ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ… ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ, ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ…. … Read more

ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪೀಯರ್ ಬದುಕು ಬರಹ ಮತ್ತು ಕಾಲ: ನಾಗರೇಖ ಗಾಂವಕರ

ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪಿಯರ ಎಲ್ಲ ಕಾಲ ದೇಶಗಳಿಗೂ ಪ್ರಶ್ತುತ ಎನ್ನಿಸುವ ಸಾಹಿತ್ಯ ಕೃತಿಗಳ ರಚಿಸುವ ಮೂಲಕ ಸರ್ವಮಾನ್ಯ ಸಾಹಿತಿ ಎಂದೇ ಪ್ರಸಿದ್ಧ. ತನ್ನ ಜೀವನ ಮತ್ತು ಬರವಣಿಗೆಗಳಲ್ಲಿ ಪ್ರೌಢತೆಯನ್ನು ಬಿಂಬಿಸಿದ್ದ ಶೇಕ್ಸಪಿಯರ ಜ್ಞಾನ, ಔದಾರ್ಯ, ನಂಬಿಕೆ, ಯುವ ಪ್ರೇಮದ ತುಡಿತ, ಕ್ಷಮೆ ಹೀಗೆ ಮಾನವ ಸಂವೇದನೆಗಳ ಸುತ್ತ ಹೆಣೆದ ಆತನ ಕೃತಿಗಳು ಲೋಕ ಪ್ರಸಿದ್ಧವಾಗಿವೆ. ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ಎಲಿಜಬೆತನ್ ಯುಗ ಸುವರ್ಣ ಕಾಲ. ಐತಿಹಾಸಿಕವಾಗಿ ಜ್ಞಾನಪುನರುಜ್ಜೀವನ, ಧಾರ್ಮಿಕ ಸುಧಾರಣೆ, ಭೌಗೋಲಿಕ ಅನ್ವೇಷಣೆಗಳ … Read more

ನೀನು ನೀನೇ ಎಂದವರ ನಡುವೆ: ಅಮರ್ ದೀಪ್

ಸಂಗೀತಕ್ಕೆ ವಯಸ್ಸಿನ ಹಂಗಿಲ್ಲ ಕಲಿಯಲಾಗಲಿ, ಕೇಳಿ ಖುಷಿಪಡಲಾಗಲಿ…. ನಾನಂತೂ ಸಮಯ ಸಿಕ್ಕಾಗಲೆಲ್ಲಾ ಸಂಗೀತವನ್ನು ಆಸ್ವಾದಿಸದೇ ಇರಲಾರೆ.  In fact ನನ್ನ ದು:ಖವನ್ನು ನೀಗಿಸುವುದೂ ಸಂಗೀತವೇ ಮತ್ತು ನನ್ನ ದಟ್ಟ ದರಿದ್ರ, ಸೋಮಾರಿತನದಿಂದ “ಎದ್ದೇಳಾ, ನಿನ್ನ ಸೋಮಾರಿತನಕ್ಕಿಷ್ಟು ಬೆಂಕಿ ಹಾಕ” ಎಂದು ಮತ್ತೆ ಮತ್ತೆ ಪುನಶ್ಚೇತನಗೊಳಿಸುವುದೂ ಸಂಗೀತವೇ…  ಇವತ್ತು, ಬಿಡಿ ಇವತ್ತಲ್ಲ ಸುಮಾರು ಮೂರು ತಿಂಗಳಾಯ್ತೇನೋ ಮಧ್ಯಾಹ್ನ ಊಟಕ್ಕೆ ಹೊರಡಬೇಕೆಂದರೆ ಸಾಕು, ಯಾಕಾದ್ರೂ ಊಟದ ಸಮಯವಾಗುತ್ತೋ? ಯಾವ ಖಾನಾವಳಿಯ ಸೋಡಾ ಹಾಕಿದ ಅನ್ನ ತಿನ್ನಬೇಕೋ… ಹೊಟ್ಟೆ ಕೆಡಿಸಿಕೊಳ್ಳಲು? ಎಂದು … Read more

