Facebook

Archive for the ‘ಕಾಮನ ಬಿಲ್ಲು’ Category

ಈ ಬಂಧಗಳು..ಸಂಬಂಧಗಳು..: ಪದ್ಮಾ ಭಟ್, ಇಡಗುಂದಿ.

                  ನೀನಿಲ್ಲದೆಯೇ ನಾ ಹೇಗಿರಲಿ.. ನಿನ್ನೊಂದಿಗೇ ಎಂದಿಗೂ ಇರಬೇಕು ಅಂಥ ಅನಿಸುತ್ತೆ ಕಣೇ.. ನೀನಿಲ್ಲದ ಕ್ಷಣವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ನಿನ್ನಂತಹ ಗೆಳತಿ ಈ ಜನ್ಮದಲ್ಲಿ ಮತ್ತೆ ಸಿಗಲಾರದೇನೋ ಎಂದು ಗೆಳತಿಯೊಬ್ಬಳು ಬೀಳ್ಕೊಡುವಾಗ ಹೇಳಿದ ನೆನಪು. ಆ ಸಮಯಕ್ಕೆ ಆ ದಿನ ಹಾಗೆ ಅನ್ನಿಸಿದ್ದೂ ಸುಳ್ಳಲ್ಲ.. ಒಂದಷ್ಟು ದಿವಸಗಳ ಕಾಲ, ಆತ್ಮೀಯತೆಯಿಚಿದ ಇದ್ದವರಿಗೆ ವಿದಾಯ ಹೇಳುವಾಗ ನೀನಿಲ್ಲದೇ ನಾನಿರಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಬೆಸೆದುಕೊಂಡಿರುತ್ತೇವೆ..ಆದರೆ ಈ ಕಾಲ ಅನ್ನೋದು […]

ಅವನ ಪ್ರೀತಿಯಲ್ಲಿ ಅವಳ ಚಿತ್ರವಿದೆ: ಪದ್ಮಾ ಭಟ್, ಇಡಗುಂದಿ

                       ಅವನು ಅವಳಿಗಾಗಿ ಕಾಯುತ್ತ ಕುಳಿತಿದ್ದನು.. ಜೋರಾಗಿ ಮಳೆ ಬರಲು ಶುರುವಾದಾಗಲೇ ಅವನ ಕನಸುಗಳೂ ಮಳೆಯಲ್ಲಿ ತೋಯುತ್ತಿದ್ದವು.. ಇನ್ನೂ ಆ ಹುಡುಗಿ ಬಂದಿಲ್ವಲ್ಲಾ.. ಎನ್ನುತ್ತ ದಾರಿ ನೋಡುತ್ತಿದ್ದವನಿಗೆ ದೂರದಿಂದಲೇ ಅವಳ ಬರುವಿಕೆ ಕಾಣಲು ಪ್ರಾರಂಭವಾಯಿತು.. ಯಾಕೆ ಇಷ್ಟು ಹೊತ್ತು ಕಾದೆ ಅವಳಿಗೆ ಎನ್ನುವುದಕ್ಕಿಂತ, ಅವಳ ಬರುವಿಕೆಯಲ್ಲಿನ ಕಾಯುವಿಕೆಯಲ್ಲಿಯೂ ಅವನು ಖುಷಿಪಡುತ್ತಿದ್ದ.. ಜೀವನವೆಂದರೆ ನಮ್ಮ ಸಂತೋಷಕ್ಕಾಗಿ ಮಾತ್ರ ಬದುಕುವುದಲ್ಲ.. ನಮ್ಮಿಂದ ಸಂತೋಷವಾಗುವವರಿಗಾಗಿ ಬದುಕುವುದು.. ಎಂದು […]

