ಸಂಬಂಧಗಳು ಆರೋಗ್ಯಕರವಾಗಿ ಅರಳಲಿ, ಉಳಿಯಲಿ, ಬೆಳೆಯಲಿ ಎಂಬ ಆಶಯದಿಂದ: ನಟರಾಜು ಎಸ್. ಎಂ.

ಒಬ್ಬ ವ್ಯಕ್ತಿಗೆ ಮದುವೆಯಾಗಿತ್ತು. ಎದೆ ಎತ್ತರಕ್ಕೆ ಬೆಳೆದ ಮಗನೂ ಇದ್ದ. ನೌಕರಿಯ ನಿಮಿತ್ತ ಬೇರೊಂದು ಊರಿಗೆ ವರ್ಗಾವಣೆಯಾಗಿ ಬರುವಾಗ ಹೆಂಡತಿ ಮಕ್ಕಳನ್ನು ತನ್ನೂರಿನಲ್ಲೇ ಬಿಟ್ಟು ಬಂದಿದ್ದ. ಹೊಸ ಊರು, ಹೊಸ ಆಫೀಸ್, ಹೊಸ ಜನಗಳ ನಡುವೆ ಒಂದು ಹುಡುಗಿ ಹೇಗೋ ಈ ಸಂಸಾರಸ್ಥನ ಕಣ್ಣಿಗೆ ಬಿದ್ದಿದ್ದಳು. ಆತನ ವಯಸ್ಸು ಸುಮಾರು 46. ಆಕೆಗೆ ಕೇವಲ 26 ವರ್ಷ ವಯಸ್ಸು. ಒಂದೇ ಆಫೀಸಿನಲ್ಲಿ ಇಬ್ಬರು ನೌಕರರಾಗಿದ್ದ ಕಾರಣ ಇಬ್ಬರಿಗೂ ಸ್ನೇಹವಾಯಿತು. ಸ್ನೇಹ ಪ್ರೇಮಕ್ಕೆ ತಿರುಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. … Read more

ಸೂಪರ್ ಗಾಡ್ ಸಣ್ಣಯ್ಯ (ಕಥೆ): ಹೃದಯಶಿವ ಅಂಕಣ

  "ಸಿಸುಮಗನೇ ನಾನೇಳಿದಷ್ಟು ಮಾಡು. ನಿಂಗೆ ಒಳ್ಳೇದಾಗ್ಲಿಲ್ಲ ಅಂದ್ರೆ ನನ್ನೆಸ್ರು ಬದಲಾಯಿಸಿಕೊಳ್ತೀನಿ" ಎಂದು ಮೈಮೇಲೆ ಬಸಪ್ಪದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ಸುತ್ತ ನೆರೆದಿದ್ದ ರಾಗಿದೊಡ್ಡಿಯ ಜನ ದೂಸ್ರಾ ಮಾತಾಡದೆ ಕೈ ಮುಗಿದರು. ನಾವೆಲ್ಲಾ ಅದನ್ನು ನೋಡಿ ಕಂಗಾಲಾದೆವು. ಅಷ್ಟೊತ್ತಿಗಾಗಲೇ ಸಣ್ಣಯ್ಯ ತನ್ನೆದುರು ಬಿಡಿಸಿದ್ದ ರಂಗೋಲಿಯನ್ನು ತನ್ನ ಬಲಗೈಯಿಂದ ಉಜ್ಜಿ ಉಜ್ಜಿ ಚುಕ್ಕಿ ಹಾಗೂ ಗೆರೆಗಳ ಗುರ್ತು ಸಿಗದಂತೆ ಮಾಡಿ ಆರ್ಭಟಿಸಿದ್ದ. ಸಗಣಿ ಉಂಡೆಯ ಮೇಲಿದ್ದ ಮಣ್ಣಿನ ದೀಪ ಆಕಳಿಸುತ್ತಿತ್ತು. ನಾವು ತೂಕಡಿಸುತ್ತಿದ್ದೆವು. ಸಣ್ಣಯ್ಯ ಕಡೆಗೂ 'ಅರಾ ಅರಾ … Read more

