ಆಂಬುಲೆನ್ಸ್ ಗೂ ಮೊದಲೇ ಪಿಜ್ಜಾ ಡೆಲಿವರಿ : ಸಂತೋಷ್ ಗುರುರಾಜ್

ಗೆಳೆಯರೇ ಈ ನಮ್ಮ ದೇಶದ ವ್ಯವಸ್ಥೆಯೇ ಹೀಗಾ ಅನಿಸ್ಸುವಷ್ಟು ಮತ್ತು ಇದನ್ನು ಬದಲಾಯಿಸಲು ಆಗುವುದೇ ಇಲ್ಲವಾ ಎನ್ನುವ ಅನುಮಾನ ಬರುವುದಂತೂ ಖಂಡಿತ, ಯಾಕೇ ಈ ರೀತಿಯ ಹೀನಾಯ ಪರಿಸ್ಥಿತಿ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ, ಯಾಕೆ ಈ ಸರಕಾರಗಳಿಗೆ ಇಷ್ಟೊಂದು ನಿರ್ಲಕ್ಷ್ಯ ದೋರಣೆ, ಸರಕಾರದ ಕೆಲಸ ದೇವರ ಕೆಲಸ ಎಂದು ಮಾಡಬೇಕಾಗಿರುವ ಇವರು ತಮ್ಮ ತಮ್ಮ ಅದಿಕಾರಕ್ಕೆ ಹೊಡೆದಾಡುತ್ತ, ತಮ್ಮ ತಮ್ಮ ಖಜಾನೆಗಳನ್ನು ತುಂಬಿಸಿ ಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. (ಎಲ್ಲರೂ ಹೀಗೆ ಇರುತ್ತಾರೆಂದು ಹೇಳಲಾಗುವುದಿಲ್ಲ, ನಿಷ್ಟಾವಂತರು ಇದ್ದಾರೆ ಆದರೆ ಕಡಿಮೆ ಪ್ರಮಾಣ). ಇಷ್ಟೆಲ್ಲಾ ನಿರ್ಲಕ್ಷಕ್ಕೆ ನೇರ ಹೊಣೆಗಾರರು ನಾವೇ.. ಕಾರಣ ಎಲ್ಲರೂ ಎಲ್ಲೊ ದಿನಪತ್ರಿಕೆ ಓದಿದಾಗ ಅಥವಾ ಟಿವಿ ಯಲ್ಲಿ ಬಂದಾಗ ಅದನ್ನು ನೋಡಿ ಈ ವ್ಯವಸ್ಥೆಯನ್ನು ನೋಡಿ ಒಂದೆರೆಡು ಮಾತುಗಳನ್ನು ಬೈದುಕೊಳ್ಳುತ್ತಾ ರಾಜಕಾರಣಿಗಳಿಗೆ ಒಂದು ಹಿಡಿ ಶಾಪ ಹಾಕುತ್ತ ಕೂರುತ್ತೆವೆಯೇ ಹೊರೆತು ಯಾರು ಹೋಗಿ ಅವರನ್ನು ನೇರವಾಗಿ ಪ್ರಶ್ನೆ ಮಾಡುವುದಿಲ್ಲ.

ನನ್ನ ಹಿಡಿದು ನಾನು ಇದನ್ನು ಒಪ್ಪುತ್ತೇನೆ, ಕಾರಣ ಏನೇ ಇರಬಹುದು ಆದರೆ ಅದರಿಂದ ಕೆಡುವುದು ನಮ್ಮ ರಾಜ್ಯ, ದೇಶ ತಾನೇ ? ಒಬ್ಬ ಗುರು ಸರಿ ಇಲ್ಲ ಎಂದರೆ ಶಿಷ್ಯನು ಸಹ ಅಷ್ಟೇ. ಒಬ್ಬ ನಾಯಕ ಸರಿ ಇಲ್ಲ ಎಂದರೆ ರಾಜ್ಯವೂ ಅಷ್ಟೇ. ನಮ್ಮ ಮಕ್ಕಳು ತಪ್ಪುಮಾಡಿದಾಗ ನಾವು ಅವರನ್ನು ತಿದ್ದಿ  ಹೇಳುವ ರೀತಿ ಈ ನಾಯಕರನ್ನು ಪ್ರಶ್ನೆ ಮಾಡಬೇಕು ಎನ್ನುವುದೇ ನನ್ನ ವಾದ. ಅದು ಎಲ್ಲರಿಂದಲೂ ಸಾದ್ಯ ಮತ್ತು ಕೇಳುವ ಹಕ್ಕು ನಮ್ಮಲ್ಲಿದೆ. ಬದಲಾವಣೆ ಪ್ರತಿಯೊಬ್ಬ ಮನುಷ್ಯನಿಂದಲೂ ಸಾದ್ಯ . ನಮ್ಮ ಸಮಾಜದ ಬದಲಾವಣೆ ನಮ್ಮಿಂದ ಮಾತ್ರ ಸಾದ್ಯ. 

