ಬರೆ: ಲಿಂಗರಾಜ ಸೊಟ್ಟಪ್ಪನವರ
ಆಡಿದ ಮಾತುಗಳೆಲ್ಲ ಮರೆತು ಹೋದವುಉಳಿದ ಮಾತುಗಳನುನೀನೆ ಆಡಬೇಕು ಈ ಬರೆ ಮೇಲೆ ಕೈ ಆಡಿಸುನಿನಗೆ ಏನಾದರೂ ದಕ್ಕಬಹುದುಪದ ನಾದ ನೋವುರಕ್ತ ಕೀವುಬಿರಿತ ಚರ್ಮ ಒಡೆದ ಮಾಂಸ ಖಂಡತೆರೆದ ಎದೆ ಗೂಡುಈ ಎಲ್ಲವನು ಪದ ಮಾಡಿ ಹಾಡಿಕೋ ಹಂಚುಬೇಕಿದ್ದರೆ ಮಾರಿಕೋ ತಾಕಬಹುದು ಎಲುಬಿನ ಹಂದರನೆತ್ತರ ವಾಸನೆಸಿಗದೇ ಹೋಗಬಹುದು ಹೆಣಗಳ ಲೆಕ್ಕಗುಳಿಬಿದ್ದ ಕಣ್ಣುಗಳಲಿ ಒಮ್ಮೆ ಇಳಿದು ಹೋಗುನೀನು ಗತಕೆ ಸರಿದು ಹೋಗುಚರಿತೆಯ ಚರ್ಮ ಸುಲಿದ ಕಥನಗಳಲ್ಲಿ ನಾನುಸಿಕ್ಕೆ ಸಿಗುತ್ತೇನೆಒಂದು ವಿನಂತಿ ಇಷ್ಟೇಇಷ್ಟು ಕಾಲವಾದ ನಂತರವಾದರೂ ಸರಿನೀನು ಯಾರು? ಎಂದು ಮಾತ್ರ … Read more