ಸಾಮಾನ್ಯ ಜ್ಞಾನ (ವಾರ 21): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:
೧.    ೨೦೧೪ ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯು ವಿಶ್ವದ ಯಾವ ಭಾಗವನ್ನು ಪೋಲಿಯೋ ಮುಕ್ತವೆಂದು ಅಧೀಕೃತವಾಗಿ ಘೋಷಿಸಿತು?
೨.    ಭಾರತದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಮೊದಲ ಕನ್ನಡಿಗ ಯಾರು?
೩.    ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
೪.    ಚಂದ್ರನ ಮೇಲೆ ಹಾರಿಸಿದ ಮೊದಲ ರಾಕೆಟ್ ಯಾವುದು?
೫.    ಬೆಳಗಾವಿಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಭಾದ ಪ್ರಥಮ ಅಧ್ಯಕ್ಷತೆ ವಹಿಸಿದವರು ಯಾರು?
೬.    ಹೆಚ್.ಐ.ವಿ ಪೀಡಿತ ಗರ್ಭಿಣಿಗೆ ಆರೋಗ್ಯವಂತ ಮಗು ಹುಟ್ಟಬೇಕಾದರೆ ಆಕೆಗೆ ಯಾವ ಔಷಧ ನೀಡಲಾಗುತ್ತದೆ?
೭.    ಭೂಮಿ ತನ್ನ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
೮.    ಬಟ್ಟೆ ಹೊಗೆಯುವ ಸಾಬೂನಿನ ತಯಾರಿಕೆಯಲ್ಲಿ ಬಳಸುವ ಕೊಳೆ ನಿವಾರಕ ಯಾವುದು?
೯.    ಹಿಂದಿ ಕೃತಿ ಸೂರ್ ಸಾಗರದಲ್ಲಿ ಕಷ್ಣನ ಬಾಲಲೀಲೆಗಳನ್ನು ವರ್ಣಿಸಿ ಭಕ್ತಿ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಆಗ್ರಾದ ಅಂಧ ಕವಿ ಯಾರು?
೧೦.    ಚಂದ್ರನ ಮೇಲ್ಮೈಯಲ್ಲಿರುವ ಅತಿ ದೊಡ್ಡಕುಳಿಯ ಹೆಸರೇನು?
೧೧.    ಜವಾಬ್ದಾರಿ ಸರ್ಕಾರಕ್ಕಾಗಿ ಸತ್ಯಾಗ್ರಹ ನಡೆಸಿದ ಕರ್ನಾಟಕದ ಮೊದಲು ಊರು ಯಾವುದು?
೧೨.    ವಿದ್ಯುತ್ ಕುಲುಮೆಯಿಂದ ಬೀಡು ಕಬ್ಬಿಣ ತಯಾರಿಸಿದ ಭಾರತದ ಮೊದಲ ಘಟಕ ಯಾವುದು?
೧೩.    ರೇಗುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?
೧೪.    ಆಸ್ಸಾಮಿನ ಪ್ರಾದೇಶಿಕ ನೃತ್ಯ ಯಾವುದು?
೧೫.    ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು ಯಾರು?
೧೬.    ಭಾರತದಲ್ಲಿ ಪೇಶ್ವೆಗಳ ಆಡಳಿತ ಆರಂಭವಾದದ್ದು ಯಾವಾಗ?
೧೭.    ಹಾಲನ್ನು ಮೊಸರನ್ನಾಗಿ ಮಾಡುವ ಬ್ಯಾಕ್ಟಿರೀಯಾ ಯಾವುದು?
೧೮.    ಸೂರ್ಯಕಾಂತಿಯನ್ನು ಮೊದಲು ಭಾರತದಲ್ಲಿ ಪರಿಚಯಿಸಲಾದ ವರ್ಷ ಯಾವುದು?
೧೯.    ಗೋದಾವರಿ ನದಿಯ ಉಗಮ ಸ್ಥಳ ಯಾವುದು?
೨೦.    ಯಶಸ್ವಿನಿ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
೨೧.    ೧೯೭೨ ರಲ್ಲಿ ರಚಿತವಾದ ಭಾರತದ ೧೯ ನೇ ರಾಜ್ಯ ಯಾವುದು? 
೨೨.    ವಾಸ್ಕೋಡಿಗಾಮನು ೧೪೯೮ ಮೇ ೧೭ರಂದು ತಲುಪಿದ ಭಾರತದ ಮೊದಲ ಸ್ಥಳ ಯಾವುದು? 
