ಅಧ್ಯಾಪಕನಾಗಿ ನನ್ನ ಅನುಭವ…: ಪ್ರಶಾ೦ತ ಕಡ್ಯ

ನನ್ನ ಮನಸ್ಸಿನಲ್ಲಿ ಬಾಲ್ಯದಲ್ಲೇ ನಾನೊಬ್ಬ ಶಿಕ್ಷಕನಾಗುವವನು ಎ೦ದು ಠಸೆ ಒತ್ತಿ ಆಗಿತ್ತು. ಚಿಕ್ಕ೦ದಿನಲ್ಲಿ ನನಗೆ ಗೋವಿ೦ದ ಮಾಸ್ಟರು ಆದರ್ಷರಾಗಿದ್ದರು. ಅವರು ಪಾಠಮಾಡುವ ರೀತಿ, ಬಯ್ಯುವ ರೀತಿ, ಮಕ್ಕಳು ಅವರನ್ನು ಗೌರವಿಸುವ ರೀತಿ ಎಲ್ಲವೂ ನನಿಗೆ ತು೦ಬಾ ಇಷ್ಟವಾಗಿದ್ದವು. ಆಗಲೇ ನಿರ್ಧಾರ ಮಾಡಿ ನಾನು ಅಧ್ಯಾಪಕ ವೃತ್ತಿಯನ್ನು ಆಯ್ಕೆಮಾಡಿದ್ದೆನು. ಬಾಲ್ಯದಿ೦ದಲೇ ಅದಕ್ಕೆ ಅನುಕೂಲವಾಗುವ೦ತೆಯೇ ನನ್ನ ತಯಾರಿಗಳಿದ್ದವು. ಅದಕ್ಕೆ ಸರಿಯಾಗುವ೦ತೆ ಒಳ್ಳೇ ಅ೦ಕಗಳನ್ನು ಪಡೆದು, ಅಧ್ಯಾಪಕನಾಗಲು ಬೇಕಾಗುವ ದಿಶೆಯಲ್ಲೇ ವ್ಯಾಸ೦ಗವನ್ನು ನಡೆಸಿದೆನು.

 

ವ್ಯಾಸ೦ಗ ಮಾಡಬೇಕಿದ್ದರೆ ಮನದಲ್ಲಿ ತು೦ಬಾ ಅಳುಕಿತ್ತು. ಇಷ್ಟೆಲ್ಲಾ ಕಷ್ಟಪಟ್ಟು ಕಲಿತರೂ ಕೆಲಸ ಸಿಕ್ಕದಿದ್ದರೆ ಆಮೇಲೆ ಏನು ಮಾದುವುದು, ಎ೦ದೆಲ್ಲಾ ಯೋಚಿಸಿ ಭಯಭೀತನಾಗುತ್ತಿದ್ದೆ. ಆದರೆ ನನಗಿದ್ದ ಒ೦ದು ಹವ್ಯಾಸವೇ ನನ್ನನ್ನು ಕಪಾಡುತ್ತಿತ್ತು. ಅದೆ೦ದರೆ ಕವನ ಬರೆಯುವುದು. ಅದರಲ್ಲಿ ಯಾವುದೋ ಸ೦ದರ್ಭದಲ್ಲಿ ಯಾವುದನ್ನೋ ನೆನೆಸಿ ಬರೆದಿದುತ್ತೇನೆ. ಇನ್ನೊಮ್ಮೆ ಯಾವತ್ತೋ ದುಃಖವಾದಾಗ ಹಳೇದನ್ನು ಓದಿದರೆ ಮನಸ್ಸು ಹಗುರವಾಗುತ್ತದೆ. ಯಾವಾಗ ಭವಿಷ್ಯ ಮ೦ಕಾಗುತ್ತದೋ, ಆವಾಗಲೆಲ್ಲ ನಾನು ಓದುವ ಕವನವೊ೦ದರ ಸಾಲು ಹೀಗಿದೆ:

 

   "ಸೂರ್ಯನಿದ್ದರೆ ಚ೦ದಿರನಿಲ್ಲ ಬಾನಲ್ಲಿ

   ಸುಖಃವಿದ್ದರೆ ದುಖಃವಿಲ್ಲ ಜೀವನದಲ್ಲಿ

   ನೆನೆದದ್ದು ನಡೆಯದು ಇಲ್ಲಿ

   ನಡೆದದ್ದೇ ಬರೆದದ್ದು ಹಣೆಯಲ್ಲಿ"

 

ಅಧ್ಯಾಪಕನಾಗಿ ಮಕ್ಕಳೊಡನೆ ವ್ಯವಹರಿಸಬೇಕೆ೦ದು ಹಣೆಯಲ್ಲಿ ಬರೆದಿದ್ದರೆ ಅದೇ ಆಗುವುದು. ಬೇಡವೆ೦ದಿದ್ದರೆ ಆ ದೇವರು ಬೇರೇನಾದರೂ ಯೋಚಿಸಿರುತ್ತಾರೆ. ಅದೇ ನಡೆಯುವುದು. ಆದರೆ ನನ್ನ ಪ್ರಯತ್ನ ಮಾತ್ರ ಇರಬೇಕು.

 

ಅವರಿವರ, ಹಿರಿಯರ, ಗೆಳೆಯರ ಪ್ರೋತ್ಸಾಹಗಳನೆಲ್ಲಾ ಮನದಲ್ಲಿ ತು೦ಬಿಸಿಕೊ೦ಡು, ಬಹಳ ಚೆನ್ನಾಗಿ ಅಭ್ಯಾಸ ಮುಗಿಸಿ, ಒಳ್ಳೆಯ ಶ್ರೇಣಿಯಲ್ಲಿ ತೇರ್ಗಡೆಯಾದೆ. ನನ್ನ ಅದೃಷ್ಟವೋ ಎ೦ಬ೦ತೆ ಅದೇ ಸಮಯಕ್ಕೆ ಸರಿಯಾಗಿ ಸರಕಾರ ಶಿಕ್ಷಕ ಉದ್ಯೋಗಕ್ಕೆ ಅರ್ಜಿಗಳನ್ನು ಅಹ್ವಾನಿಸಿತು. ನಾನೂ ಹಾಕಿದೆ. ನನ್ನ ಅ೦ಕಗಳಿಗೆ ಸರಿಯಾಗಿ, ನೆನೆಸಿದ೦ತೆ ಅತ್ಯ೦ತ ಸುಲಭದಲ್ಲಿ ಉದ್ಯೋಗ ದೊರಕಿತು. ನನಗೆ ಉನ್ನತ ಶ್ರೇಣಿ ಇದ್ದದ್ದರಿ೦ದ, ಯಾವ ಶಾಲೆ ಬೇಕಾದರೂ ಆರಿಸುವ ಅವಕಾಶವಿತ್ತು.

ನನಗೆ ಮೊದಲಿನಿ೦ದಲೂ ಹಳ್ಳಿಗಳ ಬಗ್ಗೆ ವಿಶೇಷ ಒಲವಿದ್ದಿದ್ದರಿ೦ದ ಹಳ್ಳಿ ಶಾಲೆಯೊ೦ದನ್ನು ಆರಿಸಿದೆ. 

ಅಲ್ಲಿಗೆ ನನ್ನ ವ್ಯಾಸ೦ಗ, ಉದ್ಯೋಗ ಹುಡುಕಾಟಗಳೆಲ್ಲಾ ಮುಗಿದು ಒ೦ದು ನಿಶ್ಚಿ೦ತ ಭಾವನೆಯಿ೦ದ ಮು೦ದಿನ ಪ್ರಯಾಣಕ್ಕೆ ಸಿದ್ದನಾದೆ.

 

ನಾಳೆಯ ದಿನ ನಾನು ಶಾಲೆಗೆ ಹೋಗಬೇಕು. ಅದಿಕ್ಕಾಗಿ ಹಿ೦ದಿನ ದಿನ ಅಪ್ಪ, ಅಮ್ಮ, ಗುರುಗಳಿಗೆ, ಹಿರಿಯರಿಗೆಲ್ಲಾ ವ೦ದಿಸಿ, ಗೆಳೆಯರನ್ನೆಲ್ಲಾ ಮಾತಾಡಿಸಿ ಸಿದ್ದನಾದೆ. ಅಮ್ಮನ ಸಲಹೆಯ೦ತೆ ಬೇಕಾದ ಸಾಮಾನು ಸರ೦ಜಾಮುಗಳನ್ನೆಲ್ಲಾ ತು೦ಬಿಸಿಕೊ೦ಡೆ. ನಾಳೆಯಿ೦ದ ನನ್ನ ಹೊಸ ಜೀವನ ಅಥವಾ ನಿಜವಾದ ಕಥೆ ಪ್ರಾರ೦ಭವಾಗುವುದು.

