ಇರಲಾದರದ್ದು ಮಾಡಿ ಮೈ ಕೆರಕೊಂಡರಂತ…: ಗಾಯತ್ರಿ ಬಡಿಗೇರ


ಬಾಳಿನ ಹಾದಿಯಲ್ಲಿ ಸಂಬಂಧ, ಸ್ನೇಹ, ಪ್ರೀತಿ, ದ್ವೇಷ, ಸಿಟ್ಟು ಮತ್ತು ನೋವು-ನಲಿವು ಎಲ್ಲವೂ ಸಹಜ. ಕೆಲವೊಮ್ಮೆ ಕನಸದಾಗು ನೆನಸಿಕೊಂಡಿರಂಗಿಲ್ಲ ಹಂತಾ ದುರಂತ ನಡದ ಬಿಡ್ತಾವ. ಜೀವನಾ ಒಂದ ಚೌಕ್ಕಟನ್ಯಾಗ ಇರಬೇಕು. ಆದ್ರ ಚೌಕ್ಕಟ್ಟೆ ಜೀವನಲ್ಲ. ತಿಳ್ಕೊಬೇಕಾದ ವಿಷಯ ಹೇಳಲಾರದಷ್ಟ ಆದ. ಆದ್ರ ಕೇಳೊ ಮನಸ್ಸಗಳು ಪ್ರೀತಿ ಎಂಬ ಬೆಂಕಿಯಲ್ಲಿ ಬಿದ್ದು ಜಗತ್ತಿನ ಅರಿವಿಲ್ಲದೆ ನರಳತಿದಾವ. ಪ್ರೀತಿ ಮಾಡೋದ ತಪ್ಪಲ್ಲ. ಹಂಗಂತಾ ಪ್ರೀತಿನೇ ಜೀವನಾ ಅಲ್ರಿ. ಪ್ರೀತಿ ಮಾಡಿ ಅದೇನು ಸಾದಸ್ತಾರೋ? ಗೊತ್ತಿಲ್ಲ. ಆದ್ರ ಮನೆವರ ಹೊಟ್ಟೆ ಮಾತ್ರ ಉರಸ್ತಾರ. ಮೊದ್ಲಿನ ಮಂದಿ ಬಾಯಗ ಡಿವೋರ್ಸ ಅನ್ನೊ ಮಾತ ಕೇಳಿರೇನ? ಇಲ್ವೆ ಇಲ್ಲ. ಅವಾಗೂ ಕಾನೂನ ಇತ್ರಿ. ಸಂಬಂಧಗೊಳಿಗೆ ಒಂದ ಬೆಲೆ ಇತ್ರಿ, ಭಯಾ ಭಕ್ತಿ ಅನ್ನೊ ಮಾತ ಇತ್ರಿ. ಆದ್ರೆ ಇವಾಗ ಅವೆಲ್ಲಾ ಪುಸ್ತಕದ ಬದನೆಕಾಯಿ ಅಷ್ಟೆ.

ಮಾಡಿದುಣ್ಣೊ ಮಾರಾಯ ಅಂತಾ ಹಿರ್ಯಾರ ಸುಮ್ನ ಹೇಳಿಲ್ರಿ. ಇವಾಗ ಎನ ಮಾಡಬೇಡ ಅಂತಾರಲ್ವ, ಅದ್ನ ಮಾಡೋ ಮಂದಿನ ಬಾಳ್ರಿ. ಯಾವ ತಂದೆ ತಾಯಿನೂ ಮಕ್ಕಳಿಗೆ ಅಡ್ಡ ದಾರಿ ಹಿಡ್ಕೊಂಡ ಹೋಗಂತ ಹೇಳಂಗಿಲ್ರಿ. ಕೇಲವು ಶಾಣೆ ಮಂದಿ ಬಾಳ ಚಂದ ಕಟ್ಟಿಗೆ ಕುಂತ ಮಾತಡತಿರ್ತಾರ. “ಹಿರಿಯಕ್ಕಣ್ಣನ ಚಾಳಿ ಮನೆ ಮಂದಿಗಂತ” ಅದು ಶುದ್ದ ಸುಳ್ರಿ. ಐದು ಬಟ್ಟ ಸಂವಾ ಇರಂಗಿಲ್ಲ. ಹಂಗ ಎಲ್ರನೂ ಒಂದ ತೂಕಕ್ಕ ಹಾಕಿ ನೋಡಬಾರದ. ನಾವ ತುತ್ತು ಬಾಯಿಗೆ ಒಯೋದ ನಿಜ ಆಗಿದ್ರ ತಿಳ್ಕೋಬೇಕು. ನಾವ ಹಲ್ಕಟ್ಟ ಕೆಲಸ ಮಾಡೊದಿರಲಿ, ಮನ್ಯ್ಯಾನ ಮಂದಿ ಮುಖಕ ಮಸಿ ಹಚ್ಚಿಬಿಡ್ತೇವಿ. ಮೊದ್ಲ ಅಪÀರೂಪಕ ಆಸ್ರಾ-ಬ್ಯಾಸ್ರ ನೋಡಕ್ಕೊಂಡ ಆರತಿಗೊಬ್ಬಳು ಕೀರ್ತಿಗೊಬ್ಬಂತಾ ಬಾಳ ಉಪ್ಪರಿಗೆಮೇಲೆ ಇಟ್ಟ ಬೆಳೆಸಿರ್ತಾರ. ವಟ್ಟ ಎನು ಅನ್ನಂಗಿಲ್ಲ, ಆಡಂಗಿಲ್ಲರಿ ಹಾಂಗೆನಾದ್ರು ಅಂದಿದ್ದ ಆದ್ರ ಸೂಸೈಡ ಅಟ್ಮೆಂಟ ನೋಡ್ರಿ.

