ಅಮರ್ ದೀಪ್ ಅಂಕಣ

ಅನಪೇಕ್ಷಿತ ಶಿಕ್ಷೆಯ ಮೂಲ ಅಕಾರಣ ಶೋಷಣೆ: ಅಮರ್ ದೀಪ್ ಪಿ.ಎಸ್.

ಆ ದಿನ ಯಾಕೋ "ಆತ"ನಿಗೆ ಕಣ್ಣಿಗೆ ಪಟ್ಟಿ ಕಟ್ಟಿ ಬಿಟ್ಟ ದಿನ… ನಡೆದದ್ದು ಆಫೀಸಿಗೆ,ದೇಕಿದ್ದು ಕೆಲಸವೇ ಆದರೂ ಎದುರಾದದ್ದು ಕೆಟ್ಟ ಸಂಜೆ ಸಮಯ.   ಆತ ಆ ದಿನ ಇದ್ದ ಇಷ್ಟೇ ಕೆಲಸಗಳನ್ನು ಮುಗಿಸಿ ಗೆಳೆಯ ಬಂದನೆಂದ ಕಾರಣಕ್ಕೆ ಅದೇ ಆವರಣದ ಇನ್ನೊಂದು ಕಚೇರಿಗೆ ಒಂದೆರಡು ನಿಮಿಷದ ಮಟ್ಟಿಗೆ ತೆರಳುತ್ತಾನೆ.  ವಾಪಸ್ಸು ಬರುವುದರೊಳಗೆ ಎಂಕ, ನೋಣ ಸೀನ ಎಂಬಂತಿದ್ದ ಮೂರ್ನಾಲ್ಕು ಜನ ಸಿಬ್ಬಂದಿ ಎದುರಿಗೆ ಹತ್ತು ಹದಿನೈದು ಜನರ ಗುಂಪೊಂದು ಕಚೇರಿಗೆ ಬಂದು "ಆತ "ನನ್ನು ಹುಡುಕುತ್ತಾರೆ, ಕಚೇರಿ ಮುಖ್ಯಸ್ಥರ ಎದುರಿಗೆ ಆತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಸಿಕ್ಕರೆ ಒಂದು ಗತಿ ಕಾಣಿಸುವುದಾಗಿ ಬೆದರಿಸುತ್ತಾರೆ. ಅಷ್ಟಕ್ಕೂ ಅವರು ಬಂದಿದ್ದೇಕೆಂದರೆ, ಒಬ್ಬ ಮಹಿಳಾ ಸಿಬ್ಬಂದಿ ಆತನ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿ "ಆತ ನನ್ನನ್ನು ಮನೆಗೆ ಬಾ ಎಂದು ಕರೆದನೆಂದು" ಆ ಗುಂಪಿನ ಮುಖ್ಯಸ್ಥರಿಗೆ ದೂರು ನೀಡಿರುತ್ತಾರೆ. ಕಚೇರಿಯಲ್ಲಿ ಆ ಮಹಿಳಾ ಸಿಬ್ಬಂದಿಗೆ  ಲೈಂಗಿಕ ಕಿರುಕುಳ ನೀಡಿದ್ದಾರೆಂಬುದು ಅವರ ಗ್ರಹಿಕೆ ಅಥವಾ ಹುನ್ನಾರ.  
 