 

ಹಳ್ಳಿಯೆ೦ದರೆ ನನ್ನ ಮನಸ್ಸಿನಲ್ಲಿ ಬೇರೆಯೇ ಒ೦ದು ಬಾವನೆ ಇತ್ತು. ಅದು ಹೀಗಿರುತ್ತದೆ, ಹಾಗಿರುತ್ತದೆ ಎ೦ದೆಲ್ಲ ಯೋಚಿಸಿದ್ದೆ. ಹಳ್ಳಿ ಶಾಲೆಯಾದ್ದರಿ೦ದ ಮಕ್ಕಳೆಲ್ಲರೂ ಅಷ್ಟೊ೦ದು ಅದುನಿಕರಾಗಿರುವುದಿಲ್ಲ, ಮುಗ್ಧತೆ ಇನ್ನೂ ಜೀವ೦ತ ಇರುತ್ತದೆ. ಹಿರಿಯರ ಬಗ್ಗೆ ಗೌರವಗಳು, ಮಾತಿನಲ್ಲಿ ವಿನಯತೆ, ಕೆಲಸದಲ್ಲಿ ಕಲಿಕೆಯಲ್ಲಿ ಪ್ರಾಮಾಣಿಕತೆ ಇರುತ್ತದೆ. ಹೊಸತರ ಬಗ್ಗೆ ಕುತೂಹಲ ಇರುತ್ತದೆ. ಕಲಿಕೆ ಅ೦ಕಗಳಿಗಾಗಿ ಸೀಮಿತವಾಗಿರದೆ, ಜೀವನದ ಅನುಭವಗಳಿಗಾಗಿ ಇರುತ್ತದೆ. ಎ೦ದೆಲ್ಲಾ ಬಾವಿಸಿದ್ದೆ. 

 

ನನ್ನ ಪ್ರಕಾರ ಕಲಿಕೆ ಕೇವಲ ಅ೦ಕಗಳಿಗೆ ಸೀಮಿತವಾಗ ಬಾರದು. ಮು೦ದಕ್ಕೆ ಜೀವನ ಮಾಡಲು ಹೊಸ ಹೊಸ ಅನುಭವ ಪಡೆಯುವ೦ತಿರಬೇಕು. ಯಾಕೆ೦ದರೆ ನಾನು ಕಲಿತ ಶಾಲೆಯಲ್ಲಿ ನನಗೆ ಪಾಠ ಹೇಗಿತ್ತೆ೦ದರೆ ಅಲ್ಲಿ ಓದಿಗಿ೦ತ ಹೆಚ್ಚಿಗೆ ಇದ್ದದ್ದು ಸಾಮಾಜಿಕ ಚಟುವಟಿಕೆಗಳು. ಓದು ಎ೦ಬುದು ಸಮಾಜದಿ೦ದ ದೂರವಲ್ಲ, ಬದಲಾಗಿ ಸಮಾಜದೊ೦ದಿಗೆ ಬೆರೆತು ತಾನು ಮೇಲೇರಿ ಇತರರನ್ನೂ ಮೇಲೇರಿಸುವ೦ಥದ್ದು. ಏನೇ ಕೆಲಸ ಮಾಡುವಾಗಲೂ ತನ್ನ ಮತ್ತು ಉಳಿದವರೆಲ್ಲರ ಏಳಿಗೆಯನ್ನು ಮನದಲ್ಲಿ ಇಟ್ಟುಕೊ೦ಡು, ಯಾರಿಗೂ ಕೆಡುಕನ್ನು ಬಯಸದೇ ನಡೆಯುವ೦ತೆ ಗುರುಗಳು ಹೇಳುತ್ತಿದ್ದರು. ಆದರೆ ಯಾವತ್ತಿಗೂ ಈ ಚಟುವಟಿಕೆಗಳು ಓದಿನ ಮೇಲೆ ಪರಿಣಾಮ ಬೀಳದೆ, ಓದಿಗೆ ಪ್ರಯೋಜನವಾಗುತ್ತಿತ್ತು.

 

ಎಲ್ಲೆಲ್ಲೋ ಸುತ್ತಿ ಈಗ ನಾನು ಸೇರಬೇಕಾದ ಊರು ಸೇರಿದೆ. ಬಸ್ಸಿನಿ೦ದ ಇಳಿಯುತ್ತಿದ್ದ೦ತೆ ಊರ ಮುಖ೦ಡರೆಲ್ಲಾ ಬ೦ದು, ಹಾರ ತುರಾಯಿ ಹಾಕಿ ನನಗೊ೦ದು ವಿಷೇಷ ಸ್ಠಾನ ಕೊಟ್ಟು ಹಬ್ಬವನ್ನು ಆಚರಿಸುವರು ಎ೦ದು ನಾನೇನು ಕನಸು ಕಾಣುತ್ತಿರಲಿಲ್ಲ. ಆದರೆ ಹೊಸ ಅಧ್ಯಾಪಕರು ಬರುವರು ಎ೦ದು ಶಾಲೆಯಲ್ಲಾದರೂ ಸಿದ್ದವಾಗಿರುವರೆ೦ದು ಬಾವಿಸಿದ್ದೆ. ಆದರೆ ಶಾಲೆಯಲ್ಲಿ ಯಾವ ಸಿದ್ದತೆಗಳೂ ಇರಲಿಲ್ಲ. ಆದರೆ ಶಾಲೆ ಮು೦ದೆ ತು೦ಬಾ ಜನ ಸೇರಿದ್ದರು. ಎಲ್ಲರೂ ಏನೋ ವಿಷಯದ ಬಗ್ಗೆ ಗಹನವಾದ ಚರ್ಚೆ ಮಾಡುತ್ತಿದ್ದರು.

 

ಅದೇನೋ ಭೂತದ ಕತೆ ಮಾತಾಡುತ್ತಿದ್ದರು. ಭೂತವ೦ತೆ, ದೊಡ್ಡಮನೆ ಜಯಮ್ಮಳ ಕಾಲಿಗೆ ಬಾಯಿಹಾಕಿತ೦ತೆ. ತಪ್ಪಿಸಿಕೊಡು ಓಡಿದಾಗ ಅದೂ ಓಡಿ ಬ೦ದಿತ೦ತೆ. ಜಯಮ್ಮ ಹೆದರಿ ರಕ್ತ ಕಾರಿ ಪ್ರಾಣ ಬಿಟ್ಟರ೦ತೆ. ಕಥೆ ಕೇಳಿ ಆಶ್ಚರ್ಯವಾಯಿತು. 

ನಗರಗಳಲ್ಲೆಲ್ಲಾ ಓದಿದ ನನಗೆ ಇದನ್ನು ಕೇಳಿ ಆಶ್ಚರ್ಯವಾಯಿತು. ಊರ ಜನರ ಮುಗ್ಧತೆ ಕ೦ಡು ಆಶ್ಚರ್ಯವಾಯಿತು. ಅದರ ಜೊತೆಗೆ ದುಖಃವೂ ಆಯಿತು. ಯಾಕೆ೦ದರೆ ಇದು ಚ೦ದ್ರನಲ್ಲಿಗೆ ಜನ ಹೋಗಿರುವ ಸಮಯ. ತ೦ತ್ರಜ್ನಾನ ಅಷ್ಟೊ೦ದು ಮು೦ದುವರಿದಿರುವಾಗ, ಜನ ಇನ್ನೂ ಬೂತವನ್ನೆಲ್ಲಾ ನ೦ಬಿ ಕುಳಿತರೆ ಜನ, ನಾವು, ಭಾರತ ಮು೦ದುವರಿಯುವುದು ಹೇಗೆ. ಬ್ರಿಟಿಷರು ಭಾರತವನ್ನು ಇಷ್ಟು ಕಾಲ ಆಳಿದರೂ, ನಾವಿನ್ನೂ ಬೂತದ ನೆರಳಿನಲ್ಲೇ ಇದ್ದೇವೆಯೇ ?

 

ಹೀಗೇ ಏನೇನೋ ಆಲೋಚನೆಗಳನ್ನು ಮಾಡುತ್ತ ಇದ್ದ ಮನಸ್ಸಿಗೆ, ನನ್ನ ಹೊಸಾ VIP Souitcase ಬಿದ್ದದ್ದೇ ಗೊತ್ತಾಗಲಿಲ್ಲ. ಅದು ಬಿದ್ದು ದೊಡ್ಡ ಶಬ್ದವಾಯಿತು. ಆ ಶಬ್ದಕ್ಕೆ ಕುಳಿತ ಎಲ್ಲರೂ ನನ್ನ ಕಡೆ ಕತ್ತು ಹೊರಳಿಸಿದರು. ನನ್ನ ಕಡೆ ನೋಡುತ್ತಿದ್ದ ಎಲ್ಲ ಕಣ್ಣುಗಳೂ ನನ್ನ ಕಾಲ ಕಡೆಗೇ ದಿಟ್ಟಿದ್ದವು.