ಕೆಂಗುಲಾಬಿ (ಭಾಗ 8): ಹನುಮಂತ ಹಾಲಿಗೇರಿ

ಹಿಂದಿನ ಸಂಚಿಕೆಯಿಂದ… ಸುಮಾರು ಮುಕ್ಕಾಲು ಗಂಟೆ ಕಳೆದಿರಬಹುದು. ಏಳೆಂಟು ವರ್ಷದ ಹುಡುಗಿ ಏದುಸಿರು ಬಿಡುತಾ ಓಡೋಡಿ ಬಂದು ನನ್ನನ್ನು ಹೌದು ಅಲ್ಲವೋ ಎಂದು ಅನುಮಾನಿಸುತಾ "ಅಂಕಲ್ ಅವ್ವ ಕರಿತಿದಾರೆ" ಎಂದಿತು. ನಾನು ಆ ಮಗುವನ್ನು ಹಿಂಬಾಲಿಸುತ್ತಾ ಮಾತಿಗಿಳಿದೆ. ’ಪುಟ್ಟಿ ನಿನ್ನ ಹೆಸರು?’ ’ರಾಜಿ’ ಎಂದಿತು ನಾಚಿಕೊಂಡು. ’ನಿಮ್ಮ ಪಪ್ಪಾ ಎಲ್ಲಿದ್ದಾರೆ ರಾಜಿ?’ ’ಗೊತ್ತಿಲ್ಲ, ನಾ ಸಣ್ಣವಳಿದ್ದಾಗ ದಿನ ಕುಡಿದು ಬಂದು ಮಮ್ಮಿನ ಹೊಡಿತಿದ್ರು. ಆಗ ಅವ್ವ ಅಳತಿದ್ಲು. ಈಗೆಲ್ಲಿದ್ದಾರೋ ಗೊತಿಲ್ಲ. ಆದರೆ ಈಗ ದಿನಾಲೂ ಮನೆಗೆ ಹೊಸ … Read more

ಪ್ರತಿಭಾನಂದಕುಮಾರ್ ಅವರೊಂದಿಗೆ ಸಂದರ್ಶನ: ನಳಿನ ಡಿ.

ಓರ್ವ ಲೇಖಕಿಯಾಗಿ ನಿಮ್ಮನ್ನು ಬೆಳೆಸಿದ ಅಂಶಗಳು ‘ನಾವು ಹುಡುಗಿಯರೇ ಹೀಗೆ’ ಎಂದು ಪ್ರಜಾವಾಣಿಗೆ ಬರೆದೆ ಅದು ಪ್ರಕಟ ಆಯ್ತು.  ಅದು ‘ಓವರ್ ನೈಟ್ ಸೆಲೆಬ್ರಿಟಿ’ ಮಾಡಿತ್ತು.  ಇದುವರೆಗೂ ಅದರ ಪ್ರಭಾವ ಇದೆ, ಆಮೇಲೆ ಬರೆದಂತ ಹುಡುಗಿಯರು ತುಂಬಾ ಜನ ಅದೇ ಶೈಲಿಯಲ್ಲಿ ಬರೆಯಲು ಶುರು ಮಾಡಿದರು.  ಎರಡು ಪೀಳಿಗೆ ಹುಡುಗಿಯರು ಆದ ಮೇಲೆ, ಈಗ ಮೂರನೇ ಪೀಳಿಗೆ ಆಗಿದೆ.  ಶ್ರೀನಿವಾಸ ರಾಜು, ಹೆಚ್. ಎಸ್. ರಾಘವೇಂದ್ರ ಇವರು ನಮ್ಮ ಮೇಷ್ಟ್ರು, ಇದನ್ನೆಲ್ಲಾ ಸೇರಿಸಿ, ಮುದ್ದಣ್ಣ ಪ್ರಶಸ್ತಿ ಗೆ … Read more