ಹುಟ್ಟು ಉಚಿತ ಸಾವು ಖಚಿತ. ಬದುಕಿದ್ದೆ ಅನ್ನೋ ಉದಾಹರಣೆ ಬೇಡ, ದಾಖಲೆಗಳು ಬೇಕು. ಬದುಕು ಇತಿಹಾಸವಾಗಬೇಕೆ ಹೊರತು, ಸಾವು ಮಾದರಿಯಾಗಬಾರದು. ಇದ್ದಿದ್ದ ಇತಿಹಾಸನ ಓದಕಾಗತ್ತಿಲ್ಲ ಅಂತಿರೇನು? ಹಾಃ ಐದ ವರಸಕ್ಕೋಮ್ಮೆ ಸೆಲೆಬಸ್ ಚೇಂಜ ಆಗತದ. ಹಳೆ ನೀರು ಕೊಚ್ಚಕೊಂಡು ಹೋಗತದ. ಅದಕ್ಕರ ಭೂಮಿಮ್ಯಾಗ ಹಿಂತಾರ ಇದ್ರ ಅನ್ನೋ ನೆನಪಿಗೆ ಸಾರ್ವಜನಿಕ ಪೋಟೋ ಉಳ್ಕೊಳ್ಳಿ. ಏನ ಮಕ್ಕಳನ್ನ ಬ್ಯಾಡಾಗಿ ಹೆತ್ತಿರತಾರೆನ್ರಿ? ಹಡದ ಕರ್ಮಕ ಮನೆವರು ಸೊಸಬೇಕು. 

ಒಂದ ರೀತಿ ಮಾದ್ಯಮಗಳೆ ಇದ್ಕ ಕಾರಣಂತ ಮುಖಕ ಹೊಡದಂಗ ಹಿರ್ಯಾರು ಅಂದ ಬಿಡ್ತಾರ. ಹೌದು ಅವರ ಅನ್ನೊದ ತಪ್ಪಲ್ಲ. ವಿಚಾರ ಮಾಡಿ ನೋಡ್ರಿ ಸಿನಿಮಾ-ಧಾರಾವಾಹಿ ನೋಡೋ ಉದ್ದೇಶ ಏನು? ಮನರಂಜನೆ ಬದುಕಿನ ದಾರಿಯಲ್ಲಿ ತಿಳಿದೆ ಇರೊ ಎಷ್ಟೋ ಮಾಹಿತಿ, ಜೊತೆಗಷ್ಟು ಸಮಾಜಕ್ಕೆ ಸಂದೇಶ ಕೊಡೋದು.  ಆದ್ರ ನಾವಿಗಾ ಮಾಡ್ತಿರೊದ ಏನು?. ಓನ್ಲಿ ಲವ್ ಸ್ಟೋರಿ. ಎಷ್ಟ ವೈರಟಿಯಾಗಿ ಲವ್ ಮಾಡ್ತಿ? ಹಂಗ ಹೆಸರಿಲ್ದಂಗ ಹಳ್ಳ ಹಿಡ್ಕೋಂಡ ಹೋಗ್ತಿ? ಅದು ಬಿಟ್ರೆ ಏನ ಇದೆಪಾ? ನನ್ನ ಕಣ್ಣಿಗೆ ಕಾಮಾಲೆ ಆಗಿರಬೋದು ಅನ್ಕೋಳ್ಳಿ. ಆದ್ರೆ, ಅಭಿವೃಧ್ಧಿ ಹೊಂದುತ್ತಿರುವ ರಾಷ್ಟ್ರ ನಮ್ಮದು. ಹಾಃ ಇನ್ನೂ ಎಲ್ಲಿವರೆಗೂ? ನಮ್ಮ ಪೀಳಿಗೆ ದಾರಿಯುದ್ದುಕ್ಕನಾ? ಸಮಾಜಕ್ಕ ಏನ ಬೇಕ್ರಿ?.. ಯೋಚನೆ ಮಾಡಬೇಕಾಗತದ..

