“ಆಟಗಾಯಿ ಕಥೆಗಳು ಧ್ಯಾನಸ್ಥ ಸ್ಥಿತಿಗೆ ಜಾರಿ ಒಳಗಣ್ಣಿಂದ ನೋಡುವ ಪರೀಕ್ಷಿತ ಗುಣ ರೂಪದ್ದು”: ಎಂ.ಜವರಾಜ್
ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕಥಾ ಸಂಕಲನ ನನ್ನ ಕೈಸೇರಿ ಸುಮಾರು ದಿನಗಳಾದರು ಓದಲು ಆಗದೆ ತಡವಾಗಿ ನೆನ್ನೆ ಬಿಡುವು ಮಾಡಿಕೊಂಡು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇಲ್ಲಿನ ಹನ್ನೊಂದು ಕಥೆಗಳಲ್ಲಿ ಐದಾರು ಕಥೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು ಎಂಬುದಕ್ಕೆ ಅವುಗಳಲ್ಲಿನ ವಿಭಿನ್ನ ನಿರೂಪಣೆಯ ಕಥಾಧಾಟಿ! ‘ಆಟಗಾಯಿ’ ಗ್ರಾಮ್ಯ ಸೊಗಡಿರುವ ಪದ. ಇದರ ಮೂಲ ಭಾಷಾ ನುಡಿಗಟ್ಟು ‘ಪಗಡೆ’! ನನ್ನ ಕಾದಂಬರಿಗೆ ನಾನಿಟ್ಟ ಮೊದಲ ಹೆಸರು ‘ಪಗಡೆ’. ಕಾದಂಬರಿಯ ವಸ್ತು ವಿಷಯ ಮಾಸಾಳಿಗ ಮಾದಿಗರ ಕುಟುಂಬವೊಂದರ ಕುಲಕಸುಬು, … Read more