ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨): ಗುರುಪ್ರಸಾದ ಕುರ್ತಕೋಟಿ

ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ ವಾಂತಿ ಮಾಡಿಕೊಂಡು, ಕಾರಿನ ಬಣ್ಣವನ್ನೇ ಬದಲಾಯಿಸಿಬಿಡುತ್ತಾರೆ. ಅದಕ್ಕೆ ಸಲ್ಪ ನಿಧಾನ ಓಡಿಸಿಕೊಂಡು ಹೋಗಬೇಕು. ಬಿದರಕಾನ್ ದಲ್ಲಿ ನನ್ನ 'ಧಪ' ನ ಚಿಕ್ಕಮ್ಮನ ಮನೆ ಇದೆ. ('ಧಪ' ಅಂದ್ರೆ ಧರ್ಮ ಪತ್ನಿ ಅಂತ ಬಿಡಿಸಿ ಹೇಳಬೇಕೆ?!) ಊರಿಗೆ ಹೋದಾಗಲೊಮ್ಮೆ ಬಿದರಕಾನಿಗೆ ಹೋಗುವುದು ನಮ್ಮ ಅಲಿಖಿತ ನಿಯಮ. ಆ ಸಲ ನನ್ನ ತಮ್ಮ ಹಾಗೂ ಅವನ ಹೆಂಡತಿಯೂ ಬಂದಿದ್ದರು. ಎಲ್ಲರನ್ನೂ ಕರೆದುಕೊಂಡೇ ಅಲ್ಲಿಗೆ ಹೋಗಿದ್ದೆವು. 

ಪ್ರತೀ ಸಲ ಚಿಕ್ಕಮ್ಮನ ಮನೆಗೆ ಹೋದಾಗಲೂ ಬೆಳಿಗ್ಗೆಯೇ ಹೋಗಿರುತ್ತೇವೆ. ನಂತರ ಮದ್ಯಾಹ್ನದ ಊಟ; ಊಟ ಆದಮೇಲೆ ಹರಟೆ; ಸಂಜೆಗೆ ಅವಲಕ್ಕಿ, ಹಲಸಿನ ಚಿಪ್ಸು, ಸೌತೆಕಾಯಿ, ಕಾಳು ಮೆಣಸಿನ ಚಟ್ನಿ, ಜೊತೆಗೆ ಚಾ. ಇದೆಲ್ಲದರ ಜೊತೆಗೆ ಮತ್ತೆ ಹರಟೆ! ಅಲ್ಲಿಗೆ ಹೋದರೆ ಏಳಲು ಮನಸ್ಸೇ ಬಾರದು. ಹಾಗೆಯೇ ಕತ್ತಲಾಗಿಬಿಡುತ್ತದೆ. ಅಷ್ಟೊತ್ತಿಗೆ, ರಾತ್ರಿಯಾಯ್ತು ಊಟ ಮಾಡಿ ಇಲ್ಲೇ ಇದ್ದು ಬೆಳಿಗ್ಗೆ ಹೋಗಿ ಅಂತ ಒತ್ತಾಯ ಮಾಡುತ್ತಾರೆ. ಹಾಗೆ ಮಾಡಿದರೆ ಕಿಬ್ಬಳ್ಳಿಯಲ್ಲಿ ನನ್ನ ಅತ್ತೆ ಸುಮ್ಮನಿರುತ್ತಾರೆಯೆ? ನಾವು, ಇಲ್ಲ ವಾಪಸ್ಸು ಅತ್ತೆ ಮನೆಗೆ ಹೋಗಲೇಬೇಕು ಅನ್ನುತ್ತೇವೆ. ಅವತ್ತೂ ಹಾಗೇ ಆಯ್ತು. ನಾವು ಹೋಗುತ್ತೇವೆ ಅನ್ನುತ್ತಲೆ ಹರಟೆ ಹೊಡೆಯುತ್ತಾ ಕೂತು ಬಿಟ್ಟೆವು. ಸ್ವಲ್ಪ ಸ್ವಲ್ಪ ಅನ್ನುತ್ತಲೇ ಊಟವನ್ನೂ ಮುಗಿಸಿದೆವು! ಕಿಬ್ಬಳ್ಳಿಗೆ ವಾಪಸ್ಸಾಗಲೇಬೇಕಿತ್ತು. ಕತ್ತಲೇನೊ ಆಗಿತ್ತು. ಆದರೆ ಹಿಂದೆ ಎಷ್ಟೋ ಸರ್ತಿ ಕತ್ತಲಲ್ಲಿ ಈ ರಸ್ತೆಯಲ್ಲಿ ಗಾಡಿ ಓಡಿಸಿದ ಅನುಭವದ ಘಮಿಂಡಿ ನನಗಿತ್ತು. ಅದೂ ಅಲ್ಲದೇ ಅವತ್ತು ಮಳೆಯೂ ಇರಲಿಲ್ಲ. ಆಕಾಶ, ಮೋಡಗಳಿಲ್ಲದೇ ಶುಭ್ರವಾಗಿತ್ತಲ್ಲದೇ ನಕ್ಷತ್ರಗಳಿಂದ ಫಳ ಫಳ ಹೊಳೆಯುತ್ತಿತ್ತು. ನಾವೆಲ್ಲಾ ಚಿಕ್ಕಮ್ಮನ ಮನೆ ಬಿಟ್ಟಾಗ ರಾತ್ರಿ ಹತ್ತು ಹೊಡೆದಿತ್ತು.    

