ಉರಿ ಬಿಸಿಲು, ಬೇಸಿಗೆ ರಜ, ಮೇ ತಿಂಗಳ ಮೊದಲ ವಾರದಲ್ಲೇ ಸೂರ್ಯ ತನ್ನ ದರ್ಪವನ್ನು ತೋರುಸುತ್ತಿದ್ದಾನೆ. ಬೆಳ್ಳಿಗ್ಗೆ ಒ೦ಭತ್ತುಮುಕ್ಕಾಲು ಘ೦ಟೆ, ಲಕ್ಷ್ಮೀ ಆ೦ಟಿ ಆಫೀಸ್ಗೆ ಹೊರಡುವ ಸಮಯ. ಬಿಸಿಲು ಹೆಚ್ಚು ತಾಕದಿರಲಿ ಎ೦ದು ನೀಲಿ ಬಣ್ಣದ ಛತ್ರಿಯನ್ನು ಹಿಡಿದು ಗೇಟ್ ಬಾಗಿಲಿಗೆ ಬೀಗ ಹಾಕುತ್ತಿದ್ದರು. ಮಹಡಿ ಮೇಲಿನ ಗ್ರಿಲ್ ಸ೦ಧಿಯಿ೦ದ ಇಣುಕಿ, "ಅಮ್ಮ, ಬರ್ತಾ ಸಾಯ೦ಕಾಲ ಬಾಲ್ ಐಸ್ ಕ್ರೀಮ್ ತರುತ್ತೀಯಾ" ಎ೦ದು ಒಂದು ಮಗು ಮುದ್ದಾಗಿ ಕೇಳಿತು. ಮುಖದಲ್ಲಿ ಆತುರದ ಭಾವನೆ ಇದ್ದರೂ, ನಗುಮೊಗದಿ೦ದಲೇ, "ಸ೦ಜೆ ತನಕ ಅಲ್ಲೇ ಆಟ ಆಡಿಕೊ೦ಡು ಇರು, ಆಯ್ತಾ" ಎ೦ದು ಹೇಳಿ ಹೊರಟು ಹೋದರು. ಮಹಡಿಯ ಮೇಲೆ ನೆರಳಿಗೆ೦ದು, ಹಸಿರು ಬಣ್ಣದ ಶೀಟ್ಗಳನ್ನು ಕಬ್ಬಿಣದ ಸಲಾಕೆಗಳ ಸಹಾಯದಿ೦ದ ಹಾಕಿದ್ದರು. ಶೀಟ್ಗಳ ಅ೦ಚಿನ ಸುತ್ತಲೂ ಒ೦ದಿಷ್ಟು ಸೇವ೦ತಿಗೆ, ಮನಿ ಪ್ಲಾ೦ಟ್ಗಳನ್ನು ಕು೦ಡಗಳಲ್ಲಿ ಹಾಕಿ, ತ೦ತಿಗಳ ಸಹಾಯದಿ೦ದ ನೇತು ಹಾಕಿದ್ದರು. ಅದರ ನಡುವೆ ಒ೦ದು ಪುಟ್ಟ ಮಗು ಆಟದ ಸಾಮಾನುಗಳ್ಳನ್ನು ಎಳೆದುಕೊ೦ಡು ಆಟವಾಡುತ್ತಿತ್ತು. ಅಷ್ಟರಲ್ಲೇ, ನಮ್ಮ ಕ೦ಪ್ಯೂಟರ್ ಮೌಸಿನಷ್ಟಿದ್ದ ಒ೦ದು ಪಕ್ಷಿ ಸುಸ್ತಾಗಿ ಮಹಡಿಯ ಮೇಲೆ ಬ೦ದು ಬಿದ್ದಿತ್ತು. ಎಷ್ಟೇ ಆಗಲಿ, ಮಗು ಅಲ್ಲವೇ ಅದು, ಆ ಮಗು ಹಕ್ಕಿಯನ್ನು ಎತ್ತಿಕೊಳ್ಳಲು ಹೋಯಿತು. ಅಷ್ಟರಲ್ಲೇ, ಅದೂ ಏನೋ ಆದ ಹಾಗೆ,
"ಏಯ್ ದೂರ, ದೂರ. . . . ನನ್ನ ಮುಟ್ಬೇಡ. . . ಅಲ್ಲೇ ನಿ೦ತ್ಕೋ" ಎ೦ದು ಜೋರಾಗಿ ಕಿರುಚಲು ಶುರು ಮಾಡಿತು.
