ಕಲ್ಲು ದೇವರು ದೇವರಲ್ಲ: ಮನು ಗುರುಸ್ವಾಮಿ
ವಿಗ್ರಹಾರಾಧನೆ ಎಂಬುದು ಬಹುತೇಕ ಮೂರ್ತಿ ಪೂಜೆ ಎಂಬ ಅರ್ಥವನ್ನೇ ನೀಡುವಂತದ್ದು. ಜನಪದರಿಂದ ಹಿಡಿದು ಶಿಷ್ಟಪದದವರೆಗೂ ಮೂರ್ತಿ ಪೂಜೆ ಅಸ್ತಿತ್ವದಲ್ಲಿರುವುದನ್ನು ನಾವು ಗಮನಿಸಬಹುದು. ಕೆಲವರು ಕಲ್ಲು, ಮಣ್ಣು, ಮರ, ಲೋಹ ಇತ್ಯಾದಿಗಳನ್ನು ಬಳಸಿ ನಿರ್ಮಿಸಲ್ಪಟ್ಟ ಒಂದು ಆಕೃತಿಗೆ ದೇವರೆಂಬ ಸ್ಥಾನಕೊಟ್ಟು ಆರಾಧಿಸುತ್ತಾ ಬಂದಿದ್ದಾರೆ. ಇನ್ನೂ ಕೆಲವರು ಕಲ್ಲು, ಮಣ್ಣು, ಮರ ಮೊದಲಾದ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸಿತ್ತಾ ಬಂದಿದ್ದಾರೆ. ಭೌತಿಕ ವಸ್ತುಗಳು ಮಾನವನ ನಿತ್ಯ ಜೀವನದಲ್ಲಿ ಅವಶ್ಯಕವಾಗಿರುವುದರಿಂದ ಜನಪದರು ಅದನ್ನೇ ದೇವರೆಂದು ನಂಬಿ ಪೂಜಿಸುತ್ತಾ ಬಂದಿದ್ದಾರೆ ಎಂಬ ಮಾತು … Read more