ಮರೆಯಲಾಗದ ಮದುವೆ (ಭಾಗ 13): ನಾರಾಯಣ ಎಮ್ ಎಸ್
ಇಲ್ಲಿಯವರೆಗೆ -೧೨- ಚಿನ್ನಪ್ಪ ಮತ್ತು ಅಯ್ಯರ್ ಮುಂಜಾನೆ ಬೇಗನೆದ್ದು ನಿತ್ಯಕರ್ಮಗಳನ್ನು ಮುಗಿಸಿ ಉಪಹಾರ ಸೇವಿಸಿ ಗೂಡೂರಿಗೆ ಹೊರಟಾಗ ಅಯ್ಯರ್ ಭಾವುಕರಾದರು. ಅಯ್ಯರ್ ಕಣ್ಣಲ್ಲಿ ನೀರಾಡಿದ್ದು ಕಂಡು ಚಿನ್ನಪ್ಪನ ಹೆಂಡತಿಗೆ ಮುಜುಗರವಾಗಿ ಕಸಿವಿಸಿಗೊಂಡಳು. ಅಯ್ಯರ್ ಚಿನ್ನಪ್ಪನ ಮಗುವನ್ನೆತ್ತಿಕೊಂಡು ಮುತ್ತಿಕ್ಕಿ ತಮ್ಮ ಮನದಾಳದಿಂದ ಒಮ್ಮೆ ಹೆಂಡತಿ ಮಗುವಿನೊಂದಿಗೆ ತಮ್ಮ ಮನೆಗೆ ಬರಬೇಕೆಂದು ಚಿನ್ನಪ್ಪನಿಗೆ ಆಗ್ರಹಮಾಡಿ ಹೇಳಿದರು. ರಾತ್ರಿ ಚಿನ್ನಪ್ಪನ ಋಣ ತೀರಿಸಲಾಗದಿದ್ದರೂ ಪಡೆದ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಮಾಡಬೇಕೆಂದುಕೊಂಡದ್ದು ನೆನಪಾಗಿ ಒಂದು ಕಾಗದದಲ್ಲಿ ಅವನ ವಿಳಾಸ ಬರೆದುಕೊಡುವಂತೆ ಚಿನ್ನಪ್ಪನಿಗೆ ಹೇಳಿದರು. … Read more