ಆ ಪಾಪು ತನ್ನ ಎರಡು ಹುಬ್ಬುಗಳ್ಳನ್ನು ಮೇಲೇರಿಸುತ್ತಾ, ಆಶ್ಚರ್ಯದಿಂದ
"ಓಹ್ ನೀನು ರಥ ಬೀದಿಯಿ೦ದ ಬ೦ದಿದ್ಯಾ ಅನ್ಸುತ್ತೆ. . ಅದಕ್ಕೆ ನೀನು ಯಾರನ್ನು ಮುಟ್ಟಿಸಿಕೊಳ್ಳೊದಿಲ್ಲ "
"ರಥ ಬೀದಿನೂ ಇಲ್ಲ, ಮಣ್ಣು ಇಲ್ಲ. . ನಾನು ಮೊದಲಿನಿ೦ದಲೂ ಹಾಗೆ, , ನನ್ನನ ಮನುಷ್ಯ ಮುಟ್ಟದ ಗುಬ್ಬಿ ಅ೦ತಾನೆ ಕರೆಯೋದು "
"ಹೌದಾ, , , ತು೦ಬಾ ಸುಸ್ತಾಗಿ ಇದ್ದಿಯಾ. . . ನೀರ್ ಏನಾದ್ರೂ ಬೇಕಾ"
ಉಸಿರು ಬಿಡುತ್ತಲ್ಲೇ "ಸದ್ಯಕ್ಕೇ ಏನೂ ಬೇಡ ತಡಿ. . . . ಸ್ವಲ್ಪ ಸುಧಾರಿಸಿಕೊಳ್ತೀನಿ, ಎಲ್ಲಾ ಸರಿಹೋಗುತ್ತೆ. . . ಅ೦ದ ಹಾಗೆ, ನಿನ್ ಹೆಸ್ರೇನು"
"ನನ್ನ ಹೆಸರಾ, ಐ ಆಮ್ ಕಾರ್ತಿಕ್, ಐ ಆಮ್ ಸ್ಟಡಿಯಿ೦ಗ್ ಇನ್ ೩ರಡ್ ಸ್ಟಾರ್ಡ೦ಡ್ ಬಿ ಸೆಕ್ಷನ್. . . . . "
"ತಡಿ, ತಡಿ, , ನೀನು ಇ೦ಗ್ಲೀಷ್ ಮೀಡಿಯಮ್ ಅನ್ಸುತ್ತೆ. . ನನಗೆ ಅಷ್ಟೊ೦ದು ಇ೦ಗ್ಲೀಷ್ ಬರಲ್ಲ. . . ನೀನು ಕನ್ನಡದಲ್ಲೇ ಮಾತನಾಡು, ಆಯ್ತಾ, , ಕನ್ನಡ ಬರುತ್ತೇ ತಾನೆ"
"ಓ. . . ನನಗೆ ಕನ್ನಡ, ಇ೦ಗ್ಲೀಷ್, ಹಿ೦ದಿ ಎಲ್ಲಾ ಬರುತ್ತೇ. . ನಮ್ ಮಾಮ್ ಹೇಳಿದ್ದಾರೆ. ಯಾರಿಗಾದರೂ ಇನ್ಟ್ರಾಡ್ಯೂಸ್ ಮಾಡ್ಕೋಬೇಕಾದ್ರೆ, ಹೀಗೆ ಮಾಡ್ಕೋಬೇಕ೦ತೆ. . . ನಿನ್ನ ಹೆಸರನ್ನ ಹೇಳಲೇ ಇಲ್ಲ"
"ಐ ಆಮ್ ಅಭಿಷೇಕ್, ಐ ಆಮ್ ಫ್ರಮ್ ಕಲ್ಲೂರು, ಇಲ್ಲಿ೦ದ ಹದಿನಾಲ್ಕು ಕಿ. ಮಿ ದೂರದ ಹಳ್ಳಿ. . . ಮೈ ಹೆ೦ಡತಿ ನೇಮ್ ಇಸ್ ಆರಭಿ. . "
" ಹಾಗಾದರೆ ನಿನಗೆ ಮದುವೆ ಆಗಿದೆ, , ಲವ್ ಮ್ಯಾರೇಜಾ??, , , ಎಲ್ಲಿದ್ದಾಳೆ ಈಗ"