ಕಾಬೂಲಿನ ಕಥೆ: ನಟರಾಜ್ ಕಾನುಗೋಡು

ಇದು ನಾನು ಯೂರೋಪಿನ “1tv” ಕಾಬೂಲ್ ಬ್ರಾಂಚಿನಲ್ಲಿ ಕೆಲಸ ಮಾಡುವಾಗಿನ ಘಟನೆ. ನನಗೆ ಕಾಬೂಲ್ ತುಂಬಾ ಅಮೇರಿಕಾ ಹಾಗೂ ಯುರೋಪ್ ಸೈನಿಕರು ಎಲ್ಲೆಲ್ಲೂ ಕಾಣುತ್ತಿದ್ದರು. ಅಗ ನಾನು ಕಬೂಲಿಗೆ ಬಂದ ಹೊಸತು. ನನಗೆ ಏಕೋ ತಾಲಿಬಾನ್ ಮುಖ್ಯಸ್ಥನನ್ನು ಖುದ್ಧಾಗಿ ಭೆಟ್ಟಿಯಾಗುವ ಮನಸ್ಸಾಯಿತು. ನಾನು ಕೆಲಸ ಮಾಡುತ್ತಿರುವ ಚಾನೆಲ್ ಮುಖ್ಯಸ್ಥರನ್ನು ಕೇಳಿದೆ. ನಿರಾಶಾದಾಯಕ ಉತ್ತರ ದೊರೆಯಿತು. ಮತ್ತು ನನಗೆ ಅವರನ್ನು ಭೆಟ್ಟಿ ಆಗಲು ಅವಕಾಶ ನಿರಾಕರಿಸಲಾಯಿತು. ಕಾರಣ ಒಮ್ಮೆ ಅಲ್ಲಿಗೆ ಅವರ ಸಂದರ್ಶನಕ್ಕೆಂದು ಹೋದ ಯೂರೋಪಿನ ಒಬ್ಬ ವರದಿಗಾರ … Read more

ಮೂಲಂಗಿ ಪಚಡಿ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಭಾಳ ದಿವಸದ್ದ ಮ್ಯಾಲೆ ನಾವು ಗೆಳತ್ಯಾರೆಲ್ಲಾ ಒಂದ ಕಡೆ ಸೇರಿದ್ವಿ. ದಿನಾ ಒಂದಕ್ಕು ಮನ್ಯಾಗ ಗಂಡಾ ಮಕ್ಕಳಿಗೆ ನಾಷ್ಟಾ,ಊಟಾ ಅಂಥೇಳಿ  ದಿನಾ ಮುಂಝಾನೆದ್ದ ಕೂಡಲೆ ಚಪಾತಿ ಹಿಟ್ಟಿನ್ ಮುದ್ದಿ ನೋಡಿ ನೋಡಿ ನಮಗೂ  ಸಾಕಾಗಿತ್ತು. ಇವರಿಗೆಲ್ಲಾ ಹೊಟ್ಟಿತುಂಬ ಮಾಡಿ ಹಾಕಿ ಮತ್ತ ಮ್ಯಾಲೆ ಇವರ ಕಡೆ ದಿನಾ ಮಾಡಿದ್ದ ಮಾಡತಿ ಅಂತ ಬೈಸ್ಕೊಳ್ಳೊದ ಬ್ಯಾರೆ . ಅದಕ್ಕ ಬ್ಯಾಸರಾಗಿ ನಾವೆಲ್ಲಾ ಫ್ರೇಂಡ್ಸ್ ಮಾತಾಡಕೊಂಡ ಎಲ್ಲೆರೆ ಹೊರಗ ಸೇರಿ ” ಗೇಟ್ ಟುಗೆದರ್ ” ಮಾಡೊದಂತ ಡಿಸೈಡ್ ಮಾಡಿದ್ವಿ. … Read more