 ಈ ದೇಶದಲ್ಲಿ ಅತೀ ದೊಡ್ಡ ನಗರಗಳಲ್ಲಿ ನಾವು ದಿನ ನಿತ್ಯವೂ ಅನುಭವಿಸುತ್ತಿರುವ ಸಮಸ್ಯೆ ಎಂದರೆ "ಟ್ರಾಫಿಕ್ ", ಇದನ್ನು ಪ್ರತಿಯೊಬ್ಬರೂ ಅನುಭವಿಸುತ್ತಿರುವ ಒಂದು ದೊಡ್ಡ ಸಮಸ್ಯೆ. ಬೆಂಗಳೂರಿನಂತಹ ಜಾಗದಲ್ಲಿ ನನ್ನ ಪ್ರಕಾರ ಮನುಷ್ಯ ತನ್ನ ೧೦% ಅಮೂಲ್ಯವಾದ ಸಮಯವನ್ನು ಟ್ರಾಫಿಕ್ ಸಿಗ್ನಲ್ನಲ್ಲೇ ಕಳೆಯುತ್ತಾನೆ. ಏನು ಮಾಡಿದರೂ ತಾನು ಹೋಗುವ ಸ್ಥಳವನ್ನು ನಿಗದಿ ಪಡಿಸಿದ ಸಮಯಕ್ಕೆ ಸೇರುವುದು ಬಹುತೇಕ ಕಡಿಮೆ. ಮಳೆ ಇರಲಿ ಬಿಸಿಲಿರಲಿ ತನ್ನ ಕಷ್ಟ ಅನುಭವಿಸಲೇಬೇಕು. ಇದರಿಂದ ಮುಕ್ತಿ ಕೆಲವೇ ಕೆಲವರಿಗೆ. ಅವರೆಲ್ಲಾ ಅತೀ ದೊಡ್ಡವ್ಯಕ್ತಿಗಳಾಗಿರುತ್ತಾರೆ. ಅಂತವರ  ಮದ್ಯದಲ್ಲಿ ಬದುಕುವ ನಮ್ಮಂತಹ ಸಾಮಾನ್ಯರಿಗೆ ಎಲ್ಲಿ ಸಿಗಬೇಕು ಅಂಥಹ ವ್ಯವಸ್ಥೆ. ಅದೇನೇ ಇರಲಿ ನನ್ನ ಪ್ರಶ್ನೆ ಇಷ್ಟೇ.ದೊಡ್ಡ ದೊಡ್ಡ ಮಹಾನಗರಿಗಳಲ್ಲಿ ಉದಾಹರಣೆಗೆ ನಮ್ಮ ಬೆಂಗಳೂರೇ ಇರಲಿ,ಇಂತಹ ಪಟ್ಟಣಗಳಲ್ಲಿ ಆಂಬುಲೆನ್ಸ್ ಗೂ ಮುನ್ನ ಪಿಜ್ಜಾ ಡೆಲಿವರಿ ಆಗುತ್ತದೆ. ಅದೂ ಕೇವಲ ಅರ್ಧ ಗಂಟೆಯಲ್ಲಿ ಒಂದು ವೇಳೆ ಆ ಸಮಯದೊಳಗೆ ಆಗದೆ ಇದ್ದರೆ ಪಿಜ್ಜಾ ಫ್ರೀ. 

ಏನ್ರೀ ಹಣೆಬರಹ ನಮ್ಮದು, ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಒಬ್ಬ ಮನುಷ್ಯನನ್ನು ಆಸ್ಪತ್ರೆಗೆ ಕರೆದೊಯ್ಯಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ, ಕಾದರು ಬದುಕಿಸಿಕೊಳ್ಳುವ ನಿರೀಕ್ಷೆ ಬಹಳ ಕಡಿಮೆ. ಒಬ್ಬ ಪಿಜ್ಜಾ ಡೆಲಿವರಿ ಮಾಡುವವನು ಸಹ ಅದೇ ಸಿಟಿಯಲ್ಲಿ ತಾನೇ ಇರುತ್ತಾನೆ. ಅವನು ಹೇಗೆ ಸಮಯಕ್ಕೆ ಸರಿಯಾಗಿ ಪಿಜ್ಜಾ ತಲುಪಿಸುತ್ತಾನೆ ಎಂದು ಯೋಚನೆ ಮಾಡಿದರೆ ಆಶ್ಚರ್ಯ ಆಗುತ್ತದೆ. ಇಲ್ಲಿ ಕಾಣುವುದು ಒಂದು "ಸಮಯ ಪ್ರಜ್ಞೆ " ಮತ್ತು "ಪ್ರೈವೇಟ್ ಸೆಕ್ಟರ್".