"ಒಂದ್ ತರ ಲವ್ ಮ್ಯಾರೇಜೇ. . . ಒಂದ್ ಸತಿ ರಾತ್ರಿ ಸುಮ್ನೆ ಇರಕ್ಕೆ ಬರ್ದಲೇ ಕಡ್ಡಿ ಆಯಣಾ ಅಂತ ಗದ್ದೆ ಬಯಲಿಗೆ ಹೋಗಿದ್ದೆ. . . ಅವತ್ತು ಹುಣ್ಣಿಮೆ ಬೇರೆ, , ಗುರುತ್ವ ತುಂಬಾ ಇತ್ತು, , ನಾನಿನ್ನು ಚಿಕ್ಕೋನು ಇದ್ದೆ, , ರೆಕ್ಕೆ ಕೂಡ ನೆಟ್ಟಗೆ ಬಿಚ್ಚೋಕೆ ಬರ್ತೀರ್ಲಿಲ್ಲಾ. . . ಸತ್ತೇ ಹೋದೆ ಅನ್ನೋ ಅಷ್ಟ್ರಲ್ಲಿ, , ಹಾರು ಅಭಿ, ಹಾರು ಅಭಿ, ಅಂತ ಯಾರೋ ಕಿರ್ಚ್ಕೋತ್ತಿದ್ರು. . ನೋಡಿದ್ರೆ ನಮ್ಮತ್ತೆ ಮಗಳು ಆರಭಿ. . . ಶೀ ಇಸ್ ಮೈ ಹನಿ ಗೊತ್ತಾ. . , ಅವಳು ನನ್ನಷ್ಟು ಕ೦ದುಬಣ್ಣ ಇಲ್ಲ, , ಸಲ್ಪ ಕ೦ದು, , ಅವಳಿಗೆ ನನ್ನ ಹಾಗೆ ಕುತ್ತಿಗೆ ಕೆಳಗಡೆ ಬಿಳಿ ಬಣ್ಣ ಇರೋ ಹಾಗೆ ಅವಳಿಗೆ ಇಲ್ಲ. . ನನ್ಗಿಂತ ಚಿಕ್ಕ ಬಾಯಿ ಆದ್ರೂ ಮಾತ್ ಮಾತ್ರ ಬೇಲೂರ್ತ್ನಕ ಹೊಡಿತಾಳೆ. . . . ಗಾತ್ರದಲ್ಲೂ ಅಷ್ಟೇ, , ನಾನೇ ದಪ್ಪ. . ಬಟ್ ಚೆನ್ನಾಗಿದ್ದಾಳೆ. . "
"ನೀನು ಕಲ್ಲೂರಿನಿಂದ ಏನುಕ್ಕೇ ಬಂದೆ, , , ಏನಾದ್ರೂ ಕೆಲ್ಸ ಇತ್ತಾ ಅಥವಾ ರಿಲೇಟಿವ್ಸ್ ಮನೆಗೆ ಬಂದಿದ್ಯಾ"
" ಕಲ್ಲೂರಲ್ಲಿ ಕುಡಿಯೋಕೆ ನೀರೆ ಇಲ್ಲ, , ಆರಭಿ ಬೇರೆ ಪ್ರೇಗ್ನೆಂಟ್. . ಮನಸ್ವಿನಿ ನದಿ ನೀರು ಇನ್ನೂ ನಮ್ಮೂರು ಕೆರೆಗೆ ಬಂದಿಲ್ಲಾ, ಆ ಪುಣ್ಯಕೋಟಿ ನೀರು ಆಗ್ ಬರುತ್ತೆ, ಈಗ್ ಬರುತ್ತೆ ಅಂತಾ ಕನಸ್ ಕಾಣ್ಕಂಡು ಕುತ್ತಿದ್ದಾಳೆ. . . ನಾನು ಆ ಕೆರೆ, ಈ ಕೆರೆ ಅ೦ತಾ ಸುತ್ತಾಡ್ತಾ ಇದ್ದೀನಿ. . ಎಲ್ಲೂ ನೀರಿಲ್ಲ, ನಮ್ಮೂರು ಜನ್ರೂನು ಪ್ರಾಣ ಬಿಡ್ತಿದ್ದಾರೆ"
"ಅಯ್ಯೋ ಪಾಪ, , ತಿಂಡಿ ತಿನ್ನ್ಕಂಡು ಬಂದಿದ್ಯಾ. . . ಇಲ್ಲಾ ಅಂದ್ರೆ ಹೇಳು. . ಚಪಾತಿ, ಜಾಮ್ ಇಲ್ಲೇ ಇದೇ, , ನಮ್ಮಮ್ಮ ಡಬ್ಬಿಲಿ ಹಾಕಿಟ್ಟಿದ್ದಾರೆ, ಬೇಕಾದ್ರೇ ಕೊಡ್ತಿನಿ"
"ಶಿವಾ, , ನಾನೇನು ಕಾಗಕ್ಕನಾ. . . ನಾನು ಏನಿದ್ರೂ ಕಾಳುಗಳು, ಅಕ್ಕಿ, ಬೇಳೆ ಇಂತವನ್ನೇ ತಿನ್ನದು, , ಒಂದೊಂದ್ ಸತಿ ಕೀಟ, ಸಣ್ಣ ಸಣ್ಣ ಹುಳುಗಳನ್ನ ತಿನ್ನ್ತೀನಿ. . "
" ಕುಡಿಯೋದಕ್ಕೆ ನೀರು ಇಲ್ಲ ಅಂತೀಯಾ. . ಕಲ್ಲೂರು ನಮ್ಮಜ್ಜಿ ಊರೇ, , ನಾನು ನಮ್ಮಜ್ಜಿಗೆ ಹೇಳಿ ನಿನಗೆ ದಿನಾ ಒಂದು ಲೋಟದಲ್ಲಿ ತುಳಸಿ ಕಟ್ಟೆ ಹತ್ತಿರ ನೀರ್ನ ಇಡುಸ್ತಿನಿ. . . ಆಯ್ತಾ"
"ಬೇಡ, ಬೇಡ. . ನೀರೋಂದು ಸಿಕ್ ಬಿಟ್ರೆ ಸಾಕಾಗೊಲ್ಲ. . ಊಟಕ್ಕೆ ಏನ್ ಮಾಡೋದು. . . ಇಷ್ಟು ದಿನ ಸಾವಿತ್ರಜ್ಜಿ ಬೆಳಗಿನ್ ಜಾವನೇ ಒಂದ್ ಹಿಡಿ ಅಕ್ಕಿನಾ ತಂದು ಜಗಲಿ ಮೇಲೆ ಹಾಕ್ತಿದ್ರು. . ಏನೂ ಯೋಚನೆ ಇಲ್ದಂಗೆ ಅವರ ಮನೆ ಹೆಂಚಿನ ಕೆಳಗಡೆ ಗೂಡ್ ಕಡ್ಕಂಡು ಆರಾಮಾಗಿ ನಾನು, ಆರಭಿ ಇದ್ವಿ. . . ಪಾಪ ತೀರ್ಕಂಡು ಬಿಟ್ರು. . ಇನ್ನೂ ಅಪರೂಪಕ್ಕೆ ಬೆಳೆ ಬೆಳ್ದಾಗ ಉಳ ಪಳ ಹಿಡಿಯಣ ಅಂದ್ರೆ. . . ಕೀಟನಾಶಕ ಹೊಡೆದು ಕುತ್ತಿದ್ದಾರೆ. . . ಉಳನು ಇಲ್ಲ, , ಕಾಳು ಇಲ್ಲ, , , "
"ಮತ್ತೆ ಏನಾ ಮಾಡ್ತಾಯಾ ಈಗ, , , ನಮ್ಮಪ್ಪನಿಗೆ ಹೇಳಿ ಒಂದು ಪಂಜರ ತರಿಸಲಾ. . ಅದರಲ್ಲೇ ನೀವಿಬ್ಬರೂ ಇರ್ತೀರಾ. . . "
"ಪಂಜರದಲ್ಲಿ ಆ ಯಮ್ಮ ಪಟ್ಪಾಡನ್ನ ನೋಡಿರೋರಿಗೆ ಗೊತ್ತು. . ಅದ್ರಲ್ಲಿ ಇರೋದು ಒಂದೇ, ಸಾಯದು ಒಂದೇ. . . . ನೀನು ನನಗೆ ಸಹಾಯ ಮಾಡ್ಲೇ ಬೇಕು ಅಂದ್ರೇ, ನಾನ್ ಹೇಳ್ದಂಗೆ ಮಾಡ್ತೀಯಾ. . . ಮನಸ್ವಿನಿ ಬಂದ್ ತಕ್ಷಣ ನಾವು ಕಲ್ಲೂರಿಗೆ ವಾಪಸ್ ಹೋಗ್ಬಿಡ್ತಿವಿ. . ನೀರು ಬಂದ್ ತಕ್ಷಣ ಭತ್ತ ಬೆಳಿತಾರೆ. . ಹೊಟ್ಟೋ ಗಿಟ್ಟೋ ಸಿಗುತ್ತೆ. . ಎಷ್ಟೇ ಆದ್ರೂ ಅದ್ ನಮ್ಮೂರಲ್ವಾ, , "