ಶಿಫಾರಸು: ಜೆ.ವಿ.ಕಾರ್ಲೊ ಅನುವಾದಿಸಿರುವ ರಶ್ಯನ್ ಕತೆ

  ಜಿಲ್ಲಾ ಪ್ರಾಥಮಿಕ ಶಾಲೆಗಳ ನಿರ್ದೇಶಕರಾದ ಮಾನ್ಯ ಫ್ಯೋಡೊರ್ ಪೆಟ್ರೊವಿಚ್ ತಾವು ನ್ಯಾಯ-ನೀತಿಯ ಮನುಷ್ಯರೆಂದು ಭಾವಿಸಿದ್ದರು. ಅದೊಂದು ದಿನ ಅವರ ಕಛೇರಿಯೊಳಗೆ ಒಂದು ಕುರ್ಚಿಯ ಅಂಚಿನಲ್ಲಿ ಮುಳ್ಳು ಕಂಟಿಗಳ ಮೇಲೆಂಬಂತೆ ರೆಮೆನಿಸ್ಕಿ ಎಂಬ ಹೆಸರಿನ ಶಿಕ್ಷಕರೊಬ್ಬರು ಆಸೀನರಾಗಿದ್ದರು. ಅವರು ತೀರ ಉದ್ವಿಘ್ನ ಮನಸ್ಥಿತಿಯಲ್ಲಿದ್ದರು. “ಕ್ಷಮಿಸು, ರೆಮೆನಿಸ್ಕಿ.” ಫ್ಯೋಡೊರ್ ಪೆಟ್ರೊವಿಚ್ ಕತ್ತೆತ್ತುತ್ತಾ ದುಃಖತಪ್ತ ಸ್ವರದಲ್ಲಿ ಹೇಳಿದರು. “ನಿನಗೆ ನಿವೃತ್ತನಾಗದೆ ಬೇರೆ ದಾರಿಯೇ ಇಲ್ಲ. ನಿನಗೆ ಸ್ವರವೇ ಇಲ್ಲ! ನೀನು ಪಾಠ ಮಾಡುವುದಾದರೂ ಹೇಗೆ? ನನಗೆ ಅರ್ಥವಾಗುತ್ತಿಲ್ಲ. ಒಮ್ಮೆಲೇ ನಿನ್ನ … Read more

ಅತ್ಯಾಚಾರ ತಡೆಯುವ ಬಗೆ: ಅಖಿಲೇಶ್ ಚಿಪ್ಪಳಿ ಅಂಕಣ

ಅದೊಂದು ೬ನೇ ಕ್ಲಾಸಿನಲ್ಲಿ ಓದುತ್ತಿರುವ ಚುರುಕಾದ ಹೆಣ್ಣುಮಗು. ಆ ದಿನ ಶನಿವಾರ ಗೆಳತಿಯರಿಗೆ ಬೈ ಸೋಮವಾರ ಸಿಗ್ತೀನಿ ಎಂದು ಹೇಳಿ ಮನೆಕಡೆ ನಡಕೊಂಡು ಹೊರಟಿತು. ಹೈವೇಯಿಂದ ಸುಮಾರು ಅರ್ಧ ಕಿ.ಮಿ. ಆಸುಪಾಸಿನಲ್ಲಿ ಮನೆ. ಆ ವಯಸ್ಸಿನ ಮಕ್ಕಳಲ್ಲಿ ವಯೋಸಹಜ ಆಟವಾಡುವ ವಾಂಛೆಯಿರುತ್ತದೆ. ಇಲ್ಲಿ ನೋಡಿದರೆ ಕಣ್ಣುಹಾಯಿಸುವಷ್ಟು ದೂರ ೪೦ ಅಡಿ ಅಗಲದಲ್ಲಿ ಕಪ್ಪನೆಯ ಹೆದ್ದಾರಿ ಮಲಗಿದೆ. ಅದರ ಮೇಲೆ ವೇಗವಾಗಿ ಸಾಗುವ ಕಾರುಗಳು, ದೈತ್ಯ ಲಾರಿಗಳು. ಮಣ್ಣಾಡಲು ರಸ್ತೆಯಲ್ಲಿ ಮಣ್ಣೇ ಇಲ್ಲ. ಇಲ್ಲೊಂದು ಒಳದಾರಿಯಿದೆ, ಮನೆಗೆ ಹತ್ತಿರ … Read more