ಈ ಪ್ರೈವೇಟ್ ಸೆಕ್ಟರ್ ಗೆ ಅಷ್ಟು ಶಕ್ತಿ ಇದ್ದರೆ ಸರ್ಕಾರ ಆಂಬುಲೆನ್ಸ್ ಯೋಜನೆಯನ್ನು ಅವರೊಂದಿಗೆ ಕೈ ಜೋಡಿಸಲಿ, ಇಲ್ಲವೇ ಸಂಪೂರ್ಣವಾಗಿ ಅವರಿಗೆ ಗುತ್ತಿಗೆ ಕೊಡಲಿ. ನಾನು ಇಲ್ಲಿ ಪ್ರೈವೇಟ್ ಸೆಕ್ಟರ್ ಅವರ ಪರವಾಗಿ ಮಾತನಾಡುತ್ತಿಲ್ಲ ಇದರಿಂದ ಜನಗಳಿಗೆ ಒಳ್ಳೆಯದಾಗುತ್ತದೆ ಎಂದರೆ ಪ್ರೈವೇಟ್ ಆದರೇನು ಗೌರ್ಮೆಂಟ್ ಆದರೇನು. ಒಟ್ಟಾರೆ ಅದರಿಂದ ಸಾಮಾನ್ಯರಿಗೆ ಇದರಿಂದ ಏನು ಉಪಯೋಗ ಆಯ್ತು ಎನ್ನುವುದೇ ಮುಖ್ಯ. ಇಂತಹ ಆಲೋಚನೆಗಳೊಂದಿಗೆ ಸರಕಾರಗಳು ಮುನ್ನುಗ್ಗಿ ಬಂದರೆ ನಮ್ಮಂತಹ ಜನ ಸಾಮಾನ್ಯರು ಸ್ವಲ್ಪ ನಿಟ್ಟುಸಿರು ಬಿಡುವಂತಾಗುತ್ತದೆ. ಒಟ್ಟಾರೆ ಒಳ್ಳೆಯ ನಿರ್ಧಾರಗಳನ್ನು ಸರ್ಕಾರಗಳಿಂದ ನಿರೀಕ್ಷೆ ಮಾಡೋಣ. ನಿಮಗೂ ಸಹ ಈ ಮೇಲಿನ ಇಶ್ಯೂವಿನಲ್ಲಿ ಬೇರೆ ತರಹದ ಆಲೋಚನೆ ಇದ್ದರೆ ದಯವಿಟ್ಟು ತಿಳಿಸಿ . 

ನಿಮ್ಮ 
ಸಂತೋಷ್ ಗುರುರಾಜ್ 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಪಿಜ್ಜಾ ಬಾಯ್ ಗಳು ಸ್ಕೂಟರ್ ನಲ್ಲಿ ಹೋಗುತ್ತಾರೆ
ಅಂಬುಲೆನ್ಸ್ ಅಂದರೆ ಫೋರ್ ವಿಲರ್ (೧)

ಸಾರ್ವಜನಿಕ ಸಂಚಾರಿ ವ್ಯವಸ್ಥೆ ಉಪಯೋಗಿಸುವುದು.

ಒಂದು ದಿನ ಬೆಸ ಸಂಖ್ಯೆ ವಾಹನಗಳು ಮಾತ್ರ
ಮತ್ತೊಂದು ದಿನ ಸರಿ ಸಂಖ್ಯೆ ವಾಹನಗಳು ಮಾತ್ರ
ರಸ್ತೆಗಿಳಿಯುವ ನಿಯಮ.

ಒಂದಕ್ಕಿಂತ ಹೆಚ್ಚು ವಾಹನಗಳ ಖರೀದಿಗೆ ಬ್ರೇಕ್.
ಹೀಗೆ ಹಲವು ಪರಿಹಾರಗಳಿಂದ ಟ್ರಾಫಿಕ್ ದಟ್ಟಣೆಯನ್ನು
ಕಡಿಮೆ ಮಾಡಬಹುದು. ಇದಕ್ಕೂ ನಗರಕ್ಕೆ ವಲಸೆ
ಹೋಗುವುದನ್ನು ತಪ್ಪಿಸಬೇಕು. ಇದಕ್ಕೆಲ್ಲಾ ನಾವು
ಆರಿಸಿ ಕಳುಹಿಸಿದವರು ಮನಸ್ಸು ಮಾಡಬೇಕು.
ಕಾಳಜಿಯುಕ್ತ ಲೇಖನ. ಚೆನ್ನಾಗಿದೆ.

Santhosh Guruaj
Santhosh Guruaj
10 years ago

ಸರ್,

ಒಳ್ಳೆಯ ಸಲಹೆಗಳು ಕೊಟ್ಟಿದ್ದಿರ. 

ನೀವು ಹೇಳಿದ ಹಾಗೆ ಅದನ್ನು ಅರ್ಥಮಾಡಿಕೊಳ್ಳುವವರು ಅರ್ಥಮಾಡಿಕೊಳ್ಳುತ್ತಿಲ್ಲ ಅಷ್ಟೇ . ನಿಮ್ಮ ಸಲಹೆಗೆ ದನ್ಯವಾದಗಳು . 

2
0
Would love your thoughts, please comment.x
()
x