ಅತ್ಯಾಚಾರ ತಡೆಯುವ ಬಗೆ: ಅಖಿಲೇಶ್ ಚಿಪ್ಪಳಿ ಅಂಕಣ

ಅದೊಂದು ೬ನೇ ಕ್ಲಾಸಿನಲ್ಲಿ ಓದುತ್ತಿರುವ ಚುರುಕಾದ ಹೆಣ್ಣುಮಗು. ಆ ದಿನ ಶನಿವಾರ ಗೆಳತಿಯರಿಗೆ ಬೈ ಸೋಮವಾರ ಸಿಗ್ತೀನಿ ಎಂದು ಹೇಳಿ ಮನೆಕಡೆ ನಡಕೊಂಡು ಹೊರಟಿತು. ಹೈವೇಯಿಂದ ಸುಮಾರು ಅರ್ಧ ಕಿ.ಮಿ. ಆಸುಪಾಸಿನಲ್ಲಿ ಮನೆ. ಆ ವಯಸ್ಸಿನ ಮಕ್ಕಳಲ್ಲಿ ವಯೋಸಹಜ ಆಟವಾಡುವ ವಾಂಛೆಯಿರುತ್ತದೆ. ಇಲ್ಲಿ ನೋಡಿದರೆ ಕಣ್ಣುಹಾಯಿಸುವಷ್ಟು ದೂರ ೪೦ ಅಡಿ ಅಗಲದಲ್ಲಿ ಕಪ್ಪನೆಯ ಹೆದ್ದಾರಿ ಮಲಗಿದೆ. ಅದರ ಮೇಲೆ ವೇಗವಾಗಿ ಸಾಗುವ ಕಾರುಗಳು, ದೈತ್ಯ ಲಾರಿಗಳು. ಮಣ್ಣಾಡಲು ರಸ್ತೆಯಲ್ಲಿ ಮಣ್ಣೇ ಇಲ್ಲ. ಇಲ್ಲೊಂದು ಒಳದಾರಿಯಿದೆ, ಮನೆಗೆ ಹತ್ತಿರ ಕೂಡ. ಆ ದಾರಿಯಲ್ಲಿ ಸಾಗಿದರೆ ಪುಟ್ಟ ಕಾಲುಗಳಿಂದ ಮಣ್ಣನ್ನು ಚಿಮ್ಮುತ್ತಾ ಹೋಗುವ ಮಜವೇ ಬೇರೆ. ಮಣ್ಣಾಡುತ್ತಾ ಹೋದರೆ ಶೂ ಎಲ್ಲಾ ಗಲೀಜಾಗುತ್ತೆ, ಫ್ರಾಕ್ ಕೂಡ ಮಣ್ಣಾಗಿ ಯಾವ ಡಿಟರ್ಜಂಟ್‌ನಿಂದ ತೊಳೆದರೂ ಹೋಗುವುದಿಲ್ಲ, ಇದೇ ಕಾರಣಕ್ಕೆ ಗ್ಯಾರೆಂಟಿಯಾಗಿ ಅಮ್ಮ ಬೈದೇ ಬೈಯುತ್ತಾಳೆ. ಆದರೂ ಮಣ್ಣಾಡುವ ಇಚ್ಛೆಯಿಂದ ದೂರ ಸರಿಯಲಿಲ್ಲ. ಹತ್ತಿರದ ದಾರಿಯಲ್ಲಿ ಚಲಿಸಿದಳು. ಲಾರಿ-ಟ್ರ್ಯಾಕ್ಟರುಗಳು ಓಡಿಯಾಡಿದ ಜಾಗ. ರಸ್ತೆಯ ಮೇಲೆ ನುಣಿ-ಮಣ್ಣು, ದಾರಿ ನಿರ್ಜನ. ದಾರಿಬದಿಯಲ್ಲಿ ಹೇರಳ ಯುಪಟೋರಿಯಂ ಕಳೆ ಆಳೆತ್ತರಕ್ಕೆ ಬೆಳೆದು ನಿಂತಿದೆ. ಅಲ್ಲಿ ಹೊಂಚಿ ಕುಳಿತಿದ್ದ ರೇಪಿಸ್ಟ್. ಚಿರತೆಯಂತೆ ಆ ಪುಟ್ಟ ಹುಡುಗಿಯ ಮೇಲೆರೆಗಿ ಮರೆಯಲ್ಲಿ ಕೆಡವಿದ. ಏನಾಗುತ್ತಿದೆ ಎಂದು ಗೊತ್ತಾದಷ್ಟು ಷಾಕ್ ಆಯಿತು ಆ ಮಗುವಿಗೆ. ಕೂಗಲಾರದಂತೆ ಬಾಯಿಯನ್ನು ಮುಚ್ಚಿ, ಮುಂದೆ ನಡೆದದ್ದೆಲ್ಲಾ ಘೋರ (ಸಾಗರದಲ್ಲಿ ೪ ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ, ಆರೋಪಿ ಖುಲಾಸೆಯಾಗಿದ್ದಾನೆ. ಹುಡುಗಿಯ ತಂದೆ ಮೃತಪಟ್ಟಿದ್ದಾನೆ).

ನಿರ್ಭಯಾ ಘಟನೆ ಹಸಿಯಾಗಿರುವಂತೆಯೇ ಮುಂಬಯಿನಲ್ಲಿ ೫ ಜನ ಸೇರಿ ವೃತ್ತಿಪರ ಪತ್ರಕರ್ತೆಯನ್ನು ಮಾನಭಂಗ ಮಾಡಿದರು. ಇತ್ತೀಚಿಗೆ ಬೆಂಗಳೂರಿನಲ್ಲಿ ತನ್ನ ಪ್ರೇಮಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ಹುಡುಗಿಯನ್ನು ಅಡ್ಡಗಟ್ಟಿ ಒಟ್ಟು ಸಾಲಾಗಿ ೧೧ ರಾಕ್ಷಸರು ಸೇರಿ ಸರದಿಯಂತೆ ರೇಪ್ ಮಾಡಿದರು. ದಿನ-ಬಿಟ್ಟು-ದಿನಕ್ಕೊಂದರಂತೆ ಎಲ್ಲಿಯಾದರೂ ಈ ತರಹದ ಘಟನೆಗಳು ನಡೆಯುತ್ತಲೇ ಇರುತ್ತವೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಜನರೂ ಓದುತ್ತಾರೆ, ಮರೆಯುತ್ತಾರೆ. ಇದಕ್ಕೊಂದು ಪರಿಹಾರ ಹುಡುಕುವ ಬದಲು ಪತ್ರಿಕೆಗಳು ತುಂಡು-ಬಟ್ಟೆಯಿಂದಾಗಿ ಮಾನಭಂಗಗಳು ಹೆಚ್ಚುತ್ತಿವೆ ಎಂದೂ ಸಂಪ್ರದಾಯವಾದಿಗಳು, ತೊಡುವ ಬಟ್ಟೆಗೂ ರೇಪಿಗೂ ಸಂಬಂಧವಿಲ್ಲ, ಬಟ್ಟೆ ತೊಡುವುದು ಮಹಿಳಾ ಹಕ್ಕು ಎಂದು ಸೋಕಾಲ್ಡ್ ಮಹಿಳಾವಾದಿಗಳು, ಬುದ್ಧಿಜೀವಿಗಳ ವಾದ. ಎರೆಡೂ ವಾದಗಳು ಅರ್ಧಸತ್ಯ ಮತ್ತು ಇನ್ನರ್ಧ ಮಿಥ್ಯ.

ಜೀವಿಗೆ ಆಹಾರ ಮತ್ತು ನಿದ್ದೆ ಬದುಕಲಿಕ್ಕೆ ಹೇಗೆ ಮುಖ್ಯವೋ? ಹಾಗೆ ಲಿಂಗ ಸಂತೃಪ್ತಿಯೂ ಮುಖ್ಯ. ರೇಪ್ ಎಂದರೆ, ಬಲವಂತವಾಗಿ ಅಥವಾ ಇನ್ನೊಂದು ಲಿಂಗದ ಇಚ್ಛೆಗೆ ವಿರುದ್ಧವಾಗಿ ನಡೆಸುವ ಕ್ರಿಯೆ. ಅಪ್ರಾಪ್ತರನ್ನು ಪುಸಲಾಯಿಸಿ ಅಥವಾ ಆಮಿಷ ತೋರಿಸಿ ನಡೆಸುವುದು ಮಾನಭಂಗವಾಗುತ್ತದೆ. ಒಪ್ಪಿಗೆಯಿಲ್ಲದಿದ್ದರೆ ಹೆಂಡತಿಯೊಡನೆ ಬಲವಂತವಾಗಿ ನಡೆಯುವ ಕ್ರಿಯೆಯೂ ರೇಪ್ ಎಂದೇ ಕರೆಯಬಹುದು.

ಮಹಾಭಾರತದಲ್ಲಿ ದ್ರೌಪದಿಯ ಸೀರೆ ಸೆಳೆಯುವ ದುಸ್ಸಾಹಸ್ಸಕ್ಕೆ ದುಶ್ಯಾಸನ ಹೋಗಿದ್ದು, ರಾಮಾಯಣದ ರಾವಣ ಸೀತೆಯನ್ನು ಅಪಹರಿಸಿದ್ದು ಕೂಡಾ ರೇಪಿನ ಪೂರ್ವತಯಾರಿಯಲ್ಲದೇ ಮತ್ತೇನು ಅಲ್ಲ. ಇದೆಲ್ಲಾ ಪುರಾಣದ ಕತೆಯಾದರೆ, ಇತಿಹಾಸವನ್ನು ಕಲಕಿದರೂ ಯುದ್ಧದ ಸಮಯದಲ್ಲಿ ಸೋತ ರಾಜರ ಹೆಂಡಿರು-ದಾಸಿಯರನ್ನು ಗೆದ್ದವರು ತಮ್ಮ ಅಡಿಯಾಳಾಗಿ ನೋಡಿಕೊಳ್ಳುವುದು ಮಾನಭಂಗದ ಪೂರ್ವತಯಾರಿಯೆ ಸೈ.

