ಆತ್ಮ ಮತ್ತು ಮನಸ್ಸುಗಳಿಗೆ ಆನಂದ ತರುವದೆ, ಆಧ್ಯಾತ್ಮ: ಕೆ.ಎಂ. ವಿಶ್ವನಾಥ

ಈ ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲವೂ ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೇ ಜೀವಾತ್ಮ. ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ . ಸಂಸಾರದ ಈ ಸಾಗರದಲ್ಲಿ ತಾಪತ್ರಯಗಳು, ವೇದನೆ  ನೋವು, ಜಿಗುಪ್ಸೆ, ಹತಾಶೆ, ಸಂತೋಷ, ಇವೆಲ್ಲ ತಪ್ಪಿದಲ್ಲ, ಎಲ್ಲವೂ ನಮ್ಮನ್ನು ತಿಂದು ಹಾಕುವುದು, ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹಚ್ಚುವುದು. ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂಡದೆ ಹೋಗುವುದು, ಅತ್ತಿಂದ ಇತ್ತ ಮಂಗದಂತೆ ಜಿಗಿದಾಡುವದು, ನಾವು ವಿನಾಕಾರಣ ಕೋಪಗೊಳ್ಳುವುದು, ಮತ್ತೊಬ್ಬರ ಮೇಲೆ ಹರಿಹಾಯಿಯುವದು, ಸುಮ್ಮನೆ ಜಗಳ ಮಾಡುವದು ಹೀಗೆ ಅನೇಕ ರೀತಿಯ ವಿಚಿತ್ರ ರೋಗಗಳಿಗೆ ತುತ್ತಾಗುತ್ತೇವೆ. ಈಗ ಸದ್ಯದಲ್ಲಂತೂ ವಿಚಿತ್ರ ರೋಗಗಳು ಬರುತ್ತಿದ್ದು  ಅದರ ನೆಲೆಯು ಯಾರಿಗೂ ತಿಳಿಯದಾಗಿದೆ. ಒಂದೊಂದು ಸಲ ವೈದ್ಯರೂ ಕೂಡಾ ಕೈಚೆಲ್ಲಿ ಕುಳಿತುಕೊಳ್ಳುವ ಮಟ್ಟಕ್ಕೆ ಈ ಕಲಿಯುಗದ ಪರಿ ಬಂದು ನಿಂತಿದೆ. ಎಲ್ಲಿ ನೋಡಿದರೂ ಮೋಸ, ವಂಚನೆ, ನಿಂದನೆ, ಅಸಹ್ಯ ತಾಂಡವ ಆಡುತ್ತಿದೆ. ಯಾರ ಬಾಯಿಯಲ್ಲಿಯೂ ಒಂದು ಒಳ್ಳೆಯ ಮಾತು ಕೇಳಲು ಆಗುತ್ತಿಲ್ಲ. ಎಲ್ಲಿ ನೋಡಿದರೂ ಅಜ್ಞಾನದ ಕತ್ತಲು ಆವರಿಸಿದೆ. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ವಿರೋಧಿಗಳಾಗಿ ಕಾಣುತ್ತಿದ್ದಾರೆ. ಇವೆಲ್ಲಾ ಹೋಗಲಾಡಿಸಲು ನಮಗೆ ಈ ಆಧ್ಯಾತ್ಮದ ಅವಶ್ಯಕತೆಯಿದೆ.

