“ಜ಼ೀರೋ ಬ್ಯಾಲೆನ್ಸ್- ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ”: ಎಂ.ಜವರಾಜ್
ಕವಿತೆ, ಕವನ, ಕಾವ್ಯ, ಪದ್ಯ, ಕಥನ ಕಾವ್ಯ, ನೀಳ್ಗಾವ್ಯ ಹೀಗೆ ಗುರುತಿಸುವ ವಿವಿಧ ರೂಪದ ಬಾಹ್ಯ ಮತ್ತು ಆಂತರಿಕ ಭಾವದ ರಚನೆ ಒಂದೇ ತರಹದ್ದೆನಿಸುವ ಕನ್ನಡದ ಸಾಂಸ್ಕೃತಿಕ ಆಸ್ಮಿತೆ ಹೆಚ್ವಿಸಿದ ಸಾಹಿತ್ಯ ಪ್ರಕಾರವಿದು. ಕಾಲಗಳುರುತ್ತ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಜನರ ಭಾವನೆಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು. ಧಾರ್ಮಿಕವಾದ ಜಟಿಲ ಸಮಸ್ಯೆಗಳೂ ಸೃಷ್ಟಿಯಾದವು. ಅಸಮಾನ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮನಸ್ಸುಗಳು ಕವಿತೆಗಳನ್ನು ಬರೆದು ರಾಗ ಕಟ್ಟಿ ಕೆಚ್ಚೆದೆಯಲ್ಲಿ ದನಿಯೇರಿಸಿ ಹಾಡಿ ಜನ ಸಮೂಹವನ್ನು ಎಚ್ಚರಿಸಿದವು. … Read more