ಅದು ಇದು ಮಾತಾಡಿಕೊಂಡು ನಿಧಾನವಾಗಿ ಗಾಡಿ ಒಡಿಸುತ್ತಿದ್ದೆ. ಆಗಲಷ್ಟೇ ಎಲ್ಲರೂ ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದರಿಂದ ಜೋರಾಗಿ ಓಡಿಸಿ ನನ್ನ ಕಾರಿನ ಬಣ್ಣ ಬದಲಿಸುವ ಇರಾದೆ ನನಗಂತೂ ಇರಲಿಲ್ಲ! ಅರ್ಧ ದಾರಿ ಮುಟ್ಟಿರಬೇಕು, ಹರಸಿಕಟ್ಟಾ ದಾಟಿ ತುಂಬಾ ಮುಂದೆ ಬಂದಿದ್ದೆವು. ಅಲ್ಲೊಂದು ಹೇರ್ ಪಿನ್ ತಿರುವು. ಅರ್ಧದಷ್ಟಾದರೂ ತಿರುಗುವವರೆಗೆ ಮುಂದಿನದೇನು ಕಾಣದು. ನನ್ನ ಹೆಡ್ ಲೈಟ್ ಹೈ ಬೀಮ್ ನಲ್ಲಿತ್ತು. ನಿಧಾನವಾಗಿ ತಿರುಗಿಸಿ ಎದುರಿಗೆ ನೋಡಿದರೆ ಕಾರಿನ ಎಡಗಡೆಗೊಂದು ಉದ್ದನೆಯ ಅಕೃತಿ ನಿಂತಿದ್ದು ಕಂಡಿತು. ಅದು ಮೊದಲು ನನಗೇ ಕಂಡಿತಾದರೂ ಕ್ರಮೇಣ ಕಾರಿನಲ್ಲಿ ನನ್ನೊಟ್ಟಿಗಿದ್ದ ಎಲ್ಲರೂ ಗಮನಿಸಿದರು. ಅದು ಸುಮಾರು ಐವತ್ತು ವಯಸ್ಸಿನ ಹೆಣ್ಣು ಮಗಳು. ಮುಖ ನಮ್ಮ ಕಡೆಗೇ ವಾಲಿದಂತಿದೆ. ಅರ್ಧ ಭಾಗ ಸುಟ್ಟಂತೆ ವಿಕಾರವಾಗಿತ್ತು. ಆ ದೃಶ್ಯ ನೋಡಿ ಕಾರಿನಲ್ಲಿದ್ದ ಎಲ್ಲರೂ ಅ ವಿಕಾರವಾದ ವ್ಯಕ್ತಿ ದೆವ್ವವೇ ಅಂತ ಹೆದರಿ ಕಂಗಾಲಾಗಿದ್ದರು.  ದೆವ್ವ ಗಿವ್ವ ಏನೂ ಇಲ್ಲ ಅಂತ ಎಲ್ಲರಿಗೂ ಧೈರ್ಯ ಹೇಳುತ್ತಿದ್ದೆನಾದರೂ ನನಗೂ ಒಳಗೊಳಗೆ ಪುಕು ಪುಕು! ಆ ತಂಪಿನಲ್ಲೂ ನಾ ಬೆವರಿದ್ದೆ. ಕಾಲು, ತೊಡೆಗಳಲ್ಲಿ ಶಕ್ತಿ ಕಳೆದುಕೊಂಡ ಅನುಭವ. ನಾನು ನಡಗುತ್ತಲೇ ಕಾರನ್ನು ಅಲ್ಲಿಂದ ಮುಂದೆ ಜೋರಾಗಿ ಓಡಿಸಿದೆ. ಎಲ್ಲರೂ ಆ ಕ್ಷಣದಲ್ಲಿ ಮಾತು ನಿಲ್ಲಿಸಿದ್ದರು. ನನ್ನ ತಮ್ಮನ ಎರಡು ವರ್ಷದ ಮಗಳು ಮಾತ್ರ ಮೇಲೇನೋ ತೋರಿಸುತ್ತ ವಟ ವಟನೇ ಮಾತಾಡುತ್ತಿದ್ದುದು ನಮ್ಮ ಭಯವನ್ನು ಇನ್ನೂ ಹೆಚ್ಚಿಸಿತ್ತು. ಅಲ್ಲಿ ನೋಡಿದ್ದು ಭೂತವೇ ಅಂತ ನಮಗೇ ಖಾತ್ರಿಯಾಗಿತ್ತು. ಯಾಕಂದ್ರೆ ನಡೆದುಕೊಂಡು ಬರುವಷ್ಟು ಹತ್ತಿರದಲ್ಲಿ ಅಲ್ಲಿ ಯಾವುದೇ ಹಳ್ಳಿ ಅಥವ ಮನೆ ಇರಲಿಲ್ಲ.ಅಮೇಲೆ ಅವತ್ತು ಅಮವಾಸ್ಯೆ ಇದ್ದದ್ದು ನಮ್ಮ ಸಂಶಯವನ್ನು ಮತ್ತಷ್ಟು ಧೃಡಪಡಿಸಿತ್ತು. 