ಈ ಆಧ್ಯಾತ್ಮದಲ್ಲಿ ಕಪಟ ಮೋಸವಿಲ್ಲದ ವಿಶ್ರಾಂತಿಯ ನೆಮ್ಮದಿಯ ತಾಣ ಇದಾಗಿದೆ. ಇದರಲ್ಲಿ ಶಾಂತಿಯಿದೆ, ಮನಸ್ಸು ಆತ್ಮಗಳ ನಿಗ್ರಹವಿದೆ, ಒಮ್ಮೆ ಈ ಭಕ್ತಿಯ ಮಾರ್ಗ ಹಿಡಿದು ಭಕ್ತಕುಂಬಾರ ತನ್ನ ಮಗನನ್ನು ತುಳಿದ ಎನ್ನುವದನ್ನು ಮರೆಯುವಂತಿಲ್ಲ. ಈ ಸತ್ಯದ ಮಾರ್ಗದಿಂದಲೇ ಹರಿಶ್ಚಂದ್ರ ಸತ್ಯದ ಹರಿಕಾರನಾದ. ಅಂದು ಆಶ್ರಮಗಳಲ್ಲಿ ಸಿಗುತ್ತಿದ್ದ ಆಧ್ಯಾತ್ಮಿಕ ವಚನ, ವಿಚಾರ ಎಲ್ಲವು ಜೀವನದ ಅತ್ಯುತ್ತಮ ಅನುಭವ ನೀಡುತ್ತವೆ. ಯಾವುದು ನಶ್ವರ, ಯಾವುದು ಶಾಶ್ವತ ಯಾವುದು ಉತ್ತಮ, ಯಾವುದು ಮದ್ಯಮ, ಯಾವುದು ಅಧಮ ಎಂಬ ಕಲ್ಪನೆ ನೀಡುತ್ತದೆ. ಈ ಸುಂದರ ಸಮಾಜವನ್ನು ಅರಿಯಲು ಈ ಆಧ್ಯಾತ್ಮಿಕ ಚಿಂತನ ಮಂಥನ ಅವಶ್ಯಕತೆಯಿದೆ ಒಮ್ಮೆ ಈ ಮನಸ್ಸಿನ ಗೊಡ್ಡು ಚಿಂತನೆಗಳನ್ನು ಮರೆತು ಈ ಆಧ್ಯಾತ್ಮದ ಅರಿವು ಹಿಡಿದು ಅದರತ್ತ ಸಾಗಿ ನೋಡಿದರೆ ಅದರಲ್ಲಿಯ ನೆಮ್ಮದಿ ಮತ್ತಾವುದರಲ್ಲಿಯೂ ಇಲ್ಲ. ಸಕಲ ರೋಗಗಳಿಗೆ ಈ ಆಧ್ಯಾತ್ಮಿಕ ಚಿಂತನೆ ಔಷಧವಾಗಿದೆ. ಅನುಸರಿಸುವದು ಕಷ್ಟವೇ, ಸತ್ಯ ಆದರೆ ಅದರ ಅನುಭವ ಮಾತ್ರ ಅನನ್ಯವಾಗಿದೆ. ಇದು ಕಂಗೆಟ್ಟು ಕಂಗಾಲಾಗಿ ನಿಂತವರ ಬದುಕು ಹಸನಾಗಿಸುತ್ತದೆ.

