ಬದಲಾಗುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಪರಭಾಷಾ ಹಾವಳಿ ಹಾಗೂ ಆಂಗ್ಲ ಭಾಷೆಯ ವ್ಯಾಮೋಹ ನಮ್ಮನ್ನು ತೀರಾ ಕಾಡುತ್ತಿರುವ ವಿಷಯಗಳು ಏಕೆಂದರೆ ಈ ಎರಡೂ ವಿಷಯಗಳು ಕನ್ನಡದ ಉಳಿವಿಗೆ ಸಂಚಕಾರ ತಂದೊಡ್ಡಬಹುದು ಎನ್ನುವ ಮಾತನ್ನು ತಿರಸ್ಕರಿಸುವಂತಿಲ್ಲ. ಆದರೆ ಕನ್ನಡ ಸಾವಿಲ್ಲದ ಸಾವಿರ ಕಾಲ ಬದುಕುವ ಕನ್ನಡಿಗರ ಉಸಿರಾಗಿರುವ ಭಾಷೆ. ಆದರೆ ಪ್ರಸ್ತುತ ಸನ್ನಿವೇಷದಲ್ಲಿ ಕನ್ನಡ ಕಟ್ಟುವ ಕೆಲಸ ಅತ್ಯವಶ್ಯಕ. ಇಂತಹ ಕನ್ನಡ ಕಟ್ಟುವ ಕೆಲಸವನ್ನು ಹಲವಾರು ಸಂಸ್ಥೆಗಳು, ಸಂಘಟನೆಗಳು ನಿರ್ವಹಿಸುತ್ತಿವೆಯಾದರು ಕೆಲವೊಂದು ಕಾರ್ಯಗಳು ಮಾತ್ರ ಕೇವಲ ಪತ್ರಿಕೆಗಳ ಸುದ್ದಿಗಷ್ಟೇ ಮೀಸಲು.
ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಮಾಜದೊಂದಿಗೆ ಬೆರೆತು ಅವರ ವೇಗಕ್ಕೆ ಅನುಗುಣವಾಗಿರುವ ಅಂತರ್ಜಾಲ ಕನ್ನಡ ಬ್ಲಾಗ್ ಹಾಗೂ ಪತ್ರಿಕಾ ತಾಣಗಳು ಜನತೆಯಲ್ಲಿ ಕನ್ನಡದ ಬಗೆಗಿನ ಅಭಿಮಾನ ಬೆಳಸಿ ಕನ್ನಡದ ಅರಿವ ಮೂಡಿಸುತ್ತಿರುವ ಜೊತೆಗೆ ನಾಳಿನ ಯುವ ಪೀಳಿಗೆಗೆ ಕನ್ನಡದ ಕಂಪು ಹರಡಲು ಹೊರಟಿರುವ ಪರಿ ನಿಜಕ್ಕೂ ಪ್ರಶಂಸಾರ್ಹ.
ಯುವ ಬರವಣಿಗೆಗಳಿಗೆ ಸ್ಪೂರ್ತಿಯಾಗಿ, ಯುವ ಬರಹಗಾರರನ್ನು ಕನ್ನಡ ಸಾರಸ್ವತ ಲೋಕಕ್ಕೆ ಬಳುವಳಿಯಾಗಿ ನೀಡುವಲ್ಲಿ ಅಂತರ್ಜಾಲ ಕನ್ನಡ ಬ್ಲಾಗ್ ಹಾಗೂ ಪತ್ರಿಕಾ ತಾಣಗಳ ಕ್ರಿಯಾತ್ಮಕ ಸೃಜನಶೀಲ ಯೊಜನೆಗಳು, ಆವಿಷ್ಕಾರಗಳು ಉತ್ತಮ ಸೇತುವಾಗಿ ಕಾರ್ಯ ನಿರ್ವಹಿಸುತ್ತಿವೆ. ಮನಸ್ಸಿಗೆ ಬಂದ ಖುಷಿನಾ ಹಂಚ್ಕೊಳ್ಳೋಕೆ, ನಾಲ್ಕ್ ಹರಟೆ, ಗಾಡವಾದ್ ಚರ್ಚೆ ಹಾಗೂ ನಮ್ಮನ್ನೆ ಮರೆಸೋವಷ್ಟು ನಗಿಸೋ ಹಾಸ್ಯ ಮತ್ತು ವ್ಯಂಗ್ಯ ಚಿತ್ರ ಎಲ್ಲ ಮೇಳೈಸಿ ನಿಜಕ್ಕೂ ಕನ್ನಡ ಲಲಿತ ಪ್ರಪಂಚಾನ ಹೊಸತೊಂದು ಹಾದಿಲಿ ಕರದುಕೊಂಡು ಹೋಗ್ತಾ ಇರೋ ಪ್ರಯತ್ನ ಇದಾಗ್ತಾ ಇದೆ ಅನ್ನೊದು ನನ್ನದೊಂದು ಅಭಿಪ್ರಾಯ.