ಆ ಜಾಗದಿಂದ ಎಷ್ಟೊ ಮುಂದೆ ಬಂದೆವಾದರೂ ದೆವ್ವ ನಮ್ಮ ಮನದಿಂದ ಹೊರ ಹೋಗಿರಲಿಲ್ಲ. ಯಾರಿಗೂ ಹಿಂತಿರುಗಿ ನೋಡುವ ಧೈರ್ಯವಿರಲಿಲ್ಲ. ಆ ದೆವ್ವ ನಮ್ಮ ಬೆನ್ನು ಹತ್ತಿಕೊಂಡು ಬರುತ್ತಿರಬಹುದೇನೊ ಅನ್ನುವ ಸಂಶಯ! ರಸ್ತೆಯಲ್ಲಿ ಪ್ರತಿ ಸಲ ತಿರುವು ಬಂದಾಗಲೂ ನನಗೆ ಆ ಹೆಣ್ಣು ಮಗಳು ಮತ್ತೆ ಕಂಡುಬಿಟ್ಟರೆ ಅನ್ನುವ ಯೋಚನೆ ಬರುತ್ತಿದ್ದಂತೇ ಹೊಟ್ಟೆಯಲ್ಲಿ ರುಮ್ ಅನ್ನುವ ಅನುಭವ. ನನ್ನ ತಮ್ಮನ ಮಗಳು ಮಾತ್ರ ತನ್ನ ತೊದಲು ನುಡಿಗಳಲ್ಲಿ ನಿರಂತರವಾಗಿ ಇನ್ನೂ ವಟಗುಡುವುದ ಮುಂದುವರಿಸಿದ್ದಳು! 

ಅಂತೂ ಇಂತೂ ಊರು ಹತ್ತಿರ ಬಂದಂತೆ ನನ್ನ ಧೈರ್ಯ ಇಮ್ಮಡಿಸಿತು. ಮಾವನ ಮನೆ ಮುಟ್ಟಿ ದೊಡ್ಡ ನಿಟ್ಟುಸಿರಿಟ್ಟೆವು. ಮಾವನಿಗೆ ನಮ್ಮ ಅನುಭವ ಹೇಳಲಾಗಿ, ಅವರು ಎಳ್ಳಷ್ಟೂ ಚಕಿತರಾಗದೆ, "ಹೌದ ಮಾರಾಯಾ … ಅಲ್ಲೊಂದು ಪಿಶಾಚಿ ಇದ್ದು. ಸುಮಾರು ಜನ ನೋಡಿದ್ವಡಾ" ಅನ್ನಬೇಕೆ!? ಅಂದರೆ ನಾವು ನೋಡಿದ್ದು ನಿಜವಾದ ಭೂತವೇ! ಅವತ್ತು ರಾತ್ರಿ ನಿದ್ದೆಯಲ್ಲಿ ಬೇರೆ ಯಾರೂ ಬರಲೇ ಇಲ್ಲ, ಅದೇ ಮೋಹಿನಿಯದೇ ದರ್ಬಾರು.        