೨೩.    ಸಂವಿಧಾನದ ಎಷ್ಟನೇಯ ತಿದ್ದುಪಡಿಯಲ್ಲಿ ೬ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಪಡೆಯಲು ಅವಕಾಶ ಕಲ್ಪಸಿ ಕೊಡಲಾಗಿದೆ?
೨೪.    ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವೆಯಾಗಿದ್ದ ಕನ್ನಡತಿ ಯಾರು?
೨೫.    ತನ್ನ ಸರಳ ಜೀವನದಿಂದ  ’ಜಿಂದಾಫಿರ್’ (ಸಜೀವ ಸಂತ)ವೆಂದು ಎನಿಸಿಕೊಂಡ ಮೊಘಲ ದೊರೆ ಯಾರು?
೨೬.    ಪೋಲಿಯೋಗೆ ಲಸಿಕೆ ಕಂಡುಹಿಡಿದವರು ಯಾರು?
೨೭.    ಮಿಜೋರಾಂ ರಾಜ್ಯದ ಆಡಳಿತ ಭಾಷೆ ಯಾವುದು?
೨೮.    ಅರುಣಾಚಲ ಪ್ರದೇಶ ರಾಜ್ಯವಾಗಿ ಅಸ್ಥಿತ್ವಕ್ಕೆ ಬಂದ ವರ್ಷ ಯಾವುದು?
೨೯.    ಮುಸ್ಲಿಂ ಇತಿಹಾಸದಲ್ಲಿ ಸುಲ್ತಾನ ಎಂಬ ಬಿರುದು ಧರಿಸಿದ ಮೊದಲ ವ್ಯಕ್ತಿ ಯಾರು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಈ ವಾರದ ಪ್ರಸಿದ್ದ ದಿನಾಚರಣೆಗಳು
ಏಫ್ರಿಲ್ ೧ – ವಿಶ್ವ ಮೂರ್ಖರ ದಿನ
ಏಫ್ರಿಲ್ ೭ – ವಿಶ್ವ ಆರೋಗ್ಯ ದಿನ

ಉತ್ತರಗಳು:
೧.    ಈಶಾನ್ಯ ಏಷಿಯಾ (ಸೌತ್ ಈಸ್ಟ್ ಏಷಿಯಾ) (ಭಾರತವೂ ಈ ಭಾಗಕ್ಕೆ ಸೇರುತ್ತದೆ.)
೨.    ಇ.ಎಸ್.ವೆಂಕಟರಾಮಯ್ಯ
೩.    ಅಹಮದಾಬಾದ್
೪.    ಲೂನಾ
೫.    ಸಿದ್ದಪ್ಪ ಕಂಬಳಿ
೬.    ನಿರೋಫಿನ್
೭.    ೨೪ ಗಂಟೆಗಳು
೮.    ಸೋಡಿಯಂ ಹೈಡ್ರಾಕ್ಸೈಡ್
೯.    ಸೂರ್‌ದಾಸ
೧೦.    ಬೆಯ್ಲಿ
೧೧.    ಶಿವಪುರ
೧೨.    ಭದ್ರಾವತಿ ವಿ.ಐ.ಎಸ್.ಎಲ್
೧೩.    ೧೭೭೩
೧೪.    ಬಿಹೂ
೧೫.    ಕಾರ್ನ್ ವಾಲಿಸ್ 
೧೬.    ೧೭೦೮
೧೭.    ಲ್ಯಾಕ್ಟೋಬ್ಯಾಸಿಲಸ್
೧೮.    ೧೯೬೯
೧೯.    ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಬ್ರಹ್ಮ ಗಿರಿ
೨೦.    ೦೧.೦೬.೨೦೦೩
೨೧.    ಮಣಿಪುರ
೨೨.    ಕೇರಳದ ಕಲ್ಲಿಕೋಟೆ
೨೩.    ೨೦೦೨ರಲ್ಲಿ ಮಾಡಲಾದ ೮೬ನೇ ತಿದ್ದುಪಡಿ
೨೪.    ಮಾರ್ಗರೇಟ್ ಆಳ್ವ
೨೫.    ಔರಂಗಜೇಬ್
೨೬.    ಜೋನ್ ಇಸ್ಕಲ್
೨೭.    ಮಿಜೋ
೨೮.    ೨೦ ಮಾರ್ಚ್ ೧೯೮೭
೨೯.    ಮಹಮ್ಮದ ಘಜ್ನಿ
೩೦.    ಅಜೀಂ ಪ್ರೇಮಜಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x