ಆತ ಕಚೇರಿ ಮುಖ್ಯಸ್ಥನಲ್ಲ, ಅಧಿಕಾರ ಅವನ ದಾಹವಲ್ಲ, ಆತ  ಕೇವಲ ಆ ಮಹಿಳಾ ಸಿಬ್ಬಂದಿಯಂತೆಯೇ ಒಬ್ಬ ನೌಕರ.  ofcourse ಆ ಮಹಿಳಾ ಸಿಬ್ಬಂದಿಗಿಂತ ಉನ್ನತ ಹುದ್ದೆಯಲ್ಲಿದ್ದ. ಆ ಮಹಿಳಾ ಸಿಬ್ಬಂದಿ ಆತನ ನೇಮಕಾತಿ ನಂತರದ ಎರಡು ವರ್ಷದಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿರುತ್ತಾರೆ.    ಕಚೇರಿಯಲ್ಲಿ ಆಡಳಿತದ ಮುಖ್ಯಸ್ಥರೊಬ್ಬರು ಆಗಿನ ಸಂಧರ್ಭದಲ್ಲಿ ಮಾನವ ಸಂಭಂಧಗಳ ಮೌಲ್ಯ ಮತ್ತು ಮಾನವ ಸಹಜ ಕಳಕಳಿಯಿಂದ ಎಲ್ಲಾ ನೌಕರನನ್ನು ಆತ್ಮೀಯತೆಯಿಂದ ನೋಡುತ್ತಿರುತ್ತಾರೆ.  ಆ ಮಹಿಳಾ ಸಿಬ್ಬಂದಿ ನೇಮಕಗೊಂಡ ಹೊಸತರಲ್ಲಿ ಮುಖ್ಯಸ್ಥರು ಆತನಿಗೆ ತನ್ನ ದಿನನಿತ್ಯದ ಕೆಲಸ ದೊಂದಿಗೆ ಆ ಮಹಿಳಾ ಸಿಬ್ಬಂದಿಗೆ ಅವರ  ಶಾಖೆಯ ಕೆಲಸ ಕಾರ್ಯಗಳನ್ನೂ  ಹೇಳುವುದು, ಅವರಿಗೆ  ತಿಳಿಯದಿದ್ದ ಪಕ್ಷದಲ್ಲಿ ಆತನೇ ಆ ಕೆಲಸಗಳನ್ನು ನಿರ್ವಹಿಸಲು  ಸೂಚಿಸಿರುತ್ತಾರೆ.  ಕಾಲ ಹೀಗೆ ಸಾಗುತ್ತದೆ. ವರ್ಷದಿಂದ  ವರ್ಷ ಕಳೆಯುತ್ತದೆ.  ಆ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಕುರಿತು ವಾರ್ಷಿಕ ವರದಿಯಲ್ಲಿ  ನಿಯಂತ್ರಣಾಧಿಕಾರಿಯ ಷರಾ ಅದೇನು ಇರುತ್ತಿತ್ತೋ ಆತನಿಗಂತೂ ತಿಳಿದಿದ್ದಿಲ್ಲ.. 
  
ಅದೇನಾಗಿತ್ತೆಂದರೆ, ಆ ಮಹಿಳಾ ಸಿಬ್ಬಂದಿ ನೇಮಕಗೊಂಡ ಏಳು ವರ್ಷಗಳ ಅವಧಿಗೂ ಕಾರ್ಯನಿರ್ವಹಣೆ ಯನ್ನು ಸುಧಾರಿಸಿಕೊಳ್ಳದ ಕಾರಣವಾಗಿ ಅದೊಮ್ಮೆ ಇಲಾಖಾ ಮುಖ್ಯಸ್ಥ ಕಚೇರಿಯಿಂದ ಬಂದಂಥ ತಪಾಸಣಾ ಸಿಬ್ಬಂದಿಯು "ಆ ಮಹಿಳಾ ಸಿಬ್ಬಂದಿಯು ತನ್ನ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸದ ಹೊರತು ಸೇವೆಯಿಂದ ಮುಕ್ತಿಗೊಳಿಸಬಹುದಾಗಿದೆ"ಎಂದು ದಾಖಲಿಸಿ ಹೋದರು.  ಅದಾಗಿ  ನಾಲ್ಕಾರು ತಿಂಗಳಷ್ಟೇ ಆಗಿತ್ತು. ತಪಾಸಣಾ ಸಿಬ್ಬಂದಿಗೆ "ಆತ"ನೇ ಮಸಲತ್ತು ಮಾಡಿ ಆ ಮಹಿಳಾ ವಿರುದ್ಧ ತಪಾಸಣೆ ವರದಿಯಲ್ಲಿ ದಾಖಲಿಸಲು ಪ್ರೇರೆಪಿಸಿದ್ದಾನೆಂಬುದು ಆ ಮಹಿಳಾ ಸಿಬ್ಬಂದಿ ತಪ್ಪು ಕಲ್ಪನೆಯಾಗಿತ್ತು.  ಅದೇನು ವ್ಯವಸ್ಥಿತ ಸಂಚು ರೂಪಗೊಂಡಿತೋ ಏನೋ… ಆತನ ಮೇಲೆ " ಮನೆಗೆ ಕರೆಯುತ್ತಾನೆಂಬ ಆರೋಪ"ಹೊರಿಸಿ ಅವತ್ತು ಗುಂಪೊಂದು ಬಂದಿದ್ದು, ಗಲಾಟೆ ಮಾಡಿದ್ದು, ಸಾಲದೆಂಬಂತೆ ಸಾಕ್ಷಿಯಾಗಿ ಬಂದವರು ತಮ್ಮ ವಿಸಿಟಿಂಗ್ ಕಾರ್ಡ್ ಕೂಡ ಕೊಟ್ಟು ಹೋಗಿದ್ದರು. 
 
