ಯಾರಿಗೆಲ್ಲ ಬೇಡ ಹೇಳಿ ಎರಡು ಹೊತ್ತಿನ ಊಟ, ಮೈ ಮುಚ್ಚಲು ಬಟ್ಟೆ, ನೆತ್ತಿಗೆ ಮಳೆ, ಗಾಳಿ, ಚಳಿಯಿಂದ ರಕ್ಷಣೆ, ಹರಿದ ಕಂಬಳಿ, ಕೌದಿ, ಚಾದರ, ಹರಕು ಚಾಪಿ, ಗೋಣಿಚೀಲ ಅಪರೂಪಕ್ಕೊಮ್ಮೆ ಮೈ ಸೋಪು, ತಲೆಗೆ ಎಣ್ಣೆ ಹಚ್ಚಿಕೊಂ ಡು ಬದುಕ ಕಳೆದ ಅದೆಷ್ಟೋ ಪ್ರತಿಮೆಗಳು ಕಣ್ಣಮುಂದೆ ಹಾದು ಹೋಗಿರುವುದನ್ನು ಅಥವಾ ಅನುಭವಿಸಿರುವುದ ನ್ನು ಎಂದಾದರೂ ಮರೆಯಲಾದಿತೇ?? ಅವನ್ನೆಲ್ಲ ಒದಗಿಸಲು ಕತ್ತಲೆಯಲಿ ಕರಗಿದವರಾರು?? ಕರಿಕಲ್ಲ ಪಾಠಿ ಬಳಪ ಬರೆದಿದ್ದಕ್ಕಿಂತ ತಿಂದಿದ್ದೆ ಜಾಸ್ತಿ. ಗಂಟಲಲ್ಲಿ ಸಿಕ್ಕ ಬಳಪದ ಚೂರ ಹೊರತೆಗೆದು ಬೆನ್ನ ಚಪ್ಪರಿಸಿದವರಾರು?? ಹಿಟ್ಟಿನುಂಡೆ ತಿಂದು ರಸ್ತೆ ತುಂಬ ಹುಡಿಹಾರಿಸುತ್ತ ಬರುವಾಗ, ಅಪ್ಪ ಗದರಿಸುತ್ತ ಮುಖವರಿಸಿ ಅಂಗಿ ಜಾಡಿಸಿ ಕಳಿಸಿದವರಾರು?? ಅನುಭವಿಸಿದ ಮಜವೇ ಬೇರೆ ಇಂಥ ಸುಖವೆಲ್ಲ ಬದುಕಿನ ಅಡಿಪಾಯಗಳಾಗಿ ಬದಲಾಗಿದ್ದನ್ನು ಬದಲಾಗಲು ಕಾರಣಿಕರ್ತರಾದವರನ್ನು ಮರೆತವನಿರಲು ಸಾಧ್ಯವಿಲ್ಲ. . ನಿಜ ತನ್ನೆಲ್ಲ ಸುಖ ದುಃಖಗಳನ್ನು ಮರೆಮಾಚಿ ಮಕ್ಕಳಿಗಾಗಿ ಜೀವನ ಮುಡಿಪಾಗಿಟ್ಟವನ ಗುಂಡಿಗೆಗೆ ಸಮ ನಾದ ಶಕ್ತಿ ಇನ್ನೊಂದಿಲ್ಲ. . . . . ಅಪ್ಪಾ. . . ಐ ಲವ್ಯೂ . .
ನಾವೆಷ್ಟೋ ಸಲ ನಮ್ಮೆಲ್ಲ ನೋವುಗಳನ್ನು ಅಮ್ಮನ ಮಡಿಲಲಿ ಮಲಗಿ, ಆಕೆ ನೀಡಿವ ಪ್ರೀತಿ, ಕೈತುತ್ತುಗಳು, ಸೆರಗಿನಲಿ ಅವಿತು ಅಪ್ಪನ ನೋಡುವ ರೀತಿ ನಮಗೆಲ್ಲ ನೆನಪಾಗುತ್ತದೆ. ಅಷ್ಟಕ್ಕೂ ಅಪ್ಪಯೆಂದರೆ ಭಯ ಗಂಭೀರ, ಸ್ಟ್ರಿಕ್ ಮ್ಯಾನ್, ಸಿಡುಕು ಸ್ವಭಾವದವ, ಪ್ರೀತಿನೇ ಮಾಡಲು ಬರದ ಒರಟ, ಯಾವಾಗಲೂ ಗಂಟು ಮೊರೆಹಾಕಿರುವ ವಿಲನ್. . . . . . ಹೀಗೆ ಹತ್ತು ಹಲವಾರು ಪಾತ್ರಗಳಲ್ಲಿ ಬಿಂಬಿಸಿ ಆತನ ಅಸ್ಥಿತ್ವವನ್ನೆ ತಿರುಚಿ ನೋಡುವ ದೃಷ್ಟಿಯನ್ನು ಬದಲಾಯಿಸಿದ್ದಂತೂ ಸತ್ಯ. .
ಆದರೆ. . ಆತನಲ್ಲೂ ಪ್ರೀತಿ ಬತ್ತದ ಸೆಲೆಯಿದೆ, ಆತನ ಕಂಗ ಳಲಿ ಇಡೀ ವಿಶ್ವದ ಸಮತೆಯಡಗಿದೆ ಎಂದು ಅರ್ಥೈಸಿ ಕೊಳ್ಳುವ ಮನಸ್ಸುನ್ನು ಒಮ್ಮೆ ತಿರುಗಿ ನೋಡಬೇಕಿದೆ. ಅಮ್ಮ ಜನ್ಮ ನೀಡಿದರೆ ಅಪ್ಪ ಜಗತ್ತನ್ನು ಬಿಚ್ಚು ಕಂಗಳಿಂದ ತೋರಲು ಸಿದ್ದನಾಗಿರುತ್ತಾನೆ. . . ಹಸುಗೂಸನೆತ್ತಿ ಮುದ್ದಾಡಿ ತಾನು “ಅಪ್ಪ”ನಾದೆ ಎಂಬ ಹೆಮ್ಮೆಯನ್ನು ಮೀಸೆ ತಿರುವುತ್ತ ಅಮ್ಮನ ಹಣೆಗೆ ಮುತ್ತನಿಟ್ಟಾಗ ಸಾರ್ಥಕದ ಜೀವನ ಇಬ್ಬರದಾಗುತ್ತದೆಂಬ ಅರಿವು ಹೆತ್ತೊಡಲಿಗಿದೆ. ಅಪ್ಪ ಅಮ್ಮರಾಗುವ ಸೌಭಾಗ್ಯದ ಸುಖವ ಅನುಭವಿಸುವ ಅದೃಷ್ಟ ವಂತರು. . ಅಂಬೆಗಾಲಿಟ್ಟು, ನಡೆವಾಗ ಕಾಳಜಿವಹಿಸುವ ಜೀವಗಳು, ಅಮ್ಮ ಎಂದು ಕರೆದಾಗ ಅಮ್ಮ ಹಿಗ್ಗಿದರೆ, ಅಪ್ಪ ಕಸಿವಿಸಿಗೊಳ್ಳುತ್ತಾನೆ. ಅದೇ. . . . ಅಪ್ಪಾ. . . ಅಂದಾಗ ಇಡೀ ಜಗತ್ತಿಗೆ ಆವರಿಸಿದ ಆಕಾಶ ಚಿಕ್ಕದಾಗಿ ಅದಕ್ಕೂ ಮೀರಿ ನಿಂತ ಅಜಾನುಬಾಹುವಾಗಿ ಬಾಹುಬಲಿಯಾಗಿ ಬೆಳೆದು ನಿಂತು ಗರ್ವ ಪಡುತ್ತಾನೆ. . . . ಅಪ್ಪ ಜಗತ್ತಿನ ಅಧ್ಬುತ ವಿಸ್ಮಯಗಳಲ್ಲಿ ಒಬ್ಬ. ಬುದ್ದಿವಂತ ಬೆಪ್ಪನೆಂದರೂ ತಪ್ಪಿಲ್ಲ
ಕೆಲವೇ ಕೆಲವು ಅಪ್ಪಂದಿರು ತಮ್ಮನ್ನು ತಾವು ಯಂತ್ರಕ್ಕೆ ಹೋಲಿಸಿಕೊಂಡು ಹಗಲು, ರಾತ್ರಿ ಸಂಸಾರದ ಅಗತ್ಯ ಗಳನ್ನು ಪೂರೈಸಲು ಹೆಣಗಾಡುತ್ತಿರುವುದು ಅಮ್ಮನ ಹೊರತು ಮತ್ತಾರಿಗೂ ಗೊತ್ತಾಗದು. ದುಡಿದು ಸುಸ್ತಾಗಿ ಬಂದಾಗ ಅಪ್ಪನ ತೊಡೆಯೇರಿ, ಹೆಗಲೇರಿ, ಮೀಸೆ ಎಳೆದು ಆಡುವಾಗೆಲ್ಲ, ಅಪ್ಪ ನೋವಿದ್ದರು ಮರೆತು ಮಗುವಾಗಿ ಬೆರೆತ ಸಮಯ ನೆನೆದರೆ ಕಣ್ಣೀರು ಬರದೇ ಇರದು. ಎಷ್ಟೋ ಅಮ್ಮ, ಅಪ್ಪ ಇದುವರೆಗೂ ನೈಜವಾಗಿ ತಂದೆ- ತಾಯಿಯಾಗದೇ ಆಸ್ಪತ್ರೆಗೆ ಅಲೆದು ಸೋತಿದ್ದಾರೆ. ಅನಾಥ ಮಕ್ಕಳ ದತ್ತು ಪಡೆದು ಸುಖವ ಅನುಭವಿಸುತ್ತಿದ್ದಾರೆ. ಉದರದೊಳೊಂದು ಕೂಸ ಹೆಣೆಯದೇ ಪ್ರತಿಸಲ ಸೋತ ಮಗ್ಗುಲಲಿ ನರಳಿದ್ದಾರೆ. . ಅದೆಷ್ಟೋ ಜನ ಮದುವೆಯು ಆಗದೇ ತಂದೆ- ತಾಯಿಯಾಗಿದ್ದಾರೆ. ಅದೇಕೆ ಹೀಗೆ ಎಂದು ಚಿಂತಿಸಿದಾಗ ಪ್ರತಿಯೊಬ್ಬರಿಗೂ ಒಂದು ಕಾಲಘಟ್ಟದಲ್ಲಿ ಅಪ್ಪ-ಅಮ್ಮನಾಗುವ ಬಯಕೆ ಎಲ್ಲ ಸುಖಕ್ಕಿಂತ ತಾಯ್ತನದ ಸುಖ ಶ್ರೇಷ್ಠವೆನಿಸತೊಡಗುತ್ತದೆ. . . ಅಪ್ಪನೊಮ್ಮೆ ದಿಟ್ಟಿಸಿ ನೋಡಿದಾಗ ಕರುಳು ಕಿತ್ತು ಬರುತ್ತದೆ.
