ಎದುರಾದ ಕಣ್ಣುಗಳೆಲ್ಲ ಬತ್ತಿದ ಕೊಳಗಳು..
ನೀರಿಲ್ಲವೆಂದಲ್ಲ..
ಪ್ರತಿ ಹನಿಯೂ ಅಂತರ್ಗಾಮಿ..
ನೋವು ದುಃಖದ ಹೊಳೆಗಳಬ್ಬರಿಸುತಿದ್ದರೂ
ಅಹಮಿಕೆಯ ಪರದೆಯಡಿ ಮಡುಗಟ್ಟಿ ನಿಂತಿವೆ..
ಪರದೆ ಹರಿಯುವ ತವಕ ಪ್ರತಿಯೊಂದು ಹನಿಗೆ..
ಸೋತ ಭಾವದ ನಡುಕ ಗರ್ವಗಳ ದನಿಗೆ..
ಒಳಗೊಳಗೆ ಕುಸಿದಿಹುದು ಆಂತರ್ಯ ಸೌಧ
ಮುಖದ ನಗುವಿಗೆ ತಪ್ತ ಮನಸೇ ವಿರೋಧ
ಇನ್ನಾದರೂ ಕಳಚಿ ಬೀಳಲಿ ಬಿಗುಮಾನದ ಬೆರಗು
ಕಣ್ಣ ಹನಿಯೇ ಹೊರಬಂದು ಕಪೋಲದಲಿ ಕರಗು….
-ರಘುಚರಣ್
ಬಹಳ ಚನ್ನಾಗಿದೆ!
ಒಳಗೊಳಗೆ ಬಚ್ಚಿಕುಳಿತ ದುಗುಡಕೆ ಕೊನೆಯಲ್ಲಿ ನೀಡಿದ ಆಹ್ವಾನ ಸುಂದರ ಮಿತ್ರ…………..