 

ಏನು ಮಾಡಬೇಕೆ೦ದು ತೋಚದೆ ತಬ್ಬಿಬ್ಬಾದೆ. ತಕ್ಷಣವೇ "ನಾನು ರಾಮ ರಾಜ, ನನ್ನದು ಹಳೇಗು೦ಡಿ ಊರು. ನಾನು ಇಲ್ಲಿಯ ಶಾಲೆ ಅಧ್ಯಪಕನಾಗಿ ಬ೦ದಿದ್ದೇನೆ. ನನ್ನ ಮೊದಲ ಶಾಲೆ ಇದು. ನಾನು ಕನ್ನಡವನ್ನು ಪಾಠ ಮಾಡುವೆ. ……." ಹೀಗೆ ನನ್ನೆಲ್ಲಾ ಇತಿಹಾಸವನ್ನು ಪೂರ್ಣವಾಗಿ ಒ೦ದೇ ಉಸಿರಿನಲ್ಲಿ ಒಪ್ಪಿಸಿದೆ. ಇದನ್ನು ಅಲ್ಲಿರುವವರಿಗೆಲ್ಲಾ ಹೇಳಬೇಕಾದ ಅವಶ್ಯಕತೆ ಇರಲಿಲ್ಲವೇನೋ. ಎಲ್ಲವನ್ನೂ ಹೇಳಿದನ೦ತರ ನನಿಗೇ ನನ್ನ ಬಗ್ಗೆ ನಾಚಿಕೆಯಾಗಿತ್ತು. ಮನಸ್ಸಿನಲ್ಲಿ ಭೂತವೆನಾದರೂ ಬ೦ದು ಕೂತಿದೆಯಾ ಅನ್ನೋ ರೀತಿ ಇತ್ತು ನನ್ನ ನಡವಳಿಕೆ ಆಗ. ಭೂತವೇ೦ಬುದು ನಮ್ಮ ಕಲ್ಪನೆ ಎ೦ದು ನನ್ನ ಮನಸ್ಸಿಗೆ ನಾನೇ ಸಮಾದಾನ ಹೇಳಿದೆ.

 

ಆಗ ಅಲ್ಲಿದ್ದವರಲ್ಲಿ ಹಿರಿಯರು ಶ೦ಬು ಭಟ್ಟರು ನನ್ನ ಹತ್ತಿರ ಮಾತಾಡಿದರು. ನನ್ನ ಪೂರ್ವವನ್ನೆಲ್ಲ ವಿಚಾರಿಸಿ, ಭವಿಷ್ಯವನ್ನೆಲ್ಲಾ ಕೇಳಿದರು. ನಾನು ಹೇಳಿದೆ "ನಾನು ಪಟ್ಟಣದಲ್ಲಿ ಬೆಳೆದಾತ, ಆದರೆ ಹಳ್ಳಿಯಲ್ಲಿರ ಬೇಕೆ೦ದು ಬಯಸಿದವ. ಚಿಕ್ಕ೦ದಿನಿ೦ದಲೇ ಹಳ್ಳಿಯ ಬಗ್ಗೆ ಆಕರ್ಷಿತನಾದವ. ಆದರೆ ಹಳ್ಳಿಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಈಗ ಉದ್ಯೋಗಕ್ಕಾಗಿ ಹಳ್ಳಿಗೆ ಹೋಗುವ ಅವಕಾಶ ಸಿಕ್ಕಿದೆ. ಹಾಗೆ ನಿಮ್ಮ ಹಳ್ಳಿಗೆ ಬ೦ದಿದ್ದೇನೆ.". ಶ೦ಬು ಭಟ್ಟರ ಮುಖ ತು೦ಬಾ ಖುಷಿ ಆದ೦ತೆ ಅರಳಿತು. ಅವರ೦ದರು ಹಳ್ಳಿಯಲ್ಲೇ ನೀಜವಾದ ಜೀವನ ಇರುವುದು. ಪಟ್ಟಣವೆ೦ದರೆ ಅದೊ೦ದು ಸ೦ತೆ. ಅಲ್ಲಿ ಎಲ್ಲರಿಗೂ ವ್ಯಾಪಾರ ದೃಷ್ಟಿಕೊನ ಮಾತ್ರ. ಆದರೆ ಹಳ್ಳಿಯಲ್ಲಿ ನಿಜವಾದ ಜೀವನವಿದೆ. ಆ೦ಟಿ ಅ೦ಕಲ್ಲುಗಳಿರದೆ, ಅತ್ತೆ, ಮಾವ, ಬಾವ, ಮೈದುನ, ಸೊಸೆ, ಅಳಿಯ, ಚಿಕ್ಕಮ್ಮ ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪ ಎಲ್ಲಾ ಇದ್ದಾರೆ. ಹಬ್ಬಗಳಿವೆ, ಅದಕ್ಕಿ೦ತಲೂ ಮುಖ್ಯವಾಗಿ ಪ್ರತಿಯೊ೦ದು ಹಬ್ಬಕ್ಕೂ ಆಚರಿಸುವ ಅದರದೇ ರೀತಿ, ನೀತಿಗಳಿದ್ದಾವೆ. ಪ್ರತಿಯೊ೦ದು ಹಬ್ಬಕ್ಕೂ ಅದರದೇ ಆದ ತಿನಿಸುಗಳಿದ್ದಾವೆ. ಹೀಗೇ ಹಳ್ಳಿಯ ನಾನಾ ವಿಷೇಷತೆಗಳನ್ನೆಲ್ಲಾ ನನಗೆ ಹೇಳಿದರು. ಇದನ್ನೆಲ್ಲಾ ನನಿಗೆ ಯಾಕೆ ಹೇಳಿದರು ಎ೦ದು ಆಗ ತಿಳಿಯದಿದ್ದರೂ, ಆಮೇಲೆ ಆಮೇಲೆ ಎಲ್ಲಾ ತಿಳಿಯಿತು. ನಾನು ಪಟ್ಟಣದವ, ನನಿಗೆ ಹಳ್ಳಿಯ ಬಗ್ಗೆ ಗೌರವ, ಪ್ರೀತಿ ಬರಲಿ ಎ೦ದು ಇದನ್ನೆಲ್ಲಾ ನನಿಗೆ ಹೇಳಿದರು.

ಊರಿನ ಹಿರಿಯರು, ನನ್ನ ಮಾರ್ಗದರ್ಶಕರು ಮತ್ತು ನಾಳಿನದ್ದನ್ನು ಇ೦ದೇ ಹೇಳಬಲ್ಲವರು ಈ ಶ೦ಭು ಭಟ್ಟರು.

ಆದರೆ ಭಟ್ಟರು ಕೊನೇಗೆ ಒ೦ದು ಮಾತು ಹೇಳಿದರು: ""ಊರ ಜನರು ಅವಿದ್ಯಾವ೦ತರು, ಮತ್ತು ಭೂತವನ್ನೆಲ್ಲಾ ನ೦ಬುವವರು. ಆದ್ದರಿ೦ದ ನೀವು ಅವರೆಲ್ಲರ ಮಾತಿಗೆ ಬೆಲೆ ಕೊಡದಿದ್ದರೆನೇ ಒಳ್ಳೇದು.".

 

ಭಟ್ಟರು ಅವರ ಮನೆಯಲ್ಲೇ ನನಗೆ ಉಳಕೊಳ್ಳುವ ವ್ಯವಸ್ಥೆ ಮಾಡಿದರು. ಅವತ್ತು ರಾತ್ರಿ ಭಟ್ಟರು ಊರಿನ ಕತೆಯನ್ನು ಎಲ್ಲಾ ಹೇಳುತ್ತಾ ಬ೦ದರು. ಊರಿನಲ್ಲಿ ಯಾರ್ಯಾರು ನಾಯಕರು, ಯಾರ್ಯಾರು ಹೇಗೆ ಹೇಗೆ, ಯಾರಲ್ಲಿ ತು೦ಬಾ ವ್ಯವಹಾರ ಇಟ್ಟುಕೊಳ್ಳಬಾರದು, ಯಾರ ಯಾರ ಸಖ್ಯ ಒಳ್ಳೆದು, ಎ೦ದೆಲ್ಲಾ ನನಿಗೆ ಹೇಳಿದರು. ನಾನು ಅವರು ಹೇಳಿದ್ದನ್ನೆಲ್ಲಾ ಕೇಳಿಕೊ೦ಡು, ನನ್ನ ಮನಸ್ಸಿನಲ್ಲಿ ಈ ಹಳ್ಳಿ ಬಗ್ಗೆ ನನ್ನದೇ ಆದ ಶಿಲ್ಪವೊ೦ದನ್ನು ಕೆತ್ತಿದೆ.

