ಅರೆ ಉಪದೇಶಿಸುತ್ತಿರುವೆ ಎಂದುಕೊಂಡ್ರಾ, ಇಲ್ಲ ಉಪದೇಶವಲ್ಲಾ ಇದು ಒಂದು ಮಸ್ತಿ ಮಜದ ಘಟನೆ ! ಇದಕ್ಕೆ ನೀವು ಒಪ್ಪುತ್ತಿರೊ ಇಲ್ಲವೋ , ಈ ಜಗತ್ತು ಇಂದ್ರ ಲೋಕವನ್ನು ಮೀರಿದ ಸುಖ ಹಾಗೂ ಸೌಂದರ್ಯವನ್ನು ಹೊಂದಿದ ಜಗತ್ತು. ಇಲ್ಲಿ ರಂಬೆ ,ಊರ್ವಶಿ, ಮೇನಕೆಯರನ್ನು ಮೀರಿದ ರೂಪಶಿಯರು ಉಂಟು ಎಂದ ಮೇಲೆ ಈ ಜಗತ್ತು ಅಲ್ಲಿಗಿಂತಲು ಸೌಂದರ್ಯ ಪೂರಿತ ಜಗತ್ತೆ ಸರಿ, ಇನ್ನು ಅಮಲಿಗೆ ಮೋಜಿಗೆ ಸುಖಕ್ಕೆ ಇಂದ್ರನೇ ಇಲ್ಲಿಯ ಅಲ್ಕೋ ಹಾಲ್ ಬ್ರ್ಯಾಂಡ್ ಗಳನ್ನು ಆಮದು ಮಾಡಿಕೊಳ್ಳುತ್ತಿರಬಹುದು !
ನಾವು ಯುವಕರು ಮೋಜಿಗಾಗಿ ಮಸ್ತಿಗಾಗಿ ಯಾವಾಗಲು ನಮ್ಮ ಆಸೆಗಳನ್ನು ತೀರಿಸಿಕೊಳ್ಳುವಲ್ಲಿ ತುತ್ತ ತುದಿಯಮೇಲೆ ನಿಂತಿರುತ್ತೇವೆ, ಹಾಗೆಂದು ಎಲ್ಲರನ್ನು ಒಂದೆ ತಟ್ಟೆಯಲ್ಲಿ ಇಟ್ಟು ತೂಗುತ್ತಿಲ್ಲ ಆದರೂ ಕೆಲವರು ತಮ್ಮ ಮನಸಿಗೆ ಮೂಗುದಾರ ಹಾಕಿಕೊಂಡಿರುವವರು ಇರುತ್ತಾರೆ, ಪ್ರತಿಯೊಂದು ಗೆಳೆಯರ ಪಾರ್ಟಿ ಗುಂಪಿನಲ್ಲು ಕೂಲ್ ಡ್ರಿಂಕ್ ನಷ್ಟೆ ಕುಡಿಯುವ ಒಬ್ಬನಾದ್ರು ಇರುತ್ತಾನೆ, ಅಂತವರ ಬಗ್ಗೆ ನನಗೆ ಕಮ್ಮೆಂಟ್ ಕೊಡಲು ಇಷ್ಟವಿಲ್ಲ, ನಾನು ಅಂತವರನ್ನು ಲೈಕ್ ಮಾಡಬಲ್ಲೆ ಅಷ್ಟೆ ! ಮಜವು ಮಸ್ತಿಯು ಇರಲಿ, ಎಲ್ಲವನ್ನು ಬಿಟ್ಟು ಸಾಧು ಸಂತರಾಗಲು ಅಸಾಧ್ಯವೇ ಸರಿ ?
ಈಗೆ ಮೊನ್ನೆ ತಾನೆ ಒಂದು ಚೂರು ಎಡೆವಿದ ನಾವು ಸಾವಿನ ದವಡೆಗೆ ಹೋಗಿ ಅದರ ಬಾಗಿಲು ತಟ್ಟಿ ಒಳಗೆ ಹೋಗದೆ ಹಿಂತಿರಿಗಿದ್ದು ನಮ್ಮ ಅದೃಷ್ಟವೇ ಆಗಿತ್ತು.
