ಆಸೆ ಯಾರಿಗಿರಲ್ಲ ಹೇಳಿ! ಪ್ರತಿಯೊಬ್ಬ ಮನುಷ್ಯನಿಗೂ ಅವನೆದೆಯಾದಂತ ಆಸೆ ಆಕಾಂಕ್ಷೆ ಇರುತ್ತೆ, ಅವನ ಆಸೆಯೇ ನಾಳೆಗೆ ಪ್ರೇರಣೆ, ಭರವಸೆ ಹಾಗು ಮುನ್ನುಡಿ. ಆದ್ರೆ ಅದು ದುಃಖದ ಮೂಲವು ಹೌದು. ನನಗು ನನ್ನ ತಂದೆ ಉಳಿಸಿಕೋ ಬೇಕೆಂಬ ಮಹದಾಸೆ ಇತ್ತು ಆದ್ರೆ ಕಡೆಯಲ್ಲಿ ನಮ್ಮಾಸೆ ಜೊತೆ ಅಪ್ಪನಿಗೂ ಎಳ್ಳು ನೀರು ಬಿತ್ತಂತಾಯಿತು!
ನನ್ನ ಅನುಭವದ ಮಾತು…!
ಮಾರ್ಚ್ ೨೦೧೭
ಅಪ್ಪನಿಗೆ ೬೦ ವಸಂತ ತುಂಬಿದಾಗ ಷಷ್ಠಿಪೂರ್ತಿ ಪೂಜೆ ಮಾಡಲಾಗಲಿಲ್ಲ, ಈಗ ೭೦ ನೇ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಷಷ್ಠಿಪೂರ್ತಿ ಪೂಜೆ, ಗಣ ಹೋಮ, ಆಯುಷ್ ಹೋಮ ಮಾಡಿಸಬೇಕೆಂಬ ನಿರ್ಣಯತೊಟ್ಟು ನಾನು, ಅಣ್ಣ ಮತ್ತು ಮನೆಯವರೆಲ್ಲರೂ ಸೇರಿ ಅದರ ತಯ್ಯಾರಿಯಲ್ಲಿ ತೊಡಗಿಸ್ಕೊಂಡ್ವಿ! ಅಪ್ಪನಿಗೆ ಇದ್ಯಾವುದರ ವ್ಯಾಮೋಹ ಇರ್ರಲಿಲ್ಲ, ಇನ್ನು ನಾಲ್ಕು ಜನ ದಂಪತಿಗಳಿಗೆ, ಹಿರಿಯರಿಗೆ ಕರೆದು ಅವರಿಗೆ ಅನ್ನಧಾನ ಮಾಡಿ ಎಂದು ಹೇಳುತ್ತಿದ್ದರು. ಕಡೆಗೂ ನಮ ಒತ್ತಾಯಕ್ಕೆ ಸಿಲುಕಿ ಸ್ವಇಚ್ಛೆ ಇಲ್ಲದಿದ್ದರೂ ಮನೆಯವರ ಬಲವಂತಕ್ಕೆ, ನಿಮ್ಮಿಚ್ಛೆ ಯಂತೆ ಆಗಲಿ ಎಂದು ಮಂದಹಾಸ ಬೀರುತ್ತಾ ರೂಮಿನತ್ತ ಹೊರಟರು.ಆದಾಗಲೇ ಅವರಿಗೆ ಸ್ವಲ್ಪ ಕೆಮ್ಮು ಜಾಸ್ತಿಯಾಗಿತ್ತು.
ಮರುದಿನ, ನನ್ನ ಹೆಂಡತ್ತಿ, ಆತಿಗ್ಗೆ ಹಾಗು ಅಮ್ಮ ಸೀರೆ ಖರೀದಿಗೆ ಮಲ್ಲೇಶ್ವರಂಗೆ ಹೋಗೋಣ ಎಲ್ರು ಸಿದ್ದರಾಗಿ ಎಂದು ಹೇಳಲು, ಅಪ್ಪಾ, ನಾನ್ ಬರೋದಿಲ್ಲ , ನನಗೆ ತುಂಬಾ ಸುಸ್ತು, ಕೆಮ್ಮು, ನಾನ್ ಮನೆಯಲ್ಲಿಯೇ ಮಲಗಿರುತೇನೆ ನೀವು ಹೋಗಿಬನ್ನಿ ಎಂದು ಎಷ್ಟು ಹೇಳಿದ್ರು ನಾವ್ಯಾರು ಕೇಳ್ಲಿಲ್ಲಾ, ಒಬ್ಬರೇ ಮನೆಯಲ್ಲಿ ಏನ್ಮಾಡ್ತೀರಾ ನಮ್ ಜೊತೆ ಬನ್ನಿ ಎಂದು ಬಲವಂತದಿಂದ ಕರೆದೊಯ್ಧ್ವಿ ! ಬಹುಶ ಅದೇ ನಾವ ಮಾಡಿದ್ ದೊಡ್ಡ ತಪ್ಪು. ಅವರ ಆರೋಗ್ಯ ಇನ್ನಷ್ಟು ಅದಗೆಡಿತು. ನಮ್ಮ ಆಸೆಯೇ ಅವರಿಗೆ ಮುಳುವಾಯಿತು.