ಸಾಮಾಜಿಕ ಕಟ್ಟಳೆಗಳನ್ನು ಅತಿಸೂಕ್ಷ್ಮವಾಗಿ ಗಮನಿಸುವ ಮನೋಭಾವ ಹೊಂದಿರುವ ಭಾರತದಲ್ಲಿ ಬಹಳಷ್ಟು ಮಾನಭಂಗ ಘಟನೆಗಳು ದಾಖಲಾಗುವುದೇ ಇಲ್ಲ. ತಂದೆ-ತಾಯಿಯರು ಸಮಾಜಕ್ಕೆ ಹೆದರಿ ನ್ಯಾಯಕ್ಕಾಗಿ ಇರುವ ವ್ಯವಸ್ಥೆಯ ಕದ ತಟ್ಟುವುದೇ ಇಲ್ಲ. ಘಾಸಿಗೊಂಡ ಗಾಯಾಳುವನ್ನು ಖಾಸಗಿಯಾಗಿ ಚಿಕಿತ್ಸೆ ಕೊಡಿಸಿ ಆದಷ್ಟು ಬೇಗ ಗಂಡು ಹುಡುಕಿ ಮದುವೆ ಮಾಡುವುದೇ ಅವರ ಮೊದಲ ಜವಾಬ್ದಾರಿಯೆಂದು ತಿಳಿಯುತ್ತಾರೆ. ಅಲ್ಲೊಂದು-ಇಲ್ಲೊಂದು ಪ್ರಕರಣ ದಾಖಲಾದರೂ, ಕೋರ್ಟ್ ಸಾಕ್ಷಿ ಬೇಡುತ್ತದೆ. ಆರೋಪಿಯ ವಕೀಲರು ತಮ್ಮ ವೃತ್ತಿಪರತೆಯನ್ನು ಮೆರೆಯಲು ಇಲ್ಲ-ಸಲ್ಲದ ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಸಂತ್ರಸ್ತ ಜೀವಿಗೆ ಕೇಳುತ್ತಾರೆ. ಯಾರೂ ಸಾಕ್ಷಿಯಿಟ್ಟುಕೊಂಡು ಇಂತಹ ಕೆಲಸ ಮಾಡುವುದಿಲ್ಲ. ಹೆಚ್ಚಿನ ಭಾರಿ ಸಾಕ್ಷಿಯಿಲ್ಲದೆ ಕೇಸ್ ಬಿದ್ದು ಹೋಗುತ್ತದೆ.

ಸ್ನೇಹಿತನೊಬ್ಬ ಸೌದಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದಾನೆ. ಎರೆಡು-ಮೂರು ವರ್ಷಗಳಿಗೊಮ್ಮೆ ಊರಿಗೆ ಬಂದು ಹೋಗುವ ಪರಿಪಾಠವಿದೆ. ಹಿಂದೊಮ್ಮೆ ಬೇಟಿಯಾಗಿ ಲೋಕಾಭಿರಾಮವಾಗಿ ಮಾತನಾಡುತ್ತಾ ಅಲ್ಲಿಯ ಕಾನೂನು ಹೇಗಿದೆ ಎಂಬ ಪ್ರಶ್ನೆ ಹಾಕಿದೆ. ಅಲ್ಲಿ ಕಾನೂನು ತುಂಬ ಬಿಗಿಯಾಗಿದೆ. ಕಾನೂನಿನ ಭಯದಿಂದ ಅಲ್ಲಿ ಅಪರಾಧಗಳ ಸಂಖ್ಯೆ ಅತಿ ಕಡಿಮೆ. ಯಾರಾದರೂ ರೇಪ್ ಮಾಡಿದಲ್ಲಿ ಶರಿಯಾ ಕಾಯ್ದೆಯಡಿಯಲ್ಲಿ ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸುತ್ತಾರೆ. ಶುಕ್ರವಾರದಂದು ಶಿಕ್ಷೆ ಜಾರಿಯಾಗುವುದೆಂದು ನಿಗದಿಯಾದಲ್ಲಿ ಹಿಂದಿನ ದಿನವೇ ಸಾರ್ವಜನಿಕವಾಗಿ ನಾಳೆ ಇಂತಹ ಚೌಕದಲ್ಲಿ ಸದರಿಯವರನ್ನು ಸಾರ್ವಜನಿಕವಾಗಿ ನೇಣಿಗೇರಿಸಲಾಗುವುದು (ಕಲ್ ಕತಲ್ ಹೈ) ಎಂಬುದನ್ನು ಸಾರ್ವಜನಿಕವಾಗಿ ತಮಟೆಯ ಮೂಲಕ ಬಿತ್ತರಿಸಲಾಗುತ್ತದೆ ಎಂಬುದು. ಇಂತಹ ಶಿಕ್ಷೆಯನ್ನು ಕಣ್ಣಿನಿಂದ ನೋಡಿದ ಯಾವನೂ ಅಪರಾಧ ಕೃತ್ಯಕ್ಕೆ ಕೈ ಹಾಕುವುದಿಲ್ಲ ಎಂಬ ವಿವರಣೆಯನ್ನು ನೀಡಿದ.

ಅಲ್ಲಿನ ಕೋರ್ಟ್‌ಗಳಲ್ಲಿ ಕೆಲವೊಮ್ಮೆ ಭಾನಗಡಿ ತೀರ್ಪುಗಳು ಬಂದ ಉದಾಹರಣೆಯಿದೆ. ಸೌದಿಯಲ್ಲಿ ೨೦೦೬ರಲ್ಲಿ ಒಬ್ಬ ಮಹಿಳೆ ಒಂದು ಗಂಡಸಿನ ಜೊತೆ ಕಾರಿನಲ್ಲಿದ್ದಳು. ಎರಡು ದುಷ್ಕರ್ಮಿಗಳು ಕಾರಿನ ಸಮೇತ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಒಟ್ಟು ಏಳು ಜನ ಸೇರಿ ಆಕೆಯನ್ನು ರೇಪ್ ಮಾಡುತ್ತಾರೆ. ವಿಷಯ ಕೋರ್ಟಿನೆದುರು ಬಂದಾಗ ಆಕೆಯ ಜೊತೆ ಇದ್ದ ಪುರುಷ ಯಾರು ಎಂಬ ಪ್ರಶ್ನೆಗೆ ಸರಿಯಾದ ವಿವರಣೆ ಸಿಕ್ಕುವುದಿಲ್ಲ. ಅಪರಿಚಿತ ವ್ಯಕ್ತಿಯ ಜೊತೆ ಇದ್ದ ಅಪರಾಧಕ್ಕಾಗಿ ಆಕೆಗೆ ೨೦೦ ಛಡಿಯೇಟು ನೀಡಿ ಸೆರೆಮನೆಗೆ ತಳ್ಳಲು ಆದೇಶಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಸೌದಿ ದೇಶವು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆ ಸೇರಿದಂತೆ ಪ್ರಪಂಚಾದ್ಯಂತ ಎಲ್ಲಾ ದೇಶಗಳಿಂದಲೂ ಟೀಕೆಯೆದುರಿಸಬೇಕಾಯಿತು.

