ಪುಸ್ತಕದ ಹೆಸರು: ಚಿನ್ನಮ್ಮನ ಲಗ್ನ-1893(ಮಲೆಗಳಲ್ಲಿ ಮದುಮಗಳು ಕುರಿತ ಟಿಪ್ಪಣಿಗಳು)ಲೇಖಕರು: ಕೆ ಸತ್ಯನಾರಾಯಣ, ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರುಮೊದಲ ಮುದ್ರಣ: 2020, ₹ 170, ಡೆಮಿ 1/8, ಪುಟಗಳು: 176 ಕೆ ಸತ್ಯನಾರಾಯಣ ಅವರು ನಮ್ಮ ಕನ್ನಡದ ಹೆಮ್ಮೆಯ, ಮಹತ್ವದ ಹಾಗೂ ಸುಸಂವೇದನಾಶೀಲ, ಸೃಜನಶೀಲ ಬರೆಹಗಾರರು. ಅವರ ಕತೆಗಳು ಮತ್ತು ಪ್ರಬಂಧಗಳು ನಮ್ಮ ಭಾಷೆ-ಸಮಾಜ ಮತ್ತು ಸಂಸ್ಕೃತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸುತ್ತಾ ಅದರ ಪರಿಧಿಯನ್ನು ವಿಸ್ತರಿಸಿವೆ, ಪುನಾರಚಿಸಿವೆ ಮತ್ತು ಆಪ್ಯಾಯಮಾನವಾಗಿ ನಿರ್ವಚಿಸಿವೆ. ಅವರ ಕತೆಗಳು ಮತ್ತು ಪ್ರಬಂಧಗಳ ಶೈಲಿ […]
Author: admin15jan2013
ಪರಸಗಡ ನಾಟಕೋತ್ಸವ 2020: ವೈ. ಬಿ. ಕಡಕೋಳ
ಜನೇವರಿ 25 ರಿಂದ ಪೆಬ್ರವರಿ 2 ರ ವರೆಗೆ ಸವದತ್ತಿ ಕೋಟೆಯಲ್ಲಿ ಪರಸಗಡ ನಾಟಕೋತ್ಸವ 2020 ಈ ವರ್ಷ ಸವದತ್ತಿ ಕೋಟೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ(ರಿ) ಸವದತ್ತಿ ಇವರ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ ಇದೇ ಜನೇವರಿ 25 ರಿಂದ ಆರಂಭವಾಗುತ್ತಿದೆ. ಈ ಸಂಘಟನೆಯವರು ಶ್ರೀ ವಿಶ್ವೇಶ್ವರತೀರ್ಥ ಪೇಜಾವರ ಶ್ರೀಗಳ ಹಾಗೂ ಶ್ರೀ ಗಿರೀಶ್ ಕಾರ್ನಾಡ್ ಸ್ಮರಣೆಯೊಂದಿಗೆ ಈ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು. ಸವದತ್ತಿ ಸ್ವಾದಿಮಠದ ಶ್ರೀ ಶಿವಬಸವ […]
ಹವ್ಯಕರಲ್ಲಿ ಗಣೇಶ ಹಬ್ಬದ ಆಚರಣೆ: ಗೀತಾ ಜಿ.ಹೆಗಡೆ, ಕಲ್ಮನೆ.
ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು. ಹಾಗೆ ಅಲ್ಲಿ ಆಚರಿಸುವ ಹಬ್ಬಗಳಲ್ಲೂ ವಿಶೇಷತೆಯಿದೆ. ಅವುಗಳಲ್ಲಿ “ಗಣೇಶ ಹಬ್ಬ”ವೂ ಒಂದು. ಹವ್ಯಕರಲ್ಲಿ ಈ ಗಣೇಶ ಹಬ್ಬಕ್ಕೆ ಚೌತಿ ಹಬ್ಬವೆಂದು ಹೇಳುವ ವಾಡಿಕೆ. ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದ ಹಲವು ಪದ್ಧತಿಗಳಿದ್ದು ಅದು ಈಗಲೂ ಮುಂದುವರೆದಿದೆ. ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ […]
ಹಿರೋಶಿಮಾ ನಾಗಸಾಕಿಯ ದುರಂತ ಭಾರತದಲ್ಲಿ ಮರುಕಳಿಸದಿರಲಿ: ಮಂಜುಳ ಎಸ್.
ಬಂಡಾವಾಳವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು, ನಿಯಂತ್ರಣದಲ್ಲಿಟ್ಟುಕೊಳ್ಳಲು ಆರಂಭಿಸಿದಾಗಿನಿಂದ ಪರಿಸರ ಮತ್ತು ಪರಿಸರಕ್ಕೆ ಸೇರಿದ ಕೆಲವು ಜನಸಮುದಾಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿವೆ. ಪರಿಸರಕ್ಕೆ ನಾವು ಸೇರಿದವರಲ್ಲ, ಪರಿಸರ ನಮಗೆ ಸೇರಿದ್ದು ಎಂದು ಅಲ್ಪಸಂಖ್ಯಾತರಾದ ಬಂಡವಾಳಶಾಹಿಗಳು ಪರಿಸರವನ್ನು ಮತ್ತು ಪರಿಸಕ್ಕೆ ಸೇರಿದ ಕೆಲವು ಜನ ಸಮುದಾಯಗಳನ್ನು ವಿಕೃತವಾಗಿ ಮನಬಂದಂತೆ ದುಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ದುಡಿಸಿಕೊಳ್ಳುವ ಪ್ರಕ್ರಿಯೆಯ ಪರಿಣಾಮವನ್ನು ಯಾಕೆ ಪರಿಸರವನ್ನೇ ನಂಬಿ, ಪರಿಸರದ ಜೊತೆಯಲ್ಲಿಯೇ ಬದುಕುತ್ತಿರುವವರು ಮತ್ತು ಬಹು ಸಂಖ್ಯಾತರಾದ ಜನ ಸಾಮಾನ್ಯರೇ ಅನುಭವಿಸುತ್ತಿರುವುದು…? ಇದು […]
ಪ್ರಕಟಣೆ
ಕನ್ನಡ ನಾಡು ನುಡಿಯ ಸೇವೆ ಮಾಡುವ ನಿಟ್ಟಿನಲ್ಲಿ ಸ್ವಯಂ ಇಚ್ಚೆಯಿಂದ ಕನ್ನಡ ನಾಡು ನುಡಿಯ ಬಗ್ಗೆ ಕವನ ಸಂಕಲನವೊಂದು ಹೊರತರಲು ಯೋಚಿಸಲಾಗಿದೆ. ಅದಕ್ಕಾಗಿ ತಾವು ಕನ್ನಡ ನಾಡು, ನುಡಿ, ಕನ್ನಡಕ್ಕಾಗಿ ದುಡಿದ ಮಹಿಳೆ/ಪುರುಷ, ಕನ್ನಡ ನೆಲ, ಜಲ, ಕನ್ನಡದ ವೈವಿಧ್ಯತೆ, ಕರ್ನಾಟಕದ ಪ್ರಾಕೃತಿಕ ಸೌಂದರ್ಯ ಇತ್ಯಾದಿ ವಿಷಯಗಳ ಕುರಿತು ತಮ್ಮ ಇತ್ತೀಚಿನ ಎರಡು ಕವನಗಳನ್ನು ಆಹ್ವಾನಿಸಲಾಗುತ್ತಿದೆ. ಆಯ್ದ ಕವಿಗಳಿಗೆ ಸನ್ಮಾನಿಸಲಾಗುವುದು. ಪುಸ್ತಕ ರೂಪದಲ್ಲಿ ಕವನಗಳನ್ನು ಪ್ರಕಟಿಸಲಾಗುವುದು. ಕವನ ಕಳುಹಿಸಲು ಕೊನೆಯ ದಿನ ಆಗಷ್ಟ್ ೨೩, ಕವನ ಸ್ವತಂತ್ರ […]
ಲೇಖನಗಳ ಆಹ್ವಾನ…