ಆಮೇಲೆ ನಾಲ್ಕು ದಿನ ಮಾವನ ಮನೆಯಲ್ಲಿದ್ದೆವು. ದೆವ್ವದ ವಿಚಾರ ಸ್ವಲ್ಪ ಮಟ್ಟಿಗೆ ಮನದಿಂದ ಮರೆಯಾಗಿತ್ತಾದರೂ ಪೂರ್ತಿಯಾಗಿ ಮರೆತಿರಲಿಲ್ಲ. ವಾಪಸ್ಸು ಬೆಂಗಳೂರಿಗೆ ಹೋಗುವ ಸಮಯ ಬಂದಿತ್ತು. ನಾವು ಅದೇ ರೋಡಿನಲ್ಲಿ ಹೋಗಬೇಕಿತ್ತಾದರೂ ಬೆಳಗಿನ ಪ್ರಯಾಣವಾಗಿದ್ದರಿಂದ ಅಷ್ಟು ಹೆದರಿಕೆ ಇರಲಿಲ್ಲ. ಅದೇ ದಾರಿಯಲ್ಲಿ ಚಿಕ್ಕಮ್ಮನ ಮನೆಯಾದ್ದರಿಂದ ಮತ್ತೊಂದು ಚಿಕ್ಕ ಭೇಟಿ ಕೊಟ್ಟು ಹೊಗುವುದು ನಮ್ಮ ಮತ್ತೊಂದು ಅಲಿಖಿತ ನಿಯಮವಾಗಿತ್ತು. ದಾರಿಯಲ್ಲಿ ಬರುವಾಗ ಮತ್ತೆ ಆ ದೆವ್ವವನ್ನು ಕಂಡ ಸ್ಪಾಟ್ ನೋಡಿ ದೆವ್ವವಿಲ್ಲದ್ದು ಖಚಿತಪಡಿಸಿಕೊಂಡು ಮುಂದೆ ಹೊರಟೆವು. ಚಿಕ್ಕಮ್ಮನ ಮನೆಯಲ್ಲಿ ಸ್ವಲ್ಪ ಹೊತ್ತು ಇದ್ದು, ಅವರ ಮನೆಯಿಂದ ಹೊರಡುವ ಸ್ವಲ್ಪ ಮೊದಲು ನಾವು ಕತ್ತಲಲ್ಲಿ ಕಂಡ ದೆವ್ವದ ವಿಷಯ ಪ್ರಸ್ತಾಪಿಸಿದೆವು. ಚಿಕ್ಕಪ್ಪ ಸಣ್ಣ ನಗು ನಕ್ಕು 'ಓ ಜಾನಕಿನ್ನ ನೋಡಿದ್ರಾ?' ಅಂದರು. ಅಯ್ಯೊ ಕರ್ಮವೇ ಇಲ್ಲಿನವರು ದೆವ್ವಕ್ಕೂ ಒಂದು ಹೆಸರಿಡುತ್ತಾರೆಯೆ? ಅಥವ ಆ ದೆವ್ವ ಜಾನಕಿ ಅನ್ನುವ ಹೆಣ್ಣುಮಗಳ್ದೇ ಇರಬೇಕು ಅಂತ ನಾನು ಅಂದಾಜಿಸಿದೆ.    ಅವರು ಮುಂದುವರಿಸಿ "ಅವಳು ಯಕ್ಷಗಾನದ ಹಾಡುಗಳನ್ನು ತುಂಬಾ ಚೆನ್ನಾಗಿ ಹಾಡ್ತಾಳೆ" ಅಂದ್ರು. ದೆವ್ವವನ್ನು ನೋಡಿಯೇ ನಾವು ಕಂಗಾಲಾಗಿದ್ದರೆ ಆ ದೆವ್ವದ ಕಂಠದಿಂದ ಯಕ್ಷಗಾನದ ಹಾಡು ಕೇಳಿ ಆಸ್ವಾದಿಸಿದ್ದ ಚಿಕ್ಕಪ್ಪನ ಧೈರ್ಯಕ್ಕೆ ನಾನು ತಲೆದೂಗಿದೆ! 
"ದೆವ್ವಾನೂ ಹಾಡ್ತಾವೇನ್ರೀ?" ಅಂತ ನಾನು ಮೂಗಿನ ಮೇಲೆ ಬೆರಳಿಟ್ಟು ಕೇಳುತ್ತಿದ್ದರೆ, ಚಿಕ್ಕಪ್ಪ ಗಹಗಹಿಸಿ ನಕ್ಕು "ಅದ್ಯಾವ ದೆವ್ವ ಮಾರಾಯ. ಅವಳೊಬ್ಬ, ಸಲ್ಪ ಬುದ್ಧಿ ಸ್ಥೀಮಿತದಲ್ಲಿಲ್ಲದ ಹೆಣ್ಣುಮಗಳು. ರಾತ್ರಿಯಲ್ಲಾ ಹಿಂಗೇ ಅಡ್ಡಾಡ್ತಿರ್ತಾಳೆ. ಒಂದು ಬೆಂಕಿಯ ಅವಘಡದಲ್ಲಿ ಅವಳ ಮುಖದ ಒಂದು ಭಾಗ ಸುಟ್ಟಿದೆ. ಅದಕ್ಕೆ ನಿಮಗೆ ಕತ್ತಲಲ್ಲಿ ಆ ತರಹ ಕಂಡಿದ್ದು" ಅಂದಾಗ. ನನಗೆ ನಗಬೇಕೋ ಅಳಬೇಕೊ ತಿಳಿಯದಾಗಿ "ನಾನ್ ಹೇಳ್ದೆ ಚಿಕ್ಕಪ್ಪ, ಅದು ದೆವ್ವ ಅಲ್ಲ ಅಂಥೇಳಿ. ಇವರೆಲ್ಲ ಸುಮ್ ಸುಮ್ನ ಹೆದರಿ ಕಂಗಾಲಾಗಿದ್ರು" ಅಂದು …. "ನಡ್ರೀ ಹೊಗೋಣ, ಬೆಂಗಳೂರು ಮುಟ್ಲಿಕ್ಕೆ ತಡಾ ಆಗ್ತದ" ಅಂತ ಅಲ್ಲಿಂದ ಕಾಲು ಕಿತ್ತೆ! 