ಅಷ್ಟೇ…. 
 
ಆತ ತಾನು ಮಾಡದ ತಪ್ಪಿಗೆ ಇಂಥ ಆರೋಪ ಹೊತ್ತು ಬಹಳ ಪೇಚಿಗೆ ಸಿಲುಕಿದ.  ಮೊದಲು ಕಚೇರಿಯ ಮುಖ್ಯಸ್ಥರಿಗೆ, ನಂತರ ನೌಕರರ ಸಂಘಕ್ಕೆ ದೂರು ನೀಡಿದ.  ಘಟನೆ ನಡೆದ ಸಂಧರ್ಭದಲ್ಲಿ ಹಾಜರಿದ್ದ ಸಿಬ್ಬಂದಿ ಮುಂಚಿನಿಂದಲೂ ಕಚೇರಿಯಲ್ಲಿ ನಡೆವ ದಿನನಿತ್ಯದ ನಡೆಗಳನ್ನು ನೋಡಿದವರೇ ಆಗಿದ್ದರಿಂದ ಘಟನೆ ಕುರಿತು ವಿವರವನ್ನು ಲಿಖಿತವಾಗಿ ನೀಡಿದರು.  ಆ ಮಹಿಳಾ ಸಿಬ್ಬಂದಿಗೆ  ನೋಟಿಸ್ ನೀಡಿ, ಸಮಜಾಯಿಷಿ ಕೂಡ ಪಡೆಯಲಾಯಿತು.  ಈ ಬಾರಿ ಲಿಖಿತ ಸಮಜಾಯಿಷಿಯಲ್ಲಿ "ಆತನನ್ನು" ಮಾತ್ರವೇ ದೂಷಿಸದೇ ಇನ್ನೊಬ್ಬ ಅಧಿಕಾರಿಯನ್ನೂ ಟಾರ್ಗೆಟ್ ಮಾಡಲಾಯಿತು..  ಅಂದರೆ ಆ ಅಧಿಕಾರಿಯೂ ಆ ಮಹಿಳಾ ಸಿಬ್ಬಂದಿಯನ್ನು ಜೊತೆಗೆ ಊಟಕ್ಕೆ, ಸಿನಿಮಾಕ್ಕೆ ಕರೆಯುತ್ತಿದ್ದ ನೆಂಬುದು ತಿರುಳು..  ಒಂದು ವೇಳೆ ಹೆಚ್ಚಿಗೆ ವಿಚಾರಣೆ ಒಳಪಡಿಸಿದರೆ ಕಛೇರಿಯಲ್ಲೇ ನೇಣು ಹಾಕಿಕೊಂಡು ಸಾಯುತ್ತೇನೆ ಅಂತಲೂ ಆ ಸಮಜಯಾಷಿಯಲ್ಲಿ ಬರೆದಿದ್ದಳು; ಆ ಮಹಿಳೆ.  ಆ ನಂತರ ಮತ್ತೊಂದು ಸಮಜಾಯಿಷಿ ನೀಡಿ ತಾನು ಹೊರಗಿನ ವ್ಯಕ್ತಿಗಳನ್ನು  ಕಚೇರಿಗೆ "ಆತನನ್ನು " "ವಿಚಾರಿಸಲು" ಕಳುಹಿಸಿದ್ದು ತಾಪ್ಪಾಗಿದೆಯೆಂದು ಒಪ್ಪಿದ್ದಳು. 
 
ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡುತ್ತಿದ್ದ ನಿಯಂತ್ರಣಾಧಿಕಾರಿ ಕಾನೂನು ಬಲ್ಲವರು, ಕಾನೂನು ಸೇವೆ ಸಲ್ಲಿಸಿದ ವರು  ಆದ್ದರಿಂದ ಅವರಿಗೆ "ಆತ್ಮಹತ್ಯೆ ಮಾಡಿಕೊಳ್ಳುತ್ತೇನೆನ್ನುವುದು ಕೂಡ ಅಪರಾಧ ಎನ್ನುವುದನ್ನು ತಿಳಿಸಿ ಹೇಳುವ ಪ್ರಯತ್ನ ಮಾಡಿದರಾದರೂ ಪ್ರಯೋಜನವಾಗಲಿಲ್ಲ.  ನಿಜವಾಗಲೂ ಆ ಮಹಿಳಾ ಸಿಬ್ಬಂದಿಗೆ ಇರುವ ಸಣ್ಣ ಶಾಖೆಯ ಕೆಲಸಗಳನ್ನು ಸ್ವಂತ ಬುದ್ಧಿಯಿಂದ ಮಾಡುವುದೇ ದುಸ್ತರವಾಗಿರುವಾಗ, ಆ ದಿನ ಬೇಕೆಂದೇ ಒಂದು ದಿನ ಅನಾರೋಗ್ಯದ ಕಾರಣವಾಗಿ ರಜೆ ಹಾಕುತ್ತಾರೆ, ಆ ರಜೆ ದಿನದಂದೇ ಆ ಮಹಿಳಾ ಪರವಾಗಿ ಒಂದು ಗುಂಪು ಕಚೇರಿಗೆ ಬಂದು ಗಲಾಟೆ ಮಾಡುತ್ತದೆ.  ಕಾರಣ ಕೇಳಿ ನೀಡಿದ ನೋಟಿಸಿಗೆ ಆ ಮಹಿಳೆ ಆತ್ಮಹತ್ಯೆ ಬೆದರಿಕೆ ಮಾದರಿಯಲ್ಲಿ ಸಮಜಾಯಿಷಿ ನೀಡುತ್ತಾರೆ.  ಇವೆಲ್ಲವೂ ಆ ಅರೆ ಬೆಂದ ಬುದ್ಧಿಯ ಮಹಿಳೆಗೆ ಖಂಡಿತಾ ಹೊಳೆದಿರುವುದಿಲ್ಲ..  "ಭೂಪ"ನೊಬ್ಬನು  ಪ್ರವೊಕ್ ಮಾಡಿದ್ದರಿಂದಲೇ ಆ ಮಹಿಳೆ ಮುಂದಿನ ಪರಿಣಾಮಗಳನ್ನು ಎಣಿಸದೇ ದುಡುಕಿ ಮಾಡಿದ್ದಾಗಿತ್ತು. 
 
ಆಗಿನ್ನೂ ಸುದ್ದಿ ಮಾಧ್ಯಮದ ಚಾನಲ್ ಗಳು ಇನ್ನು ಹುಟ್ಟುತ್ತಿದ್ದ ಸಮಯ.  ಈ ಹಕೀಕತ್ತಿನ ಹಿಂದಿದ್ದ ವ್ಯಕ್ತಿಯೊಬ್ಬ ಒಂದೆರಡು ಮಾಧ್ಯಮದವರನ್ನು ಕಚೇರಿಗೆ ಕರೆ ತಂದ.  ಆರೋಪಿಸಿದಂಥ ವ್ಯಕ್ತಿ ಮುಂದೆ ಕುಳಿತು ಘಟನೆ ಯನ್ನು ವರದಿ ಮಾಡುವುದಾಗಿ ಹೇಳಿಸುತ್ತಾನೆ.. "ಆತ"  ತಣ್ಣಗೆ ಅವರಿಗೆ ಇದ್ದ ಮಾಹಿತಿ ನೀಡುತ್ತಾ "ಮಾಡುವು ದಾದರೆ ಎಲ್ಲಾ ಸಿಬ್ಬಂದಿ ಅಧಿಕಾರಿ ಹೇಳಿಕೆ ಮತ್ತು ದಾಖಲೆ ಸಮೇತ ವರದಿ ಮಾಡುವುದಾದಲ್ಲಿ ತಪ್ಪೇನು ಇಲ್ಲ"  ಅಂದ. 