ಅಮ್ಮನೆಂಬ ಅನುಬಂಧದ ಸುತ್ತ: ಪದ್ಮಾ ಭಟ್

          ಮೊನ್ನೆ ಮೊಬೈಲ್ ಗೆ ಬಂದ ಮೆಸೇಜು ಒಂದುಕ್ಷಣ ಮೂಕಳನ್ನಾಗಿ ಮಾಡಿಸಿತ್ತು ಅದೇನೆಂದರೆ ೫ ನೇ ಕ್ಲಾಸಿನ ಪರೀಕ್ಷೆಯಲ್ಲಿ ಅಮ್ಮನ ಬಗ್ಗೆ ಬರೆಯಿರಿ ಎಂಬ ಒಂದು ಪ್ರಬಂಧವಿತ್ತಂತೆ.. ಆ ಪುಟ್ಟ ಹುಡುಗನೊಬ್ಬ ಬರೆದಿದ್ದೇನೆಂದರೆ ನನ್ನ ಅಮ್ಮನ ಬಗ್ಗೆ ಬರೆಯಲು ಇಂಗ್ಲೀಷಿನಲ್ಲಿರುವ ಯಾವ ಅಕ್ಷರವೂ ಸಮನಾಗಲಾರದು..ಯಾವುದೇ ಭಾಷೆಯ ಅಕ್ಷರಗಳೂ ಸಾಕಾಗದು ..ಸಮಯದ ಮಿತಿಯೂ ಇಲ್ಲ ಎಂಬುದು.. ಹೌದಲ್ವಾ? ಅಮ್ಮನೆಂದರೆ ಸಾವಿರ ಜನರ ನಡುವೆಯಿದ್ದರೂ ಆತ್ಮೀಯವಾಗಿ ಕಾಣುವ ಜೀವಿ. ಹುಟ್ಟುವ ಮೊದಲೇ ನಮ್ಮ ಬಗ್ಗೆ […]

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು: ಪದ್ಮಾ ಭಟ್, ಇಡಗುಂದಿ

                    ನಾನು ಬಡವಿ ಆತ ಬಡವ  ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು.. ದ.ರಾ ಬೇಂದ್ರೆಯವರ ಈ ಹಾಡಿನ ಸಾಲು ಪದೇ ಪದೇ ನೆನಪಾಗತೊಡಗಿತ್ತು.. ಗೆಳೆಯಾ ಬಹುಶಃ ಪ್ರೀತಿ ಎಂಬ ಪದಕ್ಕೆ ಎಷ್ಟು ಆಪ್ತವಾದ ಸಾಲುಗಳು ಇವು ಅಲ್ವಾ? ಬದುಕಿನಲ್ಲಿ ಎಲ್ಲವೂ ಇದ್ದು ಪ್ರೀತಿಯೇ ಇಲ್ಲದಿದ್ದರೆ ಏನು ಚಂದ ಹೇಳು, ಆದರೆ ಬಡತನದಲ್ಲಿಯೂ ಪ್ರೀತಿಯಿದ್ದರೆ, ಅದನ್ನೇ ಎಲ್ಲಾದಕ್ಕೂ ಬಳಸಿಕೊಳ್ಳಬಹುದು..ಪ್ರೀತಿಯಿಂದ ಹೊಟ್ಟೆ […]

ನೆನಪುಗಳೆಂಬ ಬುತ್ತಿಗಳು: ಪದ್ಮಾ ಭಟ್, ಇಡಗುಂದಿ.

