ಅವಳಿಗೆ ಹೇಳಬೇಕೆಂದು ಪೋಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು. ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ.
ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ.
ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿಳಿದಾಕ್ಷಣ ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು.
ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು. ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು.
ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ ಅವಳ ಮುಂದೆಯೇ ನಿಲ್ಲುವಂತೆ ಮಾಡಿತ್ತು ಎಲ್ಲೋ ಅಡಗಿದ್ದ ಅವಳ ನೆನಪು.
-ಪೂರ್ಣಿಮಾ. ಬಿ.
ಹುಚ್ಚು
ಮರಳಿನಲ್ಲಿ
ಮೂಡುವ
ಹೆಜ್ಜೆ ಗುರುತುಗಳನ್ನೆಲ್ಲ
ಅಲೆಗಳು ಅಳಿಸುತ್ತವೆಂದು
ಗೊತ್ತಿದ್ದೂ
ಮತ್ತೆ ಮತ್ತೆ
ಹೆಜ್ಜೆಯಿಡುವ
ಹುಚ್ಚು ಬಯಕೆ ನನಗೆ…!
ಬಿನ್ನಹ
ಗತದ ದಿನಗಳೆ
ನೆನಪುಗಳಿಂದ
ಸುಡದಿರಿ
ನನ್ನ
ಚಿಗಿವ ಬದುಕಿನ
ಕನಸುಗಳನ್ನು
ಇಟ್ಟು-
ಕೊಳ್ಳಿ…
"ಹುಚ್ಚು" chennagide…………
thank you…
ಇಷ್ಟವಾದವು ಚುಟುಕು ಭಾವಗಳು…
chennagide 🙂
ತಾನು ಪ್ರೀತಿಸಿದವಳು
ಗೋರಿ ಸೇರಿದಳೆಂದು
ತಿಳಿದಾಕ್ಷಣ
ಅವನ ಮನದಲ್ಲಿನ
ಅವಳ ಪ್ರೀತಿ ಮತ್ತು ನೆನಪುಗಳು
ಉಸಿರಾಡಿದವು.
ಈ ಚುಟುಕ ಬಹಳ ಹಿಡಿಸಿತು. ಪ್ರೇಮದ ವಿರಹವನ್ನು ಹೆಕ್ಕುವ ಪ್ರಯತ್ನವಾಗಿದೆ. ಪೂರ್ಣಿಮಾ ಬಹಳ ಚೆನ್ನಾಗಿ ಬರೆಯಬಲ್ಲಿರಿ ಮುಂದುವರೆಸಿ. 🙂
ಮಂಜುನಾಥ್ ರವರ ಚುಟುಕುಗಳೂ ಚೆನ್ನಾಗಿವೆ.
– ಪ್ರಸಾದ್.ಡಿ.ವಿ.
thank u….
ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ ಅವಳ ಮುಂದೆಯೇ ನಿಲ್ಲುವಂತೆ ಮಾಡಿತ್ತು ಎಲ್ಲೋ ಅಡಗಿದ್ದ ಅವಳ ನೆನಪು.
ತುಂಬಾ ಇಷ್ಟವಾಯಿತು
thank u…
ಮಂಜುನಾಥ ಅವರು ಚುಟುಕುಗಳು ಬದುಕಿನ ವಾಸ್ತವವನ್ನು ಅನಾವರಣಗೊಳಿಸುತ್ತವೆ. ಅವರು ಕೇವಲ ಕವಿ ಮಾತ್ರವಲ್ಲ ; ಒಬ್ಬ ಸಾಹಿತ್ಯದ ಪರಿಚಾರಕನಾಗಿ ತುಂಬ ವಿಭಿನ್ನ ಸಂವೇದನೆಗಳ ಮೂಲ ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲೂ ದುಡಿಯುತ್ತಿರುವ ಮನಸಿಗ.
thank you sir…
ತಾನು ಪ್ರೀತಿಸಿದವಳು
ಗೋರಿ ಸೇರಿದಳೆಂದು
ತಿಳಿದಾಕ್ಷಣ
ಅವನ ಮನದಲ್ಲಿನ
ಅವಳ ಪ್ರೀತಿ ಮತ್ತು ನೆನಪುಗಳು
ಉಸಿರಾಡಿದವು.
ತುಂಬಾ …ಇಷ್ಟವಾಯ್ತು ಕಳಕೊಂಡ ಪ್ರೀತಿಯಲ್ಲೂ ಸಾರ್ಥಕ್ಯ ಪಡೆಯುವ ಅನುಪಮ ಪ್ರೇಮ !