ಮಳೆಗಾಲ ನಮ್ಮದೂ ಒಂದು ಕತೆ: ಭಾರ್ಗವಿ ಜೋಶಿ

ಅಂದೊಂದು ಸುಂದರ ಸಂಜೆ.. ಸೂರ್ಯನು ಭಾರತದ ಸೌಂದರ್ಯವನ್ನು ಮಿಂಚಿಸಿ ಈಗ ಬೇರೆ ದೇಶಗಳಲ್ಲಿ ಕಣ್ಣುತೆರೆಸುವ ಸರದಿ.. ಸೂರ್ಯ ನಿಧಾನವಾಗಿ ಹೆಜ್ಜೆಯಿಟ್ಟು ದಾಟುತ್ತಿದ್ದ.. ಚಂದ್ರನು ನಾನಿಲ್ಲೇ ಇದ್ದೀನಿ ಅಂತಾ ಮೋಡದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿದ್ದ. ಅವನ ಬರುವಿಕೆಯನ್ನು ತಡೆಯಲು ಸಫಲವಾದ ಮೋಡಗಳು ಈಗ ನಮ್ಮ ಸಮಯ ಎಂದು ಮಳೆಸುರಿಸಲು ಸಿದ್ಧವಾಗಿದ್ದವು.. ಸಂಧ್ಯಾಕಾಲ, ತಂಪಾದಗಾಳಿ, ಮಸಕು ಬೆಳಕು, ತುಂತುರು ಮಳೆ… ಮನೆಯ ಅಟ್ಟದಮೇಲೆ ಈ ಅಂದವನ್ನು ಅನುಭವಿಸುತ್ತ ನಿಂತಿದ್ದಳು ನಮ್ಮ ಅರುಂದತಿ… (ಭಾಳ್ ದಿವಸದ ಮೇಲೆ ಕರ್ಕೊಂಡು ಬಂದೆ … Read more

ನಾ ಕಂಡ ನಮ್ಮ ನಡುವಿನ ವಿಜ್ಞಾನದ ಸಂಪನ್ಮೂಲ ವ್ಯಕ್ತಿಗಳು: ಎಂ.ಎಲ್.ನರಸಿಂಹಮೂರ್ತಿ, ಮಾಡಪ್ಪಲ್ಲಿ

ಫೆ.೨೦.೨೦೧೬ ರಂದು ಬಾಗೇಪಲ್ಲಿಯ ಗಂಗಮ್ಮ ಗುಡಿ ರಸ್ತೆಯ ಶ್ರೀನಿವಾಸ್ ಮೆಸ್ ಹಿಂಭಾದಲ್ಲಿನ ಶ್ರೀ ವಾಸುದೇವ ಮೂರ್ತಿ ಎಂಬುವರ ಮನೆಗೆ ತೆರಳಿದ್ದೆ. ಏಕೆಂದರೆ 2013ರಲ್ಲಿ ನ್ಯಾಷನಲ್ ಕಾಲೇಜಿನ ನೆಚ್ಚಿನ ಗುರುಗಳಾದ ಬಿ.ಪಿ.ವಿ ಸರ್ ಅವರು ವಾಸುದೇವ ಸರ್ ಅವರ ಕುರಿತು ಒಂದಿಷ್ಟು ವಿಷಯ ತಿಳಿಸಿದ್ದರು. ನಂತರ ಅದೇವರ್ಷ ಜೂನ್ ತಿಂಗಳಲ್ಲಿ ಖುದ್ದಾಗಿ ಗಂಗಮ್ಮ ಗುಡಿ ರಸ್ತೆಯಲ್ಲಿನ ಅವರ ಮನೆಗೆ ಬೇಟಿ ನೀಡಿದಾಗ ಅವರು ಮನೆಯಲ್ಲಿರಲಿಲ್ಲ. ಕೆಲ ದಿನಗಳ ನಂತರ ಅವರ ಮನೆಗೆ ಹೋದಾಗ ಹಳೇ ತಾಮ್ರದ ತಂತಿಯಿಂದ ಯಾವುದೋ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 7): ಎಂ. ಜವರಾಜ್

