ಹೆಣ್ಣು ಕೇವಲ ಹೆರುವ ಯಂತ್ರವಲ್ಲ: ಗಾಯತ್ರಿ ನಾರಾಯಣ ಅಡಿಗ

” ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ” ಪ್ರತಿ ಹೆಣ್ಣು ಸುಶಿಕ್ಷಿತಳಾಗಿ ತನ್ನ ಕುಟುಂಬ ಮತ್ತು ಇಡೀ ಸಮಾಜವನ್ನು ಸಂಸ್ಕಾರಯುತವನ್ನಾಗಿ ರೂಪಿಸುತ್ತಾಳೆ. ಮುಂದುವರೆದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆಯು ಪುರುಷನಿಗೆ ಸಮಾನಳು. ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯು ಮನೆ, ಮಕ್ಕಳು, ಕುಟುಂಬ ನಿರ್ವಹಣೆ, ಹಬ್ಬ ಹರಿದಿನಗಳು, ಸಂಪ್ರದಾಯಗಳು, ಕಟ್ಟುಪಾಡುಗಳು, ಪರಂಪರೆಗಳು, ಅರೋಗ್ಯ, ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಸಫಲತೆಯನ್ನು ಕಂಡಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀ ತನ್ನ ಮನೆಯ ಪರಿಸ್ಥಿತಿಯನ್ನು ನಾಜೂಕಾಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 68): ಎಂ. ಜವರಾಜ್

-೬೮-ತ್ವಾಟ ಒಣ್ಗಿ ದಳ್ಳಿಡ್ದಿತ್ತುಬಿದ್ದಿರದು ಬಿದ್ದಿರತವೇ ಇತ್ತುಇದ ನಂಬದ ಬುಡದ ಅನ್ನಗಾಯ್ತುಕಪಲ ಬಾವಿಲಿ ಜೊಂಡು ಬೆಳ್ದುಬಾವಿ ಇದ್ದದ ಇಲ್ವ ಅನ್ನಗಿತ್ತುಮೋಟ್ರು ಸದ್ದಾಯ್ತ ಇರದು ಕೇಳ್ತನೀರು ಚೊಳಚೊಳ ಚೊಳ್ಗುಟ್ತದಿಕ್ಕಾಪಾಲು ಹರಿತಿತ್ತುತಿಗುನ್ ಮರಗಳು ಬೆಳ್ದುಚೊಕ್ವಿಲ್ದೆ ಗರಿಗಳು ಒಣಿಕಂಡುಅಲ್ಲಲ್ಲೆ ನ್ಯಾತಾಡ್ತ ಗಾಳಿಗ ಅಳ್ಳಾಡ್ತಮ್ಯಾಲ ತಾರ್ಗಟ್ಲ ಕಾಯಿ ಒಣ್ಗಿ ಉದ್ರತರ ಕಾಣ್ತಿದ್ದು ಈ ಅಯ್ನೋರು ನನ್ನ ಮೆಟ್ದೆಈ ತ್ವಾಟ ನೋಡ್ದೆಬಲು ಜಿನ್ವಾಗಿತ್ತುಆ ಆಳುವ ಆ ಆಳ್ನೆಡ್ತುವಮಣುಮಾತ ಆಡ್ಕಂಡುಅಯ್ನೋರ್ ತಿಕುದ್ ಸಂದಿಲೆ ಒಸುಗ್ತತ್ವಾಟನ ಬರುದು ಮಾಡಿರದು ನಂಗೇನು ಗೊತ್ತು..ಈ ಅಯ್ನೋರು ಕೇಳ್ದೆ ಸುಮ್ನ ಯಾಕಿದ್ದರು.. ಅಲಲಲಾ.. … Read more