ಮಾತು ಮನೆ ಕೆಡಿಸ್ತು-ತೂತು ಒಲೆ ಒಡಿತು. ಹಂಗೆ ಜಗಳಿಲ್ಲದ ಸಂಬಂಧಗಳಿಲ್ರಿ. ಸೆಲೆಬ್ರಟಿಗಳ ಜೀವನದಲ್ಲೂ ಸಹಜರಿ. ಆದ್ರೆ ಇದೊಂದು ರಾಷ್ಟ್ರ-ಪರರಾಷ್ಟ್ರಗಳ ವಿವಾದವೇ?  ಭಾರಿ ಸುದ್ದಿ ಆಗಿಬಿಡತದ್ರಿ. ಎದ್ರುಬಿದ್ರು ಬಿಟ್ಟು ಬಿಡದಂಗ ತೋರಿಸಿ ಜೀಂವಾ ತಿಂದ ಬಿಡ್ತಾರ. ಸೆಲೆÉಬ್ರಟಿಗಳನ್ನ ಫಾಲೋ ಮಾಡೋ ಕಾಲ ಇದು. ಅವರ್ದೆ ಆದ ಒಂದ ದೊಡ್ಡ ಕಲ್ಪನೆದಾಗ ಹೀರೋ ಆಗಿಟ್ಟಿರತಾರ. ಹಿಂತಾದೊಂದು ಘಟಿಸಿ ಬಿಟ್ರ ಮುಗಿತು ನೋಡ್ರಿ.

ಜಗತ್ತು ಬದಲಾವಣೆ ಕೇಳುತ್ತೆ ನಿಜಾ. ಆದ್ರೆ, ಬದಲಾವಣೆನೇ ಜಗತ್ತಲ್ಲ. ನಮ್ಮ ಕಾನೂನ ಹೇಳತದ ಮೊದಲಿನ ಹೆಂಡ್ತಿ ಇರೊವಾಗ್ಲೆ ಮತ್ತೊಂದ ಮದುವೆಗೆ ಒಪ್ಪಲ್ರಿ. ಹಿಂಗ ಇರೋವಾಗ ಧಾರಾವಾಹಿ ಸಿನಿಮಾಗಳಲ್ಲಿ ಒಂದ ಮುಖ್ಯ ಪಾತ್ರಕ್ಕ ಎರಡ ಎರಡ ಮಂದಿನ ಜೊಡ ಮಾಡಿ ತಲ್ಯಾಗ ಹುಳಾ ಬಿಡ್ತಾರ ನೋಡ್ರಿ. ಇದು ಇವಾಗಿನ ಪ್ರಕೃತಿ ನಿಯಮನು ಆಗ್ಯದ ನೋಡ್ರಿ. “ಹೊತ್ತಿಲ್ಲದ ಹೊತ್ತನ್ಯಾಗ ಕತ್ತಿ ಮೇದಿತಂತ” ಹಂಗ ನಮ್ಮ ಹುಡ್ಗರಿಗೆ ತಿನ್ನಾಕ, ಮಲಗಾಕ ವಟ್ಟ  ಹೊತ್ತಿಲ್ಲ ನೋಡ್ರಿ, ಸರವತ್ತನ್ಯಾಗ ತೊರಸೊ ಎಪ್‍ಐಆರ್ ನೋಡಿ ಮಾನಸಿಕಾಗಿ, ಸೂರ್ಯ ನೆತ್ತಿಮ್ಯಾಗ ಬಂದ ಗುಡ್ ಆಫ್ಟರ್ನೂನ ಹೇಳೊವರೆಗು ಎಳಂಗಿಲ್ಲ.