ಈ ವಿಷಯ ಎಲ್ಲಿಗೆ ಹೋಯಿತೆಂದರೆ, ವಿಧವಾ  ಮಹಿಳಾ ಸಿಬ್ಬಂದಿಗೆ ತೊಂದರೆ ನೀಡುತ್ತಿರುವ ಮಟ್ಟಿಗೆ ಮುಟ್ಟಿತು.  ನಿಜವಾಗಲೂ ಆ ವಾತಾವರಣವೇ ಅಲ್ಲಿದ್ದಿಲ್ಲ.  ಆದರೆ, ಸಂಘ, ಸಂಘಟನೆ,ಜಾತಿ ಗುಂಪು,  ವ್ಯಕ್ತಿಗಳ ಗುಂಪು, ಸಂಧರ್ಭ ಮತ್ತು ಅವಕಾಶವಾದಿಗಳ ಗುಂಪು  ಇವೆಲ್ಲವೂ ಸೇರಿ ಇದ್ದ ವಿಷಯವನ್ನು ಸರಿ ಯಾಗಿ ಪರಾಮರ್ಶಿಸದೇ, ಕೂಲಂಕುಷವಾಗಿ ಪರಿಶೀಲಿಸದೇ ಹೋರಾಟ ಮಾಡಿದಲ್ಲಿ  ಕೆಲವು ಅವಘಡಗಳು ಹೀಗೇ ಆಗುತ್ತವೆ.  ಮತ್ತವು ಇನ್ಯಾರೋ ತಪ್ಪಿತಸ್ಥನಲ್ಲದವರನ್ನು ಬಲಿ ಪಡೆಯುವ ಸಂಭವವೂ ಉಂಟಾಗ ಬಹುದು. ಸಧ್ಯಕ್ಕೆ ಈ ಪ್ರಕರಣದಲ್ಲಿ "ಆತ" ನನ್ನು, ಆತನ ಕೆಲಸವನ್ನು, ಕಚೇರಿಯ ವಾತಾವರಣವನ್ನು ಕಣ್ಣಾರೆ ಕಂಡಂಥ ಇನ್ನೊಬ್ಬ ಮಹಿಳೆಯೊಬ್ಬರು ಆಗುವ ಗದ್ದಲವನ್ನು ತಡೆಹಿಡಿದರು. 
 
ದುರಂತವೆಂದರೆ,  ಆ ಮಹಿಳಾ ನೌಕರರು ತಮ್ಮ ಇಡೀ ಸೇವೆಯಲ್ಲಿ ಕಾರ್ಯನಿರ್ವಹಣೆಯನ್ನು ಸುಧಾರಿಸಿ ಕೊಳ್ಳದ ಒಂದು ಕಾರಣ,ಸುಳ್ಳು ಆರೋಪ ಮತ್ತು ವ್ಯಕ್ತಿ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣದ ಮೇಲೆ ಇಲಾಖಾ ವಿಚಾರಣೆ ನಡೆದು ಆ ವಿಚಾರಣೆಯಲ್ಲಿ  ಹಾಜರಾಗಿ ತಪ್ಪನ್ನು ಒಪ್ಪಿಕೊಳ್ಳುವ ಅಥವಾ ತಾನು ಮಾಡಿದ್ದು ಸರಿ ಯೆನ್ನುವ ವಾದಕ್ಕೆ ಬದ್ದಳಾಗಿ ಎದುರಿಸಲೂ ಹೋಗದೇ ನೌಕರಿಯಿಂದಲೇ ವಜಾಗೊಂಡುಬಿಟ್ಟಳು.  ಸರ್ಕಾರದ ಮಟ್ಟದಲ್ಲಿ, ಕರ್ನಾಟಕ ಆಡಳಿತ ಮಂಡಳಿ ( KAT) ಯಲ್ಲಿ ಆ ಮಹಿಳಾ ನೌಕರರ ಮೇಲ್ಮನವಿಗಳು ತಿರಸ್ಕೃತ ಗೊಂಡವು.. ಆ ಕಡೆ ನೌಕರಿಯೂ ಇಲ್ಲ, ಆಸರೆಯೂ ಇಲ್ಲ..  ಕೇವಲ ಗಂಡನ ಮರಣದಿಂದ ಬರುವ ಪಿಂಚಣಿ ಯಷ್ಟೇ ಆಧಾರವಾಗಿ ಉಳಿದಿದೆ.  ಆದರೆ ಇದೊಂದು ರಗಳೆಯನ್ನು ಪೂರ್ವ ನಿಯೋಜಿಸಿ ಗಂಡಾಂತರ ತಂದಿಟ್ಟ "ಭೂಪ" ಮಾತ್ರ ಆ ವಜಾಗೊಂಡ ಮಹಿಳಾ ನೌಕರಳಿಗೆ ಆಸರೆ ಆಗಿದ್ದಾನೋ ಇಲ್ಲವೋ ತಿಳಿಯಲಿಲ್ಲ. 
 
ಆ ಪ್ರಕರಣದ  ಬಿಸಿ ಇದ್ದಷ್ಟು ದಿನಗಳ ಕಾಲ ಆತ ಒಂಟಿಯಾಗಿ ಹೀರೋ ರೇಂಜರ್ ಸೈಕಲ್ ನಲ್ಲಿ ತಿರುಗುತ್ತಿದ್ದ. ಯಾಕಂದ್ರೆ ಅವನಿಗೆ ಆ ಪ್ರಕರಣದಲ್ಲಿ ಯಾವ ಆಸಕ್ತಿಯೂ ಇದ್ದಿಲ್ಲ.  ಯಾರು ಏನಾದರು ಮಾಡಿಯಾರೆಂಬ ಹೆದರಿಕೆಯೂ ಇದ್ದಿಲ್ಲ.  ಉಪ್ಪು ತಿಂದವರು ಮಾತ್ರ ನೀರು ಕುಡಿದರು.             

