ಅತಿಥಿ ಸಂಪಾದಕರ ನುಡಿ

ನಮಗೆ ನಾಳೆಗಳಿಲ್ಲ, ಏಕೆಂದರೆ ಈ ನೆಲದಲ್ಲಿ ಮಕ್ಕಳಿಗೆ ನಾವು ಭವಿಷ್ಯ ಉಳಿಸುತ್ತಿಲ್ಲ. ಮಹಾಮಾರಿಯೊಂದರಂತೆ ಈ ದಿನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ’ ಮಕ್ಕಳ ಮೇಲಿನ ದೌರ್ಜನ್ಯ’ ಎನ್ನುವ ಮನೋಭಾವದೆಡೆಗೆ ನನ್ನ ಧಿಕ್ಕಾರವಿರಿಸಿಯೇ ಈ ಸಂಚಿಕೆಯನ್ನು ನಿಮ್ಮ ಮುಂದೆ ಇರಿಸಲಾಗಿದೆ.

ಜಗತ್ತಿನ ಯಾವ ಮಗುವಿನ ಯಾವುದೇ ನೋವಿಗೂ ಕುಳಿತಲ್ಲೇ ಮಮ್ಮಲ ಮರುಗುವ, ಮಾತ್ರವಲ್ಲ ಮಕ್ಕಳ ಕಣ್ಣೀರು ಒರೆಸಲು ತನ್ನ ಕೈಲಾದಷ್ಟು ಕೆಲಸವನ್ನೂ ಮಾಡುವ ಪಪ್ಪನ ಮಗಳಾಗಿ ಇಂತಹ ವಿಷಯದ ಬಗ್ಗೆ ಸಂಚಿಕೆಯ ಸಂಪಾದಕತ್ವ ನನ್ನ ಪಾಲಿಗೆ ಬಂದದ್ದನ್ನು ಹೆಮ್ಮೆಯಿಂದಲೇ ಸ್ವೀಕರಿಸಿ ತಕ್ಕಮಟ್ಟಿನ ಜವಾಬ್ದಾರಿಯಿಂದಲೇ ನಿರ್ವಹಿಸಿದ್ದೇನೆ ಅಂದುಕೊಳ್ಳುತ್ತೇನೆ.

ಕೊಂಕಿಲ್ಲದ ವಿಶ್ವಾಸ, ಸ್ನೇಹ, ಗೌರವದಿಂದ ನನಗೆ ಈ ಹೊಣೆಯನ್ನು ಹೊರೆಸಿದ ನಟರಾಜು ಮತ್ತು ಪಂಜು ಬಳಗಕ್ಕೆ ನಾನು ಆಭಾರಿ. ಕೇಳಿದ ಕೂಡಲೆ ಮರು ಪ್ರಶ್ನೆಯಿಲ್ಲದೆ ಆಸಕ್ತಿಯಿಂದ, ಸಮಯಕ್ಕೆ ಸರಿಯಾಗಿ ಲೇಖನಗಳನ್ನು ಬರೆದುಕೊಟ್ಟಿದ್ದಾರೆ ಸ್ನೇಹಿತರು. ಅವರುಗಳು ತೋರಿರುವ ’ಪಂಜು ಮೇಲಿನ ಭರವಸೆ , ಅಂಜಲಿ ಮೇಲಿನ ಅಕ್ಕರೆ ಮತ್ತು ವಿಷಯದ ಬಗ್ಗೆಯ ಕಾಳಜಿ’ಗೆ ನಾನು ಮೂಕ ಸಾಕ್ಷಿಯಷ್ಟೇ. ಕೆಲವು ಸ್ಪಂದನೆಗಳ ಸರಹದ್ದಿನಲ್ಲಿ ಧನ್ಯವಾದ ಎನ್ನುವುದು ಕೇವಲ ಪದವಾಗಿಯಷ್ಟೇ ಉಳಿದೀತು !

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸದನದಲ್ಲಿ ಮಕ್ಕಳ ಸಂರಕ್ಷಣೆ ಮತ್ತು ಹಕ್ಕುಗಳ ವಿಷಯವಾಗಿ ಸ್ವಲ್ಪ ಸಮಯ ಮೀಸಲಾಗಿ ಚರ್ಚೆ ನಡೆದಿದೆ.  ಇದೇ ವಿಷಯವಾಗಿ ಕನ್ನಡ ಭಾಷೆಯಲ್ಲಿ ಈವರೆಗೂ ಯಾವುದೇ ಸಮಗ್ರ ಮಾಹಿತಿ ಮತ್ತು ಕಾಳಜಿ ಇರುವ ಪುಸ್ತಕ ಬಂದಿಲ್ಲ. ’ಪಂಜು’ ಬಳಗ ಇದಕ್ಕೆ ಮುಂದಾಗಿದೆ. ಅದಕ್ಕಾಗಿ ಮತ್ತೊಮ್ಮೆ ನಿಮ್ಮ ಎದುರು ಬಂದೇ ಬರುತ್ತೇವೆ. ಅಲ್ಲಿಯವರೆಗೂ ಈ ಸಂಚಿಕೆಯನ್ನು ಅರ್ಪಿಸುತ್ತಿದ್ದೇವೆ;