೧೯ ಮಾರ್ಚ್ ೨೦೧೭
ಅಂದು ರಾತ್ರಿ ಅಪ್ಪನಿಗೆ ವಿಪರೀತ ಚಳಿ ಜ್ವರ, ಕೆಮ್ಮು. ಯಾವ ಮಾತ್ರೆ, ಗುಳಿಗೆ ಕೂಡ ಕೆಲ್ಸಮಾಡಲಿಲ್ಲ. ಮರುದಿನ ಬೆಳ್ಳಗೆ ವ್ಯದ್ಯರ ಬಳಿ ಕರೆದುಕೊಂಡು ಹೊರ್ಟ್ವಿ, ವ್ಯದ್ಯರು ಚೆಕ್ಕ್ಪ್ ಮಾಡಿ x – ray ನೋಡಿ ಖಫಾ ಸ್ವಲ್ಪಾ ಜಾಸ್ತಿಯಾಗಿದೆ ಬೇರೆ ಮಾತ್ರೆ ಕೊಡ್ತೀನಿ, ತೊಗೊಳ್ಳಿ ಸರಿಯೋಗುತ್ತೆ ಎಂದರು. ಮಾತ್ರೆ ತೊಗೊಂಡ್ ಮನೆಕಡೆ ಹೊರ್ಟ್ವಿ … ಅಪ್ಪನಿಗೆ ಜಾಸ್ತಿ ಆಯಾಸ ಆಗಿತ್ತು . ಅಮ್ಮ ಬಲವಂತವಾಗಿ ಊಟ ಉಣಿಸಿದರು.ಎಲ್ಲರ ಮುಖದಲ್ಲಿ ಹಬ್ಬದ ಸಂಭ್ರಮ ನಶಿಸುಸ್ತಾ ಬಂತು. ಅಪ್ಪಾ ನನ್ನ ಕರೆದು, ರಮೇಶಾ ಹೋಗ್ಲಿ ಯಾವುದಾದ್ರೂ ಹೋಸ್ಪಿಟಲ್ನಲ್ಲಿ ಅಡ್ಮಿತ್ ಮಾಡ್ಸೋ ಎದೆ ಉಬುಸ್ಸ ಜಾಸ್ತಿಯಾಗ್ತಾಇದೇ ಎಂದರು.
೨೦ ಮಾರ್ಚ್ ೨೦೧೭
ಸಂಜೆ ೩:೩೦ ಮನೆಯಿಂದ ನಾನು, ಅಪ್ಪಾ, ಅಮ್ಮ wockhardt ಹಾಸ್ಪಿಟಲ್ಗೆ ಹೊರ್ಟ್ವಿ. ನನ್ನ ಉದ್ದೇಶ ಹೋಸ್ಪಿಟಲ್ನಲ್ಲಾದ್ರೂ ಒಂದೆರಡು ದಿನ ರೆಸ್ಟ್ಮಾಡಲ್ಲಿ ಎಂಬುದಾಗಿತ್ತು ಆದ್ರೆ ಹಾಸ್ಪಿಟಲ್ ಸೇರುತಿದಂತೆ, ಅಪ್ಪಾನ ಎಮರ್ಜೆನ್ಸಿ ವಾರ್ಡಿಗೆ ಶಿಫ್ಟ್ ಮಾಡಿದ್ರ್. ಡ್ಯೂಟಿ ಡಾಕ್ಟರ್ ತಕ್ಷಣ x – ray ಮಾಡಿಸಿ ನೋಡಿ, ರೈಟ್ ಲಂಗ್ ೮೦% ಮುಚ್ಚಿದೆ ಎಂದರು. ಈಗ್ಲೇ ತಡ ಮಾಡಿದ್ದೀರಾ ತಕ್ಷಣ I C U ಗೆ ಶಿಫ್ಟ್ ಮಾಡ್ಬೇಕು ಎಂದ್ರು. ಅಪ್ಪನ ಕೈ ಬೆರಳಿನ ಉಂಗುರ, ಕೊರಳಿನಲಿದ್ದ ಸರ, ಹಾಗು ಸ್ಪಟಿಕ ಮಣಿ ಹಾರ ಬೇಗ ಬಿಚ್ಕೋಳಿ ಎಂದು ನರ್ಸ್ ನನಗೆ ತಿಳಿಸಿದಳು. ಅಪ್ಪನಿಗೆ ಆಕ್ಸಿಜನ್ ಲೆವೆಲ್ಸ್ ತುಂಬಾ ಕಡಿಮೆ ಇತ್ತು, ಸ್ಪಟಿಕಮಣಿ ಹಾರ ಬಿಚ್ಚಲು ಹೋದೆ, ಹಾರ ತುಂಡಾಗಿ ಒಂದ್ ಒಂದೇ ಸ್ಪಟಿಕಮಣಿಗಳು ಜಾರಿ ನೆಲ್ಲಕೆ ಉರಳಿದವು, ಅಪ್ಪಾ ಒಮೆಲೇ ನನ್ನನು ದಿಟ್ಟಿಸಿ ಅಸಾಯಕದಿಂದ ನೋಡಿದರು, ಆ ನೋಟದಲ್ಲಿ ಒಂದು ಕಹಿ ಸತ್ಯ “ಎಲ್ಲಾ ಮುಗಿತು ಹೋಗುತ್ತಿರುವುದು I C U ಗಲ್ಲಾ ಸಾವಿನ ಕೂಪಕ್ಕೆ” ಎಂಬ ಮಾತು ನಮಿಬ್ಬರ ನಡುವೆ ವಿನಿಮಯ ವಾಯ್ತು. ಆ ನೋಟ ಅಚ್ಚಳಿಸದಂತೆ ಈವತ್ತಿಗೂ ನನ್ನನು ಬಹಳ ಕಾಡುತಿದೆ.
ಹುಚ್ಚು ಆಸೆ! ಎನ್ನಾದ್ರೂ ಮಾಡಿ ಶತಾಯ ಗತಾಯ ಪ್ರಯತ್ನ ಪಟ್ಟು ಅಪ್ಪಾನ ಉಳಿಸಿಕೋ ಬೇಕೆಂಬ ಆಸೆ. ಆದ್ರೆ ಆ ಭಗವಂತನ ಆಟ ಬಲ್ಲವರಾರು!!!
ಅಪ್ಪ ೪೨ ದಿನಗಳ ಕಾಲ I C U ನಲ್ಲಿದ್ದರು, ಈ ೪೨ ದಿನಗಳ್ಲಲಿ ಆ ಭಗವಂತನ ಮೊರೆಯೊಗಿದು ಅದೆಷ್ಟೋ ! ಯಾರ್ ಏನೇನ್ ಸಜ್ಜೆಸ್ಟ್ ಮಾಡ್ತಾರೋ ಎಲ್ಲಾ ಮಾದ್ಧಿವಿ, ಗಣೇಶನಿಗೆ ಪ್ರದಕ್ಷಿಣೆ, ನರಸಿಂಹಸ್ವಾಮಿಗೆ ಪ್ರತಿ ಮಂಗಳವಾರ ೨೧ ಪ್ರದಕ್ಷಿಣೆ, ಹನುಮಂತನಿಗೆ ಶನಿವಾರ ಅಭಿಷೇಕ, ಕುಕ್ಕೆ ಸುಬ್ರಮಣ್ಯ ಸ್ವಾಮಿ ದರ್ಶನ, ರಾಮನಾಥಪುರ ಸ್ವಾಮಿ ಪ್ರಸಾದ, ತಿರುಪತಿ ತಿಮಪ್ಪನ ಕಾಲ್ನಡಿಗೆಯ ದರ್ಶನ, ಹೋಮಿಯೋಪತಿ ಟ್ರೀಟ್ಮೆಂಟ್, ಎಕ್ಸ್ಪರ್ಟ್ ಒಪೀನಿಯನ್, ಬೇರೆ ಡಾಕ್ಟರ್ ಒಪೀನಿಯನ್ ಎಲ್ಲಾ ನಮ್ಮಸಮಾದಾನಕ್ಕೆ ಮಾಡಿದ್ವಿ ಆದ್ರೆ ದೇವರ ಇಚ್ಛೆ ಬೇರೆಯೇ ಇತ್ತು…
೩೦ ಏಪ್ರಿಲ್ ೨೦೧೭