ನನ್ ಉದಾಹರಣೆನೇ ತಗೊಳೋಣ ದಿನಕ್ಕೊಂದೊಂದು concept, ಸ್ನಾನ ಮಾಡ್ತ ಒಂದು ತಿಂಡಿ ತಿಂದು ಕಾಫೀ ಹೀರ್ತಾ ಕೂತಿದ್ದಾಗ್ ಒಂದು ಇನ್ನೆನೋ ಓದೋಣಾ ಅಂತ ಬುಕ್ ತೆಗುದ್ರೆ ಒಂದು ಸುಮ್ನೆ ಲಾಂಗ್ ವಾಕ್ ಹೋಗೋಣ ಅಂತ ಹೋದಾಗ್ಲೊಂದು, ಬಸ್ಸಲ್ ಕೂತ್ರೆ ಮತ್ತೊಂದು ಇವನ್ನುಲ್ಲೆ ಬರುದ್ರೆ ಎಲ್ಲಿ ನನ್ನ ಹುಚ್ಚ ಅಂತಾರೋ ಅನ್ಕೊಂಡು ತುಂಬಾ ದಿನಾ ಹಾಗೇ ಕೂತಿದ್ದೆ, ನನ್ನೊಳಗಿದ್ದ ಒಬ್ಬ ಬರಹಗಾರ ಹಾಗೆ ಮರೆಯಾಗ್ತ ಇದ್ದ ಅನ್ನೋ ಅಷ್ಟ್ರಲ್ಲಿ ನನ್ ಯೋಜನೆ ಆಲೋಚನೆಗಳಿಗೆ ನೀರ್ ಎರೆದು ನಾನೂ ಸ್ವಲ್ಪ ಬರೀಬೋದು ಅಂತ ನಂಗೆ ನಿಜವಾಗ್ಲೂ ಅನ್ಸಿದ್ದೇ ಈ ಅಂತರ್ಜಾಲ ಕನ್ನಡ ಬ್ಲಾಗ್ ಹಾಗೂ ಪತ್ರಿಕಾ ತಾಣಗಳನ್ನು ತಡ್ಕಾಡೋಕೆ ಷುರು ಮಾಡಿದಾಗ್ಲೆ.
ನಾಲ್ಕಾರು ಸಾಮಾನ ಮನಸ್ಕ ಸ್ನೇಹಿತರು ಒಂದಿಷ್ಟು ಹಿರಿಯ ಅನುಭವಿ ಬರಹಗಾರರು, ವ್ಯಂಗ ಚಿತ್ರಕಾರರು, ಕವಿಗಳು ಎಲ್ಲಾ ಒಂದೇ ತರಹದ ಅಭಿರುಚಿ ಇರೋ ಜನ ಒಟ್ಟಿಗೆ ಕೂತು ಹರಟುತ್ತಾ ಇದಿವೇನೋ ಅನ್ನೊವಷ್ಟು ಸಾಮಿಪ್ಯ ಕಾಲ್ಪಿಸಿ ದೂರ ಮನಸ್ಸುಗಳ ಭಾವನೆಗಳು ಯೋಜನೆಗಳನ್ನು ಹಂಚಿಕೊಳ್ಳೋಕೆ ಕೊಂಡಿಯಾಗಿ ಕೆಲಸ ಮಾಡ್ತಾ ಇದೆ ಈ ಅಂತರ್ಜಾಲ ಕನ್ನಡ ಬ್ಲಾಗ್ ಹಾಗೂ ಪತ್ರಿಕಾ ತಾಣಗಳು. ಎಷ್ಟೋ ಅಪ್ರಕಟಿತ ಲೇಖನಗಳಿಗೆ ಹೊಸ ವೇದಿಕೆಯಾಗ್ತಿರೋ ಈ ತಾಣಗಳು ಕನ್ನಡದ ಮನಸ್ಸುಗಳನ್ನು ಬೆಸಿತಾ ಹೊಸ ಉತ್ಸಾಹನ ಎಲ್ಲರಲ್ಲೂ ತುಂಬ್ತಾ ಇರೋದ್ರ ಜೊತೆಗೆ ಆಧುನಿಕ ಯುಗದ ಸರ್ವರ ಸಂಗಾತಿಯಾದ ಅಂತರ್ಜಾಲದಲ್ಲಿ ಕನ್ನಡದ ಜಾಗೃತಿ ಮೂಡಿಸ್ತಿದೆ.
ಸರ್ಕಾರ ಬರೀ ಬಾಯ್ ಮಾತಿಗೆ ಸರ್ಕಾರದ ಎಲ್ಲ ಇಲಾಖೆಗಳ ಅಂತರ್ಜಾಲ ತಾಣಗಳು ಕನ್ನಡದಲ್ಲೇ ಇರಬೇಕು ಅಂತ ಕೇವಲ ಕಡತಗಳಿಗೆ ಸೀಮಿತವಾಗುವಂತೆ ಆದೇಶ ಹೊರಡಿಸಿ ಸುಮ್ಮನಾಗತ್ತೆ ಆದ್ರೆ ಕನ್ನಡದ ಎಲ್ಲಾ ಪ್ರಕಾರಗಳಿಗೆ ಇಂಬು ನೀಡೋ ಈ ಕನ್ನಡ ತಾಣಗಳು ಸದ್ದಿಲ್ಲದೆ ಕನ್ನಡದ ಶ್ರೇಯೋಭಿವೃದ್ದಿಗೆ ಹಿಂಬದಿಯ ಬಾಗಿಲಿನಿಂದ ಪ್ರಯತ್ನಿಸುತ್ತಾ ಇವೆ ಅಂದ್ರೆ ಖಂಡಿತಾ ಅತಿಶಯೋಕ್ತಿ ಆಗಲ್ಲ.