ಎರಡು ಕವಿತೆಗಳು: ಆನಂದ ಈ. ಕುಂಚನೂರ, ವಿ.ಎಸ್ ಶ್ಯಾನಭಾಗ್

ನಿನ್ನ ಕರುಣೆಯ ಬಿಂಬ ನಿಶೆಯ ಕರುಣೆಯಿಂದೊಡಮೂಡಿದ ಬೆಳಗಿನುದಯರವಿಯ ಕಂಡ ಇಬ್ಬರೂ ಬಂಗಾರದ ಹಣೆಯ ಮುದದಿ ಮುತ್ತಿಕ್ಕಿ ಕಣ್ತುಂಬಿಕೊಂಡ ಅವನು ಹಗಲ ವ್ಯಾಪಾರಕೆ ಸಜ್ಜಾದ ಸಿಪಾಯಿ- ಯಾದರೆ ಇತ್ತ ಇವಳು ಇರವೆಡೆ ಸಿಂಗಾರ ಸೂಸುವ ಸಿರಿದಾಯಿ   ಬದುಕ ಬೆನ್ನಿಗಂಟಿಸಿ ಹೊರಟರವನು ಪುರುಷ ಭೂಷಣವೆನ್ನಕ್ಕ ಕಾರ್ಯಕಾರಣ ಅದಕಾರಣ ಕಾರ್ಯದೊಳಗಾನು ತೊಡಗಿ ಬಿರುಬಿಸಿಲೆನ್ನದೆ ದುಡಿವ ಬಡಗಿ ತೊಳಲಿ ಬಳಲಿಕೊಂಬದೆ ಬಳಲಿ ಅಳಲುಕೊಂಬದೆ ಮರಳಿ ಸಂಜೆ ಸ್ವಗೃಹ ಹೊಕ್ಕು ಸತಿಯ ಮಂದಹಾಸಕೆ ಮನಸೋತು ಎಲ್ಲ ಬವಣೆಯ ಹಿಂದಿಕ್ಕಿ ಮೀಸೆಯಂಚಲಿ ನಕ್ಕು ಪ್ರಸನ್ನನಾಗುವನು … Read more

ಮ್ಯಾಗ್ನೋಲಿಯಾ: ವಾಸುಕಿ ರಾಘವನ್ ಅಂಕಣ

“ಮ್ಯಾಗ್ನೋಲಿಯಾ” ನನ್ನ ಅಚ್ಚುಮೆಚ್ಚಿನ ಚಿತ್ರ. ಇದು ಕೇವಲ ಒಂದು ಚಿತ್ರವಲ್ಲ, ಇದೊಂದು ವಿಶೇಷ ಕಲಾಕೃತಿ. ತುಂಬಾ ದಿನದಿಂದ ಇದರ ಬಗ್ಗೆ ಬರೆಯಬೇಕು ಅನ್ನೋ ಆಸೆಯೇನೋ ಇತ್ತು, ಆದರೆ ಈ ಅದ್ಭುತ ಚಿತ್ರದ ಅನುಭವವನ್ನು ಪದಗಳಲ್ಲಿ ಹಿಡಿದಿಡಲು ಧೈರ್ಯ ಬಂದಿರಲಿಲ್ಲ. ಆದರೆ ಯಾಕೋ ಕೆಲವು ದಿನಗಳಿಂದ ಈ ಚಿತ್ರ ಬಹಳ ಕೈ ಹಿಡಿದು ಜಗ್ಗುತ್ತಿದೆ, ಕಾಡುವಿಕೆಯ ಮುಂದೆ ಹಿಂಜರಿಕೆ ಸೋಲ್ತಾ ಇದೆ. ಹೀಗಾಗಿ ಅದರ ಬಗ್ಗೆ ಬರೆಯುವ ಹುಚ್ಚುಸಾಹಸಕ್ಕೆ ಕೈ ಹಾಕಿದೀನಿ. ಇದನ್ನು ಓದುವುದರಿಂದ ನೀವು ಆ ಚಿತ್ರವನ್ನು … Read more