ಈ ಆಧ್ಯಾತ್ಮ ಜೀವನದಲ್ಲಿ ಅಭಿರುಚಿ ಕಳಿದುಕೊಂಡವರ ಬೇಸರ ಮಾಡಿಕೊಂಡವರ ಬದುಕು ಬಂಗಾರವಾಗಿಸುತ್ತದೆ. ಇದರಲ್ಲಿಯ ಮಾತು ರೀತಿ ನೀತಿಗಳು ಅನುಸರಿಸಲು ಕಠಿಣವೇ ಸರಿ ಆದರೆ ಅದರ ಫಲಿತಾಂಶ ಮಾತ್ರ ತುಂಬಾ ಪ್ರಯೋಜನಾಕಾರಿಯಾಗಿದೆ. ಚಿಕ್ಕ ಉದಾಹರಣೆ ಕೊಡುವುದಾದರೆ ಇಂದು ಆಧ್ಯಾತ್ಮ ಲೋಕದಲ್ಲಿ ವಿಹರಿಸುತ್ತಿರುವ ಎಷ್ಟೊ  ಚೇತನಗಳು ಇಂದು ನಮ್ಮ ಮುಂದೆ ತಮ್ಮ ನೂರಿಪ್ಪತ್ತರ ವಯಸ್ಸಿನಲ್ಲಿಯೂ ಯುವ ಚೇತನರಾಗಿ ಪರಿಣಮಿಸುತ್ತಿದ್ದಾರೆ. ಅಂತಹವರ ಬದುಕು ಇಂದಿನ ಯುವ ಪೀಳಿಗೆಗೆ ತುಂಬಾ ಮಾದರಿಯಾಗಿದೆ. ಅವರ ಜೀವನ ಶೈಲಿಯು ಎಲ್ಲರೂ ಅನುಸರಿಸುವಂತಿದೆ. ಅರಿವು ತರೆಸಿ ಮರೆವನ್ನು ಹೋಗಲಾಡಿಸುವ ಕೆಲಸ ಈ ಆಧ್ಯಾತ್ಮ ಮಾಡುತ್ತದೆ. ಎಲ್ಲರೂ ನನ್ನವರು ನಾನು ಎಲ್ಲರಿಗಾಗಿ ಎಂಬ ಭಾವನೆ, ಈ ದೇಶ ನನಗಾಗಿ ಏನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೇನು ಎಂಬ ಚಿಂತನೆ ಮೂಡಿಸುವದು ಈ ಆಧ್ಯಾತ್ಮ. ಇದರ ರುಚಿಯು ಊಟವ ಮಾಡಿದವನೆ ಬಲ್ಲನು ತುಂಬಾ ರುಚಿಯಾದ ಅಡಗಿ ಈ ಆಧ್ಯಾತ್ಮ ಈ ಅವಸರ ಹಾಗೂ ಆಡಂಬರದ ಬದುಕಿಗೆ ಅವಶ್ಯಕ ಈ ಆಧ್ಯಾತ್ಮ . ಮನುಷ್ಯ ಜೀವಿಯು ಮನಸ್ಸು ಹಗುರವಾಗಿ ಉತ್ತಮ ಚಾರಿತ್ರ್ಯ ಹೊಂದಲು ಈ ಆಧ್ಯಾತ್ಮದ ಹೊನಲು ಬೇಕಾಗಿದೆ. ಜೀವನದ ಒತ್ತಡ ನೀಗಿಸಿ ಬದುಕು ಬಂಗಾರವಾಗಿಸಲು ಈ ಆಧ್ಯಾತ್ಮದ ಅವಶ್ಯಕತೆಯಿದೆ. ಪರಸ್ಪರರಲ್ಲಿ ನಂಬಿಕೆ ಪ್ರೀತಿ ವಿಶ್ವಾಸ ಮೂಡಿ ನಾನು ನನ್ನದು ಎನ್ನುವ ಭಾವ ಬಿಡಿಸಿ, ನಾವು ನಮ್ಮವರು ಎನ್ನುವ ಎಲ್ಲರು ಒಂದೇ ಎನ್ನುವ ಏಕಚಿತ್ತ  ಕಲಿಸುವ ಅನರ್ಘ್ಯ ರತ್ನವೇ ಈ ಆಧ್ಯಾತ್ಮ .

ಇವನಾರವ ಇವನಾರವ ಎಂದೆನಿಸದಿರಯ್ಯ ! ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ! ಕೂಡಲ ಸಂಗಮದೇವ ನಿಮ್ಮ ಮನೆಯ ಮಗನೆಂದು ಎನಿಸಯ್ಯ ! ಅಣ್ಣ ಬಸವಣ್ಣ ಆಗಿನ ಹನ್ನೆರಡನೆಡಯ ಶತಮಾನದಲ್ಲಿಯೇ ಆಧ್ಯಾತ್ಮ ಲೋಕದಲ್ಲಿ ಯಾರು ಬೇರೆಯಲ್ಲಾ, ಎಲ್ಲರೂ ಒಂದೇ ಎಂಬ ಮಂತ್ರ ಸಾರಿದ್. ಯಾರನ್ನೂ ದೂರ ತಳ್ಳದೇ, ಜಾತಿ ಮತ ಪಂಥ ನೋಡದೆ ಎಲ್ಲರನ್ನು ಪ್ರೀತಿಯಿಂದ ಕಂಡದ್ದು ಈ ಆದ್ಯಾತ್ಮ ಲೋಕಕ್ಕೆ ಸಲ್ಲುತ್ತದೆ. ಕೂಡಲ ಸಂಗಮ ದೇವರಲ್ಲಿ ಎಲ್ಲರೂ ಒಂದೇ ಎಂಬ ಕಲ್ಪನೆ ಈ ಲೋಕ ನೀಡುತ್ತದೆ. ಆ ಶತಮಾನದಲ್ಲಿ ಮಹಾತ್ಮರು ಆಧ್ಯಾತ್ಮ ಲೋಕದಲ್ಲಿ ಹೇಳಿದ ಎಷ್ಟೊ ಮಾತುಗಳು ಇಂದಿಗೂ ಸತ್ಯವಾಗಿ ಕಾಣುತ್ತವೆ. ಬನ್ನಿ ಹಾಗಾದರೆ ನಾವೆಲ್ಲ ಈ ಆಧ್ಯಾತ್ಮ ಲೋಕದ ಅಧ್ಯಾಯಗಳನ್ನು ಅರ್ಥಮಾಡಿಕೊಂಡು ಅವುಗಳ ನೀತಿ ಅರಿತುಕೊಂಡು ನಿತ್ಯ ಜೀವನದಲ್ಲಿ ಅನ್ವಯಿಸಿಕೊಳ್ಳೊಣ…