ಇನ್ನು ಜನರ ನಡುವೆ ನಡೆಯೋ ವಿಷಯ, ಪತ್ರಿಕೆಗಳಲ್ಲಿ ಜಗತ್ತಿನ ಅರಿವಿಲ್ಲದೆ ಬಡಬಡಿಸಿ ಮಾತನಾಡಿ ಜನರ ದಾರಿ ತಪ್ಪಿಸೋ ವರ್ಣರಂಜಿತ ರಾಜಕಾರಣಿಗಳ ವಿಷಯ ಅದು ಇದೆನ್ನದೆ ಎಂತಾ ವಿಷಯ ಬೇಕಾದ್ರು ಚರ್ಚೆಗೆ ಸದಾ ನಿಮ್ಮುಂದೆ ಇರತ್ತೆ ನಿಮಗರಿವಿಲ್ಲದೆ ನಿಮ್ಮ ಮನೆ ಮನ ಬೆಳಗೋ ನಿತ್ಯ ಕಾಯಕ ಈ ತಾಣಗಳದ್ದು.
ಒಟ್ನಲ್ಲಿ ಕೊನೇದಾಗಿ ಹೇಳೋಕ್ ಇಷ್ಟ ಪಡೋ ಮಾತು ಅಂದ್ರೆ ಕನ್ನಡದ ಅಭಿವೃದ್ದಿಗೆ ಅಂತಾನೆ ೮೦ರ ದಶಕದಲ್ಲಿ ನಾಡಿನ ಹಿರಿಯರ ನೇತೃತ್ವದಲ್ಲಿ ಗೋಖಾಕ್ ಚಳುವಳಿ ನಡೆದು ಕನ್ನಡದ ಉಳಿವಿಗೆ ನಾಂದಿ ಹಾದಿದ್ರೆ ಇಂದಿನ ಈ ಅಂತರ್ಜಾಲ ಕನ್ನಡ ಬ್ಲಾಗ್ ಹಾಗೂ ಪತ್ರಿಕಾ ತಾಣಗಳು ಕನ್ನಡದ ಹರಿವಿಗೆ ಸೆಲೆಯಾಗಿ ನಿಲ್ಲುವ ಪ್ರಯತ್ನ ಮಡುತ್ತಿರೋದು ಸತ್ಯ ಸಂಗತಿ, ಉದಯೋನ್ಮುಕ ಪ್ರತಿಬೆಗಳ ಅವಕಾಶ ನೀಡಿ ಕನ್ನಡ ಸಾರಸ್ವತ ಲೋಖವನ್ನು ಧೀಮಂತಗೊಳಿಸೋ ಕಾರ್ಯ ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡೋ ವಿಷಯ. ನಾಲ್ಕು ಕೈಗಳು ಆರಂಭಿಸುತ್ತಿರೊ ಈ ತಾಣಗಳು ಯವ ಶಕ್ತಿಯ ಧನಿಯಾಗಿ ಕನ್ನಡದ ಉಳಿವು ಬೆಳವಿಗೆ ಸಹಕಾರಿಯಾದ್ರೆ ಎಲ್ಲರ ಶ್ರಮ ಸಾರ್ಥಕವಾಗತ್ತೆ.
“ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”
-ನಿಶಾಂತ್ ತೀರ್ಥಹಳ್ಳಿ
ಚಂದದ ಬರಹ .. ಇಷ್ಟ ಆಯ್ತು… ಅಂತರ್ಜಾಲ ತಾಣಗಳು ಹೊಸ ಕನ್ನಡ ಓದುಗರನ್ನು, ಬರಹಗಾರನ್ನು ಸೃಷ್ಟಿಸಿವೆ ಅಂದರೆ ತಪ್ಪಿಲ್ಲ…ಆದರೆ ಇನ್ನಷ್ಟು ಕೆಲಸ ಆಗಬೇಕಿದೆ.
ಚೆನ್ನಾಗಿದೆ. ನಿಜ ಬ್ಲಾಗ್ ಲೋಕವು ಎಷ್ಟೋ ಮಲಗಿದ್ದ ಸಾಹಿತಿಗಳನ್ನು ಎಬ್ಬಿಸಿ ಕೂರಿಸಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೂ ಇದೊಂದು ಸಂತಸದ ಸಂಗತಿ.
ಒಳ್ಳೆಯ ಅಂತರ್ಜಾಲ ಪತ್ರಿಕೆ