ಅಮ್ಮಾ ನಿನೊಡನಿರುವೆ ಮನೆಯಲ್ಲಿ,
ಕುಣಿಯುವೆ ನಿನ್ನಯ ತೋಳಲ್ಲಿ,
ಪಾಠವು ನನಗೆ ಬೇಡಮ್ಮ,
ಕೈತುತ್ತನು ಮೆಲ್ಲಗೆ ತಾರಮ್ಮ,
ಮಲಗಲು ಮಡಿಲು ನೀಡಮ್ಮ,
ಆಡವಾಡಿಸು ಬಾ ಗುಮ್ಮಾ ಬಂತು ಗುಮ್ಮಾ
ಪುಟ್ಟ ಕಂದನೇ ಏನಾಯ್ತು?
ಪಾಠವೇತಕೆ ಬೇಡಾಯ್ತು?
ಮೇಷ್ಟು ಮಂಕುತಿಮ್ಮ ಅಂದರು,
ಮಗ್ಗಿ ತಪ್ಪಿಸಿದ್ದಕ್ಕೆ ಬೈದರು,
ಕೋಲನು ಕಂಡು ಕಾಗುಣಿತ ಬಾರದು,
ಎಬಿಸಿಡಿ ಕಲಿಯಲು ನನ್ನಿಂದಾಗದು,
ಕಂದಾ, ವಿದ್ಯೆಯು ಬೇಕು ಬಾಳಿಗೆ,
ನನ್ನನ್ನು ಸಾಕಲು ನಾಳೆಗೆ,
ಅದೇ ದಾರಿ ತೋರುವ ದೀವಿಗೆ,
ವಿದ್ಯೆ ಇಲ್ಲದೆ ಅಸಾಧ್ಯವೋ ಏಳಿಗೆ.
ಹೌದೇ ಅಮ್ಮ! ನೀ ಹೇಳಿದಂತೆ ಕೇಳುವೆ,
ಈಗಲೇ ಶಾಲೆಗೆ ಓಡುವೆ,
ಮಗ್ಗಿಪಾಠವ ಕಲಿಯುವೆ
ಬುದ್ದಿವಂತನಾಗಿ ಬಾಳುವೆ.
chendada shishu kavite 🙂
ಕಂದಾ, ವಿದ್ಯೆಯು ಬೇಕು ಬಾಳಿಗೆ,
ನನ್ನನ್ನು ಸಾಕಲು ನಾಳೆಗೆ,
Oh, i see, you want a baby to look after you, poor baby.