-೭- ಈ ಅಯ್ನೋರು ಆ ಅವಳೂ ಕುಂತ ಜಾಗ್ದಲ್ಲೆ ಮುಸುಡಿ ಎಟ್ಗಂಡು ಈ ಅಯ್ನೋರ್ ಮೈ ಇನ್ನಷ್ಟು ಕಾಯ್ತಾ ನನ್ ಮೈಯೂ ಕಾದು ಕರಕಲಾಗುತ್ತಾ ಹೊತ್ತು ಮೀರ್ತಾ ಮೀರ್ತಾ ಆ ಅವಳು ಎದ್ದೋಗಿ ಈ ಅಯ್ನೋರೂ ಮೇಲೆದ್ದು ನನ್ನ ಭದ್ರವಾಗಿ ಮೆಟ್ಟಿ ನೆಲಕ್ಕೆ ಎರಡೆರಡು ಸಲ ಕುಟ್ಟಿ  ಅವಳೆಡೆ ಇನ್ನೊಂದು ನೋಟ ಬೀರಿ ಮೆಲ್ಲನೆ ತಿರುಗಿ ಮೋರಿ ದಾಟಿ  ಕಿರು ಓಣಿ ತರದ ಬೀದೀಲಿ  ಗಿರಿಕ್ಕು ಗಿರಿಕ್ಕು ಅಂತನ್ನಿಸಿಕೊಂಡು  ಬಿರಬಿರನೆ ನಡೆದರಲ್ಲೋ… ಆ ಅವಳ ನೋಟಕ್ಕೆ ಈ … Read more

ಕೆಂಪರೋಡ್..!: ತಿರುಪತಿ ಭಂಗಿ

ಕೆ.ಎ-28 ಎಫ್-6223 ಕರ್ನಾಟಕ ಸಾರಿಗೆ ಬಸ್ಸು ಗಾಳಿಯ ಎದೆ ಸೀಳಿಕೊಂಡು ಬಂವ್.. ವ್.. ವ್.. ಎಂದು ರಾಗ ಎಳೆಯುತ್ತ, ಕ್ಯಾಕರಸಿ ಹೊಗೆ ಉಗುಳುತ್ತ, ತಗ್ಗು ದಿನ್ನೆಯಲ್ಲಿ ಜಿಗಿದು, ಕುಣಿದು ದಣಿವರಿಯದೆ, ಚಾಲಕನ ಒತ್ತಡಕ್ಕೆ ಮನಿದು, ಮುನಿದು ‘ನಿಗಿನಿಗಿ’ ಕೆಂಡ ಉಗಳುವ ಸೂರಪ್ಪನ ಕಾಟಾಚಾರ ಸಹಿಸಿಕೊಂಡು ಬಿಜಾಪೂರದತ್ತ ಹೊರಟಾಗ ಬರೊಬ್ಬರಿ ಎರಡು ಗಂಟೆಯಾಗಿ ಮೇಲೆ ಒಂದಿಷ್ಟು ನಿಮಿಷಗಳಾಗಿದ್ದವು. ಖಾಸಗಿ ಬಸ್ಸಿನ ಸುಖಾಸನಗಳ ಮೇಲೆ ತಣ್ಣಗೆ ಕುಳಿತು ಬರಬೇಕೆಂದವನಿಗೆ, ಇದ್ದಕಿದ್ದಂತೆ ತಲೆಯಲ್ಲಿ ಅದೇನು ಸೇರಿಕೊಂಡಿತೋ, ವಿಠಲಸ್ವಾಮಿ ಸರಕಾರಿ ಬಸ್ಸಿನ ಬಾಗಿಲು … Read more