ಚಿರತೆಗಳ ಮೈಮೇಲೆ ಚುಕ್ಕಿ ಏಕಿದೆ? ಜಿರಾಫೆ ಕತ್ತು ಅಷ್ಟುದ್ದ ಯಾಕಿದೆ? ಈ ತರಹದ ಪ್ರಶ್ನೆಗಳಿಗೆ ವಿಕಾಸವಾದದ ಉತ್ತರ ಎಂದರೆ, ವಂಶವಾಹಿನಿಯಲ್ಲಿ ಬಂದ ಗುಣ. ಆದ್ದರಿಂದ ಈ ಗುಣ ತಲೆಗಳಿಂದ ತಲೆಗಳಿಗೆ ರವಾನೆಯಾಗುತ್ತದೆ. ಇದು ಸಿಂಪಲ್ ಉತ್ತರ ಕೂಡ. ಹಾಗೆಯೇ ಸ್ತ್ರೀಯನ್ನು ಅಡಿಯಾಳಾಗೆಯೇ ಇರಿಸಬೇಕು, ಪುರುಷನಿಗೆ ಸ್ತ್ರೀ ಎಂದೆಂದೂ ಸಮವಲ್ಲ ಎಂಬುದು ಗಂಡಿನ ಜನ್ಮಜಾತ ಗುಣ. ಇದು ವಂಶವಾಹಿನಿಯಲ್ಲಿ ಸೇರಿಕೊಂಡ ಗುಣ ಸುಲಭವಾಗಿ ತೊಲಗದು. ಸಮಾಜ-ಸಂಸ್ಕಾರ ಇನ್ನಿತರ ಹಲವು ಕಾರಣಗಳಿಂದಾಗಿ ಎಲ್ಲರೂ ಬಲತ್ಕಾರದಂತಹ ಹೀನ ಕಾರ್ಯವೆಸಗುವುದಕ್ಕೆ ಹೋಗುವುದಿಲ್ಲ. ದುರ್ಭಲ ಮತ್ತು ಪುಕ್ಕಲ ಮನ:ಸ್ಥಿತಿಯ ಕೆಲವರು ಸಮಯಾವಕಾಶ ಒದಗಿಬಂದಲ್ಲಿ ಈ ತರಹದ ವರ್ತನೆ ತೋರುತ್ತಾರೆ ಎಂಬ ವಾದವಿದೆ (ಇಲ್ಲವೆ ವಿಧಾನಸೌಧದಲ್ಲಿ ಕುಳಿತು ಮೊಬೈಲ್‌ನಲ್ಲಿ ಸೃಷ್ಟಿಕ್ರಿಯೆ ಎಂಬ ಆಟವನ್ನು ನೋಡುತ್ತಾರೆ). ಈ ವಾದವನ್ನು ಪುಷ್ಟಿಕರಿಸುವುದಾಗಲಿ ಅಥವಾ ಅಲ್ಲಗಳೆಯುದಾಗಲಿ ನಮ್ಮ ಕೆಲಸವಲ್ಲ. ಮಾನಭಂಗದಂತಹ ಅನಿಷ್ಟಗಳಿಗೆ ತೆರೆಯೆಳೆಯುವುದು ಸಾಧ್ಯವಾದಲ್ಲಿ, ಇದೊಂದು ಮನುಕುಲದ ಏಳ್ಗೆಯ ಮೊದಲ ಮೆಟ್ಟಿಲು ಎಂದು ನಿಸ್ಸಂಶಯವಾಗಿ ವಾದಿಸಬಹುದು.

ಪ್ರಕೃತಿಯ ಪ್ರತಿಯೊಂದು ಅಚ್ಚರಿಗಳ ಮೂಟೆ. ಕಾಡಿನಲ್ಲಿ ಪ್ರತಿನಿತ್ಯ ನಡೆಯುವ ಕೊಲ್ಲುವ ಇಲ್ಲವೇ ಸಾಯುವ ಆಟದಲ್ಲಿ ಆಯಾ ಪ್ರಾಣಿಗಳ ದೇಹದ ಅಷ್ಟೂ ಭಾಗಗಳು ಇನ್ನಿಲ್ಲದಂತೆ ಕಸರತ್ತಿಗೊಳಪಡುತ್ತವೆ. ಅತಿವೇಗವಾಗಿ ಓಡುವ ಚಿರತೆಯ ಬಾಯಿಯಿಂದ ಪಾರಾದ ಹರಿಣಗಳಿವೆ. ಹಾಗೆಯೇ ಮನುಷ್ಯರ ದೇಹವೂ ಕೂಡ ಅಚ್ಚರಿಯ ಗೂಡು. ಇಡೀ ಭೂಮಿಯನ್ನು ಒಂದು ಸುತ್ತು ಹೆಡೆಮುರಿ ಕಟ್ಟಲು ಬೇಕಾದಷ್ಟು ನರಗಳು ನಮ್ಮ ದೇಹದಲ್ಲಿವೆ. ಒಬ್ಬನ ಜೀವಿತಾವಧಿಯಲ್ಲಿ ಅದೆಷ್ಟೋ ಲಕ್ಷ ಲೀಟರ್ ರಕ್ತವನ್ನು ಫಿಲ್ಟರ್ ಮಾಡುವ ಹೃದಯದ ಕೆಲಸವೇನು ಸಾಮಾನ್ಯವೆ? ಗಂಡಿನ ಬಲತ್ಕಾರದಿಂದ ಪಾರಾಗಲು ಈ ಸೃಷ್ಟಿ ಒಂದು ಅದ್ಭುತ ವ್ಯವಸ್ಥೆಯನ್ನು ಹೆಣ್ಣಿನಲ್ಲೂ ಇಟ್ಟಿದೆ. ದೇಹದಲ್ಲಿ ಬಲಿಷ್ಟವಾದ ಮಾಂಸಖಂಡವೊಂದು ತೊಡೆಯ ಭಾಗದಲ್ಲಿದೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಸಾರ್‍ಟೋರಿಯಸ್ ಮಸಲ್ ಎಂದೂ, ಇಂಗ್ಲೀಷ್‌ನಲ್ಲಿ ಯಾಂಟಿ ರೇಪ್ ಮಸಲ್ ಎನ್ನಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ ಅಮಾನಭಂಗಾಸ್ತ್ರ ಎನ್ನೋಣವೆ?

