ಯೋಗಾ ಇದು ಭಾರತ ದೇಶದ ಪಾರಂಪರಿಕ ವಿದ್ಯೆ. ಇದರಿಂದ ಆಕರ್ಷಿತರಾದವರಿಗೇನು ಕಡಿಮೆ ಇಲ್ಲ. ಇದರ ಬಗ್ಗೆ ಒಬ್ಬೊಬ್ಬರು ಒಂದೊದು ರೀತಿಯಲ್ಲಿ ಆಕರ್ಷಿತರಾಗುತ್ತಾರೆ, ಅಂತವರಲ್ಲಿ ಶ್ರೀ ಮುನಿತಿಮ್ಮಯ್ಯ ಕೂಡ ಒಬ್ಬರು. ಇವರು ಒಬ್ಬ ಏಕಲವ್ಯನಿದ್ದಂತೆ. ಇವರಿಗೆ ಪ್ರೇರಣೆ ಕನ್ನಡದ ಮೇರು ನಟ ಡಾ. ರಾಜಕುಮಾರವರು. ೮೦ರ ದಶಕದಲ್ಲಿದ್ದಂತಹ ಪ್ರಜಾಮತ ಪತ್ರಿಕೆಯಲ್ಲಿ ಡಾ. ರಾಜ್ ರವರ ಯೋಗಾಸನದ ಕುರಿತು ವಿವಿದ ಭಂಗಿಯ ಚಿತ್ರಗಳ ಸಹಿತ ಲೇಖನ ಪ್ರಕಟವಾಗುತಿತ್ತು. ಅದನ್ನು ನೋಡಿ ಪ್ರೇರಿತರಾದವರು ಶ್ರೀ ಮುನಿತಿಮ್ಮಯ್ಯನವರು. ಬೆಂಗಳೂರಿನ ಹೆಬ್ಬಾಳದ ನಿವಾಸಿಯಾದ ಇವರು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಛೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಈಗ ಇವರಿಗೆ ೫೫ ವರ್ಷ ವಯಸ್ಸಾಗಿದೆ. ತನ್ನ ೨೧ನೆ ವಯಸ್ಸಿನಿಂದ ಯೋಗಾಭ್ಯಾಸ ಪ್ರಾರಂಭಿಸಿದ ಇವರು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ೩೫ ವರ್ಷಗಳಿಂದ ಯೋಗ ಸಾಧನೆ ಮಾಡಿರುವ ಇವರು ಪ್ರತಿದಿನ ೨ ತಾಸು ಅಭ್ಯಾಸ ಮಾಡುತ್ತಾರೆ. ಇವರು ಕಠಿಣವಾದ ೭೦-೮೦ ಆಸನಗಳನ್ನು ಮಾಡುವುದರ ಜೊತೆಗೆ ಸುಮಾರು ೨೦೦ ಆಸನಗಳನ್ನು ಮಾಡುತ್ತಾರೆ.
ಏಕಲವ್ಯನಂತೆ ಅಭ್ಯಾಸ ಮಾಡಿದ ಇವರು ತಪ್ಪುಗಳನ್ನು ತಿದ್ದಿಕೊಳ್ಳುವ ಸಲುವಾಗಿ ಶಿವನ್ ಎಂಬುವವರ ಹತ್ತಿರ ಕೆಲವು ಮಾಹಿತಿಗಳನ್ನು ಪಡೆದುಕೊಂಡು ನಂತರ ಶ್ರೀ ಗೋವರ್ದನ ಅವರ ಹತ್ತಿರ ಯೋಗಾಭ್ಯಾಸ ಮಾಡಿದ್ದಾರೆ. ಇವರು ರಾಜ್ಯ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಬಾಗವಹಿಸಿ ಎರಡು ಬಾರಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ಗೆ ಆಯ್ಕೆ ಅಗಿದ್ದರು ಸಹ ಪ್ರಾಯೋಜಕರ ಕೊರತೆಯಿಂದ ಸ್ಪೆನ್ ಮತ್ತು ಇಟಲಿಯಲ್ಲಿ ಭಾಗವಹಿಸಲು ಆಗದಿರುವುದಕ್ಕೆ ಇವರಿಗೆ ಬೇಸರ ಇದೆ. ಇವರು ತಾವು ಕಲಿತ ವಿದ್ಯೆಯನ್ನು ಅಕ್ಕ ಪಕ್ಕದ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಕಲಿಸಿದ್ದಾರೆ. ಜೊತೆಗೆ ತನ್ನ ಮಕ್ಕಳಾದ ಎಂ ಗಿರಿಶ್, ಎಂ ಸುಷ್ಮ, ಎಂ ಮಾನಸ ಇವರಿಗು ತರಬೇತಿ ನೀಡಿ ಯುವ ಯೋಗ ಪಟುವನ್ನಾಗಿಸಿ ಮಾಡಿದ್ದಾರೆ.
