ಇಂದಿನ ಫಲಿತಾಂಶವೇ ಕೊನೆಯಲ್ಲಾ: ಮಲ್ಲೇಶ ಮುಕ್ಕಣ್ಣವರ


ಅವತ್ತು ನನ್ನ ಹತ್ತನೇ ತರಗತಿಯ ಫಲಿತಾಂಶ  ಬಂದ ದಿನ. ಒಂದು ಕಡೆ ಬರುವ ಫಲಿತಾಂಶದ ಕುರಿತು ಇನ್ನಿಲ್ಲದ ಆತಂಕ. ಮತ್ತೊಂದೆಡೆ ಸ್ಕೂಲ್ ಲೈಪ್‍ಗೆ ಬೈ ಹೇಳಿ ಕಾಲೇಜ ಮೆಟ್ಟಿಲು ಏರುವ ಸಂತಸ. ಈ ಯಾವ ಭಾವಕ್ಕೂ ಸ್ಪಂದಿಸಿದೆ ಕೈ ಕಾಲುಗಳು ಅತ್ತಿಂದಿತ್ತ ತೂರಾಡುತ್ತಿದ್ದರೆ. ಮನದ ತುಂಬಾ ಅದ್ಯಾವದು ಭಯ ಆವರಿಸಿತ್ತು. 

ಅದೇ ಹೆದರಿಕೆಯಲ್ಲಿ ಫಲಿತಾಂಶವನ್ನು ನೋಡಿದೆ. ಅಷ್ಟೊಂದು ಹೇಳಿಕೊಳ್ಳುವ ಮಾಕ್ರ್ಸ ಪಡಿಯದೆಯಿದ್ದರು. ನನ್ನ ಪ್ರಯತ್ನಕ್ಕೆ ತಕ್ಕದಾದದ ಅಂಕಗಳು ಸಿಕ್ಕಿದ್ದವು. ಇದರ ಜೊತೆ ಫಸ್ಟ್ ಕ್ಲಾಸ್ ಎನ್ನುವ  ಸಮಾಧಾನ ನನ್ನಲ್ಲಿತ್ತು. 

ಗೆಳೆಯರಲ್ಲಾ ತಮ್ಮ ಅಂಕದ ಆಧಾರದ ಮೇಲೆ ವಿಷಯ ಮತ್ತು ಕಾಲೇಜ ಆಯ್ಕೆ ಮಾಡಿಕೊಳ್ಳುವದರಲ್ಲಿ ತೊಡಗಿದರು. ನಾನು ನನ್ನ ಗುರಿಯಂತೆ ಪಿಯುಸಿ ಸೈನ್ಸ ಮಾಡುವ ನಿರ್ಧಾರ ಮಾಡಿದೆ.
     
ಸೈನ್ಸ ಕಾಲೇಜು ಅಂದರೆ ಅಲ್ಲಿ ಲ್ಯಾಬ್ ಸುಸ್ಥಿತಿಯಲ್ಲಿರಬೇಕು. ಲೈಬ್ರರಿಯಂತು ಸಿಕ್ಕಾಪಟ್ಟೆ ದೊಡ್ಡದಿರಬೇಕು. ಎಲ್ಲಾ ಸಬ್ಜೆಕ್ಟ್ ಟೀಚರ್ಸ ಇರಲೇಬೇಕು. ಇದರ ಜೊತೆಗೆ ಕಳೆದ ವರ್ಷ ಅಲ್ಲಿನ ಶೇಕಡಾವಾರು ಫಲಿತಾಂಶ ನೂರಕ್ಕೆ ನೂರರಷ್ಟಿರಬೇಕು. ಅಂದಾಗ ಮಾತ್ರ ಅದು ಉತ್ತಮವಾದ ಸೈನ್ಸ ಕಾಲೇಜ ಎನ್ನುವ ಕೆಲವು ಜನರ ಹೇಳಿಕೆಯ ಅನುಸಾರ ನನ್ನಲ್ಲೇ  ಗುಣಮಟ್ಟದ ಅಳತೆ ಪಟ್ಟಿಯನ್ನು ತಯಾರು ಮಾಡಿಕೊಂಡಿದ್ದೆ.