ಇದು ದೇಹದ ಅತಿಉದ್ದವಾದ ಮಾಂಸಖಂಡವಾಗಿದ್ದು, ಕಿಬ್ಬೊಟ್ಟೆ (ಬೆನ್ನುಹುರಿಯ ಕೆಳಮುಂಭಾಗ) ಭಾಗದಿಂದ ಹೊರಟು ಬಳ್ಳಿಯಂತೆ ಸುತ್ತುತ್ತಾ ತೊಡೆಯ ಹೊರಭಾಗದಿಂದ ಹಾದು ಮತ್ತೆ ಸುತ್ತಿ ತೊಡೆಯ ಒಳಭಾಗ ಅಲ್ಲಿಂದ ಮೊಳಕಾಲು ಚಿಪ್ಪಿನ ಕೆಳಗಡೆ ಒಳಭಾಗದಲ್ಲಿ ಕೊನೆಗೊಳ್ಳುತ್ತದೆ. ಎರಡೂ ತೊಡೆಗಳಲ್ಲಿ ಈ ಸಾರ್‍ಟೋರಿಯಸ್ ಮಾಂಸಖಂಡ ಹಾದು ಹೋಗುತ್ತದೆ. ಈ ಮಾಂಸಖಂಡವೇ ಮಹಿಳೆಯ ಮೇಲೆ ಆಗುವ ಸಂಭಾವ್ಯ ಬಲತ್ಕಾರವನ್ನು ತಡೆಯುವ ಅಸ್ತ್ರವಾಗಬಲ್ಲದು. ಸ್ವಲ್ಪ ವಿವರವಾಗಿ ನೋಡೋಣ.

ದೇಹದ ಭಾಗಗಳಲ್ಲಿ ಹಲವು ಮಾಂಸಖಂಡಗಳಿರುತ್ತವೆ. ಇವುಗಳಲ್ಲಿ ಎರಡು ವಿಧ. ವಾಲಂಟರಿ (ಯಾಚಿತ) ಮಾಂಸಖಂಡ ಅಂದರೆ ನಮ್ಮ ಮೆದುಳಿನ ನಿರ್ದೇಶನವಿಲ್ಲದೆ ಇವು ಕೆಲಸ ಮಾಡಲಾರವು. ಉದಾಹರಣೆ ಕೈಯನ್ನು ಎತ್ತುವಾಗ ಸಹಕರಿಸುವ ತೋಳಿನ ಬೈಸೆಪ್ಸ್ ಮಾಂಸಖಂಡ ಇನ್ನಿತರ ಹಲವಾರು. ಮತ್ತೊಂದು ವಿಧ ಇನ್-ವಾಲಂಟರಿ (ಅಯಾಚಿತ) ಮಾಂಸಖಂಡಗಳು. ಉದಾಹರಣೆಯೆಂದರೆ, ಹೃದಯದ ಮಾಂಸಖಂಡ ಮತ್ತು ಚಳಿ ಅಥವಾ ಭಯಗೊಂಡಾಗ ಕೂದಲು ನಿಮಿರಿಸುವ ಕೂದಲಿನ ಬುಡದ ಚಿಕ್ಕ ಮಾಂಸಖಂಡ. ಬಲತ್ಕಾರದಂತಹ ಅವಘಡ ಸಂಭವಿಸುವ ಸಂದರ್ಭದಲ್ಲಿ ಈ ಮೇಲೆ ಹೇಳಿದ ಯಾಚಿತ ಮಾಂಸಖಂಡವಾದ ಸಾರ್‍ಟೋರಿಯಸ್ ಮಾಂಸಖಂಡಕ್ಕೆ ಮೆದುಳಿನಿಂದ ಲಾಕ್ ಆಗಲು ಸಂದೇಶ ಬಂತೆಂದರೆ, ಅಂದರೆ ಎರಡೂ ಮಂಡಿಗಳ ಒಳಭಾಗವನ್ನು ಬುದ್ಧಿಪೂರ್ವಕವಾಗಿ ಬಿಗಿಯಾಗಿ ಒಂದಕ್ಕೊಂದು ಅಂಟಿಕೊಂಡಂತೆ ಇರಿಸಿದಲ್ಲಿ, ಇದನ್ನು ಬೇರೆ ಮಾಡುವುದು ಕಷ್ಟಸಾಧ್ಯ. ರೇಪಿಸ್ಟ್ ಒಬ್ಬನೆ ಇದ್ದ ಎಂದರೆ, ಕಾಲುಗಳನ್ನು ಬೇರೆ ಮಾಡುವುದು ಅಸಾಧ್ಯವೇ ಸೈ. ತನ್ನ ಪೌರುಷದ ಮೇಲೆ ಆದ ಅಪಮಾನವನ್ನು ಸಹಿಸದ ಆತ ಬಲಿಯನ್ನು ಬಿಟ್ಟು ಹೋಗುವ ಸಂದರ್ಭಗಳು ಹೆಚ್ಚು. ಪ್ರತಿಭಟಿಸುವುದು, ಕಿರುಚಿಕೊಳ್ಳುವುದು ಇಲ್ಲವೆ ಸಹಾಯಕ್ಕಾಗಿ ಯಾರನ್ನಾದರೂ ಕರೆಯುವುದು ಹೀಗೆ ಬೇರೆ ತರಹದ ಪರಿಹಾರ ಸಿಗುವ ಸಾಧ್ಯತೆ ಜಾಸ್ತಿ. ಈ ನೈಸರ್ಗಿಕ ಶಸ್ತ್ರದಿಂದ ಮಾನಭಂಗವಾಗುವುದನ್ನು ತಡೆಯಬಹುದು.