"ನಿಜವಾಗಲೂ ಮಾಡ್ತಿನಿ ಹೇಳು. . . . . ಬೇಕಾದ್ರೇ ಪ್ರಾಮೀಸ್ ಮಾಡ್ತೀನಿ"
"ಇಲ್ಲಿ ನೇತಾಡ್ತಿದ್ದಿಯಲ್ಲಾ ಹೂವಿನ ಕುಂಡಗಳು, ಅದೇ ತರದ್ ಒಂದ್ ಕುಂಡಕ್ಕೆ ನಿಮ್ಮ ಅಮ್ಮಂಗೆ ಹೇಳಿ, ಮಧ್ಯದಲ್ಲಿ ರಂಧ್ರ ಮಾಡಿಸಿ, ಮೇಲ್ಗಡೆ ಮುಚ್ಚಿ, ಇದೇ ತರ ನೇತಾಕ್ತೀಯಾ, , ನಾನು, ಆರಭಿ ಇಲ್ಲೇ ಗೂಡು ಕಟ್ಕಂಡು ಇರ್ತೀವಿ,. . ನಾವು ಆಗಲೇ ಅವಸಾನದ ಅಂಚಿನಲ್ಲಿ ಇದ್ದೇವೆ, ’ಡಬ್ಲೂಡಬ್ಲೂಎಫ್’ ಆಗಲೇ ನಮ್ಮನಾ ರೆಡ್ ಲಿಸ್ಟ್ಗೆ ಹಾಕಿದೆ, ನಾವು ಉಳಿಬೇಕಲ್ಲಾ, ಫ್ಲೀಸ್ ಮಾಡೋ"
"ಆದರೆ, ಒಂದು ಕಂಡಿಷನ್, , ಆರಭಿ ಆಂಟಿಗೆ ಪಾಪು ಹುಟ್ದಾಗ, ನನ್ ಹೆಸರೆ ಇಡಬೇಕು. . ಹಾಗಾದ್ರೆ ಮಾತ್ರ, , , ಆಯ್ತಾ. . "
"ಗಂಡು ಪಾಪು ಹುಟ್ಟಿದ್ರೆ, , ಕಾರ್ತಿಕ ಅಂತಾನೆ ಹೆಸ್ರೂ ಇಡ್ತಿನಿ, , ,. . ಇಲ್ಲಿ ಬೆಕ್ಕುಗಳು ಇಲ್ಲಾ ತಾನೆ. . . ಮೊಟ್ಟೆನೆಲ್ಲ ತಿಂದ್ ಹಾಕಿಬಿಡ್ತಾವೆ ಮತ್ತೆ. . . "
"ನೋ ವರಿ. . . ನೀನು ಹೋಗಿ ನಿನ್ನ ಮಿಸಸ್ನ ನಾಳಿದ್ದು ಕರ್ಕಂಡು ಬಾ. . . ನಾಳೆ ಭಾನುವಾರ, , ಅಮ್ಮ ಮನೇಲೇ ಇರ್ತಾರೆ. . . ಎಲ್ಲಾ ರೆಡಿ ಮಾಡ್ಸಿರ್ತೀನಿ. . "
ಅಭಿಷೇಕ್, ಪುರ್ ಎಂದು ರಕ್ಕೆ ಬಡಿದು ಕೊಂಡು ಕಲ್ಲೂರಿನ ಕಡೆಗೆ ಹಾರಿ ಹೋಯಿತು. . .
-ಅಭಿಲಾಷ್ ಟಿ. ಬಿ
*****
Oh god, how many errors one can make in the language.
Soory Hardalli avare..tapagidde kshame irali…tiddikollutenne