                          ಮನಸಿನ ಪುಟವ ತಿರುವಿ ಹಾಕಿದಾಗ ಒಂದಷ್ಟು ನೆನಪಿನ ಬುತ್ತಿಗಳು.. ದುಃಖವಾದಾಗ ಅಂದು ಸಂತಸ ಪಡುತ್ತಿದ್ದ ನೆನಪುಗಳು..ಎಲ್ಲವನ್ನೂ ಮರೆಯುತ್ತೇನೆ ಕಹಿದಿನಗಳನ್ನು ಎಂದುಕೊಳ್ಳುತ್ತಲೇ, ಮನಸ್ಸಿನ ಇನ್ಯಾವುದೋ ಮೂಲೆಯಲ್ಲಿ  ಅದರ ತುಣುಕು ಇರದೇ ಇರುವುದಿಲ್ಲ..ನೆನಪುಗಳೇ ಹಾಗೆ.. ಒಮ್ಮೆಮ್ಮೆ ಬದುಕನ್ನು ಅರಳಿಸುತ್ತೆ. ಮತ್ತೊಮ್ಮೆ ದುಃಖದ ಘಟನೆ ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ.. ಮನೆಯ ಪಕ್ಕದ ರೋಡಿನಲ್ಲಿ ಜೋಳ ಮಾರುವ ಅಜ್ಜನಿಂದ ಹಿಡಿದು, ಬದುಕನ್ನು ಸಿಹಿಯಾಗಿಸಿದ […]

ಐ.ಲವ್ ಯೂ ಅಪ್ಪ: ಪದ್ಮಾ ಭಟ್, ಇಡಗುಂದಿ.

ನೀನ್ಯಾಕೆ ನನ್ನನ್ನು ಇಷ್ಟು ಪ್ರೀತಿಸ್ತೀಯಾ.. ನೀ ನನಗಾಗಿ ಮಾಡೋ ಒಂದೊಂದು ಪ್ರೀತಿಗೂ, ತ್ಯಾಗಕ್ಕೂ, ನಿಸ್ವಾರ್ಥದ ಮನಸಿಗೊಮ್ಮೆ ಹೀಗೆ ಕೇಳಿ ಬಿಡೋಣವೆಂದೆನಿಸುತ್ತದೆ.. ನನ್ನಗೊಂದಲ ಮನಸ್ಸಿಗೆ ನೀನು ಸಂತೈಸಿದ ದಿನಗಳು ಅದೆಷ್ಟೋ.. ನನ್ನ ಖುಷಿಯಲ್ಲಿಯೇ ನಿನ್ನ ಖುಷಿಯನ್ನು ಕಂಡ ಸಮಯಕ್ಕಂತೂ ಬಹುಶಃ ಲೆಕ್ಕವೇ ಇರಲಿಕ್ಕಿಲ್ಲ..ನಾ ಸೋತಾಗ ನನ್ನ ಕಣ್ಣೀರಲ್ಲಿಯೇ, ಹೊಸ ಭರವಸೆಯನ್ನು ಹುಟ್ಟಿಸಿದವನು ನೀನು..ಯಾವುದೇ ಒಳ್ಳೆಯ ಕೆಲಸ ಮಾಡಲಿ ಅದಕ್ಕೆಲ್ಲ ಗಟ್ಟಿಯಾದ ಸಪೋರ್ಟ್‌ ಕೊಡುತ್ತಾ ಬಂದಿದ್ದೀಯ..ಮಗಳೇ ಚನ್ನಾಗಿ ಓದು ಎಂಬ ಮಾತನ್ನು ನನ್ನ ಕಿವಿಯಲ್ಲಿ ಎಂದೂ ಗುನುಗುನಿಸುತ್ತಿರುವಷ್ಟು ಬಾರಿ ನೀ […]