ಇದೊಂದು ಸೃಷ್ಟಿಕರ್ತ ನೀಡಿದ ವರವಾದರೂ, ಹೆಣ್ಣುಮಕ್ಕಳು, ಮಹಿಳೆಯರು ಇನ್ನೂ ಕೆಲವು ದೈಹಿಕವಾಗಿ ಸಾಮರ್ಥ್ಯ ನೀಡುವ ವಿದ್ಯೆಗಳನ್ನು ಕಲಿಯುವುದು ಇನ್ನೂ ಒಳ್ಳೆಯದು. ದಿನಾಲೂ ದಿನಪತ್ರಿಕೆಯ ಯಾವುದಾದರೊಂದು ಪೇಜಿನಲ್ಲಿ ಮಾನಭಂಗದ ಸುದ್ದಿಯಿರುತ್ತದೆ. ಆದರೆ ಅಪರೂಪಕ್ಕೊಮ್ಮೆ ಇಂತಹ ಸುದ್ದಿ ಸಿಗುತ್ತದೆ. ರೈಲಿನಲ್ಲಿ ಕಿಡಿಗೇಡಿಯೊಬ್ಬ ಒಬ್ಬ ಮಹಿಳೆಗೆ ಕಾಟ ಕೊಡುತ್ತಿದ್ದ. ಅವಳು ಹಲ್ಲುಮಟ್ಟೆ ಕಚ್ಚಿಕೊಂಡು ಇವನ ಹುಚ್ಚಾಟವನ್ನು ಸಹಿಸಿಕೊಂಡಿದ್ದಳು. ಯಾವಾಗ ರೈಲು ನಿಲ್ದಾಣ ಬಂತೊ, ಕೆಳಗೆ ಇಳಿದವಳೆ ಲೇಡಿ ಅಮಿತಾಬ್ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ತೆಲುಗಿನ ಚಿತ್ರನಟಿ ವಿಜಯಶಾಂತಿ ಸ್ಟೈಲ್‌ನಲ್ಲಿ ಕೊಟ್ಟಳು ನೋಡಿ ಗೂಸ, ಕಿಕ್-ಪಂಚ್. ಎರಡೇ ನಿಮಿಷದಲ್ಲಿ ಆ ಕಿಡಿಗೇಡಿ ಅವ್ವಾ ತಪ್ಪಾತು ಎಂದು ಹಣೆ-ಗಲ್ಲ ಮುಟ್ಟಿಕೊಂಡು ಕಾಲು ಹಿಡಿದು ಅಡ್ಡ ಬಿದ್ದ. ನಿಲ್ದಾಣದ ಇತರ ಜನ ನಿಂತು ನೋಡುತ್ತಿದ್ದರು. ಅಂದರೆ ಆ ಮಹಿಳೆಗೆ ಇನ್ನೊಬ್ಬರ ಸಹಾಯದ ಅವಶ್ಯಕತೆಯಿರಲಿಲ್ಲ. ತಾನೆ ಖುದ್ದು ಮ್ಯಾನೇಜ್ ಮಾಡಿದಳು. ಪೋಲಿಸ್ ಕಂಪ್ಲೇಂಟ್ ಸಹ ಆಗಲಿಲ್ಲ. ಇಡೀ ಘಟನೆಯ ವಿವರವನ್ನು ೨೦೧೨ರ ವ್ಯಾಲಂಟೈನ್ಸ್ ಡೇ ತಿಂಗಳ ಅದ್ಯಾವುದೋ ತಾರೀಖಿನಂದು ರಾಜ್ಯಮಟ್ಟದ ಪತ್ರಿಕೆಗಳು ಪ್ರಕಟಿಸಿದ್ದವು.

ಪ್ರಾಥಮಿಕ ಹಂತದಿಂದಲೇ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಈ ತರಹದ ಮಾರ್ಷಲ್ ಆರ್ಟ್‌ಗಳನ್ನು ಕಡ್ಡಾಯವಾಗಿ ಕಲಿಸಲು ಸರ್ಕಾರಗಳು ಕಾನೂನು ರೂಪಿಸಬೇಕು. ಈ ಕಾನೂನು ಜಾರಿಯಾದಲ್ಲಿ ಕಿಡಿಗೇಡಿಗಳ ಕಾಟ ಮತ್ತು ಕಾಮುಕ ಶಿಕ್ಷಕರ ಕಾಟ ಕಡಿಮೆಯಾದೀತು.