ಅಂದು ಜನವರಿ 1, 2013 ರ ಆಗಮನಕ್ಕೆ ವಿಶ್ವವೇ ಆತುರದಿಂದ ಕಾಯುತಿದ್ದಾಗ ನಾವು ಕೂಡ ಗೆಳೆಯರಲ್ಲಾ ಸೇರಿ 00:00:00 1/1/2013 ಕ್ಕೆ ಕಾಯುತಿದ್ದೆವು, ನಂದಿಬೆಟ್ಟಕ್ಕೆ ಬೈಕ್ ನಲ್ಲಿ ಹೋಗಬೇಕೆಂದು ಅಂದು ಕೊಂಡಿದ್ದವು ನಾವು ಹತ್ತು ಜನ ಐದು ಬೈಕಗಳ ಸಕಲ ಸಿದ್ದತೆಗಳಲ್ಲಿ ನಮ್ಮ ಸ್ನೇಹಿತರ ಬಳಗವಿತ್ತು ! ಇಂಟರ್ನೆಟ್ ನಲ್ಲಿ IST 00:00:01AM ಆಗುವುದನ್ನೆ ಕಾಯುತಿದ್ದ ನಾವು ಕೇಕ್ ಕತ್ತರಿಸಿ ಸಂಭ್ರಮಿಸಿದೆವು, ಯಾವುದೇ ಕಾರಣಕ್ಕೂ ಕುಡಿಯುವುದು ಬೇಡ, ನಂದಿ ಬೆಟ್ಟ ತಲುಪುವುದರೊಳಗೆ ಅನೇಕ ಬಾರಿ ಪೋಲಿಸ್ರು ಅಲ್ಕೋ ಹಾಲ್ ಕುಡಿತದ ಟೆಸ್ಟ್ ಮಾಡ್ತಾರೆ ಅಂತ ಸುಮ್ಮನೆ ಬಿಟ್ಟಿದ್ದೆವು, ಯಾರು ಕುಡಿಯಲಿಲ್ಲ – ಅಷ್ಟಕ್ಕು ಕುಡಿದು ವಾಹನ ಚಲಾಯಿಸುವುದು ತಪ್ಪು ಎಂದು ನಮಗೆ ತಿಳಿದಿತ್ತು !
ಅದು ನಮ್ಮ ಪಾಲಿಗೆ ಹ್ಯಾಪಿ ನಿವ್ ಇಯರ್ ಆಗಿರಲಿಲ್ಲ ಬಿಡಿ ! ನಾನು ಮತ್ತು ನನ್ನ ಸ್ನೇಹಿತ ವಿನಯ ಕುಳಿತ ಬೈಕ್ ಸ್ಯಾಂಕಿ ಟ್ಯಾಂಕಿ ಬಳಿ ಪಂಚರ್ ಆಯಿತು, ನಾವಿಬ್ಬರು ಎಲ್ಲರಿಗಿಂತ ಹಿಂದೆ ನಿಧಾನವಾಗಿ ಬರುತ್ತಿದ್ದೆವು ನಾವು ಕಾಲ್ ಮಾಡಿ ಮುಂದೆನವರಿಗೆ ಹೇಳುವುದರೊಳಗೆ ಉಳಿದ 4 ಬೈಕ್ ಗಳು 20km ಮುಂದೆ ಹೋಗಿದ್ದವು, ಆಗ ಸರಿಯಾಗಿ 2:30AM ಆಗಿತ್ತು . ಹೊಸ ವರ್ಷವನ್ನು ಸೂರ್ಯೋದಯ ನೋಡವ ಮೂಲಕ ಪ್ರಾರಂಭಿಸ ಬೇಕು ಎಂಬ ನಮ್ಮ ಕನಸು ಆಸೆ ನುಚ್ಚು ನೂರಗುತ್ತದೆ ಎನ್ನುವ ನಮಗೊಂದು ಅಶುಭ ಬೈಕ್ ಪಂಚರ್ ಆಗಿ ಸೂಚಿಸಿತ್ತು. 