ಪಂಜು ಕಾವ್ಯಧಾರೆ
ನಕ್ಷತ್ರಗಳೆಂದರಿಷ್ಟ ಹೊಸ್ತಿಲು ದಾಟಿ ಬಂದಂತೆ ಕಂಡದ್ದು ಅರ್ಧಚಂದ್ರ ಚೆಲ್ಲಿದ ಮುದ್ದು ಬೆಳದಿಂಗಳು. ಹೊನಲಿನಲ್ಲಿ ಗೋಚರವಾಗಿ ಹಗಲಲ್ಲಿ ಕಣ್ಮರೆಯಾಗುವ ದಿಗಂತದ ಪರದೆಯಲ್ಲಿ ಬೆಚ್ಚಿ ಬೀಳಿಸುವ ಶಶಿಯ ಇಂದ್ರಜಾಲ. ನಭೋಮಂಡಲವೇ ರಾತ್ರೋರಾತ್ರಿ ಬೆತ್ತಲಾದಾಗ ನಕ್ಷತ್ರಗಳು ಜಿನುಗುತ್ತವೆ. ಬರಿಗಣ್ಣಿಗೆ ನಂಬಲಾರದಷ್ಟು ಹೆಸರಿಲ್ಲದ ತಾರಾ ಪುಂಜಗಳು ಮೋಡಿಗಾರನ ಕೈಯ ಅಂಕುಶದ ಮಾಯಾಜಾಲದೊಳಗೆ. ಯಾರೋ ದೇವಕನ್ನೆ ರಾತ್ರಿ ಆಕಾಶದಲ್ಲಿ ಜೋಡಿಸದೇ ಹಾಗೇ ಬಿಟ್ಟ ರಂಗೋಲಿ ಚುಕ್ಕಿಯಂತೆ ನೀವು. ನಗರದಾಚೆ ಗಲ್ಲಿಯಲ್ಲಿ ಮಲಗದೇ ಹಠ ಹಿಡಿದು ಅಳುತ್ತಿರುವ ಕಂದಮ್ಮನ ಕಣ್ಣಿಗೆ ನೀವೆಲ್ಲಾ ಹೊಳೆಯುವ ಆಟಿಕೆಗಳು. ಕಂಡಾಗಲೆಲ್ಲಾ … Read more