ಸಹೃದಯಿಗಳೇ, ಹೊಸ ವರ್ಷ ಎರಡು ಸಾವಿರದ ಹದಿನಾಲ್ಕರ ಮೊದಲ ವಾರ ಬಂದರೆ ಪಂಜುವಿನ 50 ನೇ ಸಂಚಿಕೆ ನಿಮ್ಮ ಮಡಿಲು ಸೇರುತ್ತದೆ. 50ನೇ ಸಂಚಿಕೆ ಪ್ರಕಟಗೊಂಡ ಎರಡು ವಾರಕ್ಕೆ ಅದೇ ಜನವರಿ ತಿಂಗಳಿನಲ್ಲಿ ಪಂಜು ತನ್ನ ಪ್ರಥಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಪಂಜುವಿನ ಈ ಎರಡು ಶುಭ ಸಾಹಿತ್ಯ ಸಂಭ್ರಮಗಳನ್ನು ನಿಮ್ಮ ಬರಹಗಳ ಮೂಲಕ ಇಡೀ ಜನವರಿ ತಿಂಗಳು ಆಚರಿಸುವ ಆಶಯ ಪಂಜುವಿನದು. ತಡವೇಕೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, […]
ನೈತಿ(ಕತೆ)
'ಸಾರ್ ನಿಮ್ಮನ್ನ ಎಲ್ಲೋ ನೋಡಿದ್ದೀನಿ ಸಾರ್….ನೀವು…..ನೀವ್ ದಾರವಾಯಿಲಿ ಬತ್ತೀರ ಅಲ್ವಾ?' ಅಂತ ಶುರು ಮಾಡಿದ ಅವನು. ನಾನು ಸುಮ್ಮನೆ 'ಹ್ಞೂಂ' ಅಂದೆ. 'ಅದೇ ಅನ್ಕೊಂಡೆ… ನೀವು ಬಸ್ ಅತ್ದಾಗಿಂದ ತಲೆ ಕೆಡುಸ್ಕೊತಿದ್ದೆ, 'ಇವ್ರುನ್ನ ಎಲ್ಲೋ ನೋಡ್ದಂಗದಲ್ಲ ಅಂತ…ಈಗ ವಳಿತು ಸಾರ್… 'ನಮಸ್ಕಾರ ಸಾರ್…ನನ್ನೆಸ್ರು ಕೃಷ್ಣ ಅಂತ…' 'ಈ ಬಸ್ ಕಂಡಕ್ಟರ ನೀವು?' ' ಊಂ ಸಾರ್ ಒಂತರ ಅಂಗೆ ಅನ್ಕೊಳ್ಳಿ… ಈ ಬಸ್ಗೆ ನಾನೇ ಕಂಡಕ್ಟ್ರು, ಕ್ಲೀನರ್ರು, ಕ್ಯಾಶಿಯರ್ರು ಎಲ್ಲಾ' ಅವನ ಮಾತಿನ ಧಾಟಿಗೆ ನಕ್ಕು ಮೆಚ್ಚುಗೆ ಸೂಚಿಸಿದೆ. […]
ದ್ವಿತೀಯ ಸಂಚಿಕೆ ನಿಮ್ಮ ಮಡಿಲಿಗೆ….
ಸಹೃದಯಿಗಳೇ, ಪಂಜುವಿನ ದ್ವಿತೀಯ ಸಂಚಿಕೆಯನ್ನು ನಿಮ್ಮ ಮಡಿಲಿಗೆ ಹಾಕುವ ಮೊದಲು ಪಂಜುವಿನ ಮೊದಲ ಸಂಚಿಕೆಗೆ ನೀವು ತೋರಿದ ಪ್ರೀತಿ ಪ್ರೋತ್ಸಾಹ ಸಹಕಾರಕ್ಕೆ ನಾನು ತುಂಬು ಹೃದಯದ ವಂದನೆಗಳನ್ನು ಸಲ್ಲಿಸಬೇಕು. ನಿಮ್ಮ ಪ್ರೀತಿ ಪಂಜುವಿನ ಮೇಲೆ ಹೀಗೆಯೇ ಇರಲಿ. ಒಮ್ಮೆ ಅಂತರ್ಜಾಲ ತಾಣವೊಂದರಲ್ಲಿ ಲೇಖನವೊಂದನ್ನು ಬರೆದಿದ್ದಾಗ ಆತ್ಮೀಯರೊಬ್ಬರು ಕರೆ ಮಾಡಿ "ನೀವು ಬರೆದಿರೋದನ್ನು ಓದುಗರು ಓದ್ತಾ ಇರ್ತಾರೆ. ಸುಮ್ಮಸುಮ್ಮನೆ ಏನೇನೋ ಬರೆಯಲು ಹೋಗಬೇಡಿ." ಎಂದು ಎಚ್ಚರಿಸಿದ್ದರು. ಅಂತರ್ಜಾಲ ತಾಣದಲ್ಲಿ ಬರೆಯುವ ಪ್ರಕಟಿಸುವ ಸ್ವಾತಂತ್ರ್ಯವಿದೆಯೆಂದು ನಮ್ಮಿಚ್ಚೆಯಂತೆ ಬರೆಯುತ್ತಾ ಪ್ರಕಟಿಸುತ್ತಾ […]