20 ನಿಮಿಷದ ನಂತರ ಅಭಿ ಹಾಗು ಸಂದೀಪ ನನ್ನ ಹಾಗು ವಿನಯನನ್ನು ಕರೆದು ಕೊಂಡು ಹೋಗಲು ಬಂದರು. ಅಷ್ಟರಲ್ಲಿ ಪನ್ಚರ್ ಆದ ಬೈಕ್ ನ್ನು ಯಾವುದೊ ಒಂದು ಕಛೇರಿಯ ಕಾವಲುಗಾರನ ಅನುಮತಿ ಕೇಳಿ ಅಲ್ಲೇ ಇರಿಸಿದೆವು, ಮೂರು ಮೂರು ಜನ ಎರಡು ಬೈಕ್ ಗಳಲ್ಲಿ ಕುಳಿತು ಹೇಗೋ ಪೊಲೀಸರಿಗೆ ಸಿಗದೇ ಬಂದು ದೇವನಹಳ್ಳಿ ಕ್ರಾಸ್ ಗೆ ಬಂದು ತಲುಪಿದೆವು, ಇನ್ನು ಮುಂದೆ ಮೂರೂ ಜನ ಕುಳಿತು ಹೋಗಲು ಅಸಾಧ್ಯ, ಪೋಲಿಸ್ ತಪಾಸಣೆ ಅತಿ ಬಿಗಿಯಾಗಿ ಇರುತ್ತದೆ ನ್ಯೂ ಇಯರ್ ಬೇರೆ ಎಂದು ತಿಳಿದು ಅಲ್ಲೇ ಚಹಾ ಕುಡಿಯತ್ತಾ ಯಾರಾದ್ರು ನಂದಿಬೆಟ್ಟಕ್ಕೆ ಹೋಗುವವರು ಬಂದ್ರೆ ಡ್ರಾಪ್ ತಗೋಬೇಕು ಅಂತ ಕಾಯುತ್ತಿದ್ದಾಗ ಸಂದೀಪನ ಹಳೆ ಗೆಳೆಯನೊಬ್ಬ ಕಾರ್ ನಲ್ಲಿ ಬಂದು ಅಲ್ಲೆ ಚಹಾ ಕುಡಿಯಿತಿದ್ದ, ಸಂದೀಪ ಅವನಿಗೆ ನಮ್ಮ ಗಾಡಿ ಪಂಚರ್ ಆದ ಬಗ್ಗೆ ತಿಳಿಸಿ, ನಮಲ್ಲಿ ಇಬ್ಬರನ್ನು ಕಾರ್ ಅಲ್ಲಿ ಕರೆದುಕೊಂಡು ಹೋಗು ಅಂತ ವಿನಂತಿಸಿದ !
ಅವನು "ಇಲ್ಲ ಒಬ್ಬರನ್ನು ಮಾತ್ರ ಕೂರಿಸಬಹುದು, ೧ ಸೀಟ್ ಮಾತ್ರ ಕಾರ್ ಅಲ್ಲಿ ಖಾಲಿ ಇದೆ" ಅಂದ. ಸಂದೀಪ "ಆಗ್ಲಿ ಒಕೆ" ಅಂದ ! ಅವನಿಗೆ ಎನು ಅನಿಸಿತೊ ಎನೋ ಇನ್ನು ಒಬ್ಬರನ್ನು ಬೇಕಾದ್ರೆ ಕಾರ್ ಅಲ್ಲಿ ಕೂರಿಸು, ಬೈಕ್ ರೈಡ್ ಮಾಡಿ ತುಂಬ ದಿನ ಆಯಿತು ನನಗೆ ಒಂದು ಬೈಕ್ ಕೊಡಿ ಅಂತ ಸಂದೀಪನನ್ನು ಪೀಡಿಸಿದ; ಅವನು ಕುಡಿದಿದ್ದ. ಅವನು ಬೈಕ್ ರೈಡ್ ಮಾಡಲು ನಾವು ಒಪ್ಪಲಿಲ್ಲ, ಬೈಕ್ ಕೊಡಲು ನಿರಾಕರಿಸದ್ದಕ್ಕೆ ಅವನು ತುಂಬ ಹಠ ಹಿಡಿದ, ಅಲ್ಲೆ ತುಂಬ ದೊಡ್ಡ ತಪ್ಪು ಆಗಿದ್ದು !
ಅವನಿಗೆ ಬೈಕ್ ಕೊಟ್ಟು ಬಿಟ್ಟೆವು, ನಾನು ಮತ್ತು ಇನ್ನೊಬ್ಬ ಗೆಳೆಯ ಕಾರ್ ನಲ್ಲಿ ಕುಳಿತೆವು !