ದಾರಿಯಲ್ಲಿ ಯೋಚಿಸುತ್ತಿದ್ದೆ, ಅಕಸ್ಮಾತ್ ಆ ಹೆಣ್ಣುಮಗಳು ಅವತ್ತು ರಾತ್ರಿ ಯಕ್ಷಗಾನದ ಪದಗಳನ್ನು ನಮ್ಮೆದುರು ಹಾಡಿದ್ದರೆ ನಮ್ಮ ಗತಿ ಏನಾಗುತ್ತಿತ್ತು??!

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

33 Comments
Oldest
Newest Most Voted
Inline Feedbacks
View all comments
ವನಸುಮ
9 years ago

ಹಾ ಹಾ.. ಸೂಪರ್. 

Guruprasad Kurtkoti
9 years ago

ಗಣೇಶ, ನನ್ನ ಈ ಬರಹದ ಮೊದಲ ಓದುಗ ನೀವು! ಅಭಿನಂದನೆಗಳು ಹಾಗು ಧನ್ಯವಾದಗಳು! 🙂

Gopaal Wajapeyi
Gopaal Wajapeyi
9 years ago

ಅಂತೂ ನನ್ನ ಪ್ರೀತಿಯ 'ಹಾರ್ಸಿಕಟ್ಟಾ' (ಅದು ನೀವಂದಂತೆ 'ಹರ್ಸಿ

ಕಟ್ಟಾ' ಅಲ್ಲ) ಬಗ್ಗೆ ಮತ್ತೆ ನಾನು ಸಂಭ್ರಮಿಸುವಂತೆ ಮಾಡಿದ್ದೀರಿ. 

ಕೆಲವು ಅಕ್ಷರ ಸ್ಖಾಲಿತ್ಯಗಳನ್ನು ಬಿಟ್ಟರೆ 

ನಿಮ್ಮ ನಿರೂಪಣೆ ಚೆನ್ನಾಗಿದೆ.    

   

Guruprasad Kurtkoti
9 years ago

ಗುರುಗಳೆ, ನಿಮ್ಮ ಪ್ರೀತಿಯ ಹಾರ್ಸಿಕಟ್ಟಾವನ್ನು ತಪ್ಪಾಗಿ ಬರೆದಿದ್ದಕ್ಕೆ (ಹೆಸರು ಕೆಡಿಸಿದ್ದಕ್ಕೆ?!) ಕ್ಷಮೆ ಇರಲಿ! ಓದಿ ಹರಸಿದ್ದಕ್ಕೆ ಖುಷಿಯಾಯ್ತು.

umesh desai
umesh desai
9 years ago

ವಾಹ್ ನಿರೂಪಣಾ ಹಿಡಿಸಿತು ಮಾವನ ಮನಿಗೆ ಹೋದಾವ್ರಿಗೆ ಈ ಅನುಭವ ಬೇಕಿತ್ತೆ

ಇದು ಪ್ರಶ್ನಾ ಅದ..!!

Guruprasad Kurtkoti
9 years ago
Reply to  umesh desai

ಉಮೇಶ, ಧನ್ಯವಾದಗಳು! ಮಾವನ ಮನೆಯಲ್ಲಿ ಬರೀ ಒಳ್ಳೆಯ ಅನುಭವಗಳೇ ಆಗಲು ಸಾಧ್ಯವಿಲ್ಲ ಅನ್ನುವುದಕ್ಕೆ ಈ ಘಟನೆ ಸಾಕ್ಷಿ 🙂

Akhilesh Chipli
Akhilesh Chipli
9 years ago

ರಾಯರು ಹೊರಟರು ಮಾವನ ಮನೆಗೆ
ರಾತ್ರಿಯಾಗಿತ್ತಾ..
ನಿಜ ಗೊತ್ತಾದ ಮೇಲೂ ಆ ಹೇರ್ ಪಿನ್
ತಿರುವಿನಲ್ಲಿ ಇನ್ನೊಮ್ಮೆ ರಾತ್ರಿ ಹೋಗುವಾಗ
ಭಯವಾಗಬಹುದಲ್ಲವೇ?. ಚೆನ್ನಾಗಿದೆ.

Guruprasad Kurtkoti
9 years ago

ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು! ವಾಪಸ್ಸು ಹೋಗುವಾಗ ಭಯವಾಗಿಲ್ಲ. ಯಾಕಂದ್ರೆ ಅದು ಹಗಲಾಗಿತ್ತು 🙂

Guruprasad Kurtkoti
9 years ago

ಅಖಿಲೇಶ್, ಕ್ಷಮಿಸಿ! ನೀವು ಬರೆದದ್ದನ್ನು ಸಲ್ಪ ಗಡಿಬಿಡಿಯಲ್ಲಿ ಓದಿ ಉತ್ತರಿಸಿದೆ!
'ನಿಜ ಗೊತ್ತಾದಮೇಲೂ ಮುಂದೊಮ್ಮೆ ರಾತ್ರಿ ಅಲ್ಲಿ ಹೋಗುವಾಗ ಭಯವಾಗಬಹುದೆ?' ಎನ್ನುವ ಪ್ರಶ್ನೆ ನನ್ನಲ್ಲೂ ಇದೆ. ಆ ಘಟನೆಯ ನಂತರ ರಾತ್ರಿ ಪಯಣಿಸುವ ಅವಕಾಶ ಇನ್ನೊ ಸಿಕ್ಕಿಲ್ಲ 🙂

Vitthal
Vitthal
9 years ago

ಛೊಲೋ ಅನಸ್ತು ಕಥಿ! ಸಿರ್ಸಿ ಭಾಷಾದಾಗ ವಿವರಿಸಿದ್ದು ಮಸ್ತ್ ಅನಸ್ತು.  

ಮೊದ್ಲ -tev ಯಾಕೋ ಈಸರ್ತಿ ಶಬ್ದ ಅರ್ಧಾ ನಮ್ಮವು (ಧಾರವಾಡ) ಅರ್ಧಾ ಪುಸ್ತಕದವು ಅನಸ್ತು… ಜೋತಿಗೆ ನೀವು ಸಿರ್ಸಿ ಭಾಷಾ ಬ್ಯಾರೆ ಉಪಯೋಗಿಸಿರಿ… ಆದ ಒಂದು ಸ್ವಲ್ಪಾ ಹೆಚ್ಚು ಕಡಿಮಿ ಆತು. innu baritini officenyaga Kannada type madalikke online tool work aagavallatu…

Guruprasad Kurtkoti
9 years ago
Reply to  Vitthal

ವಿಟ್ಠಲ, ನಿನ್ನ ಮುಕ್ತ ಅನಿಸಿಕೆಗಳಿಗೆ ಧನ್ಯವಾದಗಳು! ಇದು ನನ್ನ ದಿನನಿತ್ಯದ ಸಮಸ್ಯೆ! ನಾನು ಮಾತಾಡೋದು ಧಾರವಾಡ ಕನ್ನಡ, ನನ್ನ ಮಾವನ ಕಡೆ  ಮಾತಾಡೋದು ಹವ್ಯಕ ಕನ್ನಡ. ಹೀಗಾಗಿ ಮಾತಾಡೋವಾಗ ಒಮ್ಮೊಮ್ಮೆ ನನಗೇ ಗೊಂದಲವಾಗುತ್ತೆ. ನಾನು ಬರೆಯುವಾಗಲೂ ಅದೇ ಆಗಿದೆ ಅನಿಸುತ್ತದೆ. ಆಯಾ ಪ್ರಾಂತ್ಯದ ಪಾತ್ರಗಳು ಬಂದಾಗ ಅಲ್ಲಿನ ಭಾಷೆ ಬಳಸುವ ಪ್ರಯತ್ನ ಮಾಡಿದ್ದೇನೆ. ಆದರೆ ಓದುಗರಿಗೆ ಅದು ಗೊಂದಲ ಉಂಟುಮಾಡಬಹುದೆಂದು ನನಗರಿವಿರಲಿಲ್ಲ. ಅದರ ಅರಿವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು! ಮುಂದಿನ ಸಲ ಎಚ್ಚರವಹಿಸುವೆ 🙂

amardeep.p.s.
amardeep.p.s.
9 years ago

ನಿಮ್ ಜಾನಕಿ ಭಾಳ ಇಷ್ಟವಾದಳು….

Guruprasad Kurtkoti
9 years ago
Reply to  amardeep.p.s.

ಅಮರ್, ಧನ್ಯವಾದಗಳು! ಮುಂದಿನ ಸಲ ಜಾನಕಿ ಸಿಕ್ಕಾಗ, ಅವಳಿಗೆ ನಿಮ್ಮ ಬಗ್ಗೆ ಹೇಳಿ, ನಿಮ್ಮ ದೂರವಾಣಿ ಸಂಖ್ಯೆ ಕೊಡುವೆ 🙂

amardeep.p.s.
amardeep.p.s.
9 years ago

l love jaanu….

prashasti.p
9 years ago

ಹೌದು. ಯಾವುದನ್ನೋ ನೋಡಿ ಕೊಳ್ಳಿದೆವ್ವ ಅನ್ನೋದು, ಇನ್ಯಾವುದನ್ನೋ ನೋಡಿ ಮೋಹಿನಿ ,ಢಾಕಿನಿ ಅನ್ನೋದು ಸಿಕ್ಕಾಪಟ್ಟೆ ಸಾಮಾನ್ಯ ಹಳ್ಳಿ ಕಡೆ. ನಮ್ಮನೆ ಹತ್ರ ಒಂದು ನೇರಳೆ ಮರ ಇದೆ. ಅಲ್ಲೊಂದು ದೆವ್ವ ಇದೆ ಅನ್ನೋ ಮಾತು ರೂಢಿಯಲ್ಲಿತ್ತು. ಆದ್ರೆ ಕಾಲೇಜು ಕಾರ್ಯಕ್ರಮಗಳ್ನ ಮುಗಿಸ್ಕೊಂಡು ಎಷ್ಟೋ ಸಲ ಮಧ್ಯರಾತ್ರಿಯ ವೇಳೆಗೆ ನಾ ಮನೆಗೆ ಹೋಗಿದ್ರೂ ಆ ದೆವ್ವ ಕಂಡಿದ್ದಿಲ್ಲ. ಹಿಂಗೇ ಯಾರೋ ಏನನ್ನೋ ನೋಡಿ ಏನೋ ಅಂದುಕೊಂಡಿದ್ರ ಫಲ ಅಲ್ಲೊಂದು ಪುಕ್ಸಟೆ ದೆವ್ವ ಸೃಷ್ಟಿಯಾಗಿತ್ತು.

