ಆಕಾಲಿಕ ಮರಣನ್ನಪ್ಪಿದ ಸಾಹಿತಿ ಶ್ರೀಯುತ ರವಿಮುರ್ನಾಡುರವರ ಕುಟುಂಬಕ್ಕೆ ಅರ್ಥಿಕ ಸಹಾಯದ ಕೋರಿಕೆ

 

ಆತ್ಮೀಯರೇ ,

ಕಳೆದ 27 ಮಾರ್ಚ್ 2013 ರಂದು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರು ಭಾರತಕ್ಕೆ ಬಂದು ನೆಲೆಸುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದೇ ಜೂನ್ ನಂತರ ಭಾರತಕ್ಕೆ ಬಂದು ನೆಲೆಸುವ ಇರಾದೆಯನ್ನು ತನ್ನ ಹಲವು ಆತ್ಮೀಯರೊಂದಿಗೆ ಹಂಚಿಕೊಂಡಿದ್ದ ರವಿ ತಾಯ್ನಾಡ ನೆಲವ ಮತ್ತೆ ತಲುಪುವ ಋಣವನ್ನು ಕಾಣದೇ ದೂರದ ಕ್ಯಾಮರೂನಿನಲ್ಲಿ ಅಸ್ತಂಗತರಾಗಿದ್ದು ವಿಪರ್ಯಾಸ, ವಿಧಿಯಾಟ.

ತೀವ್ರ ಬಡತನದಲ್ಲಿದ್ದ ಕುಟುಂಬಕ್ಕೆ ಅವರೊಬ್ಬರೇ ಅಧಾರಸ್ತಂಭವಾಗಿದ್ದರು . ಪುಟ್ಟ ಕುಟುಂಬವೊಂದನ್ನು ಸಾಕಿ ಸಲಹುತ್ತಿದ್ದ ರವಿಯವರ ನಿಧನದಿಂದ ಅವರ ಪತ್ನಿ ತುಂಬಾ ನೊಂದು ಕೊಂಡಿದ್ದಾರೆ .

ಅವರ ಆಪ್ತ ಸ್ನೇಹಿರಿಂದ ತಿಳಿದು ಬಂದ ವಿಷಯವೇನಂದರೆ ಅವರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರಿಗೆ ಸಿಕ್ಕುತ್ತಿದ್ದ ಸಂಬಳ ಮಾತ್ರ ಅತೀ ಕಡಿಮೆ . ನೆಲೆಸಲು ಸ್ವಂತ ಸೂರಿಲ್ಲದ ರವಿಯವರು ಆ ಸಂಬಳದಿಂದ ಸ್ವಂತ ಮನೆ ಕಟ್ಟುವ ಮತ್ತು ಮಗುವಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸುವುದು ಕಷ್ಟ ಎಂದು ಬೇಸರದಿಂದ ಹೇಳುತ್ತಿದ್ದರಂತೆ.
ಕನ್ನಡಿಗರೆಲ್ಲರನ್ನೂ ಅತಿಯಾಗಿ ಪ್ರೀತಿಸುತ್ತಿದ್ದ ಹಾಗೂ ಪ್ರೋತ್ಸಾಹಿಸುತ್ತಿದ್ದ ಒಬ್ಬ ಶ್ರೀಮಂತ ಸಾಹಿತಿಯ ಬಡತನದ ಜೀವನವನ್ನು ನೋಡಿದಾಗ ಅವರ ಅಭಿಮಾನಿಗಳಾದ ನಮ್ಮೆಲ್ಲರ ಕಣ್ಣು ಮಂಜಾಗುತ್ತದೆ . ನಿಜಕ್ಕೂ ಈಗ ಅವರ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ .

ಒಂದು ವಿಷಯವನ್ನು ಎಲ್ಲರೂ ನೆನಪಿಸಬೇಕು ರವಿಯವರು ಈ ಹಿಂದೆ ಯಾರಾದರೂ ಕಷ್ಟದಲ್ಲಿದ್ದರೆ ಅವರಿಗೆ ಅರ್ಥಿಕ ಸಹಾಯ ಮಾಡಿ ಎಂಬ ಸಂದೇಶವನ್ನು ಎಲ್ಲರೀಗೂ ಕಳುಹಿಸಿತ್ತಿದ್ದರು . ಅಂತಹ ವ್ಯಕ್ತಿಯ ಪಾಲಿಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಾವು ಯಾವತ್ತೂ ಊಹಿಸಿರಲಿಲ್ಲ .
.ಈ ನಿಟ್ಟಿನಲ್ಲಿ ಅವರ ಕುಟುಂಬಕ್ಕೆ ಅರ್ಥಿಕ ಸಹಾಯ ಮಾಡುವ ಪುಣ್ಯದ ಕೆಲಸ ನಮ್ಮಿಂದಾಗಲಿ
ಅವರ ಪತ್ನಿ ಪ್ರೇಮಾರವರ ಬ್ಯಾಂಕ್ ವಿಳಾಸ

Name of the beneficiary : Smt. B. B. Prema.
Bank Account Number : 30424021947
Bank & Branch : State Bank of India , Madikeri -Kodagu District, Karnataka
IFSC Code of Branch :SBIN0000876

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಕೆ.ಎಂ.ವಿಶ್ವನಾಥ

ಈ ಮಾಹಾನ್ ನಾಯಕನ ಆತ್ಮಕ್ಕೆ ಶಾಂತಿ ಸಿಗಲಿ ಈ ಬರಹಗಾರರ ಬದುಕು ಹೀಗೆ ಅನ್ನುವುದು ಕೇಳಿ ದುಗುಡವೆನಿಸಿತು
ನಮ್ಮಲ್ಲಿ ಅನೇಕ ಶ್ರೀಮಂತರು ಇದ್ದಾರೆ ಜೊತೆಗೆ ಘನವೆತ್ತ ಸರ್ಕಾರವು ಇದೆ ಈ ವಿಷಯ ಗಂಬೀರವಾಗಿ ಪರಿಗಣಿಸಬೇಕು

1
0
Would love your thoughts, please comment.x
()
x