ಈ ೪೨ ದಿನಗಳ ಸುದೀರ್ಘ I C U ವಾಸ್ತವ್ಯ ದಲ್ಲಿ ಅದೇನೋ ಅಮ್ಮ ಸ್ವಲ್ಪಾ ಅದೃಷ್ಟ ಮಾಡಿದ್ರು ಅಂತ ಕಾಣುತೇ, ಏಪ್ರಿಲ್ ೩೦ ಅವರ ವಿವಾಹ ವಾರ್ಷಿಕೋತ್ಸವ, ಆ ಒಂದು ದಿನ ಮಾತ್ರ ಅಪ್ಪಾ ವಾರ್ಡಿಗೆ ಶಿಫ್ಟಾಗಿದ್ರು, ಅಮ್ಮ ಮತ್ತು ನಾನು ಇಡೀ ದಿನ (ಹಗಲು, ರಾತ್ರಿ) ಅಪ್ಪನ ಜೊತೇನೆ ಇದ್ಹೇವು. ಅಮ್ಮ, ಅಪ್ಪನಿಗೆ ಇಷ್ಟವಾದ ಹಾಡನ್ನೆಲ್ಲ ಫೋನ್ ಮುಖೇನ ಪ್ಲೇ ಮಾಡುತ್ತಿದ್ರೂ, ಅಪ್ಪ್ಪ ಕೆಲವೊಂದು ಹಾಡುಗಳಿಗೆ ಮುಖದ ಹಾವ ಭಾವ ದಿಂದ ಖುಷಿ ವ್ಯಕ್ತ ಪಡಿಸುತಿದ್ರು , ಅದೇ ಅವರು ಅಮ್ಮನಿಗೆ ಕೊಟ್ಟ ಕೆಡೆಯ ಮರೆಯಲಾಗದ ಬಾಹುಮಾನ. ಫೋನ್ ನಲ್ಲಿ ಪ್ಲೇ ಆದ ಕಡೆಯ ಹಾಡಿನ ಸಾಲುಗಳು…
” ಆಸೆ ಎ೦ಬ ಬಿಸಿಲು ಕುದುರೆ ಏಕೆ ಏರುವೇ? ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇ?
ಅವನ ನಿಯಮ ಮೀರಿ ಇಲ್ಲೀ ಏನು ಸಾಗದು… ನಾವು ನೆನೆಸಿದ೦ತೆ ಬಾಳಲೇನು ನಡೆಯದು…
ದುರಾಸೆ ಏತಕೆ? ನಿರಾಸೆ ಏತಕೆ? ಅದೇನೆ ಬ೦ದರೂ ಅವನ ಕಾಣಿಕೆ…
ಹುಟ್ಟು ಸಾವು ಬದುಕಿನಲ್ಲಿ ಎರಡು ಕೊನೆಗಳು… ಬಯಸಿದಾಗ ಕಾಣದಿರುವ ಎರಡು ಮುಖಗಳು…
ಹರುಷವೊ೦ದೆ ಯಾರಿಗು೦ಟು ಹೇಳು ಜಗದಲಿ.. ಹೊವು ಮುಳ್ಳು ಎರಡು ಉ೦ಟು ಬಾಳ ಲತೆಯಲಿ…
ವಿಶಾದವಾಗಲೀ, ವಿನೋದವಾಗಲಿ, ಅದೇನೆ ಆಗಲಿ, ಅವನೆ ಕಾರಣ…”
ಅಪ್ಪನ ಸವಿ ನೆನಪಿನ್ನಲ್ಲಿ ಬರೆದ ಭಾರದ ಸಾಲುಗಳು! ಅವರನ್ನ ಉಳಿಸಿಕೋ ಬೇಕೆಂಬ ಹುಚ್ಚು ಪ್ರಯತ್ನದಲ್ಲಿ ವಿಫಲನಾದ್ರೂ ಪ್ರಯತ್ನ ಪ್ರಾಮಾಣಿಕವಾಗಿತ್ತು ಎಂಬುದೊಂದೇ ಆತ್ಮತೃಪ್ತಿ !!!
-ರಮೇಶ್ ವಿ
ಬಹಳ ಚೆನ್ನಾಗಿದೆ. ಮನಮುಟ್ಟುವಂತಿದೆ.ಹೀಗೇ ಬರೆಯುತ್ತಿರಿ.