ಕಥಾಲೋಕ

ಇದು ಕಥೆಯಲ್ಲ ವ್ಯಥೆ: ಆರೀಫ ವಾಲೀಕಾರ


ಅವ್ವ..! ಅವ್ವ..! ಎಂದು ರಾಮ ಓಡುತ್ತಾ ಮನೆಗೆ ಬಂದ ರಾಮು, ಅಕ್ಕ ಎಲ್ಲಿ ಎಂದು ಕೇಳಿದ?. ಅದಕ್ಕೆ ಗುರವ್ವ(ರಾಮು ತಾಯಿ) ಅವಳು(ರುಕ್ಕು ರಾಮುನ ಅಕ್ಕ) ಹಳ್ಳಕ್ಕೆ ಕಟ್ಟಿಗೆ ತರಲು ಹೋಗಿದ್ದಾಳೆಂದು ಹೇಳಿ. ತನ್ನ ಕಾಯಕದಲ್ಲಿ ತಲ್ಲಿನಳಾದಳು. ನಾನು ಆಟ ಆಡೋಕೆ ಹೋಗುತ್ತೀನಿ ಎಂದು ರಾಮು ಓಡಿ ಹೋದ. ಗುರವ್ವ ಕುಳ್ಳು ಸರಿಮಾಡುತ್ತಾ ಗೋಣು ಹಾಕಿದಳು.

ಸೂರ್ಯಸ್ತ ಆಗುತ್ತಿತ್ತು. ಧರೆಪ್ಪ(ಗುರವ್ವನ ಗಂಡ) ಗೌಡರ ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬಂದ. ‘ಲೇ ಗುರಿ ಎಲ್ಲಿ ಇದ್ದಿಯೇ?. ಗುರವ್ವಾ ಚುಮಣಿಗೆ ಸೀಮೆ ಎಣ್ಣೆ ಹಾಕುತ್ತಾ ‘ಬಂದೆ ರೀ ಎಂದು’ ಉತ್ತರಿಸಿದಳು. ಸ್ವಲ್ಪ ಸಮಯದ ನಂತರ ರಾಮು ಬಂದು ಅವ್ವ ಹೊಟ್ಟೆ ಹಸದೈತಿ ಊಟಕ್ಕ್ ಕೊಡು ಅಂದನು. ಅದಕ್ಕ್ ಗುರವ್ವಾ ನಿಮ್ಮ ಅಕ್ಕ ಇನ್ನು ಬಂದಿಲ್ಲಾ ಅಗಸಿ ಗಲ್ಲಿನ ತನಕ ಹೋಗಿ ಬಾ ಎಂದಳು. ರಾಮು ಹಃ ಅಂದು ಬಂದ ಗಾಲಿನಲ್ಲಿಯೇ ಓಡಿ ಹೋದ.

ಧರೇಪ್ಪ ಚಾ ಮಾಡಿ ಇಲ್ಲ? ಎಂದು ಕೇಳುತ್ತಾ ಕುರಿಯ ಖೋಡಗಳನ್ನು ಸವರುತ್ತಿದ್ದ.
ಗುರವ್ವಾ ಇಗ ಓಲಿಮ್ಯಾಲ ಇಟ್ಟಿನಿ. ತಡಿರೀ ಸ್ವಲ್ಪ..ಎಂದಳು.
ರಾಮು ಓಡಿ ಬಂದು ಉಸಿರು ಹೊರ ಹಾಕುತ್ತಾ ಅವ್ವಾ ಅಕ್ಕಾಳ ಎಲ್ಲಾ ಗೆಳತ್ಯಾರು ಬಂದಾರ್ ಅಕಿ ಮಾತ್ರ ಬಂದಿಲ್ಲ ಎಂದ

