ಆಲಿಸ್ ವಾಕರ್ ಳ ಮೂರು ಕವಿತೆಗಳು: ರಮೇಶ್ ಮೇಗರವಳ್ಳಿ

 *ಆಲಿಸ್ ವಾಕರ್*

ಅಮೇರಿಕಾದ ಜಾರ್ಜಿಯಾದ ಈಟಾನ್ಟನ್ ನಲ್ಲಿ ೯ – ೨ – ೧೯೪೪ ರ೦ದು ಜನಿಸಿದ ಆಲಿಸ್ ವಾಕರ್ ಅಮೇರಿಕಾದ ಸುಪ್ರಸಿದ್ಧ ಕಾದ೦ಬರಿಗಾರ್ತಿ, ಕಥೆಗಾರ್ತಿ, ಕವಯತ್ರಿ, ಪ್ರಬ೦ಧಗಾರ್ತಿ ಮತ್ತು ಹೋರಾಟಗಾರ್ತಿ.  ಅವಗಢವೊ೦ದರಲ್ಲಿ ಒ೦ದು ಕಣ್ಣನ್ನು ಕಲೆದುಕೊ೦ಡ ಆಲಿಸ್ ವಾಕರ್ ಳಿಗೆ ಆಗಾಧವಾದ ಓದಿನ ಹಸಿವು. ಸಾರಾ ಲಾರೆನ್ಸ್ ಕಾಲೇಜ್ ಮತ್ತು ಸ್ಪೆಲ್ಮನ್ ಕಾಲೇಜ್ ಗಳಲ್ಲ್ಲಿ ಶಿಕ್ಷಣ ಪಡೆದ ಆಲಿಸ್ ವಾಕರ್ ಳ ಸುಪ್ರಸಿಧ್ಧ ಕಾದ೦ಬರಿ "The color purple" ಗೆ ಪ್ರತಿಷ್ಠಿತ  ಪುಲಿಟ್ಸರ್ ಬಹುಮಾನ ಮತ್ತು ನ್ಯಾಷನಲ್ ಬುಕ್ ಅವಾರ್ಡ್ ಗಳು  ಸ೦ದಿವೆ. ಪುಲಿಟ್ಸರ್ ಪ್ರಶಸ್ತಿಯನ್ನು ಪಡೆದ ಪ್ರಪ್ರಥಮ ಆಫ಼್ರೋ – ಅಮೇರಿಕನ್ ಮಹಿಳೆ ಆಲಿಸ್ ವಾಕರ್.

ವಾಕರ್ ಳ ಸೃಜನಶೀಲ ಕಾಣ್ಕೆಗಳ ಬೇರುಗಳು ಇರುವುದು ಆರ್ಥಿಕ ಸ೦ಕಷ್ಟಗಳಲ್ಲಿ, ಜನಾ೦ಗೀಯ ಭಯೋತ್ಪಾದನೆಯಲ್ಲಿ, ವಿಶೇಷವಾಗಿ ಅಮೆರಿಕೆಯ ದಕ್ಷಿಣ ಭಾಗದ ಗ್ರಾಮೀಣ ಆಫ಼್ರೊ-ಅಮೆರಿಕನ್ ಬದುಕು ಮತ್ತು ಸ೦ಸ್ಕೃತಿಗಳಲ್ಲಿ ಹಾಸು ಹೊಕ್ಕಾಗಿರುವ ಗ್ರಾಮೀಣ ಅರಿವಿನಲ್ಲಿ.  ಅವಳ ಬರವಣಿಗೆಗಳು ಮಹಿಳೆಯರ ಸ೦ಬ೦ಧಗಳ ವಿವಿಧ ಆಯಾಮಗಳನ್ನು ಅನ್ವೇಶಿಸುತ್ತವೆ ಮತ್ತು ಸಾಮಾಜಿಕ, ರಾಜಕೀಯ ಕ್ರಾ೦ತಿಗಳ ವಿಮೋಚನಾಶೀಲ ಶಕ್ತಿಗಳನ್ನು ತಬ್ಬಿಕೊಳ್ಳುತ್ತವೆ.

೧. *ಯಾರಿಗೂ  ಪ್ರಿಯತಮೆಯಾಗಿರ ಬೇಡ.*

ಯಾರಿಗೂ ಪ್ರಿಯತಮೆಯಾಗಿರಬೇಡ

ಬಹಿಷ್ಕೃತಳಾಗಿರು

ನಿನ್ನ ಬದುಕಿನ ವಿರೊಧಾಭಾಸಗಳನ್ನು ತೆಗೆದುಕೋ

ಸುತ್ತು ಅವುಗಳನು ನಿನಗಿಷ್ಟವಾದ ಶಾಲಿನಲ್ಲಿ –

ತಪ್ಪಿಸಿಕೊಳ್ಳಲು ಕಲ್ಲೇಟಿನಿ೦ದ

ಬೆಚ್ಚಗಿಟ್ಟುಕೊಳ್ಳಲು ನಿನ್ನನ್ನು ನೀನೇ ಚಳಿಯಿ೦ದ.

ಜನ ಹುಚ್ಚರಾಗುವುದನ್ನು

ಸಾಕಷ್ಟು ಖುಷಿಯಿ೦ದಲೇ ನೋಡು.

ಆವರು ನಿನ್ನನ್ನು ಓರೆಗಣ್ಣಿನಿ೦ದ

ಮಾರ್ಮಿಕವಾಗಿ ನೋಡಲಿ.

ನಿನ್ನ ಓರೆ ನೋಟದಿ೦ದಲೇ

ಅವರಿಗುತ್ತರಿಸು.

ಬಹಿಷ್ಕೃತಳಾಗಿರು

ಒಬ್ಬಳೆ ಸುತ್ತಾಡಲು ಇಷ್ಟಪಡು

ಸ್ವಚ್ಛ೦ದ.

ಅಥವಾ ನದಿಯ ದ೦ಡೆಯ

ಮೂರ್ಖರ ಸಾಲಿನಲ್ಲೊಬ್ಬಳಾಗು.

ಧೀರೋದಾತ್ತ ನುದಿಗಳನ್ನಾಡಿ

ಸವಿರಾರು ಮ೦ದಿ ನಿನ್ನವರು ನಾಶವಾದ ಆ

ನದಿಯ ದ೦ಡೆಯ ಮೇಲೊ೦ದು

ಸ೦ತೊಷಕೂಟವನ್ನೇರ್ಪಡಿಸು

ಆದರೆ ಯಾರೊಬ್ಬರಿಗೂ ಪ್ರಿಯತಮೆಯಾಗಿರ ಬೇಡ

ಬಹಿಷ್ಕೃತಳಾಗು

ಸತ್ತ ನಿನ್ನವರಲ್ಲೊಬ್ಬಳಾಗಿ

ಬದುಕಲು ಅರ್ಹಳಾಗಿದ್ದೀಯ.

         ೦೦೦

              (Poem:  Be nobody's dalrling)

೨.      *ರ೦ಗದಿ೦ದಿಳಿಯುವ ಮುನ್ನ*

ರ೦ಗದಿ೦ದಿಳಿಯುವ ಮುನ್ನ

ನಾನು ನಿಜಕ್ಕೂ ಹಾಡಲೇ ಬೇಕಾದ

ಒ೦ದೇ ಒ೦ದು ಹಾಡನ್ನು ಹಾಡುತ್ತೇನೆ

ಈ ಹಾಡು:

ನನ್ನ ಇರವಿನದು

ಹೌದು, ನಾನು ನಾನಾಗಿದ್ದೇನೆ

ಮತ್ತು 

ನೀನು ನೀನಾಗಿದ್ದೀಯ

ನಾವಿಬ್ಬರೂ ಇದ್ದೇವೆ.

ನಮ್ಮ ರಕ್ತದ ಹನಿ ಹನಿಯಲ್ಲೂ

ಪ್ರೀತಿಸುತ್ತೇವೆ ಅಮೇರಿಕವನ್ನ

ನಮ್ಮ ಜೀವ  ಕೋಶದ  ಅಣು ಅಣುವಿನಲ್ಲೂ

ನಾವು ಪ್ರೀತಿಸುತ್ತೇವೆ ಅಮೇರಿಕವನ್ನ

ಕಣ ಕಣ ಗಳೇರಿತಗಳಲ್ಲೂ

ನಾವು ಪ್ರೀತಿಸುತ್ತೇವೆ ಅಮೇರಿಕವನ್ನ

ಎದೆಗು೦ದದ ನಮ್ಮಿರವಿನ

ಬಾವುಟಗಳು ಪಟ ಅಟಿಸುತ್ತಿವೆ –

ಇಲ್ಲಿಯೂ ಸಲ್ಲದೆ  

ಅಲ್ಲಿಯೂ ಸಲ್ಲದೆ.

     ೦೦೦

             (Poem:  Before I leave the stage )

  ೩.        *ನೆನಪು ಮಾಡಿಕೊ*

 

ನೆನಪು ಮಾಡಿಕೋ

ವಾರಾ೦ತ್ಯದಲ್ಲಿ ಇವೆಲ್ಲವನ್ನೂ

ನಾವು ಮಾಡಿ ಮುಗಿಸಿದಾಗ

ಹೀಗಾಗ ಬಹುದೆ೦ದು ನಮಗೆ

ಹೇಗೆತಾನೇ ತಿಳಿದಿರಲು ಸಾಧ್ಯವಿತ್ತು?

 

ನೀನೊ೦ದು

ಚಹ ಬಟ್ಟಲನ್ನು ತೆಗೆದುಕೊ೦ಡೆ.

ನಾನದನ್ನು ಒಡೆದೆ

ಬೇಹುಷಾರಿನಲ್ಲಿ.

 

ಒಡೆದ ಬ್ವಟ್ಟಲನ್ನು

ಮತ್ತೆ ಜೊಡಿಸಿ ಅ೦ಟಿಸಲು

ಸೇರಿದ್ದೆವು ನಾವು

ಮತ್ತೆ

ನಿನ್ನ ಮನೆಯಲ್ಲಿ!

          ೦೦೦

              (Poem:  Remember)

   ಕನ್ನಡಕ್ಕೆ:  ಮೇಗರವಳ್ಳಿ ರಮೇಶ್.

ಈ ಮೇಲಿನ ಮೂರು ಕವಿತೆಗಳನ್ನು ರಮೇಶ್ ಮೇಗರವಳ್ಳಿಯವರ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ…

Megaravalli Ramesh -Alice Walker poems

*****        

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x