ಎಲ್ಲರು ನಿಧಾನವಾಗಿ ಜಾಗೃತೆಯಿಂದ ಹೋಗುತ್ತಿದ್ದೆವು, ಆ ಕುಡಿದಿದ್ದ ಗೆಳೆಯನ ಬೈಕ್ ಮಾತ್ರ ಅತಿ ವೇಗದಲ್ಲಿ ಇತ್ತು, ಅದು ಮಾತ್ರ ನಮಗೆ ಕಾರ್ ನಲ್ಲಿ ಕಾಣುತ್ತಿರಲಿಲ್ಲ, ಅವನ ಹಿಂದೆ ಇನ್ನೊಬ್ಬನು ಕುಳಿತಿದ್ದ ಅವರ ಬೈಕ್ ಒಂದೆ ನಮಗೆ ಸರಿಯಾಗಿ ಕಾಣುತಿಲ್ಲ ಮುಂದೆ ವೇಗವಾಗಿ ಹೋಗಿರಬಹುದು ಎಂದು ಸುಮ್ಮನಾದೆವು. ನಮ್ಮ ಕಾರ್ ಮುಂದೆ ಇತ್ತು ಉಳಿದ ಬೈಕ್ ಗಳು ನಮ್ಮ ಹಿಂದೆ ಬರುತ್ತಿದ್ದವು ! ಸ್ವಲ್ಪ ದೂರ ಹೋದ ನಂತರ ರಸ್ತೆಯ ಪಕ್ಕದಲ್ಲಿ ಆ ಸಮದಲ್ಲಿ ಬೈಕ್ ಒಂದು ಗಿಡಗಂಟೆಯಲ್ಲಿ ಸಿಕ್ಕಿ ಬಿದ್ದದನ್ನು ನೋಡಿ ನಿಲ್ಲಿಸಿದೆವು. ಹೌದು ! ಅದೊಂದು ದೊಡ್ಡ ತಿರುವು ಅವನು ಬ್ರೆಕ್ ಹಾಕಿಲ್ಲ, ತಿರುವನ್ನು ಗುರುತಿಸಿಲ್ಲ ! ಬೈಕ್ ಜಿಗಿದು ಮರಗಿಡಗಳಲ್ಲಿ ಬಿದ್ದಿತ್ತು ನೋಡಿ ಹೃದಯ ಜಲ್ ಅಂದಿತ್ತು ! ಅದು ನಮ್ಮ ಸ್ನೇಹಿತನ ಬೈಕ್ ಆಗಿತ್ತು !
ಸಾವಿನ ದವಡೆಯಿಂದ ಪಾರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದೆವು. ಬೆಳಿಗ್ಗೆ ಐದು ಗಂಟೆಗೆ ಕ್ಷ-ಕಿರಣ ಮಾಹಿತಿ ಬಂತು 'ಬೆನ್ನು ಮೂಳೆಯಿಂದ ಕೈಗೆ ಸೇರುವ ಮೂಳೆ ಮುರಿದಿತ್ತು ', ಅವನಿಗೆ ಇನ್ನು ನಾಲ್ಕೆದು ದಿನಗಳಲ್ಲಿ ಪರೀಕ್ಷೆ ಬೇರೆ ಇತ್ತು, ಮೂಳೆ ಮುರಿದಿರುವುದು ಬಲಗೈಗೆ ಅವನು ಇನ್ನು ಬರೆಯಲಾರ !
ಹಿಂದೆ ಕೂತವನಗೆ ದೇವರ ಅನುಗ್ರಹವಿತ್ತು ಅನಿಸುತ್ತೆ, ಹಸಿ ಹುಲ್ಲಿನ ಪೊದೆದಲ್ಲಿ ಬಿದ್ದು ಬಚಾವ್ ಆಗಿದ್ದ. ಆದರೆ ತುಂಬಾ ಗಾಯಗಳಾಗಿದ್ದವು ! ನಂದಿಬೆಟ್ಟದಲ್ಲಿ ಹೊಸವರ್ಷಕ್ಕೆ ಸೂರ್ಯೋದಯ ನೋಡಲು ಆಸೆ ಇಟ್ಟಿದ್ದ ನಮ್ಮ ಕಥೆ ದುರಂತದಲ್ಲಿ ಅಂತ್ಯವಾಯಿತು. ಬೆಳಿಗ್ಗೆ ಆರು ಗಂಟೆಗೆ ನರ್ಸಿಂಗ್ ಹೋಂ ಒಂದರಲ್ಲಿ ಇದ್ದು ಕಿಟಕಿಯಲ್ಲಿ ಸೂರ್ಯೋದಯ ನೋಡವ ಪರಿಸ್ಥಿತಿ ..