ಗುರವ್ವ ಗಾಬರಿಯಾಗಿ ಎಲ್ಲರನ್ನು ಕೇಳಿದ್ದಿಯೇನು? ಅಂದ್ಲು.
ರಾಮು ಹುಂ ಅಂದು… ಓಳಗೆ ಹೋದ.
ಧರೇಪ್ಪ ನಾನು ಹೋಗಿ ನೋಡಿಕೊಂಡು ಬರುತಿನು ಅಂದು ಹೋದ.
ಗುರುವ್ವ ಅವನ ಹೋಗುವ ದಾರಿಯನ್ನು ನೋಡಿಕೊಂಡು ನಿಂತಳು.
ಗುರವ್ವ ಎಲ್ಲಿ ಹೋದಳು ಈ ಹುಡಗಿ? ಹೇಳದೆ ಕೇಳದೆ, ಹಾವು ಕಚ್ಚಿತೇನೋ?, ಹೀಗೆ ನೂರಾರು ಪ್ರಶ್ನೆಗಳನ್ನು ಬದಿ ಸರಿಸಿ ಬರುತ್ತಾಳ ತಗೋ ಎಂದು ಮನಸ್ಸಿನಲ್ಲಿ ಹರದಾಡುತ್ತಿರುವ ಪ್ರಶ್ನೆಗಳಿಗೆ ತಾನೇ ಉತ್ತರ ಕಂಡುಕೊಂಡಳು.. ಮನೆ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿದಳು.
ರಾಮು ಅವ್ವ! ಅಪ್ಪ ಹೋಗಿ ಬಹಳ ಹೊತ್ತ ಆತು, ಇನ್ನೂ ಬಂದಿಲ್ಲ.
ಗುರವ್ವ ಲೇ ಮಗ ಬರುತ್ತಾರೆ ತಗೋ.. ನಿನ ಊಟ ಮಾಡು ಬಡಿಸುತ್ತೇನು ಎಂದು ಹೇಳಿ, ಸೀರೆಯ ಸೆರಗದಿಂದ ಹಣೆಯಲ್ಲಿರುವ ನೂರಾರೂ ಚಿಂತೆಗಳನ್ನು ಬದಿ ಸರಿಸಿ ಊಟಕ್ಕೆ ಬಡಿಸಿ, ಬಾಗಿಲಿನಲ್ಲಿ ನಿಂತು ಯಾರಾದರೂ ಬರುತ್ತಿದ್ದಾರಾ? ಎಂದು ಕಣ್ಣಿನ ಎಲ್ಲ ಶಕ್ತಿ ಹಾಕಿ ನೋಡುತ್ತಿದ್ದಳು. ಯಾರು ಕಾಣದ್ದಿದ್ದಾಗ ನಿಂತಲ್ಲೇ ಕುಸಿದು ಕುಂತಳು. ಬರುವ ದಾರಿ ಕಡೆಗೆ ನೀಟ ನೋಡುತ್ತಿರುವಾಗ ಕಂದಿಲು ಬರುವ ಮಂದ ಬೆಳಕು ಗೋಚರಿಸಿತು. ಮೊಗದಲ್ಲಿ ಸಾವಿರ ಸಾವಿರ ಪ್ರಶ್ನೆಗಳು ಒಂದೊಂದಾಗಿ ಕಳಚಿ ಬೀಳುತ್ತಿದ್ದವು.