 ಯಾರದೋ ಮೃಗೀಯ ತೃಷೆಗೋ, ಮನೋ ವಿಕೃತಿಗೋ ತಮ್ಮ ದೇಹ ಮತ್ತು ಮನಸ್ಸುಗಳ ಬಲಿಕೊಟ್ಟುಕೊಂಡ ಕಂದಮ್ಮಗಳಿಗಾಗಿ ;
ನಮ್ಮ ನಿಮ್ಮ ಸೆರಗಿನಲ್ಲಿ ಅಡಗಿಕುಳಿತು ಜಗತ್ತಿನ ಪ್ರೀತಿಗಾಗಿ ಹಂಬಲಿಸುತ್ತಿರುವ ಕೂಸುಗಳಿಗಾಗಿ. . .

ಭರವಸೆಯೊಂದಿಗೆ,
ಅಂಜಲಿ ರಾಮಣ್ಣ                

ಕೃತಜ್ಞತೆಗಳು;

ಡಾ.ಚೈತ್ರ
ಡಾ.ವಿನಯ
ವಿದ್ಯಾಶಂಕರ ಹರಪನಹಳ್ಳಿ
ರೂಪಾ ಸತೀಶ್
ದತ್ತ ರಾಜ್
ಡಾ.ವಾಣಿ ಕಂಟ್ಲಿ
ರುದ್ರೇಶ್ವರ ಸ್ವಾಮಿ
ನಾಗಸಿಂಹ ರಾವ್
ರಜನಿ ಆಚಾರ್ಯ
ಶಶಿ ರಾವ್ 
ವಿನೋದ್ ಕುಮಾರ್ ಬೆಂಗಳೂರು
ತಲಕಾಡು ಶ್ರೀನಿಧಿ
ವೀಣಾ ಶಿವಣ್ಣ
ಮಂಜುಳ ಬಬಲಾದಿ
ವೀಣಾ ಭಟ್
ರುಚಿಕ ಭಟ್
ನಟರಾಜು ಸೀಗೆಕೋಟೆ
ಜ್ಯೋತಿ ಇರವರ್ತೂರು
ಅಸ್ತಿತ್ವ ಲೀಗಲ್ ಟ್ರಸ್ಟ್

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ವಿನೋದ್ ಕುಮಾರ್ ವಿ.ಕೆ.

ನಿರೀಕ್ಷೆಯಂತೆ ನಮ್ಮ ಅಂಜಲಿ ಅಕ್ಕನ ಸಂಪಾದಕತ್ವದಲ್ಲಿ ಉತ್ತಮ ಲೇಖನಗಳೇ ತುಂಬಿ ಬಂದಿವೆ..ಮಕ್ಕಳ ಮೇಲಿನ ಅದರಲ್ಲೂ ಪುಟ್ಟ ಗೊಂಬೆಗಳಂತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇಡೀ ಮನುಕುಲವೇ ನಾಚಿ ತಲೆ ತಗ್ಗಿಸುವಂತದ್ದು.. ಮಕ್ಕಳ ಹಕ್ಕುಗಳಿಗೆ ಏನೊಂದೂ ಬೆಲೆ ಸಿಗಂದಥ ಕಾಲ ಮುಂದೆ ಬರಬಹುದೇನೋ.. ಅಷ್ಟರೊಳಗೆ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕಾಗಿದೆ ಅಷ್ಟೆ.. ಆ ನಿಟ್ಟಿನಲ್ಲಿ ಈ ಸಂಚಿಕೆ ತುಂಬಾ ಉಪಯೋಗಕಾರಿ..ಮುಂದೆ ಮತ್ತಷ್ಟು ಇಂತಹ ಪ್ರಯತ್ನಗಳು ಪಂಜುವಿನಿಂದ ಆಗಲಿ ಎನ್ನುವ ಆಸೆ ನಮ್ಮದು..

ಥ್ಯಾಂಕ್ಸ್ ಅಂಜಕ್ಕ

ವಿನೋದ್ ಕುಮಾರ್ ವಿ.ಕೆ.

Roopa Satish
Roopa Satish
9 years ago

Anjali,

Ella lekhanagaLu sooktha maahitigaLinda kooDive. Endigoo ee articlesna store maadkobeku annuvashtu sooktha. 

Some are informative, some are educative and some of them are awakening for all of us. 

Thanks a Lot for this Series & like always, you rock! 

prashasti.p
9 years ago

vibhinnavaagi moodi bandide sanchike.. Abhinandanegalu 🙂

3
0
Would love your thoughts, please comment.x
()
x