ಚುಟುಕ

ಇಬ್ಬರ ಚುಟುಕಗಳು

 

ನಿಸ್ವಾರ್ಥ..

ಒಕ್ಕಲಿಗ ನೆಟ್ಟ ಗಿಡ
ಇಂದು ದೊಡ್ಡ ಮರವಾಗಿ
ನೆರಳಾಗಿ ನಿಂತಿದೆ ದಣಿದ ದೇಹಕೆ
ಯಾವ ಭೇದವನ್ನು ತೋರದೆ

ಫಲ!

ಭೂ ತಾಯಿ ಕೊಟ್ಟ ನೀರಿಂದ
ರೈತ ಸುರಿಸಿದ ಬೆವರಿಂದ
ಫಲಸಿಕ್ಕಿತು!
ಹೊಟ್ಟೆಗೆ ಅನ್ನ
ಜೊತೆಗೆ
ಮುಚ್ಚಿಕೊಳ್ಳಲು ಮಾನ!!

-ಮಂಜು ವರಗಾ

 

ಕಣ್ಣೀರು

ಅತ್ತುಬಿಡು ಎಂದಾಗ, 
ಬರದ ಹನಿ,
ಅಳಬೇಡ ತಡೆಯೆಂದಾಗ,
ಉಕ್ಕಿ ಹರಿವ ಧಾರೆ!!

ಹೃದಯ

ಇದ್ದಾಗ, 
ಕೊಂಚವೂ ಗೋಚರಿಸದ ,
ತನ್ನನ್ನೇ ಕೊಟ್ಟು ಬರಿದಾದ ಮೇಲೆ, 
ಭಾರ ತೋರುವ, 
ಏಕೈಕ  ವೈಚಿತ್ರ್ಯ!!

ಕಣ್ಣು

ತೆರೆದಿದ್ದಾಗ 
ಇದ್ದುದನ್ನು 
ಮಾತ್ರ ತೋರುವ,
ಮುಚ್ಚಿದಾಗ  
ಏನೇನನ್ನೋ 
ತೋರುವ 
ಪ್ರಚೋದಕ!!

-ಸಂತೋಷ್ ಕುಮಾರ್ ಎಲ್ ಎಮ್

ಕನ್ನಡದ ಬರಹಗಳನ್ನು ಹಂಚಿ ಹರಡಿ

11 thoughts on “ಇಬ್ಬರ ಚುಟುಕಗಳು

  1. ಎಲ್ಲವೂ ಚೆನ್ನಾಗಿವೆ..ಇಬ್ಬರಿಗೂ ಹಾಗು ಪ೦ಜು ಪತ್ರಿಕೆಗೂ ಧನ್ಯವಾದಗಳು

  2. ಇಲ್ಲಿ ಪ್ರಕಟಿಸಿರುವ ಐದೂ ಚುಟುಕುಗಳು ಚೆನ್ನಾಗಿವೆ.

Leave a Reply

Your email address will not be published. Required fields are marked *