ಇಂದೊಂದು ಪ್ರಕರಣವಷ್ಟೇ.  ನೌಕರಿ ಹುಡುಕುವ ದರ್ದಿನಲ್ಲಿ ಸಿಕ್ಕರೆ ಸಾಕೆಂಬ ಹಪಾಹಪಿ ಇರುತ್ತೆ.  ಸಿಕ್ಕ ನಂತರ ಗುಂಪುಗಾರಿಕೆ, ದರ್ಪ, ಜಾತಿ, ಅಪಕ್ವತೆ ಮತ್ತು ದುರಹಂಕಾರದಿಂದ ನೌಕರಿಯನ್ನು ಕಡಿಮೆ ಕೆಲಸ ಮಾಡಿಯೂ ಉಳಿಸಿಕೊಳ್ಳಬಹುದು. ಆದರೆ, ಅವೇ ಜಾತಿ ಗುಂಪು, ವ್ಯಕ್ತಿಗಳ ಗುಂಪು, ದರ್ಪತನದ ಗುಂಪಿನ ಸಹಾಯದಿಂದ ತಮ್ಮ ಉಳುಕನ್ನು ಮುಚ್ಚಿಕೊಳ್ಳಲು ಇನ್ನೊಬ್ಬರನ್ನು ಬಲಿಪಶು ಮಾಡುವ ಸಣ್ಣತನದವರಿಗೆ ಒಮ್ಮೊಮ್ಮೆ ದೊಡ್ಡದೇ ಪೆಟ್ಟು ಜೀವನ ಪರ್ಯಂತ ಕಾಡಿದರೆ ಆಶ್ಚರ್ಯವಿಲ್ಲ.  ನೌಕರಿ, ಅಧಿಕಾರ, ಹುದ್ದೆ ಎಲ್ಲವು  ಇದ್ದದ್ದೇ. ಮೀಸಲಾತಿ, ಜಾತಿ,  ಜಾತಿಗೊಂದು ಕಾಯ್ದೆ, ಕ್ರಮ, ನಿಯಮ  ಎಲ್ಲ ಹಂತದಲ್ಲೂ ಇವೂ ಇದ್ದದ್ದೇ.  ಆದರೆ, ನೌಕರಿ ಅಂಥ ಬಂದಮೇಲೆ ದುಡಿಮೆಗೆ ನೀಡುವ ಸಂಬಳ, ಸವಲತ್ತು, ಹುದ್ದೆ, ಪದೋನ್ನತಿಗಾಗಿ ಮೀಸಲಾತಿಗಳನ್ನು ಉಪಯೋಗಿಸಿಕೊಳ್ಳಬೇಕೇ ವಿನಃ ವ್ಯಕ್ತಿಗತ ಹಣಾಹಣಿಗೆ ಯಾವುದೇ ಕಾಯ್ದೆಗಳನ್ನು  ದುರುಪಯೋಗಪಡಿಸಿಕೊಳ್ಳಬಾರದು. ಒಮ್ಮೊಮ್ಮೆ ನಿಜವಾಗಿಯೂ ದೌರ್ಜನ್ಯ ನಡೆದ ಸಂಧರ್ಭದಲ್ಲಿ ವಾಸ್ತವವನ್ನು ನಂಬದ ಸ್ಥಿತಿ ಉಂಟಾದರೂ ಅದು ಉತ್ಪ್ರೇಕ್ಷೆಯಲ್ಲ ಮತ್ತು ದುರುಪಯೋಗಪಡಿಸಿಕೊಂಡ ಕೆಲ ಕೈಗಳು ಅದಕ್ಕೆ ಕಾರಣವೆನ್ನುವುದು ಮಾತ್ರ ಒಪ್ಪತಕ್ಕದ್ದು…   

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಅನಪೇಕ್ಷಿತ ಶಿಕ್ಷೆಯ ಮೂಲ ಅಕಾರಣ ಶೋಷಣೆ: ಅಮರ್ ದೀಪ್ ಪಿ.ಎಸ್.

 1. ಯಾವುದೇ ತಪ್ಪು ಮಾಡದ "ಆತ"ನಿಗೆ
  ನ್ಯಾಯ ಸಿಗಲೇ ಬೇಕಾಗಿತ್ತು. ಸಿಕ್ಕಿತು.
  ಬುದ್ಡಿಗೇಡಿ ಮಹಿಳೆಗೆ ತಕ್ಕ ಶಾಸ್ತಿಯಾಯಿತು.
  ಚೆನ್ನಾಗಿದೆ ವಿಶ್ಲೇ‍ಷಣೆ.

 2. ಡಿಯರ್ ಅಮರ್, ಕವನ ಓದಿದೆ, ಹಿಂದಿನ ಸೇವೆಯ ದಿನಗಳು ನೆನಪಾದವು, ಒಳ್ಳೆತನಕ್ಕೆ ಬೆಲೆಇಲ್ಲ ಅನ್ನುವುದು ಮತ್ತೊಮ್ಮೆ ನೆನಪಿಗೆ ಬಂತು, ಅಂದು ನಾನು ಸಹ ಉದ್ಯೂಗಿಯಾಗಿದ್ದೆ, ಒಂದು ಘಟನೆ ನೋಡಿದ್ದೆ, ಇಂದು ಅಧಿಕಾರಿಯಾಗಿದ್ದೀನಿ ಸಮಸ್ಯಗಳ ಗುಂಪೇ ಕಣ್ಣಿನೆದುರುನಲ್ಲಿ ನಡೆಯುತ್ತಿವೆ, ದುರ್ಬುದ್ದಿಯ ಹೆಣ್ಣು ತನ್ನ ಆಸೆಗಾಗಿ ಸಹ ಉದ್ಯೂಗಿಗಳನ್ನು ಹಾಳುಮಾಡುವುದು ಸರಿಯಲ್ಲ, ಪ್ರತಿಫಲ ಉಂಡಳಲ್ಲ ಬಿಡು,,,,,,,,,,,,,,,,,,,,,,,,,,, ಧನ್ಯವಾದಗಳೊಂದಿಗೆ