ಪಂಜು ಕಾವ್ಯಧಾರೆ

ಮಾಯವಾಗಿದೆ ಖಾಸಗಿತನ ಮಾಯವಾಗಿದೆ ನಮ್ಮ ಖಾಸಗಿತನಮಾಯವಾಗಿದೆಅಬ್ಬರದ “ಸೆಲ್ಪಿ”ಗಳ ನಡುವೆಸೂತು ಸೊರಗಿದೆ ಎಲ್ಲವನ್ನು ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿಸಾಮಾಜಿಕ ಜಾಲಕ್ಕೆ ಹರಿಬಿಡುವ,ಅಳಿಯದ ಗೋಡೆಗೆ ಅಂಟಿಸುವಧಾವಂತದಲಿ ಮಾಯವಾಗಿ ನಮ್ಮ ಖಾಸಗಿತನ‌ ಎನಿದ್ದರು ಆಗದು ಬಣ್ಣದ ಪಟಎಷ್ಷೂ ತೆಗೆದರು ಸಾಲದುಕಾಯಕವೇ ಕೈಲಾಸ ಮರೆತುಹೊಯಿತುಎಲ್ಲೆಂದರಲ್ಲಿ ಸೇಲ್ಪಿ ಕಾಯಕವಾಯಿತುಕಾರು ,ಬಸ್ಸುಗಳಲ್ಲದೆ, ತಿಂದ್ದು ,ಹೇತದ್ದು ಎಲ್ಲ ಪಟಗಳನ್ನು“ಅಪ್ಲೋಡ್ ” ಮಾಡುವದೇ ಕೆಲಸವಾಯಿತು ..!ಖಾಸಗಿತನ‌ ಮಾಯಾವಾಯಿತು . ಮರೆಯದ ಗೋಡೆಗೆ ಅಂಟಿಸಿ ,ಮನೆಯಲ್ಲೂ ,ಮನದಲ್ಲೂ ಗೋಡೆಗಳುಎದ್ದುನಿಲ್ಲವಂತಾಯಿತು .ಗೋಡೆ ಮರೆಯುವದಿಲ್ಲಮನಗಳು ಒಂದಾಗುವದಿಲ್ಲ ..! ಸಾಮಾಜಿಕ ತಾಣ ಖಾಸಗಿತನದಸರಕಾಯಿತು ಸಮಾಜ ,ಬದುಕಿನನಡುವಿನ ಸೂಕ್ಷ್ಮ … Read more

“ಸಾವು” ಯಾರು ನಿರಾಕರಿಸಲಾಗದ ಸತ್ಯ: ಪೂಜಾ ಗುಜರನ್. ಮಂಗಳೂರು

ಸಾವಿನ ನಂತರ ಏನು? ಸ್ವರ್ಗ, ನರಕ, ಇದೆಲ್ಲ ಇದೆಯಾ? ಇದೆ ಅನ್ನುತ್ತದೆ ಪುರಾಣ. ಪುರಾಣ ಹೇಳುತ್ತದೆ ಸತ್ತ ವ್ಯಕ್ತಿ ಒಳ್ಳೆಯವನು ಆಗಿದ್ದರೆ ಸ್ವರ್ಗಕ್ಕೆ ಹೋಗುತ್ತಾನೆ. ಕೆಟ್ಟವನು ನರಕಕ್ಕೆ ಹೋಗುತ್ತಾನೆ? ಈ ಸ್ವರ್ಗ, ನರಕ,ಪಾಪ, ಪುಣ್ಯ, ಸಾವಿನ ನಂತರ ಏನು? ಇದೆಲ್ಲವನ್ನೂ ನೋಡಿದವರು ಯಾರು? ಸಾವು ಎಂದರೇನು? ಹುಟ್ಟಿದವನು ಸಾಯಲೇಬೇಕೆ? ಇದೆಲ್ಲವನ್ನೂ ಮನುಷ್ಯ ಆಳವಾಗಿ ಚಿಂತಿಸಿ ವಿಮರ್ಶೆ ಮಾಡುತ್ತಾನೆ. ವೇದ ಮಹರ್ಷಿಗಳಿಂದ ಹಿಡಿದು ಜಗತ್ತಿನ ಮೇಧಾವಿಗಳೆಲ್ಲ ಸಾವಿನ ಬಗ್ಗೆ ಅದರ ಅನುಭವದ ಬಗ್ಗೆ ಬರೆದಿದ್ದಾರೆ. ಈ ಭೂಮಿ ಮೇಲಿನ … Read more

