ಇದು ನಮ್ಮ ನಿಮ್ಮೆಲ್ಲರ ಅತೀ ದೊಡ್ಡ ಕಾಡುವ ಪ್ರಶ್ನೆ ? ಇದೊಂದೇ ಡೈಲಾಗ್ ಇಂದ ಕೆಲವರು ತಮ್ಮ ಜೀವನದ ಗುರಿ ಮುಟ್ಟಲು ಆಗುವುದಿಲ್ಲ. ಇದನ್ನು ಯಾರೋ ನಮಗೆ ಆಗದೇ ಇರುವವರು ಮಾಡುವುದಲ್ಲ ನಮಗೆ ನಾವೇ ಮಾಡಿಕೊಳ್ಳುವುದು. ಇದು ಒಂತರಾ ಮಾನಸಿಕ ರೋಗ. ಇದು ಪ್ರತಿಯೊಬ್ಬನ ಜೀವನದಲ್ಲಿ ನಡೆಯುವ ನೆಗೆಟಿವ್ ಕಮಾಂಡ್. ಅದು ಎಷ್ಟರ ಮಟ್ಟಿಗೆ ಅಂದ್ರೆ ಆ ಕಮಾಂಡ್ ಇಂದ ನಾವು ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ, ಅಷ್ಟರಲ್ಲಿ ವಯಸ್ಸು ಮುಗಿದಿರುತ್ತದೆ. ಈ ಕಮಾಂಡ್ ದಾಟಿ ದೈರ್ಯದಿಂದ ಮುಂದೆ ಬಂದವರೇ ಈಗ ನಮಗೆ ಕಾಣುವ ಸಾದಕರು. ಇದರಲ್ಲಿ ಒಂದು ತರಹದ ಭಯ ,ಅವಮಾನ ,ನಾಚಿಕೆ ಹೀಗೆ ಎಲ್ಲಾ ತರಹದ ಬಾವನೆಗಳು ಸೇರಿರುತ್ತದೆ. ಇದನ್ನು ಈ ಲೇಖನದಲ್ಲಿ ಬರೆದಷ್ಟು ಸುಲಭವಾಗಿ ನಾನು ಜೀವನದಲ್ಲಿ ಅಳವಡಿಸುವುದು ಕಷ್ಟ. ಆದರೆ ನನಗೆ ಇದರ ಅರಿವಾಗಿದೆ. ಇದನ್ನು ಈಗಲೇ ತಿದ್ದಿಕೊಳ್ಳದಿದ್ದರೆ ಮುಂದೆಂದೂ ಇದು ಸಾದ್ಯವಾಗುವುದಿಲ್ಲ ಮತ್ತು ನಮ್ಮ ಗುರಿಮುಟ್ಟುವಲ್ಲಿ ನಾನು ಸೋಲುತ್ತೇನೆಂದು ದೃಡವಾಗಿದೆ. ಆದರೆ ಈ ಒಂದು ಕೆಟ್ಟ ಬಾವನೆ ಇಂದ ನಮ್ಮ ಮುಂದಿನ ಗುರಿಯ ನಿಶ್ಚಯವನ್ನು ಮುಟ್ಟಲಾಗುವುದಿಲ್ಲ. ನನಗನ್ನಿಸಿದ ಮಟ್ಟಿಗೆ ಪ್ರತಿಯೊಬ್ಬನ ಅಂತರಂಗದಲ್ಲಿ ನಡೆಯುವ ಚರ್ಚೆ ಇದಾಗಿರುತ್ತದೆ. ಇದಕ್ಕೆ ಸುಮಾರಷ್ಟು ಉದಾಹರಣೆಗಳು ಇವೆ.
ಒಂದು ಕಪ್ಪೆಯನ್ನು ಒಂದು ನೀರಿನ ಪಾತ್ರೆಯಲ್ಲಿ ಹಾಕಿ ಅದನ್ನು ಒಲೆಯಮೇಲೆ ಇಟ್ಟು ಅದಕ್ಕೆ ಹಾರಲು ಚಾನ್ಸ್ ಕೊಟ್ಟ ಕಥೆ. (ಎಲ್ಲೊ ಓದಿದ್ದು). ಆ ಬೆಂಕಿಯ ಬಿಸಿಗೆ ಸ್ವಲ್ಪ ನೀರು ಕಾಯುತ್ತದೆ ಆದರೆ ಕಪ್ಪೆ ಹಾರುವುದಿಲ್ಲ ಅದು ಅಲ್ಲೇ ಅಡ್ಜಸ್ಟ್ ಮಾಡಿಕೊಂಡು ಇರುತ್ತದೆ, ಮತ್ತೆ ಸ್ವಲ್ಪ ಹೊತ್ತಿನ ನಂತರ ಮತ್ತಷ್ಟು ನೀರು ಬಿಸಿ ಆಗುತ್ತದೆ ಆದರೆ ಕಪ್ಪೆ ಮಾತ್ರ ಅಲ್ಲೇ ಅಡ್ಜಸ್ಟ್ ಮಾಡಿಕೊಂಡು ಆ ಬಿಸಿಯ ಬೇಗೆಯನ್ನು ತಾಳುತ್ತ ಅಲ್ಲೇ ಇರುತ್ತದೆ, ಪಾತ್ರೆ ಇಂದ ಈಚೆಗೆ ಮಾತ್ರ ಹಾರುವುದಿಲ್ಲ.