ಶರಧಿಯ ದಡದಲ್ಲಿ ಪ್ರೀತಿಯ ಕನಸು:ಪದ್ಮಾ ಭಟ್ ಇಡಗುಂದಿ

ಮುಸ್ಸಂಜೆಯ ಸೂರ್ಯನ ಅಂತಿಮ ಹೊತ್ತು, ಕೆಂಪು ಕಿರಣ ಮೊಗದಲ್ಲಿ ಬೀಳುತ್ತಿರಲು, ಬೇಡವೆಂದರೂ ಕಂಗಳು ಮುಚ್ಚಿದವು. ಅದೇ ತಾಮುಂದು ತಾಮುಂದೆ ಎಂದು ಓಡಿ ಬರುತ್ತಿರುವ ಅಲೆಗಳು. ಸಮುದ್ರದಂಡೆಯ ಮೇಲೊಂದು ಪುಟ್ಟ ಸ್ವರ್ಗಲೋಕ.. ಹಕ್ಕಿಗಳ ಇಂಚರಕ್ಕೆ ಧ್ವನಿಯಾಗುವ ಹೃದಯಗೀತೆ. ಕನಸುಗಳನೆಲ್ಲ ಬಿಚ್ಚಿ ಹರವಿ ಹಾಕಿಕೊಂಡ ಕಂಗಳಿಗೆ ನಕ್ಷತ್ರದಂತಹ ಹೊಳಪು. ಯೌವನದ ಬೆಚ್ಚಗಿನ ಕನಸುಗಳು. ತಂಪು ತಂಗಾಳಿ ಮಿಶ್ರಿತ ಆ ಇಳಿಸಂಜೆಯಲ್ಲಿ ತುಸು ಬೆಳಕು ಕಂಡಂತೆ ಮತ್ತಷ್ಟು ಸೊಗಸು. ಸಿಹಿತನದಲ್ಲಿ ಬೊಂಬಾಯಿ ಮಿಠಾಯಿ ಮಾರುವವನ ಗಾಡಿಯ ಗಂಟೆಯ ಸದ್ದು… ಇತ್ತ ಇನ್ನೊಂದು […]

ನಂಗೊಂದಿಷ್ಟು ಸಮಯ ಬೇಕೇ ಬೇಕು: ಪದ್ಮಾ ಭಟ್

          ಪ್ರೀತಿಯ ದಡ್ಡ  ಒಂದೊಂದು ಬಾರಿ ನಿನ್ನ ಬಗ್ಗೆ ಯೋಚಿಸುತ್ತಿರುವಾಗ ನಾನ್ಯಾರೆಂಬುದನ್ನೇ ಮರೆತುಬಿಡುತ್ತೇನೆ..ನನ್ನ ಹೃದಯದ ಗೂಡಿನಲಿ ಆವರಿಸಿರುವ ಪ್ರೀತಿಯು ನೀನು..ನನ್ನ ಬಗೆಗೆ ಯೋಚಿಸುವುದನ್ನೇ ಮರೆತು ಬಿಟ್ಟಿರುವ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿರಬಹುದು ಎಂದು ನಿನಗೂ ಗೊತ್ತಲ್ವಾ?ಅದೆಷ್ಟೋ ಸಾವಿರ ಕನಸು ನಂಗೆ. ನಿನ್ನ ಬಗೆಗೆ.. ಪ್ರತೀ ಬಾರಿಯೂ ನಿನ್ನ ಜೊತೆ ಮಾತನಾಡುವಾಗಲೂ ಇನ್ನೂ ಏನೋ ಹೇಳಬೇಕು. ಕೇಳಬೇಕು. ಭಾವನೆಯ ಹಂಚಿಕೊಳ್ಳಬೇಕೆನ್ನಿಸುವುದುಂಟು. ಹಠಮಾರಿ ಹುಡುಗಿ ನಾನು.. ನನ್ನೀ ಜೀವನದ ಪ್ರತೀ ಕ್ಷಣವೂ ನಿನ್ನನ್ನೇ ಪ್ರೀತಿಸುತ್ತಾ, […]

