‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ.

ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಡಾ. ಮೋಗಳ್ಳಿ ಗಣೇಶ ಅವರ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಫೆ10 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ನಾಗಶಾಂತಿ ಉನ್ನತಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ರಾಣೇಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಹಾಗೂ ಲಡಾಯಿ ಪ್ರಕಾಶನ ಜಂಟಿಯಾಗಿ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಂಡಿದೆ. ಖ್ಯಾತ ವಿಮರ್ಶಕರು ಹಾಗೂ ಬೆಂಗಳೂರು ವಿವಿಯ ಪ್ರಾಧ್ಯಾಪಕ ಜೀವನಪ್ರೇಮ, ಕೊಂಕು ಯಾವುದನ್ನೂ ಬಚ್ಚಿಡದಂತೆ ಬರೆಯಬಲ್ಲ… ಡಾ. ನಟರಾಜ್ ಹುಳಿಯಾರ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿ ಬಿಡುಗಡೆ ಮಾಡುವರು. ಕೃತಿಯ ಕುರಿತು ವಿಮರ್ಶಕರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಎಸ್.ಸಿರಾಜ್ ಅಹ್ಮದ್ ಮಾತನಾಡುವರು. ತಮ್ಮ ಅಗಾಧ ಪ್ರತಿಭೆ, ಪ್ರಖರÀ ದಲಿತ ಚಿಂತನೆಗಳ ಮೂಲಕ ನಾಡಿನ ಪ್ರಜ್ಞಾವಲಯವನ್ನು ವಿಸ್ತರಿಸುತ್ತಿರುವ ಮಹತ್ವದ ಲೇಖಕ, ಕನ್ನಡದ ಕಥಾಲೋಕವನ್ನು ಶ್ರೀಮಂತಗೊಳಿಸಿದ ಕಥೆಗಾರ, ನಮ್ಮ ಕಾಲದ ಮಹತ್ವದ ಚಿಂತಕ ಅಂಬೇಡ್ಕರ್ ಎಂಬ ಮಹಾನದಿಯನ್ನೂ, ಗಾಂಧೀಜಿಯೆಂಬ ನದಿಯನ್ನು ಏಕಕಾಲಕ್ಕೆ ಗ್ರಹಿಸಿದ ವಿಶಿಷ್ಟ ರೂಪಕಗಳ ಬರಹಗಾರ ಡಾ. ಮೋಗಳ್ಳಿ ಗಣೇಶ ಅಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಜೊತೆಗೆ ಹಂಪಿ ಕನ್ನಡ ವಿವಿಯ ಪ್ರಾಧ್ಯಪಕರಾದ ಡಾ.ಚೆಲುವರಾಜು, ಸಮಾಜ ವಿಜ್ಞಾನಿಗಳಾದ ಡಾ. ಎ.ಎಸ್.ಪ್ರಭಾಕರ ಸೇರಿದಂತೆ ಅನೇಕ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ. ಎಲೆಮರೆ ಕಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪೌರಕಾರ್ಮಿಕ ನಾಗಪ್ಪ ದೊಡ್ಡಮನಿ, ಸಂಶೋಧಕ ಬುರಡೇಕಟ್ಟೆ ಮಂಜಪ್ಪ, ಬಾಲ ಪ್ರತಿಭೆ ಗೌತಮಿ.ಪಿ.ಆರ್, ಪ್ರಗತಿಪರ ರೈತ ಹೋರಾಟಗಾರ ಗುರುಪಾದಯ್ಯ.ಅಜ್ಜಯ್ಯ ಹಿರೇಮಠ  ಯುವ ರೈತ ಹೋರಾಟಗಾರ ಹನುಮಂತಪ್ಪ ಕಬ್ಬಾರ, ವನ್ಯ ಛಾಯಾಗ್ರಾಹಕ ಮಾಲತೇಶ ಅಂಗೂರ, ಈ ಸಾಧಕರನ್ನು ಸದರಿ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತಿದೆ.