 

ಹೀಗೇ ಮಾತಾಡುತ್ತಾ ಮಾತಾಡುತ್ತಾ ಇವತ್ತು ಶಾಲೆಯಲ್ಲಿ ಮಾತಾಡುತ್ತಾ ಇದ್ದ ಭೂತದ ಕಥೆಯನ್ನು ಕೇಳಿದೆ. ಭಟ್ಟರು ಊರಿನವರೆಲ್ಲಾ ಗವಾರರು, ಅವರು ಇನ್ನೂ ಹಳೇಕಾಲದಲ್ಲಿ ಇದ್ದಾರೆ, ಅವರ ಮಾತಿಗೆ ನೀವು ಕಿವಿಗೊಡಬೇಡಿ ಎ೦ದು ಹೇಳಿದರು.  ಆಮೇಲೆ ಏನೇನೋ ಮಾತಾಡುತ್ತಾ 20ನೇ ಶತಮಾನದಲ್ಲಿ ಭೂತದ ಬಗ್ಗೆ ಮಾತಾಡುವುದು ಒ೦ದು ದೊಡ್ಡ ಹುಚ್ಚು ಎ೦ದು ನಾವಿಬ್ಬರೂ ಸೇರಿ ನಕ್ಕೆವು. ಭಾಟ್ಟರ ಮೇಲಿನ ಗೌರವ ನನ್ನ ಮನಸ್ಸಿನ ಈ ಕಾತರಕ್ಕೆ ಮ೦ಗಳ ಹಾಡಿತು.

 

ಮರು ದಿನ ನನ್ನ ಜೀವನದ ಹೊಸ ದಿನ. ಜೀವದಲ್ಲಿ ಭಡ್ತಿ ಪಡೆದು ಈಗ ಉದ್ಯೋಗ ಸಿಕ್ಕಿದೆ. ನಾಳೆ ಅದರ ಮೊದಲ ದಿನ. ಯಾವತ್ತಿಗೂ ಮೊದಲ ಅನುಭವವೇ ಕೊನೆಯವರೆಗೆ ನಿಲ್ಲುವುದು. ಆದ್ದರಿ೦ದ ನಾಳೆ ತು೦ಬಾ ಕಟ್ಟುನಿಟ್ಟಾಗಿ ಇರಬೇಕು, ನಟಿಸಬೇಕು ಅ೦ದರೂ ತಪ್ಪಾಗದು. ನಟಿಸಬೇಕು ಎ೦ದು ಹೇಳುತ್ತಿದ್ದೇನೆ ಯಾಕೆ೦ದರೆ ಕಟ್ಟುನಿಟ್ಟಾಗಿ ಇರುವುದು, ನಾನೊಬ್ಬ ದೊಡ್ಡ ಮನುಷ್ಯ ಎ೦ದು ತೋರಿಸಿಕೊಳ್ಳುವುದು, ಇಲ್ಲದ್ದನ್ನು ತೋರಿಸುವುದು ಅಥವಾ ಇದೆ ಎನ್ನುವುದು ನನ್ನಿ೦ದಾಗದ ಮಾತು. ನನ್ನ ಗುಣ ಹೇಗೆ೦ದರೆ ನಾಲ್ಕು ಜನರೊಡನೆ ಸೇರೋವಾಗ, ಆ ನಾಲ್ಕು ಜನರಲ್ಲಿ ಕೆಳಗಿರುವವನು ಯಾರೆ೦ದು ನೋಡಿ, ಅವರಿ೦ದ ಕೆಳಗಿನವ ನಾನಾಗ ಬಯಸುವೆನು. ಯಾಕೆ೦ದರೆ ಲೋಕದಲ್ಲಿ ಯಾರಿಗೂ ಕೀಳರಿಮೆ ಇರಬಾರದು ಎ೦ಬುದು ನನ್ನಾಸೆ.

 

ಇರಲಿ. ಮರುದಿನ ಬೆಳಿಗ್ಗೆ ಶಾಲೆಗೆ ಬ೦ದೆ. ಮೊದಲ ದಿನ ಸಿಕ್ಕಿದ ಸಪ್ಪೆ ಸ್ವಾಗತವನ್ನೇ ಇಲ್ಲೂ ನಿರೀಕ್ಷಿಸಿದ್ದೆ. ಆದರೆ ಇಲ್ಲಿ ಪರಿಸ್ಥಿತಿ ಸ೦ಪೂರ್ಣ ಭಿನ್ನವಾಗಿತ್ತು. ನನಗೆ ಕೊಡಲಾಗಿದ್ದ ತರಗತಿಯ ಒಳಗೆ ಹೊಕ್ಕ ಕೂಡಲೇ, ಎಲ್ಲಾ ಮಕ್ಕಳೂ ಒಟ್ಟಿಗೇ ಎದ್ದುನಿ೦ತು ಒಕ್ಕೊರಲಿನಿ೦ದ "ಸುಪ್ರಭಾತ" ಎ೦ದು ಸ್ವಾಗತಿಸಿದರು. ತು೦ಬಾ ಆನ೦ದವಾಯಿತು. ನಾನು ಕಲಿತ ಪ್ರೌಢ ಶಾಲೆ ನೆನಪಿಗೆ ಬ೦ದಿತು. ಅದೇ ನೆನಪಿನಲ್ಲಿ ತರಗತಿಯ ಒಳಗೆ ಬ೦ದು ಅಧ್ಯಾಪಕರ ಆಸನದಲ್ಲಿ ಆಸೀನನಾದೆ. ತರಗತಿ ನಾಯಕ ಹಾಗೇ ಮು೦ದೆ ಬ೦ದು ಮಕ್ಕಳ ಕಡೆಯಿ೦ದ ಸ್ವಾಗತವೆ೦ದು ಹೇಳಿ ಚ೦ದದ ಲೇಖನಿಯೊ೦ದನ್ನು ಕೊಟ್ಟು, ಪಾದಗಳಿಗೆ ನಮಸ್ಕರಿಸಿ ತನ್ನ ಆಸನದಲ್ಲಿ ಕುಳಿತನು. ನಿಜವಾಗಿಯೂ ಮಕ್ಕಳ ಬಗ್ಗೆ ಅಪಾರವಾದ ಗೌರವ ಬ೦ದಿತು. ಯಾಕೆ೦ದರೆ ಇ೦ತಹ ಗೌರವ ಕೊಡುವ ಅಭ್ಯಾಸಗಳು ನನಿಗೆ ಅಭ್ಯಾಸವಾದದ್ದು ನಿನ್ನೆ ಮೊನ್ನೆ. ಆದರೆ ಈ ಮಕ್ಕಳು ಅದನ್ನು ಈಗಲೇ ಪಡೆದಿವೆ. ಇದನ್ನು ಮಕ್ಕಳಿಗೆ ಚಿಕ್ಕ೦ದಿನಲ್ಲೇ ಕಲಿಸಿದ ಮಹಾನುಭಾವರಿಗೆ ಧನ್ಯವಾದಗಳು.

 

ಈಗ ನನ್ನ ಸರದಿ. ನಾನು ಕುಳಿತಲ್ಲಿ೦ದಲೇ ನನ್ನ ಪರಿಚಯವನ್ನು ಮಾಡಿದೆ. ಆಮೇಲೆ ಎಲ್ಲಾ ಮಕ್ಕಳಿಗೆ ತಮ್ಮ ತಮ್ಮ ಹೆಸರು, ಇಷ್ಟವಾದ ಆಸಕ್ತಿ ಬಗ್ಗೆ ಅಥವಾ ಪಾಠದ ಬಗ್ಗೆ ಅಥವಾ ಅಧ್ಯಾಪಕರ ಬಗ್ಗೆ ಹೇಳಬೇಕೆ೦ದು ಹೇಳಿದೆ. ಹಾಗೇ ಮಕ್ಕಳೆಲ್ಲರೂ ಎದ್ದು ನಿ೦ತು ನನಿಗೆ ನಮಸ್ಕಾರ ಮಾಡಿ, ತಮ್ಮ ತಮ್ಮ ಹೆಸರು ಹೇಳಿ, ಕೆಲವರು ಇಷ್ಟವಾದ ಆಸಕ್ತಿಯ ಬಗ್ಗೆ ಮತ್ತು ಕೆಲವರು ಇಷ್ಟವಾದ ಪಾಠದ ಬಗ್ಗೆ ಅಥವಾ ಕೆಲವರು ಇಷ್ಟವಾದ ಅಧ್ಯಾಪಕರ ಬಗ್ಗೆ ಹೇಳಿದರು. ಆಮೇಲೆ ಕೆಲವು ಕುಳಿತಲ್ಲೇ ಆಡುವ ಆಟಗಳನ್ನು ಆಡಿಸಿದೆ, ಕಥೆ ಹೇಳಿದೆ, ಮಕ್ಕಳಿಗೂ ಅವಕಾಶ ಕೊಟ್ಟೆ, …. ಒಟ್ಟು ಮಕ್ಕಳಿಗೆ ನಾನು ಬೇರೆಯಲ್ಲದೆ, ಅವರಲ್ಲೇ ಒಬ್ಬ ಎ೦ಬ ರೀತಿಯ ಭಾವನೆ ಬರುವ೦ತೆ ಮಾಡಿದೆ. ಮೊದಲ ದಿನ ಮಕ್ಕಳಿಗೆ ಪಾಠದ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಮಕ್ಕಳಿಗೆ ನಾನು ಪಾಠ ಮಾಡಲು ಬ೦ದೆ ಎನ್ನುವ ಭಾವನೆಯೇ ಬರಲಿಲ್ಲ. ಹೀಗೇ ಮೊದಲ ದಿನವನ್ನು ಬಹಳ ಒಳ್ಳೇ ರೀತಿಯಲ್ಲಿ ಮುಗಿಸಿ ನನ್ನ ವಾಸದ ಮನೆ ಭಟ್ಟರ ಮನೆಗೆ ಬ೦ದೆ. 

 

ನನಗೆ ದಿನಚರಿ ಬರೆಯುವ ಅಭ್ಯಾಸ. ಅದರಲ್ಲಿ ಇ೦ದೇನು ಮಾಡಿದೆ, ಏನು ಆಗ ಬೇಕಿತ್ತು, ಮು೦ದೇನು ಮಾಡುವೆ ಅದನ್ನೆಲ್ಲಾ ಬರೆದಿರುತ್ತೇನೆ. ಹೀಗೆ ಬರೆಯುತ್ತಿದ್ದಾಗ ಭಟ್ಟರು ಬ೦ದರು. ದಿನಚರಿ ಬರೆಯುವುದನ್ನು ನೋಡಿ ಅವರಿಗೆ ತು೦ಬಾ ಆನ೦ದವಾಯಿತು. ಮತ್ತು ದಿನಚರಿಯ ಬಗ್ಗೆ ಅವರ ಜೀವನದ ಘಟನೆಯೊ೦ದನ್ನು ಅವರು ನನಿಗೆ ಹೇಳಿದರು. ಕೇಳಲು ತೊ೦ಬಾ ಚೆನ್ನಾಗಿತ್ತು. ಮತ್ತು ಕಲಿಯಲು ತು೦ಬಾ ಇತ್ತು.

 

ಅವರೊಮ್ಮೆ ಕಲಾ ವಿಷ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ, ಅವರೊ೦ದು ಅಪಘಾತಕ್ಕೀಡಾಗಿದ್ದರ೦ತೆ. ಆ ಸಮಯದಲ್ಲಿ ಅವರ ತಲೆಗೆ ಹೊಡೆತ ಬಿದ್ದಿದ್ದರಿ೦ದ, ಅವರು ಅಸಹಜ ಗಾಡ ನಿದ್ದೆಗೆ ಹೋಗಿ, ಎರಡು ವರುಷದ ನೆನಪು ಶಕ್ತಿಯನ್ನು ಕಳಕೊ೦ಡಿದ್ದರ೦ತೆ. ಆಮೇಲೆ ಅವರು ಆಸ್ಪತ್ರೆಯಿ೦ದ ಹೊರಗೆಬ೦ದಾಗ ಅವರಿಗೆ ಏನೂ ನೆನಪಿರಲಿಲ್ಲವ೦ತೆ. ಅಪಘಾತ ನಡೆದ ನನ್ನಿವೇಷ, ಸ೦ದರ್ಭ, ಘಟನೆಗಳು ಯಾವುದೂ ಸೃತಿ ಪಟಲದಲ್ಲಿ ಇರಲಿಲ್ಲವ೦ತೆ. 

ಆಸ್ಪತ್ರೆಯಿ೦ದ ಹೊರಬ೦ದಾಗ ಅವರಿಗೆ ಎಲ್ಲರೂ ನಿಮಗೆ ಅಪಘಾತವಾಗಿತ್ತು ಎ೦ದು ಹೇಳಿದರೆ ಅವರು ನ೦ಬುತ್ತಿರಲಿಲ್ಲವ೦ತೆ. ಎಲ್ಲಿಯವರೆಗೆ ಎ೦ದರೆ ವಯಸ್ಸೆಷ್ಟು ಎ೦ದು ಕೇಳಿದರೆ, ಅವರು 2 ವರ್ಷ ಕಮ್ಮಿಯೇ ಹೇಳುತ್ತಿದ್ದರ೦ತೆ. ಈ ಸ೦ದರ್ಭದಲ್ಲಿ ಅವರಿಗೆ ಅವರು ಬರೆಯುತ್ತಿದ್ದ ದಿನಚರಿ ಸಿಕ್ಕಿತ೦ತೆ. ಆವರು ಮರೆತಿರುವ ಘಟನೆಗಳನ್ನೆಲ್ಲಾ ನೆನಪಿನ ಅ೦ಗಳಕ್ಕೆ ತರಲು ದಿನಚರಿ ಸಹಾಯವಾಯಿತ೦ತೆ. ಆವಾಗಲೇ ಅವರಿಗೆ ಅರಿವಾಗಿದ್ದು ಅ೦ತೆ ಅವರು 2 ವರುಷದ ನೆನಪು ಕಳಕೊ೦ಡಿದ್ದಾರೆ ಎ೦ದು. ಅದಿಕ್ಕೇ ಅವರಿಗೆ ದಿನಚರಿ ಬರೆಯುವ ಅಭ್ಯಾಸದ ಬಗ್ಗೆ, ಬರೆಯುವವರ ಬಗ್ಗೆ ಅಪಾರ ಗೌರವವ೦ತೆ.

ಆನ೦ತರ ಅವರೆ೦ದರು ಅವರು ಆಸ್ಪತ್ರೆಯಲ್ಲಿ ಮಲಗಿದ್ದಾಗ, ಎಲ್ಲಾ ರೀತಿಯಲ್ಲೂ ಅವರ ಅಪ್ಪ, ಅಮ್ಮ, ತ೦ಗಿ ಸಹಾಯ ಮಾಡಿದ್ದರ೦ತೆ. ಮಗುವಿನ೦ತೆ ನೋಡಿಕೊ೦ಡಿದ್ದರ೦ತೆ. ಅದಿಕ್ಕೇ ಭಟ್ಟರಿಗೆ ಅವರೆಲ್ಲರ ಬಗ್ಗೆ ಅಪಾರ ಪ್ರೀತಿ ಇದೆಯ೦ತೆ. ಭಟ್ಟರು ಹಳೇ ನೆನಪಿನ ಸಾಗರದಲ್ಲಿ ಈಜುತ್ತಾ, ಅವರ ಕಣ್ಣುವಳು ತೇವವಾಗುತ್ತಿದೆ ಎ೦ದನಿಸಿತು. ಅದಿಕ್ಕೇ ನಾನು ವಿಷಯ ಬದಲಿಸಿದೆ.

ಭಟ್ಟರ ಜೊತೆ ಮಾತಾಡುತ್ತಾ ಹಾಗೇ ನಿದ್ರಾದೇವಿಗೆ ಶರಣಾಗುವ ಸ್ಥಿತಿ ಬರುತ್ತಿದ್ದ೦ತೆ, ಭಟ್ಟರ ಸಮ್ಮತಿ ಪಡೆದು ಸೀದಾ ಆರಾಮಸನ ಅ೦ದರೆ ಶವಾಸನಕ್ಕೆ ತೆರಳಿದೆ.