ಬಲಿಯಾಗದಿರಲಿ ಯುವಜನತೆಯ ಮನಸು..ಕನಸು: ಪದ್ಮಾ ಭಟ್

ಅವನು ತುಂಬಾ ಬುದ್ದಿವಂತನಾಗಿದ್ದರೂ ಕೆಟ್ಟ ಚಟಗಳ ಸಹವಾಸದಿಂದ ಬದುಕನ್ನೇ ಸ್ಮಶಾನದತ್ತ ಒಯ್ದುಬಿಟ್ಟ..ಊರಿನಲ್ಲಿರುವ ಅಪ್ಪಅಮ್ಮ ತನ್ನ ಮಗ ಚನ್ನಾಗಿ ಓದುತ್ತಿದ್ದಾನೆಂದು ಹಾಸ್ಟೇಲಿನಲ್ಲಿಟ್ಟರೆ ಡ್ರಗ್ಸ್‌ ಜಾಲಕ್ಕೆ ಬದುಕನ್ನು ಬಲಿಯಾಗಿಸಿಕೊಂಡ..ಇದು ಉದಾಹರಣೆಯಷ್ಟೇ.. ಇಂತಹ ಹಲವಾರು ವಿಚಾರಗಳು ದೈನಂದಿನ ಬದುಕಿನಲ್ಲಿ ನಡೆಯುತ್ತಲೇ ಇರುತ್ತದೆ..ಎಷ್ಟು ಬುದ್ದಿವಂತನಾದರೇನು? ಗುಣವಿದ್ದರೇನು..? ಬದುಕು ಯಾರಿಗೂ ಯಾವತ್ತೂ ಪದೇ ಪದೇ ಅವಕಾಶಗಳನ್ನು ಕೊಡುವುದಿಲ್ಲ..ಯಾರ ಜೊತೆಗೂ ಅವರಿಗೆ ಬೇಕಾದ ಹಾಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದೂ ಇಲ್ಲವಲ್ಲ. ಇಂದಿನ ಯುವಜನತೆಯು ಹಲವಾರು ಕ್ಷೇತ್ರಗಳಲ್ಲಿ ಬುದ್ದಿವಂತರೇ ಆಗಿದ್ದರೂ ಇಂತಹ ಕೆಟ್ಟ ಚಟಗಳು, ಇನ್ನೊಂದು ಕಡೆಯಿಂದ ಅವನತಿಯ […]

ಬಾಲ್ಯದ ನೆನಪುಗಳನ್ನು ನಿನ್ನ ಮುಂದೆ ಹರವಬೇಕು: ಪದ್ಮಾ ಭಟ್

ಒಂದನೇ ಕ್ಲಾಸಿನಲ್ಲಿ ಮೊದಲ ಬೆಂಚಿನಲ್ಲಿ ಕುಳಿತು ನನ್ನ ಬಳಪವೇ ಉದ್ದವಿದೆ ಎಂದು ಹೇಳುತ್ತಿದ್ದವಳು ನೀನು. ಅಮ್ಮ ಅಪ್ಪನಿಗೆ ಗೊತ್ತಿಲ್ಲದಂತೆಯೇ ಹುಣಸೆ ಹಣ್ಣು ಕದ್ದು, ಕಿಸಿೆಯ ತುಂಬೆಲ್ಲಾ ಹರಡಿಕೊಂಡು ಬರುತ್ತಿದ್ದವಳು ನೀನು. ನಿನಗೆ ಆ ದಿನಗಳು ನೆನಪಿದೆಯೋ ಇಲ್ಲವೋ ನಾಕಾಣೆ. ಆದರೆ ನನ್ನ ಮನದಲ್ಲಿ ಆ ನೆನಪುಗಳು ಇನ್ನೂ ಬೆಚ್ಚಗೆ ಕುಳಿತಿವೆ.  ಮಳೆಗಾಲದಲ್ಲಿ ಜೋರು ಮಳೆ ಬಂದು ಶಾಲೆಯೇ ಬಿದ್ದು ಹೋಗಲಿ ಎಂದು ಕ್ಲಾಸಿನಲ್ಲೆಲ್ಲಾ ಶಾಪ ಹಾಕುತ್ತಿದ್ದ ಕ್ಷಣಗಳನ್ನು ನೆನದರೆ ನಗು ಉಕ್ಕುಕ್ಕಿ ಬರುತ್ತದೆ. ನನ್ನ ಅಕ್ಷರ ದುಂಡಗಿದೆ, […]