೨೦೦೫ನೇ ಇಸವಿಯಲ್ಲಿ ಕೆನಡಾದ ಟೊರೊಂಟೊದಲ್ಲೊಂದು ಘಟನೆ ನಡೆಯಿತು. ಜಾನ್ ಲೆಜ್‌ಕೆ ಎಂಬ ೩೩ ವರ್ಷದ ತರುಣ  ಒಂದು ಪಾರ್ಟಿಯಲ್ಲಿರುವಾಗ ಒಬ್ಬ ಮಹಿಳೆಯ ಪರಿಚಯವಾಗುತ್ತದೆ. ಅವರಿಬ್ಬರು ಒಟ್ಟಿಗೆ ಕೂತು ಸಾಕಷ್ಟು ಕುಡಿಯುತ್ತಾರೆ. ರಾತ್ರಿ ಜಾನ್ ಜೊತೆ ಆ ಮಹಿಳೆಯೂ ಅವನ ಮನೆಗೆ ಬರುತ್ತಾಳೆ. ಅಲ್ಲಿ ಒಟ್ಟಿಗೆ ಉಳಿಯುತ್ತಾರೆ. ಬೆಳಗಾದಾಗ ಆ ಮಹಿಳೆಗೆ ತನ್ನ ಮಾನಭಂಗವಾಗಿರುವುದು ಅರಿವಾಗುತ್ತದೆ. ಪೊಲೀಸ್‌ಗೆ ದೂರು ನೀಡುತ್ತಾಳೆ. ಪೊಲೀಸರು ಜಾನ್‌ನನ್ನು ಅರೆಸ್ಟ್ ಮಾಡಿ ಒಳಗೆ ಹಾಕುತ್ತಾರೆ. ಅಪರಾಧಿಯ ವಕೀಲರು ಜಾನ್ ವಿಚಾರಣೆ ಮಾಡಿದಾಗ ಇಲ್ಲ ನಾನ್ಯಾವ ರೇಪ್ ಮಾಡಿಲ್ಲ ಎಂದೇ ಹೇಳುತ್ತಾನೆ. ನಿಗೂಢವನ್ನು ಭೇದಿಸಲು ವಕೀಲ ತೀರ್ಮಾನಿಸುತ್ತಾನೆ. ಸದರಿ ಜಾನ್‌ಗೆ ನಿದ್ದೆಯಲ್ಲಿ ನಡೆದಾಡುವ (ಪ್ಯಾರಾಸೋಮ್ನಿಯಾ) ರೋಗವಿದೆ ಎಂಬ ಸತ್ಯವನ್ನು ಜಾನ್‌ನ ಫ್ಯಾಮಿಲಿ ಡಾಕ್ಟರ್ ತಿಳಿಸುತ್ತಾನೆ. ಆರೋಪಿಯ ಪರ ವಕೀಲ ಇದನ್ನೆ ಕೋರ್ಟ್‌ನಲ್ಲಿ ವಾದಿಸುತ್ತಾನೆ. ಇದಕ್ಕೆ ಸೆಕ್ಸೋಮೇನಿಯ ಎಂದು ಹೆಸರು. ಕೆಳಗಿನ ಕೋರ್ಟ್ ಇದನ್ನು ಪರಿಗಣಿಸಿ ಜಾನ್ ನಿರ್ದೋಷಿಯೆಂದು ಬಿಡುಗಡೆ ಮಾಡುತ್ತದೆ. ಅಂತೂ ಈ ಕೇಸ್ ಪ್ರಪಂಚದ ಮೊದಲನೆ ನಿದ್ರಾಮಾನಭಂಗವೆಂದು ಪತ್ರಿಕೆಗಳಲ್ಲಿ ಪ್ರಕಟವಾಯಿತು.

ಈ ಘಟನೆಯನ್ನು ಇಲ್ಲಿ ಯಾಕೆ ಪ್ರಸ್ತಾಪಿಸಬೇಕಾಯಿತೆಂದರೆ, ಅಪರಿಚಿತರ ಜೊತೆ ಹೋಗಬಾರದು ಎಂಬುದರೊಂದಿಗೆ ಮತ್ತೊಂದಿಷ್ಟು ಟಿಪ್ಸ್.

ಅಪರಿಚಿತ ಸ್ಥಳಗಳಿಗೆ ಮಹಿಳೆ ಒಂಟಿಯಾಗಿ ಹೋಗಬಾರದು

ಅಪರಿಚಿತ ವ್ಯಕ್ತಿಗಳಿಂದ ದೂರವಿರಿ

ಮನೆ ಬೆಲ್ ಆದ ತಕ್ಷಣ ಬಾಗಿಲು ತೆರೆಯದಿರಿ, ಮನೆಯವರಲ್ಲದೆ ಬೆಲ್ ಮಾಡಿದವರು ಬೇರೆ ದುಷ್ಟಯೋಚನೆ ಹೊತ್ತ ಬೇರೆ ಯಾರೋ ಆಗಿರಬಹುದು

ಮೊಬೈಲ್ ಮಾತನಾಡುತ್ತಾ ಮೈಮರೆಯಬೇಡಿ

ಬಾಯ್‌ಫ್ರೆಂಡ್ ಜೊತೆಗೂ ಒಬ್ಬರೆ ಹೋಗಬೇಡಿ

ಯಾರಾದರೂ ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಬಂದಲ್ಲಿ ಗಟ್ಟಿಯಾಗಿ ಮಾತನಾಡಿ

ಇತ್ಯಾದಿ.. ಇತ್ಯಾದಿ. . .