ಅವರೆಲ್ಲಿ, ಇವನೆಲ್ಲಿ…???: ಬಸವರಾಜ ಕಾಸೆ

ಅನಿಲ್ ಮತ್ತು ಸುನೀಲ್ ಕೆಲಸ ಮಾಡುವ ಕಂಪನಿ ಮಾಲೀಕನ ಮಗನ ಅದ್ದೂರಿ ಮದುವೆ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಂತು ಶುಭಾಶಯ ಕೋರಿದ ನಂತರ ಔತಣಕೂಟಕ್ಕೆ ಆಗಮಿಸಿದರು. ವಿಧ ವಿಧವಾದ ಭಕ್ಷ್ಯ ಭೋಜನಗಳಿಂದ ಕೂಡಿದ ರುಚಿಯ ಪರಿಮಳ ಸುತ್ತಲೂ ಪಸರಿಸಿತ್ತು. ಎರಡು ನಿಮಿಷ ನಿಂತು ನೋಡಿದ ಸುನೀಲಗೆ ಆಶ್ಚರ್ಯ. “ಅರೇ ಅನಿಲ್, ಅಲ್ಲಿ ನೋಡೋ. ರಾಮಣ್ಣ, ಶಾಮಣ್ಣ, ಸೀನ ಎಲ್ಲಾ ಇಲ್ಲೇ ಇದಾರೆ” “ಎಲ್ಲೋ” “ಆ ಕಡೆ ಮತ್ತು ಈ ಕಡೆ ಎರಡು ಕೌಂಟರು ನೋಡೋ” … Read more

ಅವ್ವ ಮತ್ತು ಅಂಗಿ: ಮಹಾಂತೇಶ್. ಯರಗಟ್ಟಿ

ಅಂಗಿ ಅಂದ್ರೇ ಮಾನ ಮುಚ್ಚುತ್ತೆ, ಅಂಗಿ ಅಂದ್ರೇ ನಮ್ಮ ಅಂದ ಹೆಚ್ಚೀಸುತ್ತೆ ,ಅಂಗಿಗೆ ಹಲವಾರು ಬಣ್ಣ, ಅಂಗಿಗೆ ಹಲವಾರು ಗುಣಧರ್ಮ ಇದು ಕೊಳ್ಳುವವನ ಆರ್ಥಿಕತೆಯ ಮೇಲಿನ ಅವಲಂಬನೆ. ಹೀಗೆ ಅಂಗಿಯ ವಿಚಾರ ಬಂದಾಗಲೆಲ್ಲಾ ಹೀಗೆಲ್ಲ ಹೇಳಬಹುದು. ಬಹುಶಃ ನಾನ ಚಿಕ್ಕವನಿದ್ದಾಗಿನಿಂದ ಕೇಳಿದ್ದು ‘ಅ’ ಅಂದ್ರೇ ಅವ್ವ ‘ಅಂ’ ಅಂದ್ರೇ ಅಂಗಿ, ಸರ್ಕಾರಿ ಕನ್ನಡ ಪಾಠ ಶಾಲೆಯ ಪಾಠ ನಿಜ ನೋಡಿ, ಯಾಕಂದ್ರೇ ಕನ್ನಡ ಶಾಲೆಗಳು ಬದುಕುವ ಕಲೆಗಳನ್ನೂ ಕಲಿಸುತ್ತವೆ. ಅವ್ವ ಮತ್ತು ಅಂಗಿ ಯಾವತ್ತು ನಮ್ಮ ಮಾನ … Read more