ಇತ್ತಿಚೆಗೆ ಬೆಂಗಳೂರಿನಲ್ಲಿ ’ಜೀವ ಪೌಂಡೇಷನ್’ ರವರು ಏರ್ಪಡಿಸಿದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮುನಿತಿಮ್ಮಯ್ಯನವರ ಎಲ್ಲ ಶಿಷ್ಯರು ಪ್ರಥಮ, ದ್ವಿತೀಯ ಸ್ಥಾನ ಪಡೆದು ’ಚಾಂಪಿಯನ್ ಶಿಪ್ ಟ್ರೋಪಿ’ಯನ್ನು ಸಹ ತಮ್ಮದಾಗಿಸಿಕೊಂಡಿರುತ್ತಾರೆ. ಜೊತೆಗೆ ಇವರ ಮಗಳಾದ ಕು. ಎಂ ಮಾನಸ ರವರು ’ಯೋಗ ಮಯೂರಿ’ ಎಂಬ ಬಿರುದನ್ನು ಪಡೆದು ಕೊಂಡಿದ್ದು ಮುನಿತಿಮ್ಮಯ್ಯನವರ ಸಾಧನೆ ಆಗಿದೆ.
ಎಲೆಮರೆ ಕಾಯಿ ಆಗಿರುವ ಇವರು ’ಈ ಯೋಗ ಕ್ಷೇತ್ರದಲ್ಲಿ ನಾನು ಮತ್ತು ನಮ್ಮ ಮಕ್ಕಳು, ಶಿಷ್ಯಂದಿರುಗಳು ಏನಾದರು ಸಾಧನೆ ಗೈದಿದ್ದಲ್ಲಿ ಇಷ್ಟಕ್ಕೆಲ್ಲಾ ಡಾ. ರಾಜಕುಮಾರವರ ಸ್ಪೂರ್ತಿಯೇ ಮುಖ್ಯ ಕಾರಣ ಇದರಿಂದ ಗಳಿಸಿದ ಯಶಸ್ಸು, ಹೆಸರು, ಕೀರ್ತಿ ಅವರಿಗೆ ಅರ್ಪಿಸುತ್ತಾ, ನಾನು ಅವರಿಗೆ ಚಿರರುಣಿಯಾಗಿರಲು ಹಾಗು ಅವರ ಆಶೀರ್ವಾದವನ್ನು ಬಯಸುತ್ತೇನೆ" ಎಂದು ಶ್ರೀ ಮುನಿತಿಮ್ಮಯ್ಯ ಮನಸಾರೆ ಸ್ಮರಿಸುತ್ತಾರೆ. ಇವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಾದ ಅವಶ್ಯಕತೆ ಇದೆ ಅವರ ಸಂಪರ್ಕ ಸಂಖ್ಯೆ ೯೦೩೫೩೦೩೭೨೫
-ಪ್ರಮೋದ ಶೇಟ್ ಗುಂಡಬಾಳ
ಕರುನಾಡಿನ ಎಷ್ಟೋಂದು ಜನರಿಗೆ ಡಾ.ರಾಜಕುಮಾರ ಅಣ್ಣಾವ್ರು ಸ್ಪೂರ್ತಿಯಾಗಿಲ್ಲ ಹೇಳಿ ? ಅಂತಹ ಮಹಾನ್ ವ್ಯಕ್ತಿತ್ವದ ಪ್ರಭಾವಳಿಯಲ್ಲಿ ಬೆಳಕು ಕಂಡಿರುವ ಶ್ರೀಯುತ ಮುನಿತಿಮ್ಮಯ್ಯನವರ ಕುರಿತಾದ ಲೇಖನ ಸೊಗಸಾಗಿ ಮೂಡಿ ಬಂದಿದೆ. ಮಾಹಿತಿಗೆ ಧನ್ಯವಾದಗಳು !!!