ನಾವುಗಳು ಸದಾ ಅಮ್ಮ ಬೆಚ್ಚಗಿನ ಮಡಿಲ ಸೇರಿ, ಅಪ್ಪನನ್ನು ಒಂಟಿ ಯಾಗಿಸಿದ್ದೆವೆ. ಅಮ್ಮ ಮನೆಯೊಳಗಿನೆಲ್ಲ ಕರ್ತವ್ಯ ನಿಭಾ ಯಿಸಿದರೆ, ಅಪ್ಪ ಮೌನವಾಗಿ ನಮ್ಮೆಲ್ಲ ಜವಾಬ್ದಾರಿಯನ್ನು ಮಳೆ, ಗಾಳಿ, ಚಳಿ ಎನ್ನದೇ ಬೆವರು ಸುರಿಸಿ, ನಿದ್ದೆಗೆಟ್ಟು ತುತ್ತಿನ ಚೀಲ ಭರಿಸಲು ಅಪ್ಪ ಸದಾ ಹೆಣಗಾಡುತ್ತಿರುತ್ತಾನೆ ನಾವೆಂದು ಆತನ ಶ್ರಮದ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಪ್ಪನ ಒರಟಾದ ಕೈಗಳು, ಬಿರುಕು/ಬಿಟ್ಟ ಪಾದಗಳು, ಉರಿದ ನೆತ್ತಿಗಳು, ಸುಟ್ಟ ಚರ್ಮಗಳು, ಚೀಲಹೊತ್ತು ತೆರಚಿದ ಗಾಯತುಂಬಿದ ಬೆನ್ನು ಒಮ್ಮೆ ನೋಡಿ ಅಪ್ಪಿದರೆ, ಸಾರ್ಥಕ ಕಾಣಬಹುದಾದ ನಿರೀಕ್ಷೆಯ ಕಂಗಳು ಹಂಬಲಿಸಿ ದಂತೆ ಗೊಚರಿಸುತ್ತವೆ. ನಿಸ್ವಾರ್ಥ ಪ್ರೇಮವ ಅರಿವ ಹಣತೆ ನಮ್ಮೆದೆಯೋಳ ಗೆ ಹಚ್ಚಬೇಕಿದೆ. ಪ್ರತಿ ಹೆಣ್ಣು ಮಕ್ಕಳಿಗೆ ಅಪ್ಪ ಸ್ವರ್ಗಕ್ಕಿಂತ ಮೇಲು. . ಅಪ್ಪನಿಗೂ ಮಗಳೆಂದರೆ ಹೃದಯದ ಭಾಗ. ಕಣ್ಣರೆಪ್ಪೆಯಂತೆ ಕಾಯುವ ಕಾವಲು ಗಾರ.
ಕಳೆದುಕೊಂಡ ಮೇಲೆ ಮರಗುವುದಕ್ಕಿಂತ, ಇದ್ದಾಗಲಾದ ರೂ ಅವರನ್ನು ಪ್ರೀತಿಸಿ, ವೃದ್ಧಾಪ್ಯದಲ್ಲಿ ದೂರತಳ್ಳಿ ಅನುಭ ವಿಸುವ ಸುಖ ನರಕಕ್ಕೆ ಸಮಾನ. . . ಇಂದೊಂದು ದಿನ ಆಚರಿಸಿ ಕೈ ಚಲ್ಲುವುದಲ್ಲ. ಕಣ್ಣಿಗೆ ಕಾಣುವ ದೇವರು ಅಂದ್ರೆ “ಅಮ್ಮ ಅಂದರೆ ಪ್ರೀತಿ, ಅಪ್ಪ ಅಂದರೆ ರಕ್ಷಣೆ” ಎಂಬ ಭಾವಕ್ಕೆ ಮೀಡಿವ ಜೀವಗಳನ್ನು ಕಡೆಗಣಿಸದೇ ಗೌರವಿಸಿ. ಕೇವಲ ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ, ಅಪ್ಪನೆಂಬ ಪದಕ್ಕೂಇದೆ. ಅಪ್ಪಂದಿರ ತ್ಯಾಗ, ಪ್ರೀತಿಯನ್ನು ಸ್ಮರಿಸಿ, ಅಪ್ಪಯೆಂದರೆ ವಿಶ್ವಾಸ, ಭರವಸೆ, ಜೀವಕೊಟ್ಟು ಜೀವನ ರೂಪಿಸಿದ ವಿಶ್ವಕರ್ಮ. ಅಪ್ಪನೆಂದರೆ ಬೆಳಕು, ಸ್ವರ್ಗಕ್ಕಿಂತ ಮಿಗಿಲು ಅನಂತ ವಿಶ್ವ.
-ಶಿವಲೀಲಾ ಹುಣಸಗಿ ಯಲ್ಲಾಪುರ
ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
Super