ಅಲ್ಲ, ಕಥೆಗಳು ಸಿಗತಿಲ್ವೊ ಅಥವಾ ಸತ್ಯತೆ ಮರೆಮಾಚಾತವ ಎಂಬ ನಿಗೂಢ ಪ್ರಶ್ನೆ ಕಾಡತದ. ಮೊದ್ಲಿನ ಪಿಕ್ಚರ ಒಮ್ಮೆ ತಗದ ನೋಡ್ರಿ. ಉದ್ದೇಶವಿದ್ದ ಕುಟುಂಬಕ್ಕ ಆಧಾರವಾಗಿರೊ ಮುಖ್ಯ ಪಾತ್ರದಾರಿ ಮನೆ ನಿಗಸ್ಕೊಂಡ, ತಾನು ಅನಕ್ಕೊಂಡ ಗುರಿ ಮುಟ್ಟಲೆಬೇಕಂತ ಪಣಾ ತೊಟ್ಟ ಮನ್ಯಾನರ ಯೋಗಕ್ಷೇಮಕ್ಕ ದುಡದು ಜೀವಾನ ಎನಂತಾ ಇರೋ ಮೂರ ತಾಸಿನ್ಯಾಗ  ಸಾರ್ಥಕತೆ ಬದುಕಿನ ಚಿತ್ರಣ ಕಣ್ಣ ಮುಂದ ಇಡ್ತಾರ. ಹಿಂತಾ ಹೊತ್ತನ್ಯಾಗ ಪ್ರೀತಿ ಅಂಕುರಿಸೊದು ಕೇವಲ ಆಕಸ್ಮಿಕ. ಸಂಗಾತಿ ಸಿಗತಾಳೊ ಇಲ್ವೋ ಗೊತ್ತಿಲ್ಲ ಆದರೆ ಇಲ್ಲಿ ಮನೆವರ ಒಪ್ಪಿಗೆಯ ಅನಿವಾರ್ಯತೆ ಭಾಳ ಇರತದ. ಇಲ್ಲಿ ಹೆಣ್ಣನ್ನು ದೇವತೆಯಂತೆ ಕಂಡು ಒಬ್ಬೊರು ಒಬ್ಬರಿಗೆ ಮಾತ್ರ ಮೀಸಲಿದ್ದು. ಬಾಳ ಚಂದ ಜೀವಾನ ನಡೆಸೊರು, ಅದ್ರೆ  ಇಂದು ಆಕರ್ಷಣೆಗೆ ಮಾರ ಹೋಗಾತಾ ಇರೋ ಜಗತ್ತಿದು.  

ಲೇಖನಗಳು, ಸಿನಿಮಾಗಳು, ಧಾರಾವಾಹಿಗಳ ಅವಶ್ಯಕತೆ ಬಾಳ ಐತ್ರಿ. ಆದ್ರೆ ಅರ್ಧ ಅವೇ ಹರೆಯದ ಹುಡ್ಗರ ಜೀವನಾ ದತ್ತಕ್ಕ ತಗೋಂಡ ಬಿಡಾತಾವ. ನಮ್ಮ ಮ್ಯಾಗ ದೇವರ ಅನ್ನೋವನೊಬ್ಬ ಅದಾನ್ರಿ. ಹಣೆಬರದಾಗ ಯಾರ ಸಿಗಬೇಕು ಅವರ ಜೋಡ ಆಗತಾರ. ಸುಮ್ನ ಗೋಡಿಗೆ ಒದ್ದ ಮೈ ನೋವ ಮಾಡ್ಕೊ ಮಂದಿ ಬಾಳ. ಮಾದ್ಯಮಗಳನ್ನು ತಳ್ಳಿ ಹಾಕೋ ಉದ್ದೇಶ ಈ ಲೇಖನದಲ್ಲ. ಒಂದು ಆಮಂತ್ರಣವಷ್ಟೆ..

ಲೇಖನ : ಗಾಯತ್ರಿ ಬಡಿಗೇರ

*****
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Bandenawaz Myageri
Bandenawaz Myageri
9 years ago

super bardiri madame, nimma kaalajige 1 salaam, but nanage ondu tilililla, hudugaraste late agi eltarenri …….???????  ellariguu time sence annodu ide ri, avrannu sooryavamshastaru anta holike madiri ………….

nice Article

1
0
Would love your thoughts, please comment.x
()
x