Guruprasad Kurtkoti
9 years ago
Reply to  prashasti.p

ಪ್ರಶಸ್ತಿ, ನೀವು ಹೇಳೋದು ಸರಿ. ನನ್ನ ತಿಳುವಳಿಕೆಯ ಪ್ರಕಾರ ಕತ್ತಲು ಇದ್ದಲ್ಲಿ ಈ ಥರದ (ಕೊಳ್ಳಿ) ದೆವ್ವಗಳು ಕಾಣೋದು (!) ಜಾಸ್ತಿ. ಯಾಕೆಂದರೆ ಕತ್ತಲಲ್ಲಿ ಸ್ಪಷ್ಟವಾಗಿ ಏನೂ ತೋರದಿರುವುದರಿಂದ ಆ ತರಹದ ಭಯ ಹುಟ್ಟಿಸುವ ಕೆಲಸವನ್ನು ಬೇರೆ ಕೆಲಸವಿಲ್ಲದ ಕೆಲವು ಜನ ಮಾಡುತ್ತಾರೆ! ಆದರೂ ತುಂಬಾ ಸಲ ದೆವ್ವ ನಮ್ಮ ಮನಸ್ಸಿನಿಂದಲೇ ಸೃಷ್ಟಿ ಆಗಿರುತ್ತದೆಂಬುದೂ ಅಷ್ಟೇ ದಿಟ!

Sadanand Vama
Sadanand Vama
9 years ago

Konegu adu devva alla anta heladralla, illa andidre iwattu ratri nanna niddeyallu ade devvane bartittu. Good one.

Guruprasad Kurtkoti
9 years ago
Reply to  Sadanand Vama

ಸದಾನಂದ, ಮುಂದಿನ ಸಲದ ಬರಹ ಇನ್ನೂ ಭಯ ಹುಟ್ಟಿಸುವಂತಿದೆ. ಅದನ್ನು ರಾತ್ರಿ ಬರೆಯುತ್ತಿದ್ದಾಗ ನನಗೇ ಭಯವಾಯ್ತು! ಅದನ್ನು ರಾತ್ರಿ ಓದಬೇಡಿ :). ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
ಶ್ರೀಧರ್ ಗೋಪಾಲ ಕೃಷ್ಣ ರಾವ್ ಮುಳಬಾಗಲು
9 years ago

ಧರ್ಮಪತ್ನಿ-ಧಪ ಎಂಬ abbreviation ಕಲ್ಪನೆ ಸೂಪರ್ ಎಂದು ಹೇಳುವ ದೈರ್ಯ   ಇಲ್ಲದಂತೆ ಓದುಗರನ್ನು ಮಾಡಿದ್ದೀರಿ ;ಇನ್ನೂ ತಮ್ಮ ಪತ್ನಿ ನೆಂಟರನ್ನು ದೂಶಿಸುವ ರೀತಿ ಕಥೆಯಲ್ಲಿ ವ್ಯಕ್ತವಾಗಿದೆ . ಇರುಳಲ್ಲಿ ಕಂಡವಳು ಎಂದು ಸುಮ್ಮನಾಗದೆ ದೆವ್ವದ ಕಥೆ ಎಂದು ಹೇಳುವ ನಿಮ್ಮ ದೈರ್ಯ,ಅಕಸ್ಮಾತ್ ಆ ಹೆಣ್ಣುಮಗಳು ಅವತ್ತು ರಾತ್ರಿ ಯಕ್ಷಗಾನದ ಪದಗಳನ್ನು ನಮ್ಮೆದುರು ಹಾಡಿದ್ದರೆ ನಮ್ಮ ಗತಿ ಏನಾಗುತ್ತಿತ್ತು??!ಎಂದು ನೆನಪಿಸಿಕೊಳ್ಳುವ ನಿಮ್ಮ ಮನಸ್ಸು ,ಒಂದು ಬೆಂಕಿಯ ಅವಘಡದಲ್ಲಿ ಅವಳ ಮುಖದ ಒಂದು ಭಾಗ ಸುಟ್ಟಿದೆ-ಎಂದು ಚಿತ್ರಿಸಿ ಭಯನಕದ ಕಲ್ಪನೆ ಬಿತ್ತುವ ವೈಖರಿ ಉತ್ತಮವಾಗಿದೆ.