ನೀರು ತನ್ನ ಕುದಿಯುವ ಮಟ್ಟಕ್ಕೆ ಬಂದಾಗ ಕಪ್ಪೆ ಸತ್ತಿರುತ್ತದೆ . ಇದಕ್ಕೆ ಕಾರಣ ನೀರಲ್ಲ ಕಪ್ಪೆಯೇ . ಯಾಕೆಂದರೆ ಅದು ಸ್ವಲ್ಪ ಬಿಸಿಯಾದಾಗಲೇ ಹಾರುವುದನ್ನು ಬಿಟ್ಟು ತನ್ನನ್ನು ತಾನು ಅಡ್ಜಸ್ಟ್ ಮಾಡಿಕೊಳ್ಳುತ್ತ ತನ್ನ ಶಕ್ತಿಯನ್ನು
ಕಳೆದು ಕೊಂಡಿರುತ್ತದೆ. ಕೊನೆಯಲ್ಲಿ ಹಾರಲು ಯತ್ನಿಸಿದರೂ ಶಕ್ತಿ ಇರುವುದಿಲ್ಲ. ಇಲ್ಲಿ ಕಪ್ಪೆ ಎಂದರೆ ನಾವು, ಪಾತ್ರೆ ಇಂದ ಹೊರಗೆ ಹಾರುವುದು ನಮ್ಮ ಮುಂದಿನ ಗುರಿ, ಆ ಅಡ್ಜಸ್ಟ್ ಇದೆಯಲ್ಲ ಅದೇ ಈ ಕಮಾಂಡ್. ಎಲ್ಲಿಯವರೆಗೂ ನಾವು ನಮ್ಮ ಮುಂದಿನ ಗುರಿಯನ್ನು ಈ ಕಮಾಂಡ್ ನ ಆಚೆಗೆ ಒಯ್ಯುವುದಿಲ್ಲವೋ ಅಲ್ಲಿಯವರೆಗೆ ನಾವು ಏನನ್ನೂ ಸಾದಿಸಲಾಗುವುದಿಲ್ಲ. ಹಾಗಾಗಿ ಬೇರೆಯವರು ಏನೆನ್ನುತ್ತಾರೋ ಎಂದು ನಮ್ಮನ್ನು ನಾವು ಅಡ್ಜಸ್ಟ್ ಮಾಡಿಕೊಳ್ಳದೇ ನಮ್ಮ ಸಂಕಲ್ಪವನ್ನು ದೃಡ ಮಾಡಿಕೊಳ್ಳಬೇಕು.
ಇಲ್ಲಿ ಇನ್ನೊಂದು ಅಂಶವೆಂದರೆ ಯಾವಗಲೂ ನಾವು ಮಾಡುತ್ತಿರುವುದೇ ಸರಿ ಎಂದು ಅಲ್ಲ. ಉದಾಹರಣೆ ದೊಡ್ಡವರ ಮುಂದೆ ಅಸಭ್ಯವಾಗಿ ನಡೆದುಕೊಂಡು ಯಾರು ಏನು ಅಂದ್ಕೊಂಡ್ರೆ ಏನು ??ಎಂದು ನಮ್ಮನ್ನು ನಾವು ಸರಿ ಎಂದು ಪ್ರತಿಪಾದಿಸಿಕೊಳ್ಳುವುದಲ್ಲ. ಯಾವ ಕಾಲಕ್ಕೆ ಯಾರೊಂದಿಗೆ ಹೇಗೆ ನೆಡೆದು ಕೊಳ್ಳಬೇಕು ಎನ್ನುವ ಸಂಸ್ಕೃತಿಯನ್ನೂ ಬೆಳಸಿಕೊಳ್ಳಬೇಕು. ನಮ್ಮ ಗುರಿಗಳಿಗೆ ಅಡಚಣೆಗಳು ಅಡ್ಡ ಬರುವಂತಿದ್ದರೆ ಆಗ ಮಾತ್ರ ಈ ಕಮಾಂಡ್ ದಾಟಿ ಹೋಗುವ ದೈರ್ಯ ಮಾಡಬೇಕು. ಅದೂ ಸಹ ಸರಿಯೆಂದೆನಿಸಿದರೆ ಮಾತ್ರ! ಮನುಷ್ಯ ತನ್ನ ದೈರ್ಯ ಶಕ್ತಿ ಇಂದ ಮಂಗಳನ ಮುಟ್ಟಿ ಬಂದವನು, ಮನುಷ್ಯನಿಗೆ ಯಾವುದೂ ಅಸಾದ್ಯ ಎನ್ನಿಸುವುದಿಲ್ಲ. ಹಾಗಾಗಿ ನಮ್ಮ ಗುರಿಗಳನ್ನು ಪರರ ದೃಷ್ಟಿಕೋನದಲ್ಲಿ ಇರಿಸಿ ಆ ಗುರಿಯನ್ನು ಹಾಳುಮಾಡಿಕೊಳ್ಳುವುದು ಬೇಡ. ಗುರಿಮುಟ್ಟುವ ತನಕ ಛಲ ಇರಲಿ.
ನಿಮ್ಮ
-ಸಂತೋಷ್ ಗುರುರಾಜ್ .
*****
ಕಪ್ಪೆಯ ದೃಷ್ಟಾಂತ ಚೆನ್ನಿದೆ… ಹೌದು ಕೆಲವು ಸಂದರ್ಭಗಳಲ್ಲಿ ಹೊಂದಾಣಿಕೆ ಖಂಡಿತ ಸಲ್ಲದುೈ. .. ಬರಹವನ್ನ ಮತ್ತಷ್ಟು ಉದಾಹರಣೆಗಳಿಂದ ವಿಸ್ತರಿಸಬಹುದಿತ್ತು….