ನಾಲ್ವರ ಗಜ಼ಲ್ ಗಳು

ಗಜ಼ಲ್ ಕಪ್ಪೆಂದು ಜರಿದು ದೂರ ಉಳಿಸಿದವರು ಕೆಲವರುಅಸಹ್ಯದಿಂದ ಮುಖ ಸಿಂಡರಿಸಿದವರು ಕೆಲವರು ನನ್ನ ಬಣ್ಣ ನಿಮ್ಮ ಮುಖಕ್ಕೇನಾದರೂ ಮೆತ್ತಿಕೊಂಡೀತೇ?ಕೇಳಬೇಕೆನಿಸಿತ್ತು ಕ್ಷಣ ಮಾತ್ರವೂ ನಿಲ್ಲದೇ ಹೋದವರು ಕೆಲವರು ಬಣ್ಣದಲ್ಲೇನಿದೆ ಬಾ ಗೆಳೆಯ ಕೂಡಿ ಆಡೋಣವೆಂದ ಮಾತುಗಳು ಸಾಕಷ್ಟಿವೆಅವುಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದವರು ಕೆಲವರು ದೂಷಿಸಿದವರ ಕೇಳಿದೆ ನಿಮ್ಮ ನೆರಳಿನ ಬಣ್ಣ ಯಾವುದು?ಉತ್ತರಿಸಲಾಗದೆ ಗರಬಡಿದಂತೆ ನಿಂತವರು ಕೆಲವರು ದೇಸು ಇದೇ ಬಣ್ಣ ಬೇಕೆಂದು ಬೇಡಿಕೊಂಡನೆ? ಇಲ್ಲವಲ್ಲಾ!!!ಕೇಳಿದ್ದಕ್ಕೇ…ನಕ್ಕು ಅಪಹಾಸ್ಯ ಮಾಡಿ ಹೊರಟವರು ಕೆಲವರು ದೇಸು ಆಲೂರು… ಗಜಲ್ ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ … Read more

ಹನಿಗವನಗಳು: ಆರ್.ಸುನೀಲ್.ತರೀಕೆರೆ, ವಾದಿರಾಜ ಕುಲಕರ್ಣಿ, ಪುಣೆ, ಪುಷ್ಪ ಪ್ರಸಾದ್, ಉಡುಪಿ

“ಮಹೋತ್ಸವ”ಗಿಡ ನೆಟ್ಟರೆವನ ಮಹೋತ್ಸವಇಂಟರ್ ನೆಟ್ಟಿರೆಮನ ಮಹೋತ್ಸವ..! “ಆಮಂತ್ರಣ’ಅನ್ನುವುದಿಲ್ಲ ನಾಊರು ಕೊಳ್ಳೆ ಹೊಡೆದ ಮೇಲೆಮುಚ್ಚಿದಂತೆ ಊರ ಬಾಗಿಲು,ಬಾ ಗೆಳತಿ ಸೂರೆ ಮಾಡುಎನ್ನ ಹೃದಯ ಸದಾತೆರೆದ ಬಾಗಿಲು..! “ರಂಗು”ಎಷ್ಟೊಂದು ರಂಗುಮನುಜನ ಕಾಯಕೆನೆರಳು ಕಪ್ಪು “ಊಟ”ನೀರವ ರಾತ್ರಿಯಲ್ಲಿನೂರು ಭಾವನೆಗಳವಿನಿಮಯದ ನೋಟ..;ಆಹಾ ಅದೆಷ್ಟು ಚೆನ್ನ ಪ್ರಿಯೆಕಣ್ಣುಗಳಾ ಈಬೆಳದಿಂಗಳ ಊಟ..! “ಲೋಕ”ಎಷ್ಟು ವಿಚಿತ್ರಭಾವನೆಗಳ ಲೋಕನಕ್ಕು ಅಳುವಅತ್ತು ನಗುವ ಶೋಕಬಾಳು ನೀರವ ಶ್ಲೋಕ..! “ಕ್ಷಣಿಕ”ಕತ್ತಲೆ ಕೂಪಕ್ಷಣಿಕ ಮರೆ ಅದುಕಿರಣ ತೂರಿಹೊರಬಂದೊಡೆ ಪ್ರಭೆಕಾಲ ಎಂದೂ ನಿಲ್ಲದು –ಆರ್.ಸುನೀಲ್.ತರೀಕೆರೆ. ಫೇಸ್ಬುಕ್ಕು.. ವಾಟ್ಸಪ್ಪು…. –ಕೊರಗು–ಮೊದಲು ಸಿಗುತ್ತಿತ್ತುನಲ್ಲೆಯ ಸಿಹಿ ಅಪ್ಪುಗೆ |ಈಗ … Read more

ಸಾಂಪ್ರದಾಯಿಕ ಹಾವಸೆಯನ್ನು ಕಿತ್ತೆಸೆದ -ಸ್ತ್ರೀ ವಾದಿ -ಕಮಲಾದಾಸ: ನಾಗರೇಖಾ ಗಾಂವಕರ

“You turn me into a bird of stoneA granite dove,You build round me a shabby drawing roomAnd stroke my face absentmindedly while you read” ಇದು ಕಮಲಾದಾಸರ ‘The Stone age’ ಕವಿತೆಯಲ್ಲಿನ ಸಾಲುಗಳು. ಈ ಕವಿತೆಗೂ ಪಾಕಿಸ್ತಾನಿ ಕವಯತ್ರಿ Kishwar Naheed’ರ ‘ Iam not that Woman’ ಕವಿತೆಗೂ ಸಾಮ್ಯತೆ ಇದೆ.ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿಯನ್ನು ಬಣ್ಣಿಸುವ ಕಮಲಾದಾಸ ಪುರುಷನ ದೌರ್ಜನ್ಯವನ್ನು … Read more

ಇದು‌ ಮುಗಿಯದ ಕತೆ; ಮನ- ಮನೆಗಳ ವ್ಯಥೆ!: ಡಾ.ಗೀತಾ ಪಾಟೀಲ

ಇಂದಿನ ದಿನಗಳ ಅನೇಕ ಗಂಭೀರವಾದ ಸಾಮಾಜಿಕ ಸಮಸ್ಯೆಗಳಲ್ಲಿ ಹಿರಿಯರ ಆರೈಕೆ ಹಾಗೂ ನಿರ್ವಹಣೆಯೂ ಒಂದು. ಜೀವನೋಪಾಯ, ಅವಕಾಶಗಳಿಗಾಗಿ ಬೇರೆಯಾಗುತ್ತಿರುವ ಕುಟುಂಬದ ಸದಸ್ಯರು, ಹಬ್ಬ, ಹರಿದಿನ, ಮದುವೆ, ಶವಸಂಸ್ಕಾರ ಮೊದಲಾದ ಕೌಟುಂಬಿಕ ಪರಿಸ್ಥಿತಿಗಳಿಗೂ ಸಹ ಜೊತೆ ಸೇರಲಾಗದಷ್ಟು ಸಾವಿರಾರು ಮೈಲು ದೂರ ನೆಲೆಸಿರುವ ಕುಟುಂಬಗಳು, ಬಡತನ, ಆರ್ಥಿಕ ಸಮಸ್ಯೆಗಳು, ವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿತ್ವ ಹಾಗೂ ಮಾನಸಿಕ ಸಂಘರ್ಷಗಳು, ಒಂಟಿ ಜೀವಿಗಳ ಕಳವಳವನ್ನಿರಿಯದ ಕರುಳ ಬಳ್ಳಿಗಳು, ! ಇವೆಲ್ಲವುಗಳ ನಡುವೆ ಸಿಲುಕಿರುವ ಈ ವಿಷಯ ನಿಜಕ್ಕೂ ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ … Read more

ಎಂದೂ ಬಾಡದ ಮಂದಾರ: ಸುಂದರಿ ಡಿ,

ಮುಳುಗಿ ಉಸಿರುಕಟ್ಟುವ ಅತಿಯಲಿ ಬದುಕಲೋಸುಗವೇ ನಗೆಗಡಲ ಆಳದಿಂದ ಮೇಲೆದ್ದು ಬಂದು ಅದರಲಿ ತೇಲಿದ ಆ ದಿನಗಳ ಅದೆಂತು ಮರೆಯಲು ಸಾಧ್ಯ! ಆ ಸವಿದಿನಗಳ ಮರೆಯುವುದಾದರೂ ಏತಕ್ಕೇ.. ಮರೆಯಬಾರದು. ಏಕೆಂದರವು ಲಾಡುವಿನಲಿ ಸಿಗುವ ಕರ್ಬೂಜದ ಬೀಜಗಳಂತೆ, ಛಳಿಯಲಿ ಆಗ ತಾನೇ ಹದವಾಗಿ ಹುರಿದು ಬೆಲ್ಲದೊಡನೆ ಮೆಲ್ಲಲೆಂದೇ ಕೊಟ್ಟ ಕಡಲೇ ಬೀಜದಂತೆ, ಬಿರಬಿಸಿಲ ದಾರಿಯಲಿ ಹೊಂಗೆಯ ನೆರಳೊಂದು ಸಿಕ್ಕಂತೆ, ದಣಿದ ಜೀವಕೆ ನೀರುಮಜ್ಜಿಗೆಯ ನಿರಾಳವಾಗಿ ಕುಡಿಯಲು ಅವಕಾಶ ಸಿಕ್ಕಂತೆ ಇವುಗಳ ಅನುಭವಿಸದ ಭವಿ ಯಾರಿದ್ದಾರು!. ಬಿದ್ದು ಬಿದ್ದು, ಎದ್ದು ಬಿದ್ದು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 67): ಎಂ. ಜವರಾಜ್

-೬೭-ಆ ಮಾರ ಕಡ್ಡಿಗೀರಿಮೋಟು ಬೀಡಿ ಹಸ್ಸಿ ಬಾಯ್ಗಿಟ್ಗಂಡುಅದೆ ಕಡ್ಡಿಲಿ ಲಾಟೀನ್ ಕೀಲೆತ್ತಿಲಾಟೀನ್ ಗಳಸೊಳ್ಗಿರ ಬತ್ತಿಗ ಇಟ್ಮೇಲಮೊದುಲ್ಗ ಲಾಟೀನ್ ಬತ್ತಿ ದಗ್ಗಂತ ಹತ್ಕಂಡುಆಮೇಲಮೇಲ ಆ ಲಾಟೀನಲಿಸೀಮೆಣ್ಣ ಇಲ್ದೆ ಇರವತ್ಗೇನೋಅದು ಕವುರ್ತ ಕವುರ್ತಬೆಳ್ಕು ಸಣ್ಣುಕ್ಕ ಪಿಣುಗುಡ್ತಿತ್ತು ಆ ಪಿಣ್ಗುಡ ಬೆಳುಕ್ಲಿಆ ಮಾರುನ್ ಹೆಡ್ತಿಹೊಸೂರ್ ಬೀದಿಯಿಂದಹೆಡ್ಗಲಿ ಹೊತ್ಗ ಬಂದಿರಬಾಡು ಬಳ್ಳ ತಿಂದು ತೇಗಿಅಂಗುಳ್ಗಂಟ ಕುಡ್ದುಬಿದ್ದು ಪೇಚಾಡ್ತ ಇರದು ಕಾಣ್ತು ಆ ಮಾರನೂ ಅಂಗುಳ್ಗಂಟ ತಿಂದು ಕುಡ್ದುಆ ಅಂಗುಳ್ಳೇ ತೇಗ್ತಹಳ ಬಕೀಟೊಳಗ ಇರಕೊಳ ನೀರ್ಲಿ ಮುಳುಗ್ಸಿಉನಿಯಾಕಿದ್ದ ನನ್ನ ಎತ್ತಿ ಕೆಳಗಿಟ್ಟುಬಾಯ್ಗಿಟ್ಟಿದ್ದ ಬೀಡಿನ ಎಡಗೈಲಿ … Read more

‘ರಾಗವಿಲ್ಲದಿದ್ದರೂ ಸರಿ’ ನಾಲಿಗೆ ಮೇಲೆ ನುಲಿಯುತಿರಲಿ: ಜಹಾನ್ ಆರಾ ಕೋಳೂರು

ಗಜಲ್ ಕಾವ್ಯ ನಿಜಕ್ಕೂ ಬಹಳ ನಿಯಮಬದ್ಧವಾದ ಸಾಹಿತ್ಯಪ್ರಕಾರ ಎಂದು ಹೇಳಬಹುದು ಇದು ಸಾಮಾನ್ಯವಾಗಿ ಒಂದೆರಡು ಪ್ರಯತ್ನಗಳಲ್ಲಿ ಒಲಿಯುವಂಥದ್ದಲ್ಲ ಉಮರ್ ರವರ ಕಠಿಣ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದಾಗಿ ಇದು ಅವರಿಗೆ ಒಲಿಯಲು ಸಾಧ್ಯವಾಗಿರಬಹುದು. ” ರಾಗವಿಲ್ಲದಿದ್ದರೂ ಸರಿ” ಎಂದು ಹೇಳಿ ಭಾವ ತೀವ್ರವಾದ ಹೃದಯಸ್ಪರ್ಶಿಯಾದ ಪ್ರಾಮಾಣಿಕವಾದ ರಾಗಗಳನ್ನು ಕವಿ ನಮ್ಮ ಕೈಗೆ ಇಟ್ಟಿದ್ದಾರೆ. ಸೂಫಿ ಮಾದರಿಯ ಮುಖಪುಟ ದೊಂದಿಗೆ ಮಾನವೀಯತೆಯ ಗಜಲ್ ಗಳ ಅನಾವರಣಗೊಂಡಿವೆ. ಈ ಕೃತಿಗೆ ವಿಶಿಷ್ಟವಾದ ಶೈಲಿಯಲ್ಲಿ ಮುನ್ನುಡಿಯನ್ನು ಬರೆದಿರುವಂತಹ ಶ್ರೀಮತಿ ಮೆಹಬೂಬ್ ಬಿ ಶೇಕ್ … Read more

ನೀನು ಅಣ್ಣನಲ್ವಾ…: ಸಿಂಧು ಭಾರ್ಗವ್ ಬೆಂಗಳೂರು

ಮಧ್ಯಾಹ್ನ ಸುಮಾರು ಮೂರು ಗಂಟೆಯಾಗಿರಬಹುದು. ಶ್ಯಾಮರಾಯರು ಮನೆಯಿಂದ ಹೊರಬಂದು, ಕಮಲಿಯಲ್ಲಿ ಮಾತಿಗಿಳಿದರು… “ಅಲ್ಲಾ…‌ನಾವೆಲ್ಲ ವಯಸ್ಸಾದವರು. ಊಟ‌ ಮಾಡಿ ಮಲಗೋ ಸಮಯ.. ನಿಮ್ಮ ಮಕ್ಕಳಿಗೆ ಶಾಲೆ ಇಲ್ಲ‌ ನಿಜ… ಆದರೆ ಗಲಾಟೆ ಮಾಡಬಾರದು ಅಂತ‌ ಒಂದು ಮಾತು ಹೇಳಬಾರದಾ?? ನನಗಂತೂ ಈ ಬಿಪಿ ,ಶುಗರ್ ನ ಮಾತ್ರೆ ತಿನ್ನೊದ್ರಿಂದ ಮಲಗಿದ್ರೆ ನಿದ್ದೇನೆ ಬರೋದಿಲ್ಲ… ಈ ಮಕ್ಕಳ ಗಲಾಟೆ ಸದ್ದು ಮಲಗೋಕೂ ಬಿಡೋದಿಲ್ಲ… ಯಾವಾಗಲೋ ಕರೆದು ಹೇಳಬೇಕು ಅಂತ ಎನಿಸಿದ್ದೆ….ಇಂದು ನೀನೇ ಸಿಕ್ಕಿದೆ ನೋಡು….” ಎಂದರು.. ಕಮಲಿಗೆ ಸಿಟ್ಟು ನೆತ್ತಿಗೇರಿತು. … Read more

ರಾಷ್ಟ್ರೀಯ ವಿಜ್ಞಾನ ದಿನ: ಡಾ.ಅವರೆಕಾಡು ವಿಜಯ ಕುಮಾರ್

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಶನ್(ಎನ್. ಸಿ. ಎಸ್. ಟಿ. ಸಿ.) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ‘ ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲು ಮನವಿಯನ್ನು ಸಲ್ಲಿಸಿತ್ತು.ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು.ಮೊದಲ ಬಾರಿಗೆ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು 28 ಫೆಬ್ರುವರಿ 1987 ರಂದು ಆಚರಣೆಗೆ ತರಲಾಯಿತು.ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ … Read more

ವಿಷಾದ ನೋವು ಘರ್ಷಣೆ ಸಂಘರ್ಷ ತೊಳಲಾಟ ತಾಕಲಾಟದ ಒಳಗುದಿ ಹೇಳುವ ಕಥೆಗಳು: ಎಂ.ಜವರಾಜ್

“ನಿರುದ್ಯೋಗಕ್ಕೆ ಹೆಣವಾದ ಅಪ್ಪ” ಇದು ಆನಂದ್‌ ಎಸ್. ಗೊಬ್ಬಿ ಅವರ ಚೊಚ್ಚಲ ಕಥಾ ಸಂಕಲನ. “ನನ್ನೊಳಗಿನ ಒಬ್ಬ ಕಥೆಗಾರ ಹೊರಗೆ ಬರಲು ತುಂಬ ತಡಕಾಡಿದ. ಅಲ್ಲಿಂದ ಒಂದು ಘಳಿಗೆಗಾಗಿ ರಮಿಸಿಕೊಂಡು ಬಂದೆ. ಬೆಳಿತಾ ಬೆಳಿತಾ ನನಗೆ ನನ್ನ ಊರಿನ ಪರಿಸರ ಹೇಗಿದೆ, ನನ್ನ ಸ್ನೇಹಿತರು ಹೇಗಿದ್ದಾರೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂತು. “ನೊಂದವರ ನೋವು ನೊಂದವರೇ ಬರೆದರೆ ಗಟ್ಟಿಯಾಗಿರುತ್ತದೆ” ಎಂಬ ದೊಡ್ಡವರ ಮಾತನ್ನು ಕೇಳಿದ್ದೆ ಮತ್ತು ಅನುಭವಿಸಿದ್ದೆ” ಎಂದು ಲೇಖಕ ಆನಂದ್ ಎಸ್. ಗೊಬ್ಬಿ ತಮ್ಮ ಕಥಾಲೋಕ … Read more

ತಾಳ್ಮೆ: ಶರಧಿನಿ

ತಾಳ್ಮೆ, ಆದ್ದರಿಂದ ತಾಳ್ಮೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವ ಮೊದಲ ವಿಷಯವೆಂದರೆ ಫಲಿತಾಂಶಕ್ಕಾಗಿ ಅಸಹಾಯಕತೆಯಿಂದ ಕಾಯುವುದು. ಆದರೆ ತಾಳ್ಮೆ ಎನ್ನುವುದು ನಾವು ಕೊನೆಯಲ್ಲಿ ನಿರೀಕ್ಷಿಸಿದ ಫಲಿತಾಂಶದ ಮೇಲೆ ಕೆಲಸ ಮಾಡುವ ಒಂದು ಕಲೆ ಎಂದು ಹೇಳಲು ಬಯಸುತ್ತೇನೆ. ನಾವು ಯಾವುದೇ ಹೊಸ ಸವಾಲನ್ನು ಕೈಗೆತ್ತಿಕೊಂಡಾಗ, ಹೆಚ್ಚಿನ ಬಾರಿ ನಾವು ನಮ್ಮ ಕೆಲಸವನ್ನು ಇತರರೊಂದಿಗೆ ಹೋಲಿಸಲು ಪ್ರಾರಂಭಿಸುತ್ತೇವೆ ಮತ್ತು ಇತರರಂತೆಯೇ ಕೆಲಸವನ್ನು ಪೂರೈಸಲು ಮತ್ತು ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕೊನೆಗೊಳ್ಳಲು ನಮ್ಮೊಳಗೆ ಒತ್ತಡದ ವಾತಾವರಣವನ್ನು ಸ್ಥಾಪಿಸುತ್ತೇವೆ. ಇಲ್ಲಿ ನಾವು … Read more

ಅಶ್ಫಾಕರ ” ನನ್ನೊಳಗಿನ ಕವಿತೆ ” ಕವನ ಸಂಕಲನ ಕುರಿತ ಎರಡು ಅಭಿಪ್ರಾಯಗಳು

“ಪ್ರತಿಮೆಯೊಳಗೇ ಕರಗಿಹೋಗುವ ಕಲ್ಲಿನ ಗುಣ ಅಶ್ಫಾಕರ ” ನನ್ನೊಳಗಿನ ಕವಿತೆ ” ಯ ಮೂಲದ್ರವ್ಯ ನೆರಳಿನ ಹಾದಿಯ ಬಿಸಿಲಿನ ಮಂಟಪವೂ ಹೌದು. ಕಲ್ಪನೆಯ ಕನಸುಗಳಲ್ಲಿ ನೆನಪಿನ ಹೆಜ್ಜೆಗಳನ್ನು ಮೂಡಿಸುವ ಪದಪಾದಪಯಣವೂ ಹೌದು. ವಿಶೇಷ ಆಸ್ವಾದನೆಗೆ ಹದಗೊಂಡು ಮುದವೀವ ಪದಪಂಕ್ತಿಯ ಭೋಜನಾಲಯವೂ ಹೌದು. ಕಣ್ಣಿಗೆ ಕಾಣುವ ಅಕ್ಷರಗಳಿಗೆ ಧ್ವನಿನೀಡಿ ಭಾವಸ್ಪರ್ಶಕ್ಕೆ ಮನಸನ್ನು ತೆರೆದಿಡುವಲ್ಲಿ “ನನ್ನೊಳಗಿನ ಕವಿತೆ” ಗಳು ಸಾರ್ಥಕ್ಯವನ್ನು ಕಂಡಿವೆ. ಕಾವ್ಯದೊಳಗಿನ ಕನಸು; ಕನಸಿನೊಳಗಿನ ಕಾವ್ಯ; ಮೌನದೊಳಗಿನ ಮನಸು; ಮನಸಿನೊಳಗಿನ ಮೌನ, ವಾಸ್ತವದ ನೆರಳಿನಲೆಯೊಳಗೆ ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಮಹತ್ವಪೂರ್ಣ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 65 & 66): ಎಂ. ಜವರಾಜ್

-೬೫-ಆ ಆಳು ಬೀದಿಗುಂಟದಾಪಗಾಲಾಕಿ ಓಡ್ಬತ್ತಿರಗಆ ಆಳ್ನೆಡ್ತಿ ತನ್ಸೀರನ ತೊಡ್ಗಂಟ ಗೋರ್ಕಂಡುಆ ಗೋರ್ಕಂಡಿರ ತೊಡಮ್ಯಾಲ ಮಲ್ಗಿರೋಈ ಅಯ್ನೋರ್ ತಲನ ಹಿಡ್ಕಂಡುಬತ್ತ ಇರ ಈ ಅಯ್ನೋರಾಳನ್ನೊ ಗಂಡನ್ನವಾರ್ಗಣ್ಲಿ ನೋಡ್ತಾಈ ಅಯ್ನೋರ್ ತಲನಆ ತೊಡಮ್ಯಾಲಿಂದಮೆಲ್ಮೆಲ್ಗ ಉಸಾರಾಗಿ ಕೆಳಕ ಸರ್ಸಿಆ ಮೋರಿ ಸಂಗ್ಡಿರೊಆ ಭೂಮ್ತಾಯಿ ಮ್ಯಾಲ ಮಲುಗ್ಸಿಈ ಅಯ್ನೋರಾಳನ್ನೊತನ್ನ ಗಂಡುನ್ಗ ತೋರುಸ್ತ ಕಣ್ಣೀರಾಕ್ತ..ಆಗ ಆ ಆಳು ಮಂಡಿ ಊರಿ‘ಅಯ್ನೋರಾ.. ಅಯ್ನೋರಾ..ಇದ್ಯಾಕ.. ಏನಾಯ್ತು..’ ಅನ್ತಗೊಳಗೊಳನೆ ಅಳ್ತ ನಿಂತಿರದಆ ಭೂಮ್ತಾಯಿ ಸಂಗ್ಡ ಇರ ಮೋರಿ ಸಯಿತಕಿಲಕಿಲ ನಗ್ತ ನೋಡ್ತಾ ಗಬ್ಬುನಾತ ಬೀರ್ತಿತ್ತಲ್ಲಾ.. ಆಗ ಈ ಅಯ್ನೋರುಆ … Read more

ಬದುಕು ಬಯಲಿಗೆ: ಆನಂದ ಎಸ್ ಗೊಬ್ಬಿ.

ದುಡಕಂದು ತಿನ್ನಾಕ ಅಂತ ಬೆಂಗ್ಳೂರಿಗೆ ಹೋಗಿದ್ದ ಶಂಕ್ರನ ಚಡ್ಡಿ ದೊಸ್ತ ಹಣಮಪ್ಪ ಪೋನ್ ಮಾಡಿ “ಬರ್ತೈಯಿದೀನಿ ಲೇ ಮಗ, ಕೆಲಸ ಇಲ್ಲ ಗಿಲಸ ಇಲ್ಲ. ಬಾಳ ತಿಪ್ಲ ಆಗ್ಯಾದಾ , ಹೋರಗ ಹ್ವಾದ್ರ ಸಾಕು ಪೋಲಿಸ್ರೂ ಕುಂಡಿ ಮ್ಯಾಗ ಬಾರಸದೇ ಬಾರಸಾಕ ಹತ್ಯಾರ ಲೇ ಅವರೌನ್. ನಮಗ ಸುಮ್ನೆ ಕುಂದ್ರದು ಆಗವಲ್ಲದು, ಸುಮ್ನೇ ಕುಂದ್ರು ಅಂದ್ರೇ ಎಷ್ಟು ದಿನ ಅಂತ ಕುಡ್ತಿ , ತಿಂಗ್ಳ‌ ಆಗಕ ಬಂತು, ಕೆಲಸ ಇಲ್ಲದೆ ಬಗಸಿ ಇಲ್ಲದೆ, ಹೊಟ್ಟಿ ನಡಿಬೇಕಲ್ಲಪ್ಪಾ ಮಾರಾಯ.” … Read more