Guruprasad Kurtkoti
9 years ago

ಶ್ರೀಧರ ಗುರುಗಳೆ, 'ಧಪ' ದಂತಹ ಅದ್ಭುತವಾದ abbreviation ನನ್ನು ಇನ್ನೂ ಯಾರೂ ಗಮನಿಸಿಯೇ ಇಲ್ಲ ಎಂಬ ನನ್ನ ಬೇಜಾರನ್ನು ನೀವು ಹೋಗಲಾಡಿಸಿದ್ದು ಖುಷಿ ತಂದಿತು! ಅಂದ ಹಾಗೆ ನಾನು ಪತ್ನಿಯ ನೆಂಟರನ್ನು ಹೊಗಳಿದ್ದೇನೆಯೇ ಹೊರತು ದೂಶಿಸಿಲ್ಲ. ಪ್ರತಿ ಸಲದಂತೆ ಪ್ರೀತಿಯಿಂದ ಓದಿ ಹರಸಿದ್ದಕ್ಕೆ ಧನ್ಯವಾದಗಳು!

Akshay
Akshay
9 years ago

very nice…

Guruprasad Kurtkoti
9 years ago
Reply to  Akshay

ಅಕ್ಶಯ್, ಅಭಿಮಾನದಿಂದ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Siddaramu
9 years ago

Prasthvane ishta aytu sir.. Adare pramukha vishayada vivarane kadime ide ansthu.. Nirupane chanagiruva karanadinda asakthiyinda oduva hagide..

Guruprasad Kurtkoti
9 years ago
Reply to  Siddaramu

ಸಿದ್ಧರಾಮು, ಇದೊಂದು ಸಣ್ಣ ಘಟನೆಯಾಗಿದ್ದರಿಂದ ಅದನ್ನು ನೋಡಿದ ನಂತರದ  ನಮ್ಮ ಅವಸ್ಥೆಗೆ ಹೆಚ್ಚು ಒತ್ತು ಕೊಡುವ ಭರದಲ್ಲಿ ಬಹುಷಃ ಹಾಗಾಗಿರಬಹುದು. ಮುಂದಿನ ಸಲ ಎಚ್ಚರವಹಿಸುವೆ. ನಿರೂಪಣೆ ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು!

sangeeta
sangeeta
9 years ago

How well you described about bidarkaan n etc. I could really imagine and fear …wonderfully written

Guruprasad Kurtkoti
9 years ago
Reply to  sangeeta

ಸಂಗೀತಾ, ನನ್ನ ಬರಹ ನಿಮ್ಮನ್ನು ಕಲ್ಪನಾ ಲೋಕಕ್ಕೆ ಕರೆದೊಯ್ದಿದೆ ಅಂದ ಮೇಲೆ, ನನ್ನ ಪ್ರಯತ್ನ ಫಲಿಸಿದೆ ಅಂತಾಯ್ತು! ಎಂದಿನಂತೆ ಅಭಿಮಾನದಿಂದ ಓದಿ ಮೆಚ್ಚಿದ್ದಕೆ ಧನ್ಯವಾದಗಳು!

raju
raju
9 years ago

Niroopane thumba chennagide. Antya swalp avasaradalli adante annisithu. Mostly you had place constraint. But it would have been even better had you bit more about the surroundings, built the ambience.

still, awesome!!

raju

Guruprasad Kurtkoti
9 years ago
Reply to  raju

ರಾಜು, ನಿಮ್ಮ ಚೆಂದದ ಅನಿಸಿಕೆಗಳಿಗೆ ಧನ್ಯವಾದಗಳು! ಸ್ಥಳದ ಅಭಾವವೇನು ಇರಲಿಲ್ಲ. ಆದರೂ ನೀವು ಹೇಳಿದಂತೆ ಅಂತ್ಯ ಅವಸರದಲ್ಲಿ ಆಯ್ತೇನೊ. ಮುಂದಿನ ಸಲ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುವೆ! 🙂

Arathi ghatikar
Arathi ghatikar
9 years ago

Niroopana istha aythu , erade line janaki mele baredu kone tanaka namagoo bhaya huttisidri . Aadru sadyha nimma lekhana mugisuvaaga kachaguli kottideeri .  🙂 🙂 

Guruprasad Kurtkoti
9 years ago

ಆರತಿ, ನೀವು ಓದಿ ಪ್ರತಿಕ್ರಿಯಿದ್ದು ತುಂಬಾ ಖುಷಿ ಕೊಟ್ಟಿತು! ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. 🙂

Suhasinj
Suhasinj
9 years ago

ತುಂಬಾ ಕುತೂಹಲಕಾರಿಯಾಗಿದೆ.Waiting for next story 🙂

Guruprasad Kurtkoti
9 years ago
Reply to  Suhasinj

ಸುಹಾಸಿನಿ, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು! ಮುಂದಿನ ಭಾಗ ಇನ್ನೂ ಕುತೂಹಲಕಾರಿಯಾಗಿರುತ್ತದೆ ಎನ್ನುವ ಅಶ್ವಾಸನೆ ನನ್ನ ಕಡೆಯಿಂದ 🙂

Prakasha Kulamaruva
Prakasha Kulamaruva
9 years ago

Super….. 

33
0
Would love your thoughts, please comment.x
()
x