ಒಂದು ಹಳ್ಳಿಯ ಕತೆ: ಪ್ರಶಸ್ತಿ ಅಂಕಣ

ಈತನದು ಮುಂಬಯಿಯ ನವಿ ಮುಂಬಯಿಯಲ್ಲೊಂದು ದುಖಾನು. ದುಖಾನೆಂದರೆ ಸಣ್ಣ ಕಿರಾಣಿ ಅಂಗಡಿಯೇನಲ್ಲ.ಈತ ತನ್ನೂರಿನವರಿಗೆ ಹೇಳಿದ್ದ ಹೆಸರಷ್ಟೆ. ಅದು ದೊಡ್ಡದೇ. ದುಡ್ಡಿರೋರಿಗೆ ಸಣ್ಣ ಸಣ್ಣ ಮನೆಗಳನ್ನೂ ದೊಡ್ಡ ಬೆಲೆಗೆ ಮಾರೋ ಅದೇನೋ ಅಂತಾರಲ್ಲಾ, ಹಾ ರಿಯಲ್ ಎಸ್ಟೇಟು.. ಆ ತರದ್ದು. ನವಿ ಮುಂಬಯಿಯಲ್ಲಿ ಒಂದು ಶಯನ ಗೃಹ, ಒಂದು ಅಡುಗೆ ಮನೆಯಿರೋ ಮನೆಗೇ ೩೦ ಸಾವಿರ ದಾಟಿಸಿದ್ದರಲ್ಲಿ ಈತನ ತರದ ಅದೆಷ್ಟೋ ದುಖಾನುಗಳ ಸಾಥ್ ಇತ್ತು. ಮುಂಬಯಿ ಬೋರ್ ಬಂತಾ ಅಥವಾ ನಿನ್ನ ನೋಡ್ದೇ ವರ್ಷಗಟ್ಲೇ ಆಗೋಯ್ತು, ಯಾವಾಗ … Read more

ಮದುವೆ ಮನೆಯಲ್ಲಿ ಕಾವ್ಯದ ಹೂರಣ: ಡಾ.ಪ್ರಕಾಶ ಗ.ಖಾಡೆ.

ಈಗ ಏನಿದ್ದರೂ ಸಾಂದರ್ಭಿಕ ಕವಿಗೋಷ್ಠಿಗಳ ಕಾಲ. ಹಿಂದೆಲ್ಲ ಚೈತ್ರ ಕವಿಗೋಷ್ಠಿ, ಯುಗಾದಿ ಕವಿಗೋಷ್ಠಿ, ಸಮ್ಮೇಳನದ ಕವಿಗೋಷ್ಠಿಗಳು ನಡೆಯುತ್ತಿದ್ದುದು ವಾಡಿಕೆ. ಈಗ ಗೃಹ ಪ್ರವೇಶ, ಮಗುವಿನ ಹುಟ್ಟು ಹುಬ್ಬಗಳಲ್ಲದೆ ಮದುವೆ ಮನೆಗೂ ನಮ್ಮ ಕವಿಗೋಷ್ಠಿ ಪ್ರವೇಶ ಪಡೆದಿದೆ. ಇದು ಕಾವ್ಯ ಖಾಸಗಿಯಾಗುತ್ತಿರುವ ಜೊತೆಗೆ ಸಾರ್ವತ್ರೀಕತೆಯನ್ನು ಪಡೆಯುತ್ತಿರುವ ಸೂಚನೆಯಾಗಿದೆ. ಇಂದಿನ ಅವಸರದ ಜಗತ್ತಿನಲ್ಲಿ ಮೊದಲಿದ್ದ ಮದುವೆ ಸಂಭ್ರಮದ ಓಡಾಟ, ಹಾಡು, ಆಟಗಳೆಲ್ಲ ಹೇಳ ಹೆಸರಿಲ್ಲದೆ ಕಣ್ಮರೆಯಾಗುತ್ತಿರುವ ಹೊತ್ತಿನಲ್ಲಿ ಒಂದಿಷ್ಟು ಚಿಂತನೆಗೆ ತೊಡಗಿಸುವ ಕಾವ್ಯಗೋಷ್ಠಿಗಳು ಮದುವೆ ಮಂಟಪದಲ್ಲಿ ಕಾಣಸಿಗುತ್ತಿರುವದೂ ಒಳ್ಳೆಯ ಬೆಳವಣಿಗೆಯಾಗಿದೆ. … Read more

