ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ
ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ
ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ
ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸುವಂತೆ
ಗುಡಿಗೋಪುರಗಳ ಎಮಗೆ ಇತ್ತು ತೆರೆಯ ಮರೆಗೆ ಸರಿದು ಹೋದ
ಮಹಾಮಹಿಮ ಶಿಲ್ಪಿ ಜನರ ಕೊಡುಗೆ ಏನು ಅಲ್ಪವೇ?
ಕವಿ ಸೌರ್ವಭೌಮರಿಗೂ ಎದಿರು ಸ್ಪರ್ಧೆ ನೀಡುವಂತ
ಶಿಲ್ಪಕಲಾ ಪ್ರತಿಭೆ ಇದ್ದೂ ಇತಿಹಾಸದಿ ಮೆರೆಯಲಿಲ್ಲ
ವೀಣೆವಾದ್ಯದೆದುರು ವೇಣು ಮಿಗಿಲಿದ್ದರೂ ಮಿಂಚದಲ್ಲ
ಇಂದಿನ ಶೋದನೆಯೊಳಲ್ಲು ಜಕಣ ಡಕಣರಾರು ಇಲ್ಲ
ಅವರ ಬಗ್ಗೆ ಇರುವ ಕಥೆಗಳೆಲ್ಲಾ ಬರಿಯ ಕಲ್ಪನೆ
ಎನುತ ಸಾರಿ ಹೇಳುತಿರುವ ಶಾಸನ ಸಂಶೋದಕರೇ
ಇಂದಿನ ಇತಿಹಾಸದ ಪ್ರಶ್ನೆಗುತ್ತರವನ್ನು ಅಂದಿನಿತಿಹಾಗಳು ಕೊಡುವ ವೇನು?
ಇಂದು ಶಾಸನದಲ್ಲಿ ಬರೆಯದಿಹ ಹೆಸರುಗಳು ಅಂದು ಶಾಸನದಲ್ಲಿ ಬರೆದರೇನು?
ನಾಡಿನ ಸಂಪತ್ತನೆಲ್ಲ ಒಟ್ಟಿಗಿಟ್ಟು ತಕ್ಕಡಿಯಲಿ ತೂಗಿದರು ಏಳದಂತ
ಮೌಲ್ಯದಿ ಸರಿಸಾಟಿಇರದ ಶಿಲ್ಪದ ಸಂಪದವನೆಮಗೆ
ಸೃಷ್ಟಿಗೈದು ಬಿಟ್ಟುಹೋದ ಕಥೆ ಕಪೋಲಕಲ್ಪವೆ?
ಜಾನಪದರು ಕಥೆಯಾಗಿ ಹಾಡಿಹೊಗಳಿರುವುದು ಬರೀ ಮಿಥ್ಯವೇ?
ಆದ್ಯಾತ್ಮದ ಬೆನ್ನುಹತ್ತಿ ಇಹದ ಬಯಕೆ ಬದಿಗೆ ಒತ್ತಿ
ನೃಪರಪೇಕ್ಷೆಗಭಯವಿತ್ತು ತಮ್ಮ ಕಲೆಯ ಧಾರೆಯೆರೆದು
ಪರಮ ಪುಣ್ಯ ಪ್ರಾಪ್ತಿಯಲ್ಲಾ ಪರಲೋಕದಲಿಹುದು ಎಂದು
ಕಲೆಯ ಆರಾಧನೆಯೇ ಪರಮೋಚ್ಚ ಗುರಿಯೆಂದು
ಕಪಟವರಿಯದ ಮುಗ್ದ ಮನಸಿನ ಶಿಲ್ಪಿಗಳ ಮನವರಿತು
ಯಾವ ಮೃದುಮನದವರು ಮರುಗಲಿಲ್ಲ
ಇಂದು ಸಂಶೋಧಕರು ಕೇಳುತಿಹ ಪ್ರಶ್ನೆಗಳಿಗೇನೆಂದು
ಉತ್ತರಿಸಲಿ ಉತ್ತರಿಸೇ ಮುಗ್ಗರಿಸಿ ದಂತೆಮಗೆಆಗಿಹುದು
ನಾಡಿನೊಳಗೆಲ್ಲ ಕಡೆ ಶಿಷ್ಯಕೋಟಿಯು ಕಡೆದ
ಗುಡಿಗೆಲ್ಲ ಗುರುವಾದ ಜಕ್ಕಣರ ಹೆಸರಿಂದೆ ಕರೆದಿರುವುದು
ನಮ್ರತೆಯ ದಕ್ಷಿಣೆಯ ಅವರ ಪದತಲಕಿಟ್ಟು ನಮಿಸಿರುವುದು
ತಲೆತಲಾಂತರದಿಂದ ದಕ್ಷಿಣದ ಆಚಾರ್ಯ ಜಕ್ಕಣರೆ ತಾ ಎಂದು
ಕರೆದಿರುವುದು
ಇತಿಹಾಸ ಶಾಸನದಿ ಹೆಸರ ಹುಡುಕಾಡುವರು
ದಂiiಮಾಡಿ ಹೇಳುವಿರಾ ಯಾವ ಗುಡಿಗೋಪುರವ
ಕಡೆದ ಶಿಲ್ಪಿಯ ಹೆಸರ ಹಾಡಿ ಹೊಗಳಿರುವುದ ತೋರಿಸುವಿರಾ?