"ಆದರು ಅದು ನಮಗೆ ಹ್ಯಾಪಿ ನ್ಯೂ ಇಯರ್ ಏಕೆಂದರೆ ಅವನು ಒಂದು ವೇಳೆ ಅಲ್ಲಿಯೇ ಸ್ಪಾಟ್ ಡೆತ್ ಆಗಿದ್ದರೆ ಏನು ಕಥೆ ಎಂದನಿಸಿಸು ?" ಅದಕ್ಕೆ "ಜೀವನದಲ್ಲಿ ದಯವಿಟ್ಟು ಒಂದು ಸಂಕಲ್ಪ ಮಾಡಿ ಕುಡಿದು ಎಂದು ವಾಹನ ಚಲಾಹಿಸಬೇಡಿ"
ಆದ್ದರಿಂದಲೇ ನಾನು ಈ ಲೇಖನಕ್ಕೆ " ಅಮಲು ಮೋಜಿನ ಜೀವನದಲ್ಲಿ ಬದುಕಿಗೊಂದು ಸಂಕಲ್ಪ ಬೇಕು " ಎಂದು ಹೆಸರು ಇಟ್ಟಿರುವೆ. ಯುವಕರಾದ ನಾವು ಸದಾ ಖುಷಿಯನ್ನೂ ಅಮಲನ್ನು ಬಯಸುತ್ತಾ ನಮ್ಮನ್ನೇ ನಾವು ಮರೆಯುತ್ತೇವೆ, ತಾತ್ಕಾಲಿಕ ಸುಖಕ್ಕೆ ಜೀವನವನ್ನೇ ಬಲಿಪಡಿಸುತ್ತೇವೆ ಕುಡಿದು ವಾಹನ ಚಲಾಯಿಸುವುದು ಒಂದೇ ಅಲ್ಲಾ ಇನ್ನು ಅನೇಕ ವಿಷಯಗಳಿವೆ, ನಮ್ಮನ್ನು ನಾವು ವಿಮರ್ಶಿಸಿ ಕೊಳ್ಳಬೇಕು ಕೊನೆಗೆ ಒಂದು ಸಂಕಲ್ಪ ಮಾಡಬೇಕು ಅದೇ ನಮ್ಮ ಜೀವನಕ್ಕೆ ಸೂರ್ಯೋದಯವಾದಂತೆ ನಂದಿ ಬೆಟ್ಟದಲ್ಲಾಗುವಂತಹ ರಮಣೀಯ ಹೊಂಗಿರಣ ನಮ್ಮ ಬದುಕಿಗೆ ಆದಂತೆ ಅಲ್ಲವೇ ? ಮತ್ತೊಮ್ಮೆ ಹೇಳುವೆ " ಅಮಲು ಮೋಜಿನ ಜೀವನದಲ್ಲಿ ಬದುಕಿಗೊಂದು ಸಂಕಲ್ಪ ಬೇಕು "
ಚೆನ್ನಾಗಿದೆ .
ಸ್ವಯನಿಯಂತ್ರಣವಿಲ್ಲದಿದ್ದರೆ ಏನೆಲ್ಲಾ ಅನಾಹುತಗಳಾಗಬಹುದಕ್ಕೆ ಒಂದು ಪರಿಣಾಮಕಾರಿ ನಿದರ್ಶನವನ್ನು ನೀಡಿದ್ದೀರಿ.
Wonderful Article … Impressive
ಪ್ರವೀಣ್ ಹಾದಿ ತಪ್ಪಿದನೇ? ಎ಼ಂದು ಓದುತ್ತಾ ಹೋದೆ…. ಇಲ್ಲ ಇಲ್ಲ ಒಳ್ಳೆ ಮಾರ್ಗದರ್ಶಕನಾಗಿದ್ದಾನೆ… ಚೆನ್ನಾಗಿದೆ