  ಶ್ರೇಯೋಭಿಲಾಷಿ

 3. Dear Amar, official issues are infact dry subjects for creative writing. But, you have handled it nicely! 

   

 4. ಇಷ್ಟೊಂದು ವ್ಯಾಖ್ಯಾನಿಸಿದ ವಿವರಗಳು ನನ್ನಲ್ಲಿ ಇರಲಿಲ್ಲ.

 5. PÀZÉÃjAiÀÄ°è F jÃwAiÀÄ ¸ÀªÀĸÉåUÀ¼ÀÄ JzÀÄgÁUÀĪÀÅzÀÄ FUÀAvÀÆ ¸ÀªÉÃð ¸ÁªÀiÁ£ÀåªÁVzÉ.  M§âgÀªÉÄÃ¯É M§âgÀÄ DgÉÆÃ¥À ¥ÀævÁågÉÆÃ¥ÀUÀ¼ÀÄ £ÀqÉAiÀÄÄvÀÛ¯Éà EgÀÄvÀÛzÉ.  ¸ÀªÀĸÉåAiÀÄ£ÀÄß eÁUÀgÀÆPÀvɬÄAzÀ ¤¨sÁ¬Ä¸À¨ÉÃPÀÄ CµÉÖÃ.  ¨ÉÃgÉAiÀĪÀgÀ PÀÄvÀAvÀæ¢AzÀ M¼ÉîAiÀĪÀgÀÆ PÀµÀÖUÀ¼À£ÀÄß JzÀÄj¸À¨ÉÃPÁUÀÄvÀÛzÉ.  J®èzÀPÀÆÌ PÁ®ªÉà GvÀÛgÀ ¤ÃqÀÄvÀÛzÉ.  vÀ¥ÀÄà ªÀiÁrzÀªÀ£ÀÄ DvÀä¸ÁQë¬ÄAzÀ vÀ¦à¹PÉƼÀî¯ÁUÀzÉ PÀqÉAiÀÄ°è £ÀgÀ¼ÀÄvÁÛ£É.  F PÀ°AiÀÄÄUÀzÀ°è K£É¯Áè DUÀ¨ÁgÀzÉÆà CzÀÄ £ÀqÉAiÀÄÄvÀÛzÉ.  FUÀAvÀÆ vÁ£ÀÄ §zÀÄPÀ®Ä E£ÉÆߧâgÀ vÀ¯ÉvÉUÉAiÀÄ®Ä »AzÀĪÀÄÄAzÀÄ £ÉÆÃqÀzÀ d£À §ºÀ¼À EzÁÝgÉ.  ¨Á¬ÄAiÀÄ°è MAzÀÄ ªÀÄ£À¹ì£À°è E£ÉÆßAzÀÄ ElÄÖPÉÆAqÀÄ ªÀiÁvÁqÀÄvÁÛgÉ.  EAvÀºÀªÀgÀ£ÀÄß PÀAqÀÄ»qÀÄAiÀÄĪÀÅzÀÄ ºÁUÀÆ £ÀA§ÄªÀÅzÀÄ §ºÀ¼À PÀpt.

 6. ಲೇಖನ ಓದಿದೆ … ನಿಜಕ್ಕೂ ನಿಮ್ಮ ಧೈರ್ಯ ಮೆಚ್ಚಬೇಕು. ಮೀಸಲಾತಿಯನ್ನ ಜಾತಿ ಹೆಸರು ಬಳಸಿ ಇಂತಹ ಕೆಲಸ ಮಾಡುತ್ತೀರುವುದು ನಮ್ಮ ರಾಜ್ಯದ ದುರ್ದೈವ …
  ಅಭಿನಂದನೆಗಳು..
  @ Srinivas Pandit

Leave a Reply

Your email address will not be published. Required fields are marked *