ನನ್ನ ಅಳತೆಗೋಲಿಗೆ ಸಿಕ್ಕ ಕಾಲೇಜುಗಳಿಗೆ  ಅಪ್ಲಿಕೇಷನ್ ಹಾಕಿದೆ. ಯಾವ ಕಡೆ ನೋಡಿದರು ಹೈ ಕಟ್ ಆಫ್ ಮಾಕ್ರ್ಸಗಳು, ಡೊನೇಷನ್ ಗಳು. ನಾನು ತೆಗೆದಿರು ಮಾಕ್ರ್ಸಗೆ ಸೀಟು ಸಿಗುವದಿಲ್ಲಾ ಅನ್ನುವದು ಫಕ್ಕಾ ಆಯ್ತು. ಇನ್ನೂ ಹೆಚ್ಚಿನ ಹಣವನ್ನು ಪಾವತಿಸಿ ಸೀಟು ಪಡೆಯಬೇಕೆಂದರೆ  ಮನೆಯ ಪರಿಸ್ಥಿತಿ ಅಷ್ಟಕಷ್ಟೆ.
ಇದನೆಲ್ಲಾ ನೋಡಿ ಸೈನ್ಸ ಸಹವಾಸನೇ ಬೇಡ ಮಾಡಿದರೆ ಕಡಿಮೆ ಹಣಕ್ಕೆ ಸಿಗುವ ಬೇರೆ ಯಾವುದಾದರು ಕೋರ್ಸ ಮಾಡಿದರಾಯಿತು ಅಂತ ನಿರ್ಧಾರ ಮಾಡಿದ್ದೆ. ಅಷ್ಟರಲ್ಲೇ  ಪ್ರೈಮರಿ ಸ್ಕೂಲ್‍ನ ಶಿಕ್ಷಕರೊಬ್ಬರು ನನ್ನ ತಮ್ಮ ಮನೆಗೆ ಕರೆಸಿಕೊಂಡರು. ಊರ ಪಕ್ಕದಲ್ಲೇ ಇರುವ ಗೌರ್ಮೆಂಟ ಸೈನ್ಸ ಕಾಲೇಜಿಗೆ ಸೇರುವ ಉಪದೇಶ ನೀಡಿದರು.

ಕಾಲೇಜಿನಲ್ಲಿರುವ ಶಿಕ್ಷಕರು ನಮ್ಮಗೆ ಕೇವಲ ಮಾರ್ಗದರ್ಶಕರು. ದಾರಿ ಇರುವ ಕುರಿತು ಮಾಹಿತಿಯನ್ನು ನೀಡುತ್ತಾರೆ ವಿನಃ ನೀನು ತಲುಪಬೇಕಾಗಿರುವ ಜಾಗದ ವರೆಗೂ ಬಿಟ್ಟು ಬರುವದಿಲ್ಲಾ. ಸ್ವ ಪ್ರಯತ್ನದಿಂದ ಓದಿದರೆ ಖಂಡಿತವಾಗಿಯೂ ಮುಂದೆ ಬಂದೆ ಬರುತ್ತಿಯಾ ಎಂದು ಹೇಳಿ ಸರ್ಕಾರಿ ಕಾಲೇಜಿನ ಬಗೆಗೆ ನನಗಿದ್ದ ಅಸಡ್ಡೆ ಮನೋಭಾವನೆಯನ್ನು ತೊಲಗಿಸಿ ನನ್ನೊಳಗಿನ ಆಸೆಗೆ ನೀರೆರದರು.

ನಾನು ಊರ ಪಕ್ಕದಲ್ಲೇ ಇದ್ದ ಗೌರ್ಮೆಂಟ ಸೈನ್ಸ ಕಾಲೇಜಿಗೆ ಸೇರುವದನ್ನು ನೋಡಿ  ಉತ್ತಮವಾದ ಕಾಲೇಜಿನಲ್ಲಿ ಅಡ್ಮಿಷನ ಪಡೆದ ಗೆಳೆಯರು ಅಪಹಾಸ್ಯ ಮಾಡಿದರು. ಆದರೂ ಸಿಕ್ಕ ಅವಕಾಶವನ್ನು  ಎರಡು ವರ್ಷ ಸರಿಯಾಗಿ ಉಪಯೋಗಿಸಿಕೊಂಡು ಗುಣಮಟ್ಟದ ಅಳತೆಗೋಲಿಗೆ ನಿಲುಕದ. ಅದೇ ಸರ್ಕಾರಿ ಸೈನ್ಸ ಕಾಲೇಜಿನಲ್ಲಿ ಶ್ರಮವಹಿಸಿ ಅಭ್ಯಾಸ ಮಾಡಿದೆ. ಅದರ ಫಲ ಅಪಹಾಸ್ಯವನ್ನು ಮಾಡಿದ ಆ ನನ್ನ ಎಲ್ಲಾ ಸ್ನೇಹಿತರಿಗಿಂತ ಉತ್ತಮವಾದ ಅಂಕವನ್ನು ಪಡದಿದ್ದೆ. ಹಿಂದೆ ಕೇವಲ ಫಸ್ಟ್ ಕ್ಲಾಸ್‍ಗೆ ಸಮಾಧಾನ ಪಟ್ಟುಕೊಂಡಿದ್ದವನು. ಕ್ಲಾಸಗೆ ಫಸ್ಟ್ ಎನ್ನುವ ಹಂತಕ್ಕೆ ಬಂದು ನಿಂತೆ.

ಇಂದಿನ ಫಲಿತಾಂಶ ನಮ್ಮ ಮುಂದಿನ ಕಲಿಕೆಗೆ ಮೆಟ್ಟಿಲು ವಿನಃ ಅದೇ ಕೊನೆ ಅಲ್ಲಾ. ಉತ್ತಮವಾದ ಕಾಲೇಜಿನ ಜೊತೆಗೆ  ಉತ್ತಮವಾದ ಓದು ಬೇಕು. ಮಾರ್ಗದರ್ಶನದ ಅನುಸಾರ ನಮ್ಮ ಪ್ರಯತ್ನವು ಇರಬೇಕು. ಅಂದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ.


                                              

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x