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Rudrappa
10 years ago

ವಿಶ್ಲೇಷಣೆ ಚೆನ್ನಾಗಿದೆ, ವಿಚಿತ್ರ ಸಂಗತಿಯೆಂದರೆ ಹೆಚ್ಚಿನ ಅಂಕೆ ಅಂಶಗಳಲ್ಲಿ ಪರಿಚಯಸ್ಥರೆ ಹೇಯ ಕೃಥ್ಯವೆಸಗುವದು. ಇಂತಹ ವಿಷಯಗಳ ಮುಕ್ತ ಚರ್ಚೆ ಹಾಗು ತಡೆಯ ಬಗ್ಗೆ ಶಿಕ್ಷಣ ಅತಿಮುಖ್ಯ. 

Suman Desai
Suman Desai
10 years ago

ಲೇಖನ ಇಷ್ಟ ಆತು. ತಮ್ಮಲ್ಲಿರುವ ಸಾಮಾಜೀಕ ಕಳಕಳಿ ನೋಡಿ ಖುಷಿಯಾಯ್ತು…..ಹಿಂದಕ ವಾಮಾಚಾರಾ ಮಾಡೊವರನ ಅವರ ಹಲ್ಲು ಕಿತ್ತಿ ಸಿಕ್ಷಾ ಕೊಡತಿದ್ರಂತ. ವಾಮಾಚಾರಿಗಳ ಶಕ್ತಿ ಇರೊದನ ಮಂತ್ರಗಳೊಳಗ. ಮಂತ್ರಗಳ ಸ್ಪಷ್ಟ ಉಚ್ಛಾರಣೆ ಇಲ್ಲಂದ್ರ ಅವರ ಸಾಧನೆ ಅವರಿಗೆನ ತಿರಗುಬಾಣ ಆಗತದ. ಹಲ್ಲುಗಳನ್ನ ಕಿತ್ತಿ ವಾಮಾಚಾರಿಗಳನ್ನ ನಿಶ್ಚಪ್ರಯೋಜಕರನ್ನಾಗಿ ಮಾಡಿ, ಮಾಟ ಮಂತ್ರಗಳಿಂದಾಗೊ ಅನಾಚಾರಗಳನ್ನ ತಪ್ಪಿಸಿ ದೇಶದ ಹಿತ ರಕ್ಷಣೆ ಮಾಡತಿದ್ರಂತ. ಅದೇ ರೀತಿ ಬಲಾತ್ಕಾರಿಗಳಿಗೆ ಬರೊಬ್ಬರಿ ಶಿಕ್ಷಾ ಅಂದ್ರ ಅತ್ಯಾಚಾರ ಮಾಡಿದ ವ್ಯಕ್ತಿಯನ್ನ ನಪುಂಸಕನನ್ನಾಗಿ ಮಾಡೊದು. ಹೆಣ್ಣಿಗೆ ಹೆಂಗ ಒಂದ ಸಲಾ ಕಳಕೊಂಡಿದ್ದು ವಾಪಸ ಪಡಿಲಿಕ್ಕೆ ಆಗಲಾರಧಂಥಾ ನೊವನ್ನ ಕೊಟ್ಟಾನೊ ಅಂಥಾ ಒಂದ ನೋವು ಆಂವನು ಅನುಭೊಗಸಬೇಕು.ಭೊಗ ವಸ್ತುಗಳು ತನ್ನ ಮುಂದನ ಇದ್ರುನು ಅದನ್ನ ಭೊಗಿಸಲಿಕ್ಕಾಗಲಾರದ, ತಾ ಮಾಡಿದ ಕುಕೃತ್ಯಕ್ಕ ಸಾಯೊತನಕಾ ವಿಲಿ ವಿಲಿ ಒದ್ದಾಡಿರಬೇಕು. ಇಂಥಾದ್ದೊಂದು ಶಿಕ್ಷೆಯ ಕ್ರಮ ಜಾರಿಗೆ ಬರಬೆಕು.ಅತ್ಯಾಚಾರಿಗಳು ಕನಸಿನ್ಯಾಗು ಕುಕೃತ್ಯ ಮಾಡಲಿಕ್ಕೆ ಹೆದರಿರಬೇಕು ಹಂಗಾಗಬೆಕು.

sharada moleyar
sharada moleyar
10 years ago

ಲೇಖನ  ಚೆನ್ನಾಗಿದೆ..
ಅತ್ಯಾಚಾರ  ನಡೆಯಲು  70 ಶೇಕಡಾ  ಹೆಂಗಸರೇ  ಕಾರಣ..
ಅವರ  ದೈಹಿಕ  ಸ್ಥಿತಿ  ಅರಿತು  ಯುವತಿಯರು  ಜಾಗರೂಕತೆ  ವಹಿಸದಿರುವುದು  ಅತ್ಯಾಚಾರಕ್ಕೆ   ಕಾರಣ..
25  ಶೇಕಡಾ  ಗಂಡಸರು   ಕಾರಣ..
ಗೇಂಗ್  ರೇಪ್  ಎಂಬ  ಪೈಶಾಚಿಕ  ಅತ್ಯಾಚಾರಕ್ಕೆ  ಕಠಿಣ  ಕ್ರಮ  ಅಗತ್ಯ..

Akhilesh Chipli
Akhilesh Chipli
10 years ago

Thanks to all.
Suman Desai abhipraya sari ide. adanne madabeku. avagalaadaru i tarahada krutya nilllabahudu!!

Utham Danihalli
10 years ago

Nimma samajika kallakakiya lekana estavaythu enastu bareya bahuditheno

5
0
Would love your thoughts, please comment.x
()
x