ಅಂಕುರ ಪ್ರಕಾಶನ ಪ್ರಕಟಿಸಿರುವ ಡಾ.ಅರವಿಂದ ಪಟೇಲ್ ಅವರ “ಹಾಲು ಚೆಲ್ಲಿದ ಹೊಲ” ಕವನ ಸಂಕಲನವನ್ನು ಮಾರ್ಚ್ 20, ಭಾನುವಾರ, ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯ ಐಎಂಎ ಸಭಾಂಗಣದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಜನಾರ್ಪಣೆ ಮಾಡಲಿದ್ದಾರೆ. ಉಪಸ್ಥಿತಿ: ವಿಪ್ರೋ ಸಂಸ್ಥೆಯ ತರಬೇತಿ ವಿಭಾಗದ ಜಾಗತಿಕ ಮುಖ್ಯಸ್ಥರಾದ ಪಿ.ಬಿ.ಕೋಟೂರ, ವೈದ್ಯ ಲೇಖಕ ಡಾ.ಸಲೀಮ ನದಾಫ, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ದಕ್ಷಿಣ ವಲಯ) ಉಪಾಧ್ಯಕ್ಷರಾದ ಸಿರಿಗೇರಿ ಪನ್ನರಾಜ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಸೌಮ್ಯಾ ಕೋಡೂರು, ಕವಿ ಡಾ.ಅರವಿಂದ ಪಟೇಲ್, ಪ್ರಕಾಶಕ ಚಂದ್ರಕಾಂತ […]
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2018’ ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ ಕಳಿಸಿಕೊಡಬೇಕು. ಬರವಣಿಗೆ ಮಾಡಿದ ಹಸ್ತಪ್ರತಿಯನ್ನೂ […]