ಕಂದಿಲು ಹಿಡಕೊಂಡು ಬರುತ್ತಿರುವ ವ್ಯಕ್ತಿ ಗುರವ್ವಳ ಬಳಿ ಬಂದವನೇ ಅಳುತ್ತಾ ನಿನ್ನ ಮಗಳು ಬಾವಿಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸತ್ತಿದ್ದಾಳೆ! ಅಂತ ಹೇಳಿ ಮೌನನಾದ..
ಗುರವ್ವ ನಿಂತಲ್ಲೇ ಕುಸಿದು ಗೋಳಾಡಿ, ಎದೆ ಎದೆ ಬಡಿದುಕೊಂಡು ಅಳುತ್ತಿದ್ದಳು. ಬಂದ ವ್ಯಕ್ತಿ ಸಮಾಧಾನ ಮಾಡಲು ಹೋಗಿ ವಿಫಲವಾದ. ಒಳಗಡೆ ಊಟ ಮಾಡುತ್ತಿರುವ ರಾಮು ಊಟ ಅರ್ಧಕ್ಕೆ ಬಿಟ್ಟು ಬಂದು ಅವ್ವಳನ್ನು ಅಪ್ಪಿಕೊಂಡು ಅಕ್ಕ ಎಲ್ಲಿ? ಅಕ್ಕ ಎಲ್ಲಿ? ಎಂದು ಕೇಳತೊಡಗಿದಾ. ಸಾವಿನ ಸುದ್ದಿ ತಂದ ವ್ಯಕ್ತಿ ರಾಮುವನ್ನು ಸಮಾದಾನ ಮಾಡಿ ಕರೆದುಕೊಂಡು ಹೋಗಿ ಕೂರಿಸಿದಾ. ದೂರದಿಂದ ಮಂದ ಕಂದಿಲಗಳು ಬೆಳಕಿನಲ್ಲಿ ಅಳುವ ಆಕ್ರಂಧನ ಗುರವ್ವಳ ಕಿವಿಗೆ ಅಪ್ಪಳಿಸಿದ್ದೆ ತಡ. ಆ ದಿಕ್ಕಿನ ಕಡೆ ಓಡಲಾರಂಭಿಸಿದಳು. ಓಡುವ ಬರದಲ್ಲಿ ಕಾಲಿನ ತುದಿಗೆ ಸೀರೆಯ ನೆರಗು ತಟ್ಟಿ ರಪ್ಪ ಅಂತ ಬಿದ್ದು ಎದ್ದು ಓಡಲಾರಂಭಿಸಿದಳು.

ಧರೆಪ್ಪ ಮಗಳ ಹೆಣವನ್ನು ಹೆಗಲ ಮೇಲೆ ಹೊತ್ತುಕೊಂಡು ಕಣ್ಣೀರು ಹಾಕುತ್ತಾ ಬಂದು ಹೆಣವನ್ನು ಮನೆಯ ಮುಂದೆ ಇರುವ ಪಡಸುಗಲಿನ್ಲ ಮೇಲೆ ಮಲಗಿಸಿದನು. ಮಗಳೇ ಎಂದು ಜೋರಮಾಡಿ ಮಣ್ಣು ಎರಚ ತೊಡಗಿದಾ. ಮಗಳ ಅರ್ಧ ದೇಹವನ್ನು ತೊಡೆಯ ಮೇಲೆ ಹಾಕಿಕೊಂಡು ಮುಖವನ್ನು ಸವರಿಸುತ್ತಾ ಎದೆಗವಚಿ ಮನದಲ್ಲಿನ ಎಲ್ಲ ದುಃಖ ಹೊರಹಾಕುತ್ತಾ ಮಗಳ ಮುಖಕ್ಕೆ ಮುತ್ತಿಟ್ಟು, ಹಡೆದವ್ವ ದುಃಖದ ದೋಣೆಯಲ್ಲಿ ಒದ್ದೆಯಾದ್ದಳು. ಕಟ್ಟಿಗೆ ತರಲು ಹಳ್ಳಕ್ಕೆ ಹೋದ ರುಕ್ಕು ಗೌಡರ ಬಾವಿಯಲ್ಲಿ ಹೆಣವಾಗಿ ಬಂದಿದ್ದು ಎಲ್ಲರ ಮನಸ್ಸಿನಲ್ಲಿ ಹಲವಾರು ಕುತೂಹಲ ಮನೆ ಮಾಡಿತ್ತು.