 ಕೆ.ಎಂ. ವಿಶ್ವನಾಥ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
Kashinath
Kashinath
11 years ago

ವಿಶ್ವ ರವರೆ 
ನಿಮ್ಮ ಲೇಖನ ಉತ್ತಮ ಆದರೆ ಈ ಕೆಲಸ ನಾವು ಪ್ರಾರ್ಥಮಿಕ ಹಂತದಿಂದ ಮಾಡಬೇಕು 

Rangesh
Rangesh
8 years ago
Reply to  Kashinath

ಇದನ್ನುಪ್ರಯತ್ನಿಸಲು ವಯಸಿನ ಮೀತಿ ಇಲ್ಲ, ಪ್ರಯತ್ನಿಸಿದ್ರೆ ಶಾಂತಿಯಿಂದ ಇರಬಹುದು.

Sanjeev
Sanjeev
11 years ago

ನಿಮ್ಮ ಲೇಖನದ ಅಶೆಯ ಉತ್ತಮವಾಗಿದೆ ಸದ್ಯದ ಸ್ಥಿತಿಯಲ್ಲಿ ನಾವು ನಮ್ಮ ಭವಿಷ್ಯದ ದೃಷ್ಠಿಯಿಂದ ಇದು ತಿಳಿಯಲೇಬೇಕು 

Vishnu
Vishnu
11 years ago

Dear Vishwa
Ur writtings are very nice and very usefull need do follws all of us 

ಕೆ.ಎಂ.ವಿಶ್ವನಾಥ

ಆತ್ಮಿಯರೆ 
ನಿಮ್ಮ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ  ನಿಮ್ಮ ಸ್ಪೂರ್ತಿಯ  ಮಾತುಗಳಿಗೆ ಅನಂತ ಧನ್ಯವಾದಗಳು 

sharada moleyar
sharada moleyar
11 years ago

ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ವಿರೋಧಿಗಳಾಗಿ ಕಾಣುತ್ತಿದ್ದಾರೆ. ಇವೆಲ್ಲಾ ಹೋಗಲಾಡಿಸಲು ನಮಗೆ ಈ ಆಧ್ಯಾತ್ಮದ ಅವಶ್ಯಕತೆಯಿದೆ.
true……. adhyatma for mind and yoga for body health are necessary  to all human beings i think.

ಕೆ.ಎಂ.ವಿಶ್ವನಾಥ

ಅನಂತ ಧನ್ಯವಾದಗಳು ಶಾರದ ರವರೆ 

Harish shetty
Harish shetty
11 years ago

Indina badukige adhyathma balu aavashya. nimmanthha udayonmukha lekhakaru  mundina peeligege daarideepavagabekaagide.

ಕೆ.ಎಂ.ವಿಶ್ವನಾಥ

ನಿಮ್ಮ ಪ್ರಚೋದಕ ಮಾತುಗಳಿಗೆ ಧನ್ಯವಾದಗಳು

ವಿಶ್ವನಾಥ ಕಂಬಾಗಿ
ವಿಶ್ವನಾಥ ಕಂಬಾಗಿ
10 years ago

ಚೆನ್ನಾಗಿದೆ

10
0
Would love your thoughts, please comment.x
()
x