗಮನಿಸುವಿಕೆಗೆ ಧನ್ಯವಾದಗಳು. ಮೂಲದಲ್ಲೇ ಅಂದರೆ ಶಾಲಾ ಮಟ್ಟದಲ್ಲೇ ಕನ್ನಡ ಬಡವರ ಭಾಷೆ ಆಗಿದೆ. ೧೦ನೇ ತರಗತಿ ನಂತರ ಬುದ್ದಿವಂತ ಮಕ್ಕಳಿಗೆ ಭಾಷೆಯನ್ನು ಹೇಳಿಕೊಡದೇ ಕೇವಲ ಪರೀಕ್ಷೆಗೆ ಅಂಕ ತೆಗೆಯಲು ಮಾತ್ರ ಒತ್ತಡ ಹಾಕುವ ಪೋಷಕರು ಶಾಲೆಗಳಮಧ್ಯೆದಿಂದ ಬಂದ ಯುವಜನರು ಹೇಗೆ ಕನ್ನದವನ್ನು  ಮಾತನಾಡಲು   ಸಾಧ್ಯ? ಅವರು ಕಲಿತಿದ್ದನ್ನೇ ಎಲ್ಲಾ ಕಡೆ ಮಾತನಾಡುತ್ತಾರೆ.  ಚಲನಚಿತ್ರಗಳ  ಹೆಸರುಗಳ ಬಗ್ಗೆ ಹಿಂದೊಮ್ಮೆ ಕನ್ನಡ ಚಲನಚಿತ್ರದ ನಿರ್ದೇಶಕರು ಒಬ್ಬರು ಹೇಳಿದ್ದು ಹೀಗೆ," ನಮ್ಮ ಚಿತ್ರಗಳನ್ನು ನೋಡುವವರಲ್ಲಿ ಬಹುಪಾಲು ಜನ ಬಸ್ ರೈಲುಗಳನ್ನು ಕಾಯುವವರು ಹಾಗೂ ಕಾಲ ಕಳೆಯಲು ಕಷ್ಟ ಅನ್ನುವ ಜನ. ಅವರನ್ನು ಚಲನಚಿರ ಮಂದಿರಗಳಿಗೆ ಸೆಳೆಯಲು ಇದು ಅಗತ್ಯ" ಅಂತ.

  2. ಕನ್ನಡದಲ್ಲಿ ವಿಚಿತ್ರ ಹೆಸರುಗಳುಳ್ಳ ಚಿತ್ರಗಳು ಮಾತ್ರ ಜನರ ಗಮನ ಸೆಳೆಯುತ್ತೆ ಅಂತೇನಿಲ್ಲ. ಮುಂಗಾರುಮಳೆ, ಕುಟುಂಬ, ಉಳಿದವರು ಕಂಡಂತೆ..ಹೀಗೆ ಅದೆಷ್ಟೋ ಅಪ್ಪಟ ಕನ್ನಡ ಹೆಸರಿನ ಕನ್ನಡ ಚಿತ್ರಗಳು ಅದರ ಕತೆಯಿಂದಲೇ ಯಶಸ್ವಿಯಾದ ಉದಾಹರಣೆಗಳಿವೆ. ಆದ್ರೆ ನೀವೆಂದಂತೆ ಕಲಬೆರಕೆ ಹೆಸರುಗಳ ಚಿತ್ರ ಮಾಡಿ ಆ ಹೆಸರಿಂದಾದ್ರೂ ಜನ ಬರ್ಲಿ ಅಂತ ಕಾಯುತ್ತಿರೋ ಪರಿಸ್ಥಿತಿ ಬಂದಿರೋದು ದುರಂತವೇ ಸರಿ 🙁

Leave a Reply

Your email address will not be published.