ದತ್ತಿದಾನವ ಗೈದ ದಾನಿಗಳ ಇಚ್ಚೆಯನು ಕೆತ್ತಿರುವ
ಕಲ್ಲಿನಲಿ ಶಿಲ್ಪಿಸ್ಮರಣೆಯ ನಿಜದಿ ಗೈದುವೇನು?
ಅರಸರೇರಿಳುವುಗಳ ಅವರಿತ್ತ ನೆರವುಗಳ ವಿವರವಲ್ಲದೆ
ಬೇರೆ ಎನಿರುವುದು
ಜಗವನಾಳಿದೆನಿತೊ ನೃಪರು ಕಾಲಚಕ್ರದಡಿಗೆ ಸಿಕ್ಕು
ನುಚ್ಚುನೂರು ಆಗಿ ಕೊನೆಗೆ ಮರೆಯೆ ಆದರು
ತಮ್ಮ ಕಾಲದೆಲ್ಲ ಗಳಿಕೆ ಉಳಿಕೆಯೊಡನೆ ಹೊನ್ನ ರಾಶಿ
ಭಂಡಾರವ ಲೂಟಿಗೈದು ಯಾರೋ ಹೊತ್ತುಹೊಯ್ದರು
ಕದಿಯಲಾರದೊಡವೆ ಅದುವೇ ಕಲ್ಲುಗುಡಿಯ ಶಿಲ್ಪವೊಂದೇ
ಗುಡಿಯ ತಂಟೆಗವರುಬರದೆ ಉಳಿದುಕೊಂಡವು
ಮುಂದಿನರಸರೆದಯ ಒಳಗೂ ದೈವಭಕ್ತಿಭಯಗಳಿರಲು
ತಾವುಕೂಡ ಗುಡಿಯ ಕಟ್ಟಿ ಕೆರೆಕಟ್ಟೆ ಕೋಟೆಕಟ್ಟಿ
ಇರುವ ಗುಡಿಯ ಕ್ಷೇಮಕ್ಕಾಗಿ ದತ್ತಿದಾನ ಧಾರೆಯೆರೆದು
ಜನರಮನದಿ ಸ್ಥಿರದಿ ನೆಲಸಿ ಇತಿಹಾಸದ ಪುಟಗಳಲ್ಲಿ
ಒಬ್ಬರನ್ನು ಒಬ್ಬರಾಳಿ ಎನಿತೊಕಾಲ ರಾಜ್ಯವಾಳಿ
ಅಳಿದ ನೃಪರು ಇತಿಹಾಸದಿ ಉಳಿದುಕೊಂಡರು
ರಾಜ್ಯ ಒಂದ ಹತ್ತುರಾಜ ರಾಳಿ ಅಳಿದು ಹೋದ ಬಳಿಕ
ಇಳೆಯ ಮೇಲೆ ಉಳಿದು ಬೆಳಗು ತಿರುವವೆಷ್ಟೋ
ಕಲ್ಲುಗುಡಿಗಳೆಮ್ಮ ಕಡೆದ ಶಿಲ್ಪಿಯ ಚಾತುರ್‍ಯದಿಂದ
ನಿತ್ಯ ಬರುವ ಲಕ್ಷ ಲಕ್ಷ ಜನರ ಮನಕೆ ಮುದವ ನೀಡಿ
ಸೌಂದಂiiದಿ ಬೆರಗುಮಾಡಿ ಸೃಷ್ಟಿಗೈದ ಕರ್ತರನ್ನು
ಅನುಗಾಲವು ಸ್ಮರಿಸುವಂತೆ ಕೈಯ್ಯಬೀಸಿ ಕರೆದಿವೆ
ಗುಡಿಯಲಿರುವ ಕೃತಿಗಳೆಲ್ಲ್ಲಾ ಚೆಲುವಿನ ಸೌಂದರ್ಯ ಸೂಸಿ
ಚತುರ ಶಿಲ್ಪಿ ಚಾಣಾಕ್ಷರ ಚಾತುರ್ಯದ ಕಡಲೊಳಿಳಿಸಿ
ಆನಂದದಿ ತೇಲುವಂತೆ ಅನುಭೂತಿಯ ಮೂಡಿಸುತ್ತಾ
ನಾಡಿನೆಲ್ಲ ಬೊಕ್ಕಸಕ್ಕೆ ನಿತ್ಯ ಹಣದ ಹೊಳೆಯ ಹರಿಸಿ
ಸೃಷ್ಟಿಗೈದ ಶಿಲ್ಪಿಜನರ ಕರ್ತರ ಕೈಂಕರ್ಯ ಋಣವ
ಕೃತಿಗಳೆಲ್ಲಾ ಸಲ್ಲಿಸುತ್ತಾ ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆಯ
ಅರ್ಪಿಸುತ್ತಾ ನಸುನಗುತಾ ನಿಂತಿವೆ
*****
ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆಗಳು !
ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆಗಳು