“ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ “: ಶುಭ.ಆರ್ ದೀಪು

ಆರೋಗ್ಯವೇ ಭಾಗ್ಯ  ಎಂಬ ನಾಣ್ನುಡಿಯಂತೆ  ಮನುಜನಾದವನ  ದೇಹಕ್ಕೆ  ಉತ್ತಮ ಆರೋಗ್ಯ ಮುಖ್ಯ. ಎಷ್ಟೇ ಸಿರಿಸಂಪತ್ತಿದ್ದರೂ  ಅದನ್ನು ಅನುಭವಿಸಲು ಉತ್ತಮ ಆರೋಗ್ಯಬೇಕು. ಉತ್ತಮ ಆರೋಗ್ಯವನ್ನು  ಹೊಂದಿರಲು, ಚೈತನ್ಯವನ್ನು  ಪಡೆಯಲು ನಾವು ಸೇವಿಸುವ ಗಾಳಿ, ಕುಡಿಯುವ ಶುದ್ದನೀರು,ವಾಸಿಸುವ  ಶುದ್ದ ವಾತಾವರಣ ಹಾಗೂ  ಪೌಷ್ಟಿಕ ಆಹಾರ ಹೇಗೆ ಮುಖ್ಯವೋ  ಅದೇರೀತಿಯಲ್ಲಿ  ಮನುಷ್ಯನಲ್ಲಿ ಸಕಾರಾತ್ಮಕ ಮನೋಭಾವನೆ ಕೂಡಾ ಅತಿ ಮುಖ್ಯ. 

ಸಕಾರಾತ್ಮಕ ಮನೋಭಾವನೆ ಎಂದರೆ ಸದಾ ಒಳಿತನ್ನೇ ಆಲೋಚಿಸುವುದು. ಜೀವನದಲ್ಲಿ ಎಷ್ಟೇ  ಬೆಟ್ಟ ಗುದ್ದದಂತಹ ಕಷ್ಟಗಳೂ ಎದುರಾದರೂ ಅದಕ್ಕಾಗಿ ದೃತಿಗೆಡದೆ  ಸಕಾರಾತ್ಮಕವಾಗಿ ಯೋಚಿಸಿ ಪರಿಹರಿಸಿಕೊಳ್ಳಬೇಕು, ಆಶಾವಾದಿಗಳಂತಿರಬೇಕು. 

ನಿಮ್ಮದೇ ಆದ ಕನಸಿನ ಗುರಿಯ ಕೆಲಸವನ್ನು ಆರಂಭಿಸುವ  ಮೊದಲೇ, ಅಯ್ಯೋ ನಾನು ಆ ಕೆಲಸಕ್ಕೆ ಯೋಗ್ಯನಲ್ಲ, ಇದರಿಂದ ಬರಿ ನಷ್ಟವೇ ಆಗಿಬಿಟ್ಟರೆ, ಸಮಾಜದಲ್ಲಿ ಮುಗ್ಗರಿಸಿ ಬೀಳುವೆ ಎಂದುಕೊಂಡು  ಮೊದಲೇ ಆಯವ್ಯಯ ಗಳ ಲೆಕ್ಕದ  ಪಟ್ಟಿಯನ್ನು ಮನದಲ್ಲಿ ಹಾಕಿಕೊಂಡು ನಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು  ಮಾನಸಿಕವಾಗಿ ಕುಗ್ಗುವುದಲ್ಲದೆ,ಆತ್ಮಸ್ಥೈರ್ಯ  ಕಳೆದುಕೊಂಡು ಡಿಪ್ರೆಶನ್  ಆಗಿ  ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ಸಕರಾತ್ಮಕಾವಾಗಿ ಯೋಚಿಸುವುದು ಒಳಿತು. ನಾನು ಈ ಕೆಲಸಕ್ಕೆ ಯೋಗ್ಯ ವ್ಯಕ್ತಿಯಾಗಿರುವೆ, ನಾನು ಈ ಕೆಲಸ ಮಾಡಬಲ್ಲೆ,ಈ ಕೆಲಸದಲ್ಲಿ ನನಗೆ ತೃಪ್ತಿ ಇದೆ,ನಾನು ಸ್ವಾವಲಂಬಿಯಾಗಿ ಕೆಲಸ ಮಾಡುವೆ ಎಂದು ತನ್ನ ಮೇಲೆ ತನಗೆ ಪ್ರೀತಿ ವ್ಯಕ್ತ ಪಡಿಸಿಕೊಂಡು  ಭವಿಷ್ಯದಲ್ಲಿ ನನಗೆ ಒಳ್ಳೆಯದೇ ಆಗುತ್ತದೆಂಬ ಭರವಸೆಯಿಟ್ಟು  ಕೆಲಸ ಆರಂಬಿಸಿದರೆ ಯಶಸ್ಸು ಗಳಿಸಿ ಉಲ್ಲಾಸಕರವಾಗಿರುವಿರಿ, ಆತ್ಮವಿಶ್ವಾಸ ನೂರ್ಮಡಿಯಾಗಿ ವ್ರುದ್ದಿಯಾಗುವುದು. ಇದರಿಂದ ಜೀವನದಲ್ಲಿ ಯಾವ ದುಃಖ – ದುಮ್ಮಾನ ಗಳಿಲ್ಲದೆ  ಆರೋಗ್ಯವಾಗಿರಬಹುದು. 

ಜೀವನದಲ್ಲಿ ನಮಗೇನೋ ನಷ್ಟವಾದಾಗ  ( ಉದ್ಯೋಗದಲ್ಲಾಗಬಹುದು / ಪ್ರೀತಿಯಲ್ಲಿರಬಹುದು ), ನಮಗೇನೋ ಇತರರಿಂದ ಅನ್ಯಾಯವಾದಾಗ, ಯಾವುದಾದರೂ ಸನ್ನಿವೇಶದಲ್ಲಿ  ಒಂದೆರಡು ಬಾರಿ ಸೋಲನ್ನು  ಕಂಡುಕೊಂಡಾಗ, ಅಯ್ಯೋ..!  ನಾನು ದರಿದ್ರ ,ನತದೃಷ್ಟ  ಎಂದುಕೊಂಡು ಕೈಲಾಗದವನಂತೆ ಆಕಾಶ ತಲೆಮೇಲೆ  ಬಿದ್ದ ಹಾಗೆ ಚಿಂತೆ ಮಾಡುತ್ತಾ,ಮನಸ್ಸಿನ ಮೇಲೆ ಒತ್ತಡವನ್ನು ತಂದುಕೊಂಡು ದೇಹಕ್ಕೆ ನಾನಾ ರೀತಿಯ (ಬಿಪಿ, ಹೃದಯಾಘಾತ ) ಖಾಯಿಲೆಗಳನ್ನು  ಬರಮಾಡಿಕೊಂಡು  ನಮ್ಮ ಆಯಸ್ಸನ್ನೇ ಕುಂಟಿತಗೊಳ್ಳುವ  ಬದಲು ಸಕರಾತ್ಮಕಾವಾಗಿ ಯೋಚಿಸಬೇಕು. 
 
ಆಕಸ್ಮಿಕವಾಗಿ ನಮಗೊಂದು ರಸ್ತೆ ಆಫಘಾತ ಸಂಭವಿಸಿ ಕೈ ಕಾಲಿಗೆ ಪೆಟ್ಟಾದಾಗ, ದೇಹದಲ್ಲಿ  ಸಣ್ಣದೊಂದು  ಹುಣ್ಣದಾಗ ದ್ರುತಿಗೆತ್ತು ಭಯಭೀತಿ  ಹೊಂದಿ  ಮತ್ತಷ್ಟು ನೋವು ಉಂಟು ಮಾಡಿಕೊಳ್ಳುವ  ಬದಲು ಸದ್ಯ ಇಷ್ಟರಲ್ಲೇ ಬಚವಾದೆ  ಅಂದುಕೊಂಡು ಧೈರ್ಯವಾಗಿರಬೇಕು. ಏನೇ ಬಂದರೂ  ಹೆದರಿಸಿ ಸಮಸ್ಯೆಗಳನ್ನು  ಪರಿಹರಿಸಿಕೊಳ್ಳಬೇಕು. ಹಿತೈಷಿ ಗಳೋ  ಅಥವಾ  ಸ್ನೇಹಿತರೋ ನಮ್ಮನ್ನು ವಿಮರ್ಶೆ  ಮಾಡಿದಾಗ ನೆಗೆಟಿವ್  ಆಗಿ ಯೋಚನೆ ಮಾಡದೆ  ನಮ್ಮಲ್ಲಿರೋ ಲೋಪದೋಷಗಳನ್ನು ತಿದ್ದುಕೊಳ್ಳಬೇಕು. 
 
"ಸೋಲೇ ಗೆಲುವಿನ ಸೋಪಾನ "  ಎನ್ನುವ ಮಾತು ನಮ್ಮೊಳಗಿರಬೇಕು, ಸಾಧನೆ ಮಾಡುವಲ್ಲಿ ನೂರು ಭಾರಿ  ಸೋಲಬಹುದು, ಆದರೆ ೧೦೧ ನೇ  ಬಾರಿಗೆ ಗೆಲುವು ನಮ್ಮದೇ ಆಗಿರುತ್ತೆ. ಪ್ರತಿಯೊಂದು ಸೋಲು ಕೂಡಾ ನಮಗೆ  ಜೀವನದ ಪಾಠ ವನ್ನುಕಲಿಸಿ  ಅರ್ಥ ಮಾಡಿಸುತ್ತದೆ. ಐನ್ಸ್ ಸ್ಟೀನ್   ಕೂಡ  ಬಲ್ಬ್  ಕಂಡು ಹಿಡಿಯುವಲ್ಲಿ  ಅದೆಷ್ಟೋ ಬಾರಿ ಸೋತಿದ್ದರು, ಆದರೆ ನೆಗೆಟಿವ್  ಆಗಿ ಯೋಚಿಸದೆ, ಕಾರ್ಯವನ್ನು ಕೈಬಿಡದೇ  ಬಲ್ಬ್ ತಯಾರಿಸಿ(ಕಂಡಿಹಿಡಿದು ) ನಮಗೆಲ್ಲ ಬೆಳಕು ನೀಡಿದ್ದನ್ನು  ನಾವು ಕಾಣಬಹುದು.

ಮೊದಲು  ನಮ್ಮ ಮನಸ್ಸಿನಿಂದ ನಕರಾತ್ಮಕ  ಯೋಚನೆಗಳನ್ನು ಹೊರಹಾಕಬೇಕು. ನನಗೆ ಒಳ್ಳೆಯದೇ ಆಗುತ್ತದೆ, ಖಂಡಿತ ನಾನು ಸಮಾಜದಲ್ಲಿ  ಗೌರವಾನ್ವಿತ ವ್ಯಕ್ತಿಯಾಗಿ  ಬಾಳುತ್ತೇನೆ, ನನ್ನದೇ ಆದ ಭವಿಷ್ಯವಾನು ನಾನೇ ರೂಪಿಸಿಕೊಂಡು   ಜೀವನದಲ್ಲಿ ನನ್ನ ಕನಸಿನ ಗುರಿಯ ಮೆಟ್ಟಿಲನ್ನು  ಏರಿ ಸಾಧನೆಯನ್ನು ಮಾಡುತ್ತೇನೆ  ಇದು ನನ್ನಿಂದ ಸಾದ್ಯ  ಎಂಬ ಆತ್ಮ ವಿಶ್ವಾಸ  ಬೆಳೆಸಿಕೊಳ್ಳಬೇಕು. ಇದರಿಂದ ಮನಶ್ಯಾಂತಿ  ಹಾಳು  ಮಾಡಿಕೊಳ್ಳದೆ ಮನೋಬಲ  ವೃದ್ದಿಗೊಂಡು  ದೇಹ ಉತ್ತಮ ಆರೋಗ್ಯದಿಂದಿರುವುದು.ಜೀವನದಲ್ಲಿ ಆನಂದ,ಸಂತೋಷ,ಸೌಭಾಗ್ಯ  ಇತ್ಯಾದಿಗಳು  ನಮ್ಮೊಡನೆ ಶಾಶ್ವತವಾಗಿರುತ್ತದೆ. ಸಕಾರಾತ್ಮಕ ಮನೋಭಾವನೆಯಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. 

ಶುಭ.ಆರ್ ದೀಪು 
ಬೆಂಗಳೂರು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಹೌದು. ಸಕಾರಾತ್ಮಕ ಆಲೋಚನೆಗಳಿಂದಲೇ
ಹಲವು ಸವಾಲುಗಳನ್ನು ಗೆಲ್ಲಬಹುದು.
ಉಪಯುಕ್ತ ಲೇಖನ ಶುಭರವರೆ.

1
0
Would love your thoughts, please comment.x
()
x