ಮಧ್ಯಾನ್ಹ 2ಕ್ಕೆ ಕವಿಗೋಷ್ಠಿ:
ಸಂವೇದನಾಶೀಲ ಬರಹಗಳ ಮೂಲಕ ಹೆಸರಾದ ನೆಲದ ದನಿಯ ಆಲಿಸುವ ಕವಿ , ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹುಗಾರ ಕವಿಗೋಷ್ಠಿಗೆ ಚಾಲನೆ ನೀಡುವರು. ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಆಶಯನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ಕವಯತ್ರಿ ಜ್ಯೋತಿ ಗುರುಪ್ರಸಾದ್ ವಹಿಸುವರು. ಕವಿಗಳದ ಗದುಗಿನ ಡಾ.ಡಿ.ಬಿ.ಗವಾನಿ, ಸಿದ್ಧಾಪುರದ ಕೆ.ಬಿ.ವೀರಲಿಂಗನಗೌಡ್ರ ಉಪಸ್ಥಿತರಿರುವರು. ಕವಿಗಳಾದ ಚಿದಾನಂದ ಕಮ್ಮಾರ, ಭುವನಾ ಹಿರೇಮಠ, ದಾಕ್ಷಾಯಣಿ ಹುಡೇದ, ಸಂತೆಬೆನ್ನೂರ ಫೈಜ್ನಟ್ರಾಜ್, ಚಂಸು ಪಾಟೀಲ್,ಹುಲಿಕಟ್ಟಿ ಚೆನ್ನಬಸಪ್ಪ , ವಿ.ಹರಿನಾಥ ಬಾಬು, ವಿಜಯ್ ಅಮೃತರಾಜ್, ದುರ್ಗೇಶ್ ಪೂಜಾರ, ಮಹೇಶ್ ಬಳ್ಳಾರಿ,ಸುಮಂಗಲಾ ಅತ್ತಿಗೇರಿ,ಇಸ್ಮಾಯಿಲ್ ಎಲಿಗಾರ, ಸುರೇಶ್ ಅಂಗಡಿ, ಪುಷ್ಪಾ ಶಲವಡೆಮಠ, ರಮಜಾನ್ ಕಿಲ್ಲೇದಾರ, ಎಲ್, ಖಾದರಭಾಷಾ ,ಶಿವಕುಮಾರ ಚೆನ್ನಪ್ಪನವರ, ಹರೀಶ್ ಚನ್ನಗಿರಿ, ಮಾರುತಿ ತಳವಾರ, ಲಿಂಗರಾಜ್ ಸೊಟ್ಟಪ್ಪನವರ, ಕಾಂತೇಶ್ ಅಂಬಿಗೇರ, ವೈಭವಿ ಕುರ್ತಕೋಟೆ, ಅಭಿಲಾಷ ಹೆಚ್.ಕೆ, ಕೋಟೆಪ್ಪ ಚೌಟಗಿ, ಚೈತ್ರಾ ಕಮ್ಮಾರ, ಭೂಮಿಕಾ ಚವಡಣ್ಣವರ ಅವರುಗಳು ಕಾವ್ಯವಾಚನ ಮಾಡಲಿದ್ದಾರೆ. ಸಮಾರಂಭದಲ್ಲಿ ದಲಿತ ಕಲಾ ತಂಡ ಗದಗ ಇವರಿಂದ ಬಂಡಾಯ ಹಾಗೂ ತತ್ವ ಪದಗಳನ್ನು ಹಾಡಲಿದ್ದಾರೆ., ಕುಮಾರ.ಬಿ.ಹೆಚ್ ಇವರು ಜಾಗೃತಿ ಗೀತೆಗಳನ್ನು ಹಾಡಲಿದ್ದಾರೆ.
ನಾಮದೇವ ಕಾಗದಗಾರ ಇವರ ಸಾಮಾಜಿಕ ಜಾಗೃತಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವೈಚಾರಿಕ ಪುಸ್ತಕ ಪ್ರಕಟಣೆಗೆ ಹೆಸರಾದ ಲಡಾಯಿ ಪ್ರಕಾಶನದ ಬಸೂ, ಸಂಗಾತದ ಟಿ.ಎಸ್.ಗೊರವರ ಪುಸ್ತಕಗಳೊಂದಿಗೆ ಜೊತೆಯಾಗಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖೆಯಲ್ಲಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಗದ ಸಾಂಗತ್ಯ ವೇದಿಕೆಯ ಸಂಚಾಲಕ, ವ್ಯಂಗ್ಯಚಿತ್ರಕಾರ ನಾಮದೇವ ಕಾಗದಗಾರ, ಸಾಹಿತಿ ಬಿ .ಶ್ರೀನಿವಾಸ ಮತ್ತು ಗೆಳೆಯರು ಪ್ರಕಟಣೆಯ ಮೂಲಕ ಕೋರಿದ್ದಾರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x