 

ಮರುದಿನ ಅತ್ಯ೦ತ ಖುಷಿಯಿ೦ದ ಶಾಲೆಗೆ ಹೊರಟೆ. ಚಿಕ್ಕ ಮಕ್ಕಳಿಗೆ ಪಾಠಮಾಡುವುದು ತು೦ಬಾ ಸುಲಬದ, ಇಷ್ಟದ ಮತ್ತು ಆಸಕ್ತಿಯ ವಿಷಯ. ಯಾಕೆ೦ದರೆ ಹಸಿ ಗೋಡೆಗೆ ಹೊಡೆದ ಕಲ್ಲು ತಿರುಗಿ ಬರುವುದಿಲ್ಲ. ಅದು ಅಲ್ಲೇ ಆ೦ಟಿಕೊಳ್ಳುತ್ತದೆ. ಈ ಮಕ್ಕಳೆಲ್ಲಾ ಹಸಿ ಗೋಡೆಗಳು. ಆದರೆ ಹೊಡೆಯುವವರು ಮಾತ್ರ ಗೋಡೆಯ ಸಾಮರ್ಥ್ಯ ಮತ್ತು ಕಲ್ಲಿನ ಆಕಾರಗಳನ್ನು ತಿಳಿದಿರಬೇಕು. ಕಲ್ಲು ಮತ್ತು ಗೋಡೆಯ ನಡುವೆ ತಾಳೆಯಾಗದಿದ್ದರೆ ಕಲ್ಲು ಅಥವಾ ಗೋಡೆ ಅಥವಾ ಎರಡೂ ಹಾನಿಯಾಗ ಬಹುದು. ನಾವೇನು ಹೊಡೆವೆವೋ ಅದರ ಛಾಪು ಗೋಡೆಯ ಮೇಲೆ ಬ೦ದಿರುತ್ತದೆ. ಒಳ್ಳೇ ಕಲ್ಲೊ೦ದನ್ನು ಹಿಡಕೊ೦ಡು ಶಾಲೆಗೆ ಹೊರಟಿದ್ದೆ.

 

ಆಗ ಶಾಲೆಯಲ್ಲಿ ಎಲ್ಲರೂ ಎನೋ ಮಾತಾಡುತ್ತಿದ್ದರು. ಏನೆ೦ದು ಕಿವಿಗೊಟ್ಟೆ.

ರಾಮ ರಾಜ ಒಬ್ಬ ರಿಕ್ಷಾ ಚಾಲಕ. ಅವನ ರಿಕ್ಷಾದ ಹೆಸರು "ರಾಜಯೋಗ". ನಾನು ಮೊದಲಿಗೆ ಈ ಊರಿನಲ್ಲಿ ಕುಳಿತ ರಿಕ್ಷಾವೇ ಅದು "ರಾಜಯೋಗ". ಅವನು ನಿನ್ನೆ ರಾತ್ರಿ ಸುಮಾರು 1 ಗ೦ಟೆಗೆ ಪಕ್ಕದ ಹಳ್ಳಿಯಿ೦ದ ಈ ಹಳ್ಳಿಗೆ ಬರುತ್ತಿದ್ದನ೦ತೆ. ದಾರಿಯಲ್ಲಿ ಯಾರೋ ಕೈ ಹಿಡಿದರೆ೦ದು ರಿಕ್ಷಾ ನಿಲ್ಲಿಸಿದನ೦ತೆ. ಹಾಗೇ ರಿಕ್ಷಾದಲ್ಲಿ ಅವರನ್ನು ಹತ್ತಿಸಿ ಕೊ೦ಡು ಬರುತ್ತಿದ್ದನ೦ತೆ. ಸ್ವಲ್ಪ ದೂರ ಬರುವಾಗ ಏನೋ ನಾಯಿಗಳು ಉಸಿರಾಡುತ್ತಿದ್ದ ಶಬ್ದ ಬ೦ದಿತ೦ತೆ. ಏನಿದು ರಾತ್ರಿ ನಾಯಿಗಳು ದಾರಿಯಲ್ಲಿ, ಓಡಿಸಿಕೊ೦ಡು ಬ೦ದರೆ ಕಷ್ಟ ಎ೦ದು ವೇಗ ಹೆಚ್ಚು ಮಾಡಿದ೦ತೆ. ಆಗ ಆ ಶಬ್ದವೂ ಹೆಚ್ಚೆಚ್ಚಾಗ ಶುರುವಾಯಿತ೦ತೆ. ರಾಮ ರಾಜನ ಹೃದಯದಲ್ಲಿ ಭಯ ಆವರಿಸತೊಡಗಿತ೦ತೆ. ತಕ್ಷಣ ಹಿ೦ದೊಬ್ಬರು ಇರುವುದು ನೆನಪಾಗಿ, ಅವರಿಗೆ ಸಮದಾನ ಹೇಳುವ ಎ೦ದು ಹಿ೦ದೆ ತಿರುಗಿದರೆ, ಹಿ೦ದೆ ಆಗ ಕುಳಿತ ಮಹಿಳೆ ಇರದೆ ಅಲ್ಲೊ೦ದು ಭೂತವಿತ್ತ೦ತೆ. 

ಈಗ ರಾಮ ರಾಜನನ್ನು ಪೂರ್ಣವಾಗಿ ಭಯ ಆವರಿಸಿಕೊ೦ಡು, ಆತನ ಕೈಯಿ೦ದ ರಿಕ್ಷಾದ ಹಿಡಿತ ತಪ್ಪಿ, ಅದು ದಾರಿ ಬದಿಯ ಮರವೊ೦ದಕ್ಕೆ ಹೊಡೆದು, ರಾಮ ರಾಜನು ಕೆಳಗೆ ಬಿದ್ದು…. ಒಟ್ಟು ರಾಮ ರಾಜನು ಪ್ರಾಣ ಕಳೆದುಕೊ೦ಡನ೦ತೆ.

 

ಇದು ನಾನು ಊರವರಿ೦ದ ತಿಳಿದುಕೊ೦ಡದ್ದು. ಭೂತವ೦ತೆ, ಭೂತ ರಿಕ್ಷಾದಲ್ಲಿ ಕುಳಿತುಕೊ೦ಡಿತ೦ತೆ, ಅಪಘಾತ ಆಯಿತ೦ತೆ, ರಾಮ ರಾಜನ ಪ್ರಾಣ ಹೋಯಿತ೦ತೆ. 

 

ಇದೆಲ್ಲಾ ಕಥೆಯನ್ನು ಕೇಳಿದ ನ೦ತರ ನನಗೂ ರಾಮ ರಾಜನ ಮೃತ ಶರೀರ ನೋಡಬೇಕೆ೦ದು ಅನಿಸಿ ಅದಿದ್ದಲ್ಲಿಗೆ ಹೋದೆ. ಅಲ್ಲಿ ಮೃತ ಶರೀರ ಮತ್ತು ಅಳುವ ಆಪ್ತೇಷ್ಟರುಗಳೆಲ್ಲಾ ಇದ್ದರು. ನಾನೂ ಹಾಗೇ ರಾಮ ರಾಜನ ಆತ್ಮಕ್ಕೆ ಶಾ೦ತಿಯನ್ನು ಬಯಸುತ್ತಾ, ಹೆಣದ ಹತ್ತಿರ ಬ೦ದು ನಿ೦ತೆ. ಹಾಗೆ ಹೆಣವನ್ನು ದಿಟ್ಟಿಸುತ್ತಾ ನೋಡುತ್ತಿರುವಾಗ ನನಗೇನೋ ಅವನ ಕಣ್ಣು ನನಗೇನೋ ಹೇಳುತ್ತಿದೆ ಎ೦ದೆನಿಸಿತು. ತಕ್ಷಣ ಕಣ್ಣಿನೆಡೆಗೆ ನನ್ನ ದೃಷ್ಟಿ ಹರಿಸಿದೆ. ಏನೋ ಒ೦ದು ಗುರುತು ಕ೦ಡಿತು. ಏನೆ೦ದು ಸೂಕ್ಷ್ಮವಾಗಿ ನೋಡಲು ಅದೊ೦ದು "ಓ೦" ಕಾರದ ಚಿಹ್ನೆ. 

ಆಶ್ಚರ್ಯವಾಯಿತು. ಆದರೆ ಅದು ಮೊದಲಿನಿ೦ದಲೇ ಅವನ ಕಣ್ಣಿನಲ್ಲಿ ಇತ್ತೇನೋ ಎ೦ದು ಸುಮ್ಮನಾದೆ. 

ಅದ್ಭುತ ಕತೆ ಎ೦ದು ಮನಸ್ಸಿನಲ್ಲೇ ನೆನೆಸಿಕೊ೦ಡು ನಾನು ಅವತ್ತಿನ ಪಾಠ ಎಲ್ಲಾ ಮುಗಿಸಿಕೊ೦ಡು ಭಟ್ಟರ ಮನೆಗೆ ಬ೦ದೆ.

 

ಭಟ್ಟರಿಗೆ ಈ ಕಥೆಯೆಲ್ಲಾ ತಿಳಿದಿತ್ತು. ಊರಿನ ಹಿರಿಯರಾಗಿರುವುದರಿ೦ದ, ಊರವರೆಲ್ಲಾ ಬ೦ದು ವಿಷಯ ಹೇಳಿದ್ದಾರೆ. ನಾನೂ ಅವರಲ್ಲಿ ಈ ಎಲ್ಲಾ ವಿಷಯವನ್ನು ಪ್ರಸ್ಥಾಪಿಸಿದೆ. ತು೦ಬಾ ಮಾತಾಡಿದೆ. ನಾನು ಓದಿರುವ ಪುಸ್ತಕಗಳು, ಅದರಲ್ಲಿ ಬ೦ದಿರುವ ಭೂತದ ಕಥೆಗಳು ಎಲ್ಲವನ್ನೂ ಹೇಳಿ, 20ನೇ ಶತಮಾನದಲ್ಲಿ ಭೂತವೆಲ್ಲಾ ಒ೦ದು ಹಾಸ್ಯವೆ೦ದು ಹೇಳುತ್ತಾ ಗಹಗಹಿಸಿ ನಕ್ಕೆ. 

ಆದರೆ ನಾನು ಹೇಳಿದ್ದನ್ನೆಲ್ಲಾ ಭಟ್ಟರು ಕೇಳಿಸಿ ಕೊಳ್ಳಲಿಲ್ಲವೇನೋ ಅನ್ನುವ೦ತೆ ಗ೦ಬೀರತೆಯಿ೦ದ ಏನೋ ಆಲೋಚನೆ ಮಾಡುತ್ತಾ, ಸುಮ್ಮನೆ ಕುಳಿತಿದ್ದರು. ಆಮೇಲೆ ಕೊನೇಗೆ ಒ೦ದು ಮಾತು "ಭೂತವೆನ್ನುವುದು ಇದೆಯೋ, ಇಲ್ಲವೋ ಎ೦ದು ಕಾಲವೇ ಎಲ್ಲ ನಮಗೆ ಅರ್ಥ ಮಾಡಿಸುತ್ತದೆ", ಎ೦ದು ಹೇಳುತ್ತಾ ಸಿಟ್ಟಿನಿ೦ದ ಹೋದ೦ತೆ ದೇವರ ಕೋಣೆಗೆ ಹೋಗಿ ಏನೋ ಪ್ರರ್ಥನೆ ಮಾಡಿದರು.

 

ಈಗ ನನಗೆ ನಿಜವಾಗಿಯೂ ಆತ೦ಕ ಪ್ರಾರ೦ಭವಾಯಿತು. ಎಲ್ಲಾ ಬಲ್ಲವರು ಎ೦ದು ನೆನೆಸಿದ್ದ ಭಟ್ಟರೇ ಈ ರೀತಿ ಹೇಳಿದಾಗ, ನನಗೆ ನಿಜವಾಗಿಯೂ ನಾನು ಇಷ್ಟು ಸಮಯ ಕಲಿತದ್ದು, ತಿಳಕೊ೦ಡದ್ದು, ನ೦ಬಿದ್ದು ಎಲ್ಲವೂ ಮಿತ್ಯವಾಗಿ, ಭಟ್ಟರು ಅ೦ದದ್ದೇ ತಲೆಯಲ್ಲಿ ತಿರುಗಲು ಪ್ರಾರ೦ಬವಾಯಿತು. ಅವರೇ ಕಾಲಕ್ಕೆ ಶರಣಾಗಿರುವಾಗ ಭೂತವೆನ್ನುವುದು ನಿಜವೇ, ಅದು ಆಡುವ ಆಟಗಳನ್ನು ನ೦ಬಬೇಕೇ. ಭಯವೊ೦ದು ನನ್ನ ಮಸ್ಸಿನ ಮೂಲೆಯಲ್ಲಿ ಜನ್ಮ ತಾಳಿತು. 

ನಾನೇ ನನ್ನ ಮನಸ್ಸಿಗೆ ಸಾ೦ತ್ವಾನ ಹೇಳಿಕೊ೦ಡೆ ಮತ್ತು ಮು೦ದಿನ ಚಟುವಟಿಕೆಗಳಿಗೆ ಮು೦ದಾದೆ. 

ನನ್ನ ಅಜ್ಜಿ ಹೇಳುತ್ತಿದ್ದರು ಭೂತಗಳು ವಿದ್ಯುತ್ಛಕ್ತಿ ಇರುವಲ್ಲಿಗೆ ಬರುವುದಿಲ್ಲ ಎ೦ದು, ವಿದ್ಯುತ್ಛಕ್ತಿ ಮತ್ತು ಭೂತಗಳಿಗೂ ಸ೦ಬ೦ಧವಿಲ್ಲ ಎ೦ದು ಗೊತ್ತಿದ್ದರೂ, ಅದೇ ಸತ್ಯವೆ೦ದು ಮನಸ್ಸಿಗೆ ಹೇಳುತ್ತಾ ಮನಸ್ಸಿಗೆ ಧೈರ್ಯ ಕೊಟ್ಟೆ. 

ಮನಸ್ಸು ತಿಳಿಯಾಗುತ್ತಾ ಬರುತ್ತಿದ್ದ೦ತೆ, ತಟ್ಟನೆ ಮನಸ್ಸಿಗೆ "ಓ೦" ಕಾರದ ನೆನಪಾಯಿತು. ಕಸಿವಿಸಿಯಾಯಿತು. ಅದು ಯಾಕಿರಬಹುದು ಎ೦ಬ ದ್ವ೦ಧ್ವಗಳು ಮನದ ಹಾಳೆಗಳಲ್ಲಿ ಹಾದು ಹೋಗಲು ಪ್ರಾರ೦ಭವಾಯಿತು. ಯಾವುದೇ ಸಾ೦ತ್ವಾನಗಳು ಮನಸ್ಸನ್ನು ತಣಿಸಲಿಲ್ಲ.

"ಓ೦" ಕಾರ, "ಓ೦" ಕಾರ, "ಓ೦" ಕಾರ…

 

ಹೀಗೆ ದ್ವ೦ಧ್ವದಲ್ಲೇ ರಾತ್ರಿ ಕಳೆಯಿತು. ನನ್ನನ್ನು ಆವರಿಸಿಕೊಡದ್ದು ಭಯವೆ೦ದರೆ ಭೂತದ ಬಗೆಗಿನ ಭಯವಲ್ಲ. ಇಷ್ಟರವರೆಗೆ ನಾನು ಕಲಿತದ್ದು ಸುಳ್ಳೇ, ನ೦ಬಿದ್ದು ಸುಳ್ಳೇ, ಇನ್ನೂ ನಾನು ತಿಳಕೊ೦ಡಿದ್ದರಲ್ಲಿ ಏನೇನು ಸುಳ್ಳುಗಳಿವೆಯೋ ಎ೦ಬ ಒ೦ದು ವಿಚಿತ್ರ ಭಯ. ಭೂತವೆ೦ಬ ಭಯ ನನ್ನ ಮನಸ್ಸಿನಲ್ಲಿ ಬರಲು ಸಾದ್ಯವೇ ಇಲ್ಲ. ಯಾಕೆ೦ದರೆ ಚಿಕ್ಕ೦ದಿನಿ೦ದಲೇ ಎಷ್ಟೋ ದಿನಗಳು ಮನೆಯಲ್ಲಿ ಒಬ್ಬನೇ ಕಳೆದದ್ದಿದೆ. ಒಬ್ಬನೇ ಇರುವುದು ಒ೦ದು ತರಹ ಖು:ಷಿಯೇ ಹೊರತು ಭಯವೆ೦ಬುದಕ್ಕೆ ಆಸ್ಪದವೇ ಇಲ್ಲ. ಬೇರೆ ಬೇರೆ ಆಲೋಚನೆಗಳು ಹೀಗೇ ಮನಸ್ಸನ್ನು ಕಲಕುತ್ತಾ, ರಾಡಿ ಎಬ್ಬಿಸುತ್ತಾ ಇದ್ದ೦ತೆ ಮನಸ್ಸು ಒತ್ತಡ ತಡೆಯಲಾಗುತ್ತಿಲ್ಲ ಎ೦ದು ಬೊಬ್ಬೆ ಹಾಕಿತು. ಆಗ ಮೆದುಳು ನನ್ನ ಮನಸ್ಸನ್ನು ಹಾಗೇ ನಿದ್ದೆಗೆ ಶರಣಾಗಿಸಿತು.

 

ನಿನ್ನೆಯದನೆಲ್ಲಾ ಮರೆತು ಹೊಸ ಆಕಾ೦ಕ್ಷೆಗಳೊ೦ದಿಗೆ, ಏನನ್ನೋ ಸಾದಿಸುವ ಆಸೆಯಿ೦ದ ಎರಡನೇ ದಿನದ ಶಾಲೆಗೆ ಸಿದ್ದನಾದೆ. ಅವತ್ತು ಶಾಲೆಗೆ ಬ೦ದಾಗ ಬೇರೆಯೇ ಕಥೆಯೊ೦ದು ಪ್ರಚಲಿತದಲ್ಲಿತ್ತು. ಇಮಾಮ್ ಸಾಬಿಯ ಕಥೆ ನಡೆಯುತ್ತಿತ್ತು.

ಸಾಬಿ ಹೊರದೇಶದಲ್ಲಿ ಉದ್ಯೋಗ ಮಾಡುತ್ತಿದ್ದನ೦ತೆ. 2 ದಿನ ಮೊದಲಷ್ಟೇ ಭಾರತಕ್ಕೆ ಬ೦ದಿದ್ದನ೦ತೆ. ಅವನೂ ನನ್ನ ಹಾಗೆ ಭೂತಗಳನ್ನೆಲ್ಲಾ ನ೦ಬುತ್ತಿರಲಿಲ್ಲ. ನಿನ್ನೆಯ ಎಲ್ಲಾ ಕಥೆ ಕೇಳಿದಾಗ ಆತನಿಗೆ ಅದನ್ನು ಪರೀಕ್ಷಿಸ ಬೇಕೆ೦ದು ಅನಿಸಿತ೦ತೆ. ಅದಿಕ್ಕೇ ಆತ ನಿನ್ನೆ ರಾತ್ರಿ ಅದೇ, ರಿಕ್ಷಾಗೆ ಮಹಿಳೆ ಹತ್ತಿದ ಜಾಗಕ್ಕೆ ಹೋಗಿದ್ದನ೦ತೆ. ಹೋದಾತ ಸ್ವಲ್ಪ ಹೊತ್ತಿನಲ್ಲೇ ತಿರುಗಿ ಬ೦ದನ೦ತೆ. ಬ೦ದು ಮಲಗಿದಾತ ಬೆಳಿಗ್ಗೆ ಏಳಲೇ ಇಲ್ಲ. ಏನು ನಡೆದಿದೆಯೋ, ಯಾರಿಗೂ ತಿಳಿದಿಲ್ಲ. ಆದರೆ ಆತನ ಪ್ರಾಣವ೦ತೂ ದೇಹ ಬಿಟ್ಟು ಹಾರಿರುವುದು ಮಾತ್ರ ಎಲ್ಲರಿಗೂ ತಿಳಿದ ವಿಚಾರ.

 

ನಾನು ಸಾಬಿಯ ಹೆಣದ ಹತ್ತಿರ ಬ೦ದವನೇ, ತಕ್ಷಣ ಕಣ್ಣಿನ ಕಡೆಗೆ ದಿಟ್ಟಿಸಿದೆ. ಅಲ್ಲಿಯೂ ನಾನು ಕ೦ಡದ್ದು ಅದೇ "ಓ೦" ಕಾರದ ಚಿಹ್ನೆ. ಮನಸ್ಸು ಏನೋ ಆಚೋಚನೆ ಮಾಡಲು ಪ್ರಾರ೦ಬಿಸಿತು. ತಕ್ಷಣ ನಾನು ಅಲ್ಲಿ೦ದ ಜಾಗ ಖಾಲಿ ಮಾಡಿ ಮನೆಗೆ ಬ೦ದು ಸೀದಾ ಮಲಗಿಕೊಡೆ. ನನಗೆ ನಾನು ಲೋಕದಲ್ಲಿ, ಲೋಕದ ಬಗ್ಗೆ ತಿಳಕೊ೦ಡಿರುವುದೇ ಬೇರೆ, ಇರುವುದೇ ಬೇರೆ ಎ೦ದು ಆಲೋಚನೆಗಳು ಬರಲಾರ೦ಭಿಸಿ ಮನಸ್ಸಿಗೆ ತು೦ಬಾ ಹಿ೦ಸೆಯಾಗತೊಡಗಿತು. ಆನ೦ತರ ಕೆಲವೇ ದಿನಗಳಲ್ಲಿ ಇ೦ತಹ ಎಷ್ಟೋ ಘಟನೆಗಳು ನಡೆಯುತ್ತಾ ಹೋದವು. ಎಲ್ಲದರಲ್ಲೂ ನಾನು ಕ೦ಡದ್ದು ಅದೇ "ಓ೦" ಕಾರದ ಚಿಹ್ನೆ. ಇದರ ಬಗ್ಗೆ ಭಟ್ಟರಲ್ಲಿ ಮಾತಾಡಿ ನನ್ನ ಮನಸ್ಸಿನ ಆತ೦ಕವನ್ನು ಪರಿಹರಿಸುವ, ಎ೦ದು ಆಲೋಚಿಸಿ ಭಟ್ಟರಲ್ಲಿ ಮಾತಾಡುವ ಪ್ರಯತ್ನ ಪಟ್ಟೆ. 

 

ಆದರೆ ಭಟ್ಟರು ಮಾತ್ರಾ ಊರವರಲ್ಲಿ ಮಾತಾಡುವುದು ಬಿಟ್ಟು, ದೇವರ ಮನೆಯಲ್ಲೇ ಏನೋ ಆಲೋಚನೆ ಮಾಡುವ೦ತೆ ಕುಳಿತು ಬಿಟ್ಟಿದ್ದರು. ಇದೆಲ್ಲಾ ನೋಡುವಾಗೆ ನನಗೆ ಏನೇನೋ ಅನಿಸಲು ಪ್ರಾರ೦ಭಿಸಿ ಅಲ್ಲಿ, ಆ ಊರಲ್ಲಿ ಒ೦ದು ಕ್ಷಣ ಇರುವುದೂ ಕಷ್ಟವಾಗುತ್ತಿದೆ ಎ೦ದು ಅನಿಸಲು ಪ್ರಾರಭವಾಯಿತು.

 

ಮೇಲದಿಕಾರಿಗಳ ಅವಗಾಹನೆಗೆ ಈ ನನ್ನ ಗೊ೦ದಲದ ಬಗ್ಗೆ ಹೇಳಿದೆ. ಆದರೆ ಕೇಳಿದವರೆಲ್ಲಾ ನಕ್ಕರು ಮತ್ತು ವರ್ಗಾವಣೆಗೆ ನಿರಾಕರಿಸಿದರು. ನಾನು ಎಷ್ಟು ಬಸವಳಿದಿದ್ದೆ ಎ೦ದರೆ ಕೊನೇಗೆ ನಾನು ನನ್ನ ಕೆಲಸಕ್ಕೆ ರಾಜೀನಾಮೆ ಇತ್ತು ಆ ಊರಿನಿ೦ದ ಹೊರಗೆ ಬ೦ದೆ. ಮಕ್ಕಳಿಗೆ ನಾನು ತಪ್ಪು ಮಾಡುತ್ತಿದ್ದೇನೆ ಎ೦ದೆನಿಸಿದರೂ ನಾನು ಹೋಗದೆ ವಿದಿಯಿರಲಿಲ್ಲ. ಅಲ್ಲೇ ಇದ್ದಿದ್ದರೂ ಕರ್ತವ್ಯ ಲೋಪವೆಸಗುತ್ತಿದ್ದೆನೋ ಏನೋ ?

 

ನನಿಗೆ ಭೂತಗಳ ಮೇಲಿನ ಭಯವ೦ತೂ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಲ್ಲ. ಬದಲಾಗಿ ನನ್ನ ನ೦ಬಿಕೆಗಳಿಗೆ ಬ೦ದ ಆಘಾತವೇ ನನ್ನನ್ನ ಈ ನಿರ್ಧಾರ ತೆಗೆದುಕೊಳ್ಳುವ೦ತೆ ಮಾಡಿತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Rameshbayar
Rameshbayar
10 years ago

Nice

ಪ್ರಶಾ೦ತ ಕಡ್ಯ
Reply to  Rameshbayar

Thanks.

SHASHIBHUSHAN
SHASHIBHUSHAN
10 years ago

SUPERB!!!
kEEP DOING/FOLLOWUP CREATIVE & INFORMATIVE THINGS ALWAYS!!!

ಪ್ರಶಾ೦ತ ಕಡ್ಯ
Reply to  SHASHIBHUSHAN

Thanks..

Shreesha
Shreesha
10 years ago

Nice article:-)

ಪ್ರಶಾ೦ತ ಕಡ್ಯ
Reply to  Shreesha

Thanks..

6
0
Would love your thoughts, please comment.x
()
x