ಅಮ್ಮ
ನಾನು ಕೈಚಾಚಿ ಹನಿಗಳ
ಸ್ಪರ್ಶಿಸಲು
ಇಬ್ಬನಿಯ ಹೊತ್ತ ಚಳಿಗಾಳಿ
ಮೈಯ ಅಪ್ಪಲು
ನೆಲ ತುಂಬಿ ನಿಂತ ನೀರು
ಪಾದಗಳ ಮುತ್ತಿಡಲು
ನೀನು ನೆನಪಾಗುತ್ತೀಯ ಅಮ್ಮ
ಒದ್ದೆಯಾದ ಮೈ ಒರೆಸಿದಂತೆ
ಕೆಸರಾದ ಕಾಲ ನೇವರಿಸಿ
ತೊಳೆದಂತೆ ಅನ್ನಿಸಿಬಿಡುವುದು
ಪ್ರತೀಬಾರಿ ಮಳೆಬರಲು
-ಅಕ್ಷಯ ಕಾಂತಬೈಲು
ನಾ ನಿನ್ನ ಮರೆತು,
ತೊರೆಯ ಹೊರಟರೆ ತಾಯಿ
ತನ್ನ ಮಗುವನ್ನು ತೊರೆದಂತೆ
ಮರ ತನ್ನ ಬೇರನ್ನು ತಾನೇ
ಕಡಿದುಕೊಂಡಂತೆ, ಜೀವ
ದೇಹವನ್ನು ಬಿಟ್ಟು ಹೋದಂತೆ
ಮೌನದಲ್ಲೇ ನೀವೆದನೆ
ಮಾಡುವೆ, ಹಿಂಪಡಿ
ನಿನ್ನ ಚತುರ ಮಾತುಗಳನು
ತಾಯಾಗಿ ಸಲಹುವಾಸೆ
ಮಡಿಲ ಒಡ್ಡುವೆ ಮಗುವಾಗಿ
ಮಲಗಿಬಿಡು ದಿಗಿಲುಬೇಡ
ಪಾಪದತ್ಮಗಳಿಗೆ ಕಟ್ಟೋ
ಪುಣ್ಯದೆಸರಿನ ಗೋರಿಯಲ್ಲ
ಅನುಪಮ ಒಲವ ತಿಜೋರಿ
-ನಗೆಮಲ್ಲಿಗೆ (ಅನುಪಮ ಎಸ್. ಗೌಡ)
ಮರಣಶಾಸನ
ನಾನು ಸತ್ತ ಸುದ್ದಿ ಕೇಳಿ
ಕಣ್ಣೀರು ಹಾಕಬೇಡಿ
ಕಷ್ಟಪಟ್ಟು ಹೋದ ಜೀವ
ಮತ್ತೆ ತಿರುಗಿ ಬಂದೀತು,,..
ನನ್ನ ಸಾವ ಸುದ್ದಿ ಸಾರಲು
ಇಗರ್ಜಿಯ ಘಂಟೆ ಹೊಡೆಯಬೇಡಿ
ಹಾರಾಡುವ ಹಕ್ಕಿಗಳಿಗೆ ಇರುಸುಮುರುಸಾದೀತು
ತೊಟ್ಟಿಲ ಕಂದಮ್ಮಗಳಿಗೆ ಎಚ್ಚರವಾದೀತು..
ನನ್ನ ಸಮಾಧಿಯ ಮೇಲೆ
ಹೂವನಿಡಬೇಡಿ,
ಉರಿವ ನೆತ್ತರ ಬೇಗೆಗೆ
ಚೆಲುವು ಕರಕಲಾದೀತು,..
ನನ್ನ ಸಮಾಧಿಯ ಮೇಲೆ
ಗಾರೆ-ಇಟ್ಟಿಗೆಗಳ ಮೆತ್ತಬೇಡಿ
ಸ್ವತ಼ಂತ್ರಗೊ಼ಡ ನನ್ನ ಕಣಕಣಗಳಿಗೂ
ಮಣ್ಣಾಗಲು ಅಡ್ಡಿಯಾದೀತು,,
ನನ್ನ ನಿರ್ಜೀವ ದೇಹಕ್ಕೊಂದು
ಹೂಸ ಬಟ್ಟೆ ತೊಡಿಸಬೇಡಿ
ಇಗರ್ಜಿ ಬಾಗಿಲು ಕಾಯುವ ಭಿಕ್ಷುಕನ
ಮಾನ ಕಾಪಾಡಲಾದೀತು…
ನನ್ನ ಸಾವು
ಬರೇ ಸಾವಾಗಿರಲಿ,
ನೋವಾಗಿಸಬೇಡಿ..,
ಕಹಿನೆನಪಾಗಿಸಬೇಡಿ,.,
-ಜಾನ್ ಸು಼ಟಿಕೊಪ್ಪ.
ಈ ಮೇಲಿನ ಮೂರು ಕವಿತೆಗಳನ್ನು ಆಡಿಯೋದಲ್ಲಿ ಆಯಾ ಕವಿಗಳ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿಗಳನ್ನು ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಆಯಾ ಲಿಂಕ್ ಗಳ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ…
John Suntikoppa-Marana Shasana
Chennagide.
Ella kavitegalu chennagive.adaralliyoo john avara kavana super….
ನಿಮ್ಮ ಈ ಕನ್ನಡ ಜಾಲತಾಣ ತುಂಬ ಸುಂದರ ಹಾಗೂ ಉಪಯುಕ್ತ ಮಾಹಿತಿಯನ್ನು ನಿಡುವದಲ್ಲದೇ ಸಂತೋಷವಾಯಿತು.
..
ಹಾಗೆಯೇ ನನ್ನ ಕನ್ನಡ ತಾಣವಾದ (( http://spn3187.blogspot.in )(99% ಕನ್ನಡ, 1% ಇತರೆ )) ಗೆ ಬೇಟಿ ಕೊಡಿ…..
..
ಸದ್ಯದ ವಿಕ್ಷಣೆ 28148+