ಮರೆಲಾಗದ ಮಹಾನುಭಾವರು ತಲ್ಲೂರ ರಾಯನಗೌಡರು: ವೈ. ಬಿ. ಕಡಕೋಳ

“ನಿಮಗೇಕೆ ಕೊಡಬೇಕು ಕಪ್ಪ. ನೀವೇನು ನಮ್ಮ ನೆಂಟರೋ ಬಂಧುಗಳೋ. ನಮ್ಮ ಭೂಮಿಯನ್ನು ಉತ್ತಿ ಬಿತ್ತಿ ಬೆಳೆದವರೋ. ನಿಮಗೇಕೆ ಕೊಡಬೇಕು ಕಪ್ಪ. ” ಎಂಬ ಈ ಸಾಲುಗಳನ್ನು ಬಿ. ಸರೋಜಾದೇವಿ ಹೇಲುವ ಕಿತ್ತೂರು ಚನ್ನಮ್ಮ ಚಲನಚಿತ್ರದ ಈ ಸಂಭಾಷಣೆ ಇಂದಿಗೂ ಕಿತ್ತೂರು ಚನ್ನಮ್ಮ ಚಲನಚಿತ್ರ ವೀಕ್ಷಿಸಿದವರಿಗೆ ರೋಮಾಂಚನೆ ಉಂಟು ಮಾಡುತ್ತವೆ ಅಲ್ಲವೇ. ? ದೇಶಭಕ್ತಿಯ ಕಿಚ್ಚನ್ನು ಹಚ್ಚುವ ಸಾಲುಗಳ ಕತೆಯಾಧಾರಿತ ಕಿತ್ತೂರು ಚನ್ನಮ್ಮ ಚಲನಚಿತ್ರವಾಗಲು ಒಂದು ವ್ಯಕ್ತಿಯ ಶಕ್ತಿ ಬಹಳ ಶ್ರಮಿಸಿದ್ದು. ಕಿತ್ತೂರ ಚನ್ನಮ್ಮ ಚಲನಚಿತ್ರ ನಿರ್ದೇಶಕ ಬಿ. … Read more

ತ್ಯಾಗದಲ್ಲಿ ಅಪರಿಮಿತ ಆನಂದ ಅಡಗಿದೆ!: ಕೆ. ಟಿ. ಸೋಮಶೇಖರ್ ಹೊಳಲ್ಕೆರೆ

 ತ್ಯಾಗ ಎಂಬುದು ಉತ್ತಮ ಮೌಲ್ಯಗಳಲ್ಲಿ ಉತ್ತಮವಾದುದು. ಮಾನವನ ಗುಣಗಳಲ್ಲಿ ಅತಿ ಮುಖ್ಯವಾದುದು. ಮಾನವರೆಲ್ಲರಲ್ಲೂ ಇರಬೇಕಾದಂತಹದ್ದು. ಆದರ್ಶ ವ್ಯಕ್ತಿಗಳಲ್ಲಿ ಹೆಚ್ಚೇ ಇರಬೇಕಾದುದು. ಮಾನವನ ಬದುಕಿಗೆ ಮಾನವತೆಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಅವಶ್ಯವಾದುದು. ಬಹಳ ಶ್ರೀಮಂತರು ತ್ಯಾಗಿಗಳಲ್ಲ! ಕೆಲವು ಸಿರಿವಂತರು ತನಗೆ ಅವಶ್ಯವಲ್ಲದ್ದನ್ನು ಯಥೇಚ್ಛವಾಗಿ ಇರುವಂತಹುದನ್ನು ತ್ಯಾಗ ಮಾಡುವರು. ಅದು ತ್ಯಾಗ! ಆದರೆ ತನಗೆ ಅವಶ್ಯವಾಗಿ ಬೇಕಾದುದನ್ನು ಬೇರೊಬ್ಬರ ಕಷ್ಟ ಅಥವಾ ನೋವು ನಿವಾರಣೆಗಾಗಿ ತ್ಯಾಗ ಮಾಡುವುದು ಶ್ರೇಷ್ಠ ತ್ಯಾಗ! ತ್ಯಾಗ ಮಾಡಿದುದನ್ನು ಸ್ವೀಕರಿಸಿದವ ಬಳಸಿಕೊಂಡು ಕಷ್ಟ ನಿವಾರಿಸಿಕೊಂಡು ನಗುಬೀರಿದವನ … Read more