ಸತ್ತ ರುಕ್ಕುವಿನ ಗೆಳತಿಗೆ ಎಲ್ಲ ವಿಷಯ ಗೊತ್ತಿದ್ದರು ಸುಮ್ಮನಿದ್ದಳು. ಗೋರಿ ತೋಡಲು ಹೋದ ಜನರು ಬಂದು ಎತ್ರೀ ಹೆಣ, ವೇಳೆ ಆಗತೈತಿ, ಬೆಳಕು ಆಗುದರ ಒಳಗ ಮಣ್ಣು ಮಾಡಬೇಕು ಎಂದು ಹೇಳಿ ಹೆಣವನ್ನು ಹೊತ್ತುಕೊಂಡು ಹೊರಟರು. ಗುರವ್ವ ಎದೇ ಎದೇ ಬಡಿಯುತ್ತಾ, ಬೊಬ್ಬೆ ಹೊಡೆಯುತ್ತಾ ಅಳುತ್ತಿದ್ದಳು. ರಾಮು ಅಕ್ಕನ ಸಾವಿನಿಂದ ಕಲ್ಲು ಬಂಡೆಯ ಹಾಗೆ ನಿಂತುಕೊಂಡಿದ್ದ. ದರೆಪ್ಪ ತನ್ನ ಮುದ್ದಿನ ಮಗಳು ಏನು ತಪ್ಪ ಮಾಡಿದ್ದಳು ಎಂದು ದೇವರಿಗೆ ಶಾಪÀ ಹಾಕುತ್ತಾ ಭೋರ್ಗರೆದು ಅಳುತ್ತಿದ್ದ. ವಿಧಿಯ ಕ್ರಿಯೆ ಮುಗಿಸಿ ಮಣ್ಣು ಮಾಡಿ ಬಂದರು.

ರಾತ್ರಿ ಒಂದುವರೆ ಸಮಯ ಎಲ್ಲರೂ ಮಲಗಿದ್ದರು ಸ್ಮಶಾನದಲ್ಲಿ ಕಂದಿಲುಗಳ ಓಡಾಟ ಕಂಡು ರಾಮು ಅಕ್ಕ ಬಂದಳು ಎಂದು ಓಡಿ ಹೋಗುತ್ತಾನೆ. ಕಾಲಿನಲ್ಲಿ ಚಪ್ಪಲಿ ಇಲ್ಲ, ಬೆಳಕಿಲ್ಲದೆ, ಕಂದಿಲಿದ್ದ ಕಡೆ ನೇರ ಓಡುತ್ತಿದ್ದ. ಓಡಿ-ಓಡಿ ಬಂದ ರಾಮುಗೆ ಯಾವ ಕಂದಿಲುಗಳು ಕಣ್ಣಿಗೆ ಕಾಣಲಿಲ್ಲ. ಶ್ವೇತ ವರ್ಣದ ಒಂದು ರೇಶೆ ಹಾದು ಹೋಗಿದ ಹಾಗೆ ಆಗಿ ರಾಮು ಅಕ್ಕ… ಅಕ್ಕ ಎಂದು ಕೂಗುತೊಡಗಿದ್ದ. ಸ್ಮಶಾನ ಕಾಯುತ್ತಿದ್ದ ಕೆಚ್ಚಪ್ಪ ರಾಮು ನೀನು ಇಲ್ಲಿಗೆ ಯಾಕೆ ಬಂದೆ ಎಂದು ಕೇಳಿ ಅವನ ಕೈ ಹಿಡಿದುಕೊಂಡು ಮನೆ ಸೇರಿಸಿದ. ರುಕ್ಕುಳ ನಿಗೂಢ ಸಾವು, ಅವಳ ಗೆಳತಿಯ ಮೂಲಕ ತಿಳಿಯುತ್ತದೆ. ಗೌಡರ ಮಗ ರುಕ್ಕುಳನ್ನು ಕೆಡೆಸಿ ತಮ್ಮ ಬಾವಿಯಲ್ಲಿ ಎಸೆದಿದ್ದಾನೆ ಎಂದು ಹೇಳುತ್ತಾಳೆ. ಆದರೆ ಊರಿನ ಗೌಡರ ವಿರುದ್ಧ ದನಿ ಎತ್ತವರು ಯಾರು?. ಅವರನ್ನು ಎದುರು ಹಾಕಿಕೊಂಡು ಬದುಕು ಕಟ್ಟಿಕೊಳ್ಳಬಹುದೆ?. ಸತ್ಯ ಗೋತ್ತಿದ್ದರು, ಮನದಲ್ಲಿ ಧಗಧಗ ಉರಿವುತ್ತಿರುವ ದ್ವೇಷದ ಜ್ವಲೆ, ತಮ್ಮ ಕಣ್ಣೀರಿನಿಂದ ಶಾಂತವಾಗಿ ಹೋಗುತ್ತದೆ.
-ಆರೀಫ ವಾಲೀಕಾರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *