ಮೊದಲು ಓದುಗನಾಗು

ಇಳಾ ಕಾದಂಬರಿ: ಚಂದ್ರು ಪಿ ಹಾಸನ್

ಕರೋನಾದ ಹಿನ್ನೆಲೆಯಲ್ಲಿ ರಜೆಯೊಂದಿಗೆ ಮಜಾ ಮಾಡುತ್ತಿದ್ದ ಸಂದರ್ಭದಲ್ಲಿ , ದಿನದ ಕೆಲಕಾಲ ಸಾಹಿತ್ಯದಲ್ಲಿ ಒಲವು ಮೂಡುತ್ತಿತ್ತು. ಇಂದಿನ ಸಾಹಿತ್ಯಾಸಕ್ತಿಯ ಆ ಕಾಲದಲ್ಲಿ ನನ್ನ ಹಿತಚಿಂತಕರು, ಮಾರ್ಗದರ್ಶಕರು ಆದಂತಹ ಶ್ರೀಮತಿ ವಾಣಿ ಮಹೇಶ್ ರವರು ಒಮ್ಮೆ ಪರಿಚಯಿಸಿದ ಪುಸ್ತಕ ಶ್ರೀಮತಿ ಶೈಲಜಾ ಹಾಸನ ಇವರ ಇಳಾ ಕಾದಂಬರಿಯನ್ನು ಓದಿದೆ ಎಂದು ಹೇಳಲು ಹರ್ಷಿಸುತ್ತೇನೆ.

ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಹಳ್ಳಿಗೇ ಮಾದರಿಯಾದ ಆ ಹೆಣ್ಣಿನ ಕಥೆಯಲ್ಲಿ ಇರುವ ಪಾತ್ರಗಳಲ್ಲಿ ಐದು ಪಾತ್ರಗಳು ನನಗೆ ಅಚ್ಚುಮೆಚ್ಚು ಎನಿಸಿದವು.

ಪ್ರಾರಂಭದಲ್ಲಿ ಬರುವ ವಿಸ್ಮಯ್ ನ ಪಾತ್ರವೂ ಒಂದು ವಿಶೇಷತೆಯನ್ನು ಹೊಂದಿದೆ. ತನ್ನ ವಿಧವೆ ತಾಯಿಯನ್ನು ಮದುವೆಯಾಗಿ ಜೀವನ ಕೊಟ್ಟ ತಂದೆಯ ಪೂರ್ಣ ಪ್ರಮಾಣದ ಪ್ರೀತಿಯಿಂದ ವಂಚಿತನಾಗಿ, ತಾಯಿಯ ಪ್ರೀತಿಯ ನೇರವಾಗಿ ಸಿಗದೆ, ತನ್ನ ತಮ್ಮ ತಂಗಿಯರ ಪ್ರೀತಿಯ ಸವಿಯದೇ ನೊಂದ ಮನಸ್ಸಿನ ಹುಡುಗ ವಿಸ್ಮಯ್. ತನ್ನ ಹಿಂದಿನ ಜೀವನವನ್ನು ಧನಾತ್ಮಕವಾಗಿ ಚಿಂತಿಸಿ ತನ್ನಜೀವನ ಕಟ್ಟಿಕೊಂಡು, ನಾಯಕಿಗೆ ಹಿರಿಮೆಯನ್ನು ತಂದುಕೊಟ್ಟು ಅವಳನ್ನು ಪ್ರೀತಿಸಿ, ಆರಾಧಿಸಿ ಆಕೆಯ ಬಾಳಿಗೆ ಆಸರೆಯಾಗುವಂಥದ್ದನ್ನು ಲೇಖಕರು ಮಾದುರ್ಯ ಭಾವದ ಅಕ್ಷರಗಳೊಂದಿಗೆ ರಚಿಸಿದ್ದಾರೆ

ಇನ್ನೂ ನಾಯಕಿಯ ತಾಯಿ, ತನ್ನ ಗಂಡನನ್ನು ಕಳೆದುಕೊಂಡು ಜೀವನದಲ್ಲಿ ಯಾವ ಭಾಗದಲ್ಲೂ ನೆಮ್ಮದಿಯನ್ನು ಕಾಣದವಳು ನೀಲ. ಮಗಳ ಯಶಸ್ಸಿನಿಂದ, ಆಕೆಯ ನೆಮ್ಮದಿಯಿಂದ ತಾನು ತೃಪ್ತಿಯನ್ನು ತಂದುಕೊಂಡು ಮಗಳ ಆಸೆಯಂತೆಯೇ, ಪ್ರತಿಯೊಂದರಲ್ಲಿ ಅವಳಿಗೆ ಆಸರೆಯಾಗಿ ನಿಂತುಕೊಳ್ಳುವ ಸನ್ನಿವೇಶಗಳನ್ನು ಸುಪ್ರಿಯ ವಾಗಿ ಲೇಖಕರು ಚಿತ್ರಿಸಿದ್ದಾರೆ

ಇಳಾಳ ಅಜ್ಜಿ ಅಂದರೆ ನೀಲಳ ದೊಡ್ಡಮ್ಮ, ಅಂಬುಜಮ್ಮ. ಇವರ ಬಗ್ಗೆ ಹೇಳುವುದಾದರೆ ತನ್ನ ಭಾವನಿಂದ , ಆಸ್ತಿಯಿಂದ ವಂಚಿತಳಾಗಿ ಬದುಕುತ್ತಿದ್ದರು. ತ್ಯಾಗಮಯಿ ಆ ವಂಚಕರಿಗೆ ಶಾಪ ಹಾಕದೆ ಜೀವನವನ್ನು ಸಾಗಿಸುತ್ತಾಳೆ, ಭಾವನ ಮಗ ತನ್ನ ಮನೆಯ ಬಾಗಿಲಿಗೆ ಬಂದಾಗ, ವಂಚಕನ ಮಗ ಎಂದಾದರೂ ಅವನ ಔದಾರ್ಯ ಗುಣಗಳಿಗೆ ಕ್ಷಮಿಸಿ ಎಲ್ಲವನ್ನು ಮರೆತು, ಅವನಿಗೆ ನಾಯಕಿಯನ್ನು ಕೊಟ್ಟು ಮದುವೆ ಮಾಡಿ ಅವನ ಜೀವನದ ಶ್ರೇಯೋಭಿಲಾಷಿ ಯಾಗುವ ಯೋಚನೆ ಮಾಡುತ್ತಾಳೆ. ಈಕೆಯ ಪಾತ್ರದಲ್ಲಿ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿ ಸ್ತ್ರೀಪಾತ್ರದ ಹಿರಿಮೆಯನ್ನು ದುಪ್ಪಟ್ಟು ಮಾಡುವ ಪ್ರಯತ್ನವೂ ಶ್ಲಾಘನೀಯ!

ಇನ್ನು ಕಥೆಯ ಕೊನೆಯ ಭಾಗದಲ್ಲಿ ಬರುವ ನಿವಾಸ್ ನ ಪಾತ್ರ ಮನಮುಟ್ಟುವಂತಿದೆ. ತನ್ನ ತಂದೆಯಿ, ಅಂಬುಜಮ್ಮ ಕಳೆದುಕೊಂಡ ಎಲ್ಲಾ ಆಸ್ತಿಯನ್ನು ಹಣದ ರೂಪದಲ್ಲಿ ಸಿಗುವಂತೆ ಮಾಡಿ ಚಿಕ್ಕಮ್ಮಳ ಕ್ಷಮೆಗೆ ಯೋಗ್ಯ ಅನಿಸಿ ಕೊಳ್ಳುವುದರ ಜೊತೆಗೆ , ನಾಯಕಿಯನ್ನು ಪ್ರೀತಿಸಿ ಮದುವೆಗೆ ಬಯಸಿದಾಗ ,ತನ್ನ ಹಾಗೂ ವಿಸ್ಮಯ್ ನೊಂದಿಗಿನ ಪ್ರೇಮದ ಬಗ್ಗೆ ತಿಳಿಸಿದಾಗ ಚಿಗುರಿದ ಪ್ರೀತಿಯನ್ನು ಅಲ್ಲೇ ನಿಲ್ಲಿಸಿ ಇಳಾಳ ಆಸೆಯನ್ನು ಮನೆಯವರಿಗೂ ತಿಳಿಸಿ ಅವರಿಬ್ಬರ ಪ್ರೀತಿಗೆ ಸೇತುವೆಯಾದ ತ್ಯಾಗ ಜೀವಿಯ ಪಾತ್ರವನ್ನು ಬಲು ಅಚ್ಚುಕಟ್ಟಾಗಿ ಭಾವತುಂಬಿ ತಿಳಿಸಿದ್ದಾರೆ.

ಕಥಾ ನಾಯಕಿಯು ಎಲ್ಲ ಹೆಣ್ಣಿನಂತೆಯೇ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡು ಬೆಳೆದವಳು . ಆದರೆ ಓದಿದರೂ, ಹಳ್ಳಿಯಲ್ಲಿ ಮಾದರಿ ರೈತೆಯಾಗಿ ಜೀವನವನ್ನು ಧೈರ್ಯವಾಗಿ ಹೆದರಿಸುವುದು ಹಾಗೂ ತನ್ನ ಏಳಿಗೆಗೆ ಕಾರಣವಾದ ವಿಸ್ಮಯ್ ಕಥೆ ಕೇಳಿ ನೊಂದ ಜೀವದ ಪ್ರೀತಿಗೆ ಬೀಳುವ ಸನ್ನಿವೇಶಗಳು ಹಾಗೂ ತನ್ನ ಅಜ್ಜಿಯ ಕ್ಷಮಾಗುಣವನ್ನು ನೋಡಿ ಹೆಮ್ಮೆ ಪಡುವಂಥದ್ದು , ಅಲ್ಲದೆ ತನ್ನ ಜೀವನದ ಬಗ್ಗೆ ಚಿಂತಿಸುತ್ತಾ ತನ್ನ ತಂದೆಯ ಸಾವನ್ನು ಧನಾತ್ಮಕವಾಗಿ ತೆಗೆದುಕೊಂಡು ಯಾರನ್ನೂ ದೂಷಿಸದೆ ಇರುವಂತಹ ಗುಣಗಳನ್ನು ಹೊಂದಿರುವ ಸಹನಾಮೂರ್ತಿ ತ್ಯಾಗಮಯಿ ಗುಣಗಾನ ತುಂಬಾ ಮಾದುರ್ಯ ತುಂಬಿದೆ. ಅಲ್ಲದೆ ತನ್ನ ನೈಜ ಪ್ರೇಮಿಯನ್ನು ಬಿಟ್ಟುಕೊಡದೆ, ತಾಯಿ , ಅಜ್ಜಿಯನ್ನು ನೋಯಿಸದೆ ಸಕಾರಾತ್ಮಕತೆ ಯಿಂದ ಆಡಂಬರವಿಲ್ಲದೆ ಮದುವೆಯಾದ ಸನ್ನಿವೇಶದ ಚಿತ್ರಣ ತುಂಬಾ ಹೃದಯಸ್ಪರ್ಶಿಯಾಗಿದೆ.

ಈ ಮೇಲಿನ ಎಲ್ಲಾ ಪಾತ್ರಗಳಲ್ಲಿ ತನ್ನ ಹಿಂದಿನ ಜೀವನವನ್ನು ಮರೆತು ಧನಾತ್ಮಕ ಚಿಂತನೆಗಳ ಮೂಲಕ ಸಹೃದಯಿ ಎನಿಸಿಕೊಳ್ಳುವ ಪ್ರತಿಯೊಬ್ಬರೂ ಪರಸ್ಪರ ಗೌರವ, ಪರಸ್ಪರ ಹೊಂದಾಣಿಕೆಯಾ ಚಿತ್ರಣವನ್ನು ಚಿತ್ರಿಸಿ ಪ್ರಸ್ತುತ ಸಮಾಜಕ್ಕೆ ಒಬ್ಬ ಹೆಣ್ಣುಮಗಳು ರೈತರಿಗಾಗಿ ಪ್ರಶಸ್ತಿಯನ್ನು ಪಡೆದುಕೊಳ್ಳುವ ಮಟ್ಟಿಗೆ ಬೆಳೆಯುತ್ತಾರೆ ಮತ್ತು ರೈತ ವೃತ್ತಿ ಕೂಡ ಯೋಗ್ಯವಾದದ್ದು ಎಂಬುದನ್ನು ಪರಿಚಯಿಸಲು ಲೇಖಕರು ಉಪಯೋಗಿಸಿರುವ ಪದಗಳು , ಆ ಮಾಧುರ್ಯ ತುಂಬಿದ ಅಕ್ಷರಗಳು ಓದುಗರಿಗೆ ಓದಲು ಆಸಕ್ತಿಯನ್ನು ಮೂಡಿಸುತ್ತದೆ. ಮತ್ತು ಪ್ರತಿಯೊಬ್ಬರು ಧನಾತ್ಮಕ ಚಿಂತನೆಗಳ ಮೂಲಕ ಸಾಗಿದರೆ ಉತ್ತಮ ಜೀವನ ನಡೆಸಲು ನಾಂದಿ ಯಾಗುವುದು ಎಂಬ ಸಂದೇಶವನ್ನು ಈ ಕಾದಂಬರಿಯು ತಿಳಿಸುತ್ತದೆ ಎಂದು ನನ್ನ ಅಭಿಪ್ರಾಯ

ಚಂದ್ರು ಪಿ ಹಾಸನ್


ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಇಳಾ ಕಾದಂಬರಿ: ಚಂದ್ರು ಪಿ ಹಾಸನ್

  1. ಬಹಳ ಸೊಗಸಾಗಿ ಪುಸ್ತಕ ಪರಿಚಯಿಸಿದ್ದೀರಿ, ಪುಸ್ತಕ ಪಡೆಯುವ ಸಂಪರ್ಕ ಮಾಹಿತಿ ನೀಡಿ.

Leave a Reply

Your email address will not be published. Required fields are marked *