ನಾಟಕಕಾರರಾಗಿ ಕುವೆಂಪು (ಭಾಗ-17) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ಓದುಗಪ್ರಭುಗಳೇ, ಕಳೆದ ಸಂಚಿಕೆಯಲ್ಲಿ ಮಹಾಕವಿಗಳ ಸಾರ್ವಕಾಲಿಕ ಸರ್ವಶ್ರೇಷ್ಟ ರಂಗಕೃತಿಗಳಲ್ಲಿಯೇ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಮತ್ತು ಆಧುನಿಕ/ಇಂದಿನ ಕಾಲದಲ್ಲಿ ಜಾಣ್ಮೆ, ವಿದ್ಯೆ ಮುಂತಾದ ಸಂಗತಿಗಳು ಕೇವಲ ಉನ್ನತ ಕುಲದವರ ಸ್ವತ್ತಲ್ಲ, ಅದು ಸ್ಥಾಪಿತ ಸ್ವ-ಹಿತಾಸಕ್ತಿಯ ಬಂಧನಕ್ಕೊಳಗಾಗುವುದಿಲ್ಲ ಮುಂತಾದ ಅಂಶಗಳ ಕುರಿತು ಆತ್ಮಾವಲೋಕನಕ್ಕೆ ಗುರಿಪಡಿಸುವ ‘ಜಲಗಾರ’ ಕೃತಿಯ ಕುರಿತು ತಿಳಿದುಕೊಂಡಿದ್ದೇವೆ. ಹಾಗೆ ನೋಡಿದರೆ ‘ಜಲಗಾರ’ ರಂಗಕೃತಿಯ ವಸ್ತು ವರ್ಣ-ವರ್ಗಗಳ ಸಂಘರ್ಷದ ನೆಲೆಯಾಗಿದೆ. ‘ಜಲಗಾರ’ ಇಲ್ಲಿ ಪರಂಪರೆಯ ಶೋಷಣೆಯ ಎಲ್ಲಾ ಮಗ್ಗಲುಗಳನ್ನು ಅರಿತವನು. ಅದರಿಂದ ಬಿಡುಗಡೆ ಪಡೆದು ತನ್ನ ಜೀವನದಲ್ಲಿ … Read more

ಎರಡು ಪತ್ರಗಳು: ಎಚ್.ಕೆ.ಶರತ್, ವಿನಯ.ಎ.ಎಸ್.

ಮಿತಿಯ ಪರಿಧಿಯೊಳಗೆ ಪ್ರೀತಿ ಯಾವುದು ಪ್ರೀತಿ? ಹೊಸತನ್ನು ಅಪ್ಪುವುದೋ… ಹಳೆ ನಂಟು ಕಳಚುವುದೋ… ಕನಸುಗಳ ಗೂಡು ಕಟ್ಟುತ್ತ ವಾಸ್ತವದ ಎದೆಗೆ ಒದೆಯುವುದೋ… ಯಾವುದು ಪ್ರೀತಿಯಲ್ಲ? ಮೋಹದ ಗಂಟು ಸುತ್ತಿಕೊಂಡ ಭಾವವೋ… ಟೈಂ ಪಾಸ್ ಎಂಬ ಕ್ಷುಲ್ಲಕ ಗ್ರಹಿಕೆಗೆ ಅಡಿಯಾಳಾದ ತೋರಿಕೆಯ ಸಂಬಂಧವೋ… ನಿಜದ ನೆಲೆ ಹುಡುಕುತ್ತ ಹೊರಟರೆ ಎಲ್ಲವೂ ಗೋಜಲು ಗೋಜಲು. ವ್ಯವಸ್ಥೆ ನಿರ್ಮಿಸಿರುವ ಚೌಕಟ್ಟು ಮೀರಲು ಮುಂದಾಗುವ ಪ್ರೀತಿ ಹೊಸದೊಂದು ಬಿಕ್ಕಟ್ಟಿಗೆ ಮುನ್ನುಡಿ ಬರೆಯುತ್ತದೆ. ಚೌಕಟ್ಟುಗಳ ಮಿತಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ಜಾತಿ, ಅಂತಸ್ತು, ವಯಸ್ಸು, … Read more